
ಮದುವೆಯಾಗಿ ಕೆಲ ವರ್ಷಗಳಲ್ಲೇ ಮನಸ್ತಾಪ ಎದುರಾಗಿದೆ. ಪ್ರಕರಣ ಗಂಭೀರ ಸ್ವರೂ ಪಡೆದುಕೊಂಡಿದೆ. ಕುಟುಂಬದ ಮಾತುಗಳು ಮುಗಿದಿದೆ. ಬಳಿಕ ಹಿರಿಯರು, ಮುಖಂಡರು, ಧಾರ್ಮಿಕ ಗುರುಗಳ ಸಮ್ಮುಖದಲ್ಲಿ ಡಿವೋರ್ಸ್ ಪ್ರಕ್ರಿಯೆ ಆರಂಭಗೊಂಡಿದೆ. ಡಿವೋರ್ಸ್ ಪೇಪರ್ ಬಂದ ಬಳಿಕ ಪೆನ್ನು ಹಿಡಿದು ಇನ್ನೇನು ಸಹಿ ಮಾಡಬೇಕು ಎನ್ನುವಷ್ಟರಲ್ಲಿ ಪತಿಯ ಪಕ್ಕದಲ್ಲಿ ಮೌನವಾಗಿ ನಿಂತುಕೊಂಡಿದ್ದಾನೆ. ಒಳಗಿನ ನೋವು ಹೊರಗೆ ತೋರಿಸುವಂತಿಲ್ಲ, ಎಲ್ಲರ ಮುಂದೆ ನಿಂತಿದ್ದಾನೆ. ಪತಿ ಮುಖ ನೋಡಿ ಪತ್ನಿ ಡಿವೋರ್ಸ್ ಪೇಪರ್‌ಗೆ ಸಹಿ ಹಾಕಲಿಲ್ಲ. ಮನಸ್ಸು ಬದಲಿಸಿದ್ದಾಳೆ, ಓಡೋಡಿ ಬಂದು ಪತಿಯ ತಬ್ಬಿಕೊಂಡ ಘಟನೆ ವಿಡಿಯೋ ಭಾರಿ ವೈರಲ್ ಆಗಿದೆ.
ಬಾಂಗ್ಲಾದೇಶದಲ್ಲಿ ನಡೆದ ಘಟನೆ ಎಂದು ವೈರಲ್ ವಿಡಿಯೋದಲ್ಲಿ ಹೇಳಲಾಗಿದೆ. ಪತಿ ಹಾಗೂ ಪತ್ನಿ ಡಿವೋರ್ಸ್‌ಗೆ ಧಾರ್ಮಿಕ ಮುಖಂಡರು, ಅಧಿಕಾರಿಗಳ ಬಳಿ ಬಂದಿದ್ದಾರೆ. ವಿಡಿಯೋದಲ್ಲಿ ಪತ್ನಿ ಎಲ್ಲರ ಸಮ್ಮುಖದಲ್ಲಿ ಕುಳಿತಿದ್ದಾಳೆ. ಆಕೆಯ ಮುಂದಿರುವ ಟೇಬಲ್ ಮೇಲೆ ಡಿವೋರ್ಸ್ ಪೇಪರ್ ಇಡಲಾಗಿದೆ. ಸಹಿ ಹಾಕಲು ಪತ್ನಿ ಪೆನ್ನು ಎತ್ತಿಕೊಂಡಿದ್ದಾಳೆ. ಈ ವೇಳೆ ಪತಿ ಅಲ್ಲೇ ನಿಂತಿದ್ದಾನೆ.ಆತನ ಏನೂ ಮಾತನಾಡಲಿಲ್ಲ. ಪತ್ನಿ ಬಳಿ ಏನೋ ಹೇಳಲು ಬಯಸಿದ್ದಾನೆ. ಆದರೆ ಸಾಧ್ಯವಾಗಲಿಲ್ಲ, ಕೈಗಳು ನಡುಗಿತ್ತು. ಮಾತುಗಳು ಬರಲಿಲ್ಲ. ಇತ್ತ ಪತಿಯನ್ನೇ ನೋಡುತ್ತಿದ್ದ ಪತ್ನಿಯ ಮನಸ್ಸು ಬದಲಾಗಿದೆ.
