
ಭೋಪಾಲ್: ಆತನ ಪತ್ನಿ ತವರಿಗೆ ಹೋಗುತ್ತೇನೆಂದು ಹೋದಳು. ಒಂಟಿಯಾದ ಪತಿ ಮಹಾಶಯನಿಗೆ ತುಂಬಾ ಬೇಸರವಾಗತೊಡಗಿತು. ಹೇಳಿಕೇಳಿ ಪತ್ನಿ ಮನೆಯಲ್ಲಿ ಇಲ್ಲ. ತವರಿಗೆ ಹೋಗಿದ್ದಾಳೆ ಎಂದರೆ, ಅಷ್ಟು ಬೇಗ ವಾಪಸ್ ಕೂಡ ಬರಲ್ಲ ಎನ್ನುವುದು ಖಚಿತವಾಗಿತ್ತು. ಏಕೆಂದರೆ ಅವಳು ಹೋಗುವಾಗಲೂ ಒಂದಷ್ಟು ದಿನ ಅಲ್ಲಿಯೇ ಇದ್ದು ಬರುತ್ತೇನೆ ಎಂದು ಹೋಗಿದ್ದಳು. ಆಕೆಯನ್ನು ಖುಷಿಯಿಂದ ಬೀಳ್ಕೊಟ್ಟಿದ್ದ ಈ ಪತಿರಾಯ. ಅದಕ್ಕೆ ಕಾರಣ ಬೇರೆನೇ ಇತ್ತು. ಪತ್ನಿ ಅತ್ತ ಹೋಗುತ್ತಿದ್ದಂತೆಯೇ ಕಾಲ್ ಗರ್ಲ್ಗಾಗಿ ಹುಡುಕಾಟ ನಡೆಸಿದ ಈತ. ಆದರೆ ಮುಂದಾಗಿದ್ದು ಮಾತ್ರ ಯಾವ ಸಿನಿಮಾದಲ್ಲಿಯೂ ತೋರಿಸದ ಸ್ಟೋರಿ!
ಇದು ಭೋಪಾಲ್‌ನಲ್ಲಿ ನಡೆದ ಘಟನೆ ಎನ್ನಲಾಗುತ್ತಿದೆ. ಈ ಪತಿ ಮಹಾಶಯನ ಹೆಸರನ್ನು ಪ್ರಮೋದ್ ಎನ್ನಲಾಗಿದ್ದು, ಪತ್ನಿಯ ಹೆಸರನ್ನು ಸೀಕ್ರೇಟ್ ಆಗಿ ಇಡಲಾಗಿದೆ. ಪತ್ನಿ ಅತ್ತ ತವರಿಗೆ ಹೋಗುತ್ತಿದ್ದಂತೆಯೇ ಕಾಲ್ ಗರ್ಲ್ಗಾಗಿ ಸರ್ಚ್ ಮಾಡಿದ ಪ್ರಮೋದ್. ಇಂಥವರಿಗಾಗಿಯೇ ಇರುವ ಸೆಂಟರ್ಗೆ ಕರೆ ಮಾಡಿ, ತನಗೆ ಇಂಥವಳು ಬೇಕೆಂದು ಹೇಳಿದಾಗ, ಒಬ್ಬಳನ್ನು ಅವರು ಕಳುಹಿಸಿಕೊಟ್ಟರು. ಅದಕ್ಕಾಗಿ ಈತ 3 ಸಾವಿರ ರೂಪಾಯಿಗಳನ್ನು ಪಾವತಿ ಮಾಡಿದ. ಇಂತಿಷ್ಟು ಗಂಟೆಗಳ 'ಸೇವೆ'ಗೆ ಫಿಕ್ಸ್ ಮಾಡಿಕೊಂಡು 3 ಸಾವಿರ ಪೇ ಮಾಡಿದ.
ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುತ್ತಿದ್ದ ಈ ಪತಿರಾಯ. ತವರಿಗೆ ