ತೂಕ ಹೆಚ್ಚಿದ್ದ ಪತಿ, ಲೈಂಗಿಕ ಜೀವನಕ್ಕೂ ಕುತ್ತು, ಪತ್ನಿಯನ್ನೇ ಹೊರ ಹಾಕಿದ ದಢೂತಿ

By Suvarna NewsFirst Published Jan 20, 2023, 4:22 PM IST
Highlights

ದಾಂಪತ್ಯದಲ್ಲಿ ಹೊಂದಾಣಿಕೆ ಬರಬೇಕೆಂದ್ರೆ ಇಬ್ಬರ ಮಧ್ಯೆ ಪ್ರೀತಿ ಜೊತೆ ಸ್ನೇಹ ಇರಬೇಕು. ಸಂಗಾತಿ ತನ್ನಿಂದ ದೂರವಾಗಲು ಕಾರಣವೇನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡ್ಬೇಕು. ವಿಚ್ಛೇದನ ಪಡೆಯೊದು ಸುಲಭ ಆದ್ರೆ ಮುರಿದುಬಿದ್ದ ಜೀವನ ಸರಿ ಮಾಡೋದು ಕಷ್ಟ.
 

ಕೋಪದಲ್ಲಿ ಮೂಗು ಕೊಯ್ದುಕೊಂಡ್ರೆ ಮತ್ತೆ ಬರುತ್ತಾ ಎನ್ನುವ ಮಾತಿದೆ. ಕೋಪದಲ್ಲಿದ್ದಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಹಾಗೆ ಕೋಪದಲ್ಲಿರುವ ವ್ಯಕ್ತಿ ಬಗ್ಗೆಯೂ ಎದುರಿರುವ ವ್ಯಕ್ತಿ ಯಾವುದೇ ತೀರ್ಮಾನಕ್ಕೆ ಬರಬಾರದು. ಪರಿಸ್ಥಿತಿ ಶಾಂತವಾಗುವವರೆಗೆ ಇಬ್ಬರೂ ಕಾಯುವುದು ಬಹಳ ಮುಖ್ಯ. ಅನೇಕ ಬಾರಿ ಸಣ್ಣ ತಪ್ಪಿಗೆ ದಂಪತಿ ಬೇರೆಯಾಗ್ತಾರೆ. ದಂಪತಿ ಮಧ್ಯೆ ಬಿರುಕು ಕಾಣಿಸಿಕೊಂಡಿದೆ ಎಂದ ತಕ್ಷಣ ಅದಕ್ಕೆ ತುಪ್ಪ ಸುರಿಯುವ ಕೆಲಸವನ್ನು ಪಾಲಕರು ಮಾಡ್ತಾರೆ. ಈ ಮಹಿಳೆ ಬಾಳಿನಲ್ಲೂ ಈಗ ಅದೇ ಆಗಿದೆ. ಒಂದ್ಕಡೆ ಸಿಗದ ಗಂಡನ ಪ್ರೀತಿ, ಇನ್ನೊಂದು ಕಡೆ ಅತ್ತೆಯ ತುಪ್ಪ ಸುರಿಯುವ ಕೆಲಸ. ಈ ಎಲ್ಲದರ ಮಧ್ಯೆ ವಿಚ್ಛೇದನಕ್ಕೆ ಮುಂದಾದವಳಿಗೆ ತಾನು ಮಾಡಿದ್ದು ಸರಿಯೇ ಎಂಬ ಗೊಂದಲ ಶುರುವಾಗಿದೆ. 