ಕೆಲ ಹೊತ್ತು ಮೌನವಾಗಿ ಪತ್ನಿ ಕುಳಿತಿದ್ದಾಳೆ. ಗಂಡನ ನೋಡಿ ಆತನ ನೋವು, ವೇದನೆಯಿಂದ ಮನಸ್ಸು ಬದಲಿಸಿದ್ದಾಳೆ. ಪೆನ್ನು ಕೆಳಗಿಟ್ಟಿದ್ದಾಳೆ. ಕುಳಿತಲ್ಲಿಂದ ಎದ್ದು ಓಡೋಡಿ ಬಂದು ಗಂಡನ ತಬ್ಬಿಕೊಂಡಿದ್ದಾಳೆ. ಬೇರೆ ಬೇರೆಯಾಗಲು ಹೊರಟಿದ್ದ ಗಂಡ ಹೆಂಡತಿ ಮತ್ತೆ ಒಂದಾದ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಗಂಡನ ತಬ್ಬಿಕೊಂಡ ಪತ್ನಿ ಕಣ್ಣೀರಿಟ್ಟಿದ್ದಾಳೆ. ನೆರೆದಿದ್ದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನೇನು ಡಿವೋರ್ಸ್ ಆಗೇಬಿಟ್ಟಿತು ಎಂದು ನೋವಿನಲ್ಲಿದ್ದ ಇಡೀ ಕೋಣೆಯಲ್ಲಿ ಆನಂದ ಬಾಷ್ಪ ಹರಿದಿತ್ತು. ಪತಿ ಹಾಗೂ ಪತ್ನಿ ಒಂದಾಗಿದ್ದರು, ಅವರ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು. ಪತ್ನಿ ಕೊನೆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಎಲ್ಲರು ಶ್ಲಾಘಿಸಿದ್ದಾರೆ. ಈ ಪ್ರಕರಣದಲ್ಲಿ ಯಾರು ವಿಚ್ಚೇದನ ಕೋರಿದ್ದರು, ಕಾರಣಗಳು ಸ್ಪಷ್ಟವಾಗಿಲ್ಲ.
ಬಾಂಗ್ಲಾದೇಶದ ಈ ವೈರಲ್ ವಿಡಿಯೋದಲ್ಲಿ ಈ ಪತಿ ಹಾಗೂ ಪತ್ನಿ ಯಾವ ಪ್ರದೇಶದವರು, ಯಾರು ಅನ್ನೋ ಕುರಿತು ಮಾಹಿತಿ ಇಲ್ಲ. ಆದರೆ ಈ ಜೋಡಿ ಒಂದಾಗಿದೆ. ಕೊನೆಯ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ಒಂದಾಗಿದ್ದಾರೆ. ವಿಡಿಯೋದಲ್ಲಿರುವ ಮಾಹಿತಿಯಂತೆ ಪತಿ ಜೊತೆ ಸಂಸಾರ ಸಾಧ್ಯವಿಲ್ಲ ಎಂದು ಪತ್ನಿ ವಿಚ್ಚೇದನ ಕೋರಿದ್ದಳು ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಸ್ಪಷ್ಟ ಮಾಹಿತಿಗಳು ಲಭ್ಯವಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
पति का एक इशारा और रिश्ता टूटने से बच गया ।
यह घटना बांग्लादेश की है ।
एक लडकी तलाक के कागजात पर साइन करने वाली ही थी,तभी पति के इशारा करने पर उसने साइन नहीं किए और पति को आ कर गले लगा लिया ।
यह इस बात की मिसाल है कि अगर रिश्ता बचाने की थोड़ी भी गुंजाइश हो तो कोशिश जरूर करनी चाहिए
रिश्ते टूटने के हजारों बहानें हो सकते हैं। लेकिन उसे जोड़ने के लिए एक मजबूत वजह ही काफी है
आज के समय में लोग तमाशा देखना पसंद करते हैं इसलिए अपने रिश्ते को तमाशा न बनने दें।
यहीं इस वीडियो की सबसे बड़ी सीख है
इस समाज में लोगों को अलग करने वाले हजारों मिल जाएंगे लेकिन दो दिलों को मिलने की कोशिश कोई नहीं करता ।
— premprakash (@pp73030711) November 18, 2026
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.