
ಗಂಡ-ಹೆಂಡತಿಯ ಸಂಬಂಧದಲ್ಲಿ ಸ್ನೇಹ ಮತ್ತು ಸಮರ್ಥನೆ ಇದ್ದರೆ, ಜೀವನದ ಎಲ್ಲ ಏರಿಳಿತಗಳಲ್ಲಿ ದಂಪತಿ ದೀಪ-ಬತ್ತಿಯಂತೆ ಪರಸ್ಪರ ಬೆಂಬಲಿಸುತ್ತಾರೆ. ಆದರೆ ಇತ್ತೀಚಿನ ಸಮೀಕ್ಷೆಯೊಂದು ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದೆ – 80% ವಿವಾಹಿತ ಮಹಿಳೆಯರು ತಮ್ಮ ಪತಿ ಮನೆಯಲ್ಲಿ ಇಲ್ಲದಿರುವಾಗ ಹೆಚ್ಚು ಸಂತೋಷವಾಗಿರುತ್ತಾರೆ ಎಂಬುದು. ಇದು ಗಂಡನೊಂದಿಗೆ ಸಮಯ ಕಳೆಯಲು ಇಷ್ಟವಿಲ್ಲ ಅನ್ನೋದಿಲ್ಲ. ಬದಲಿಗೆ, ಪತಿ ಇಲ್ಲದ ಸಮಯವನ್ನು ಮಹಿಳೆಯರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಹಿಂದೆ ಹಲವು ಕಾರಣಗಳಿವೆ
ಮಹಿಳೆಯರು ತಮ್ಮ ಆತ್ಮೀಯ ಸ್ನೇಹಿತರನ್ನು ಮನೆಗೆ ಆಹ್ವಾನಿಸಿ, ಗಾಸಿಪ್ ಮಾಡುವುದನ್ನು ಮತ್ತು ಪಾರ್ಟಿ ಮಾಡುವುದನ್ನು ಇಷ್ಟಪಡುತ್ತಾರೆ. ಇದರಿಂದ ಅವರನ್ನು ತಲೆಬಿಸಿಯಿಂದ ಹೊರಬರಲು ಮತ್ತು ಸ್ಟ್ರೆಸ್ ಕಡಿಮೆಯಾಗುತ್ತದೆ.
ದೈನಂದಿನ ಮನೆಕೆಲಸಗಳಿಂದಾಗಿ ಸಾಕಷ್ಟು ನಿದ್ರೆ ಪಡೆಯಲು ಸಾಧ್ಯವಾಗದ ಮಹಿಳೆಯರು, ಗಂಡ ಮನೆಯಲ್ಲಿ ಇಲ್ಲದಿರುವಾಗ ಮನಃಪೂರ್ವಕವಾಗಿ ವಿಶ್ರಾಂತಿ ಪಡೆಯುತ್ತಾರೆ.
ಟಿವಿ ಮುಂದೆ ಕುಳಿತು ತಮ್ಮ ನೆಚ್ಚಿನ ಧಾರಾವಾಹಿ ಅಥವಾ ಸಿನಿಮಾಗಳನ್ನು ಶಾಂತವಾಗಿ ನೋಡುತ್ತಾರೆ. ಈ ಸಮಯದಲ್ಲಿ ಅವರಿಗೆ ಯಾವುದೇ ಅಡ್ಡಿಯಿಲ್ಲ.
ಕೆಲಸ ಮಾಡುವ ಮಹಿಳೆಯರು ಮನೆಕೆಲಸಕ್ಕೆ ಸಾಕಷ್ಟು ಸಮಯವಿಲ್ಲದೆ ಚಿಂತಿಸುತ್ತಾರೆ. ಗಂಡ ಮನೆಯಿಂದ ಹೊರಹೋಗಿದಾಗ ಅವರು ನಿಧಾನವಾಗಿ, ಮನಸ್ಸು ತಣಿಯುವಂತೆ ಕೆಲಸಗಳನ್ನು ಮುಗಿಸುತ್ತಾರೆ.
ಹೀಗಾಗಿ ಗಂಡ ಮನೆಯಿಂದ ಹೊರಹೋಗಿದಾಗ, ಮಹಿಳೆಯರಿಗೆ ಅದು ಸ್ವಲ್ಪ ‘ಮೀ ಟೈಮ್’ ಆಗುತ್ತದೆ! ನೀವು ಸಹ ನಿಮ್ಮ ಪತಿ ಇಲ್ಲದಿರುವ ಸಮಯದಲ್ಲಿ ಇದೇ ರೀತಿಯಾಗಿ ಎಂಜಾಯ್ ಮಾಡ್ತೀರಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.