ಪತಿ ಗರ್ಲ್ ಫ್ರೆಂಡನ್ನು ಮನೆಗೆ ಕರೆದದ್ದೇ ತಪ್ಪಾಯ್ತು

By Suvarna NewsFirst Published Jul 28, 2022, 2:45 PM IST
Highlights

ಪ್ರೀತಿ, ಮದುವೆ ವಿಚಾರಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಅಪ್ಪಿತಪ್ಪಿ ಆಡಿದ ಮಾತು ಹಾಗೂ ಕೆಲಸಗಳು ಕೂಡ ಸಂಸಾರ ಹಾಳು ಮಾಡುತ್ತವೆ. ಸುಖಮಯ ಸಂಸಾರ ನಮ್ಮದಾಗಬೇಕು ಅಂದ್ರೆ ಎಚ್ಚರಿಕೆಯ ಹಾಗೂ ಬುದ್ಧಿವಂತಿಕೆಯ ಹೆಜ್ಜೆ ಇಡಬೇಕು.
 

ಎಲ್ಲರ ವೈವಾಹಿಕ ಜೀವನ ಸುಖಮಯವಾಗಿರುತ್ತೆ ಎನ್ನಲು ಸಾಧ್ಯವಿಲ್ಲ. ನಿರೀಕ್ಷಿಸದ ಸಮಸ್ಯೆಗಳು ಬರುತ್ತವೆ. ಹಾಗೆ ಅನೇಕ ಒತ್ತಡಗಳು ದಂಪತಿ ದೂರವಾಗಲು ಕಾರಣವಾಗುತ್ತದೆ. ಪತಿ ಅಥವಾ ಪತ್ನಿಯಿಂದ ಮೋಸವಾಗಿದೆ ಎಂಬುದು ಗೊತ್ತಾದಾಗ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಹಾಗೆಯೇ ಆ ದ್ರೋಹವನ್ನು ಮರೆತು ಮತ್ತೆ ನಗ್ತಾ ಸಂಸಾರ ಮಾಡುವುದು ಒಂದು ಸವಾಲು. ಅನೇಕ ಬಾರಿ ಕಿತ್ತಾಡುವ ಸಂಗಾತಿಗಿಂತ ಮೌನವಾಗುವ, ಮುಖಕ್ಕೆ ಮುಖ ಕೊಟ್ಟು ಮಾತನಾಡದ ವ್ಯಕ್ತಿ ಭಯ ಹುಟ್ಟಿಸುತ್ತಾರೆ. ಅವರ ಜೊತೆ ಮತ್ತೆ ಸಂಬಂಧ ಬೆಸೆಯುವುದು ಬಹಳ ಕಷ್ಟವಾಗುತ್ತದೆ. ಈ ಮಹಿಳೆ ಕೂಡ ಅದೇ ಸಮಸ್ಯೆ ಎದುರಿಸುತ್ತಿದ್ದಾಳೆ. ಆರಂಭದಿಂದಲೂ ಸಂಸಾರದಲ್ಲಿ ಸುಖ ಕಾಣದ ಮಹಿಳೆಗೆ ನಂತ್ರ ಪತಿ ಸಹೋದ್ಯೋಗಿಯಿಂದಲೇ ಮೋಸವಾಯ್ತು. ಸಹೋದ್ಯೋಗಿ ಜೊತೆ ಪತಿಯ ಸಂಬಂಧವಿದೆ ಎಂಬುದು ಗೊತ್ತಾದ್ಮೇಲೆ ಪತ್ನಿ ಮಾಡಿದ ಕೆಲಸ ಮತ್ತಷ್ಟು ಯಡವಟ್ಟು ಮಾಡಿದೆ. ಮೊದಲು ಜಗಳವಾಡ್ತಿದ್ದ ಪತಿ ಈಗ ಮಾತು ಬಿಟ್ಟಿದ್ದಾನೆ. ಇದು ಮಗನ ಮೇಲೆ ಪರಿಣಾಮ ಬೀರುತ್ತಿದೆ. ತಂದೆ – ತಾಯಿ ಜಗಳದಿಂದಾಗಿ ಕೂಸು ಬಡವಾಗ್ತಿದೆ. ಆ ಮಹಿಳೆ ಸಮಸ್ಯೆ ಏನು ಎಂಬುದನ್ನು ಇಂದು ಹೇಳ್ತೇವೆ.

ಆಕೆಗೆ 32 ವರ್ಷ. ಮದುವೆ (Marriage) ಯಾಗಿ 9 ವರ್ಷವಾಗಿದೆ. ಒಬ್ಬ ಮಗ (Son) ನಿದ್ದಾನೆ. ಮದುವೆಯಾದ ದಿನದಿಂದಲೇ ಸಂಸಾರದಲ್ಲಿ ಸಮಸ್ಯೆ ಶುರುವಾಗಿತ್ತಂತೆ. ಸಮಸ್ಯೆಗೆ ಒಗ್ಗಿಕೊಂಡಿದ್ದ ಮಹಿಳೆಗೆ ಪತಿಯ ಮೋಸ (cheating) ಗೊತ್ತಾಗಿದೆ. ಕೆಲ ತಿಂಗಳ ಹಿಂದೆ ಪತಿ, ತನ್ನ ಸಹೋದ್ಯೋಗಿ ಜೊತೆ ಸಂಬಂಧ ಹೊಂದಿದ್ದಾನೆ ಎಂಬ ಸಂಗತಿ ಆತನ ಮೇಲ್ ಮೂಲಕ ಗೊತ್ತಾಗಿದೆ. ಇದ್ರ ಬಗ್ಗೆ ಮಹಿಳೆ ಪತಿ ಜೊತೆ ಮಾತನಾಡಿದ್ದಾಳೆ. ಆಕೆ ಸಂಪರ್ಕ ಬಿಡುವಂತೆ ಕೇಳಿದ್ದಾಳೆ. ಆದ್ರೆ ಇದಕ್ಕೆ ಪತಿ ಒಪ್ಪಿದಂತೆ ಕಾಣಿಸಲಿಲ್ಲ. ಇಬ್ಬರ ಮಧ್ಯೆ ಸಂಬಂಧ ಮುಂದುವರೆದಿತ್ತು. 