ಆಕೆಗೆ ಮದುವೆ (Marriage) ಯಾಗಿ ಮೂರು ವರ್ಷ ಕಳೆದಿದೆ. ಆರಂಭದಿಂದಲೂ ಗಂಡನ ಪ್ರೀತಿ (Love) ಸಿಕ್ಕಿಲ್ಲ. ಇಬ್ಬರ ಮಧ್ಯೆ ಸದಾ ಅಂತರವಿದೆ. 85 ಕೆಜಿ ತೂಕವಿರುವ ಪತಿ, ತೂಕ (Weight) ಇಳಿಸಿಕೊಳ್ಳುವ ವಿಷ್ಯ ಬಂದ್ರೆ ಗಲಾಟೆ ಮಾಡ್ತಾನೆ. ಈ ಸಂಬಂಧ (Relationship ) ದೊಡ್ಡ ಕಿತ್ತಾಟವೆ ನಡೆದಿದೆ. ಆತನ ತೂಕ ಆಕೆಗೆ ಯಾವುದೇ ಸಮಸ್ಯೆ ತಂದಿಲ್ಲ. ಆದ್ರೆ ಇದ್ರಿಂದ ಲೈಂಗಿಕ ಜೀವನ ಹಾಳಾಗಿದೆ ಎನ್ನುತ್ತಾಳೆ ಮಹಿಳೆ. ಮನೆಯ ಎಲ್ಲ ಕೆಲಸವನ್ನು ಒಬ್ಬಳೇ ಸಂಭಾಳಿಸುವ ಮಹಿಳೆಗೆ ಪತಿ ಕಿಂಚಿತ್ತೂ ಸಹಾಯ ಮಾಡೋದಿಲ್ಲವಂತೆ. ಎಲ್ಲದರ ಮಧ್ಯೆ ಮನೆಗೆ ಬಂದ ಅತ್ತೆ ಇಬ್ಬರ ಮಧ್ಯೆ ದೊಡ್ಡ ಹಳ್ಳ ತೋಡಿದ್ದಾಳಂತೆ.

ಚೆಂದದ ದಾಂಪತ್ಯ ನಿಮ್ಮದಾಗಬೇಕು ಅಂದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡೋದು ಅನಿವಾರ್ಯ

ಕೆಲ ದಿನಗಳ ಹಿಂದೆ ಮನೆಗೆ ಬಂದ ಅತ್ತೆ ಹೇಳಿದಂತೆ ಪತಿ ಕೇಳಲು ಶುರು ಮಾಡಿದ್ದಾನಂತೆ. ಇದ್ರಿಂದಾಗಿ ಮನೆಯಲ್ಲಿ ಸದಾ ಗಲಾಟೆ ಶುರುವಾಗಿತ್ತಂತೆ. ಪತ್ನಿಯನ್ನು ಪುಸಲಾಯಿಸಿ ತವರಿಗೆ ಬಿಟ್ಟು ಬಂದಿದ್ದನಂತೆ ಪತಿ. ಅನೇಕ ಬಾರಿ ಕರೆ ಮಾಡಿದ್ರೂ ಪ್ರತಿಕ್ರಿಯೆ ನೀಡದ ಕಾರಣ ತಂದೆ ಜೊತೆ ಗಂಡನ ಮನೆಗೆ ವಾಪಸ್ ಆಗಿದ್ದಳಂತೆ ಪತ್ನಿ.

ತಂದೆ ಮುಂದೆ ಯಾವುದೇ ಮಾತನಾಡದ ಪತಿ, ಕೋಣೆಯಿಂದ ಹೊರ ಹಾಕಿದ್ದ ಎನ್ನುತ್ತಾಳೆ ಮಹಿಳೆ. ಇದನ್ನು ನೋಡಿಯೂ, ಮಗಳ ಬಾಳು ಹಾಳಾಗ್ಬಾರದೆಂದು ತಂದೆ ಸುಮ್ಮನಿದ್ದರಂತೆ. ಆದ್ರೆ ಎಲ್ಲವೂ ಮಿತಿ ಮೀರಿತ್ತು ಎನ್ನುತ್ತಾಳೆ ಪತ್ನಿ. ವಾಪಸ್ ಬಂದ್ಮೇಲೆ ಹಿಂಸೆ ಹೆಚ್ಚಾಗಿದ್ದ ಕಾರಣ, ಪತಿ ಬಿಟ್ಟು ತವರಿಗೆ ಬಂದ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ನಾನು ಮಾಡಿದ್ದು ಸರಿಯೇ ತಪ್ಪೇ ಎಂಬ ಗೊಂದಲ ಕಾಡ್ತಿದೆ ಎನ್ನುತ್ತಾಳೆ ಮಹಿಳೆ.

ತಜ್ಞರ ಸಲಹೆ : ಉಸಿರುಗಟ್ಟಿಸುವ ವಾತಾವರಣದಲ್ಲಿ ತುಂಬಾ ದಿನ ಇರಲು ಸಾಧ್ಯವಿಲ್ಲ. ಒಮ್ಮೆ ತಾಳ್ಮೆ ಕಟ್ಟೆ ಒಡೆಯೋದು ಸಹಜ. ಆದ್ರೆ ಆತುರದ ನಿರ್ಧಾರಕ್ಕೆ ಬರಬಾರದು ಎನ್ನುತ್ತಾರೆ ತಜ್ಞರು. ಮದುವೆಯಾದ ಮೂರು ವರ್ಷದ ನಂತ್ರವೂ ಸಂಬಂಧ ಸುಧಾರಿಸಿಲ್ಲವೆಂದ್ರೆ ಇಬ್ಬರಲ್ಲೂ ತಪ್ಪಿರಬೇಕು. ಅವರ ಜೊತೆ ಸ್ನೇಹ ಬೆಳೆಸದೆ ನೇರವಾಗಿ ಪ್ರೀತಿ ಬಯಸಿದ್ದರಲ್ಲಿ ನಿಮ್ಮ ತಪ್ಪೂ ಇದೆ. ಯಾವಾಗ್ಲೂ ಪಾಲಕರು ಮಕ್ಕಳ ತಪ್ಪನ್ನು ನೋಡೋದಿಲ್ಲ. ಮುಂದಿರುವ ವ್ಯಕ್ತಿಯನ್ನು ಮಾತ್ರ ದೂಷಿಸ್ತಾರೆ. ದಂಪತಿ ಬೇರೆಯಾದ್ಮೇಲೆ ಮಕ್ಕಳನ್ನು ದೂಷಿಸಲು ಶುರು ಮಾಡ್ತಾರೆ. ನಿಮಗೆ ಈಗ್ಲೂ ಅವಕಾಶವಿದೆ. ಮೊದಲು ಸಂಬಂಧವನ್ನು ಬಲಪಡಿಸಲು ಯತ್ನಿಸಿ ಎನ್ನುತ್ತಾರೆ ತಜ್ಞರು.

ಪತ್ನಿಯ ಹೊಟ್ಟೆಯಲ್ಲಿರೋದು ನನ್ನ ಮಗುವಲ್ಲ ಅನ್ನೋ ಭಾವನೆ! ಏನ್ಮಾಡ್ಲಿ?

ಪತಿ ಹಿಂಸೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೀರಿ ಎಂದಾದ್ರೆ ದೂರಿಗೆ ಗಲಾಟೆ ನಿಲ್ಲಿಸಿ. ವಿಚ್ಛೇದನದವರೆಗೆ ಹೋಗುವ ಅಗತ್ಯವಿಲ್ಲ. ಕೋಪದಲ್ಲಿರುವ ಪತಿ ಶಾಂತವಾದ್ಮೇಲೆ ನಿಮ್ಮ ಬಳಿಗೆ ಬರಬಹುದು. ತಪ್ಪನ್ನು ತಿದ್ದಿಕೊಳ್ಳಬಹುದು ಎನ್ನುವ ತಜ್ಞರು, ಇಬ್ಬರೂ ಕೌನ್ಸಿಲರ್ ಭೇಟಿಯಾಗಿ ಸಂಬಂಧ ಸುಧಾರಿಸಿಕೊಳ್ಳುವ ಪ್ರಯತ್ನ ನಡೆಸಿ. ಆತುರದಲ್ಲಿ ಸಂಬಂಧ ಹಾಳು ಮಾಡ್ಕೊಳ್ಳಬೇಡಿ ಎನ್ನುತ್ತಾರೆ ತಜ್ಞರು. 
 

click me!