MARRIED LIFE ಚೆಂದವಾಗಿರಬೇಕೆಂದರೆ ಈ ಗುಟ್ಟನ್ನು ಅರ್ಥ ಮಾಡ್ಕೊಳ್ಳಿ!

ಪತಿ ಪ್ರೇಮಿ (Lover) ಯನ್ನು ಮನೆಗೆ ಕರೆದ ಪತ್ನಿ : ಇದಾದ ನಂತ್ರ ಮದುವೆ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದ ಪತ್ನಿ, ಪತಿ ಗರ್ಲ್ ಫ್ರೆಂಡನ್ನು ಮನೆಗೆ ಕರೆದಿದ್ದಾಳೆ. ಮನೆಯಲ್ಲಿ ಒಂದು ದಿನ ಇರುವಂತೆ ಕೇಳಿದ್ದಾಳೆ. ತಮ್ಮ ಸಮಸ್ಯೆ ಆಕೆ ಅರಿವಿಗೆ ಬರಲಿ ಎನ್ನುವ ಕಾರಣಕ್ಕೆ ಆಕೆ ಈ ನಿರ್ಧಾರ ಕೈಗೊಂಡಿದ್ದಳಂತೆ. ಆದರೆ ಆಕೆ ಕೆಲಸ ಉಲ್ಟಾ ಹೊಡೆದಿದೆ. ಪತಿ ಕೋಪ (anger) ಗೊಂಡಿದ್ದಲ್ಲದೆ ಮಾತು ಬಿಟ್ಟಿದ್ದಾನೆ. ಪತ್ನಿ ಜೊತೆ ಮುಖಕ್ಕೆ ಮುಖಕೊಟ್ಟು ಮಾತನಾಡದ ಪತಿ, ಪತ್ನಿಯನ್ನು ನಿರ್ಲಕ್ಷ್ಯಿಸುತ್ತಿದ್ದಾನೆ. ಇದು ಮಗನ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮಿಬ್ಬರ ಸಂಬಂಧ ಹಾಳಾದ ಕಾರಣ ಮಗನ ಮನಸ್ಸು ಹಾಳಾಗಿದೆ. ಆತ ಸದಾ ಬೇಸರದಲ್ಲಿ ಇರುತ್ತಾನೆ. ಸಂಸಾರ ಉಳಿಸಿಕೊಳ್ಳಲು ನಾನೇನು ಮಾಡಬೇಕು ಎಂದು ಮಹಿಳೆ ಕೇಳಿದ್ದಾಳೆ.

ತಜ್ಞರ ಉತ್ತರ : ಮಹಿಳೆ ಈ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ. ಸಮಸ್ಯೆಯನ್ನು ನಿಧಾನವಾಗಿ ಬಗೆಹರಿಸಿಕೊಳ್ಳುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ಪತಿ ಹಾಗೂ ಸಹೋದ್ಯೋಗಿ ಮಧ್ಯೆ ಈಗ್ಲೂ ಸಂಬಂಧವಿದೆಯೇ ಎಂಬುದು ನಿಮಗೆ ತಿಳಿದಿಲ್ಲ. ಅದನ್ನು ತಿಳಿಯುವ ಪ್ರಯತ್ನ ಬೇಡ. ಮದುವೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿ. ಪತಿ ಜೊತೆ ನಿಧಾನವಾಗಿ ಮಾತುಕತೆ ಶುರು ಮಾಡಿ. ಆತನಿಗೆ ಇಷ್ಟವಾಗುವ ಕೆಲಸವನ್ನು ಮಾಡಿ. ಆತನ ಹತ್ತಿರಕ್ಕೆ ಹೋಗುವ ಪ್ರಯತ್ನ ನಡೆಸಿ. ನಿಮ್ಮಿಬ್ಬರಿಂದ ನಿಮ್ಮ ಮಗನ ಸ್ಥಿತಿ ಏನಾಗಿದೆ ಎಂಬುದನ್ನು ಅವರಿಗೆ ತಿಳಿಸಿ. 

ದೀರ್ಘಾವಧಿಯ ಕೋವಿಡ್‌, ಪುರುಷರಲ್ಲಿ ಕಡಿಮೆಯಾಗ್ತಿದೆ ಲೈಂಗಿಕಾಸಕ್ತಿ !

ನಾಳೆಯಿಂದಲೇ ಪತಿ ಸರಿಯಾಗ್ಬೇಕು ಅಂದ್ರೆ ಸಾಧ್ಯವಿಲ್ಲ. ನಿಮ್ಮ ಪ್ರಯತ್ನ ನಿರಂತರವಾಗಿದ್ದರೆ ಪತಿ ನಿಮ್ಮ ಹತ್ತಿರಕ್ಕೆ ಮತ್ತೆ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
 

click me!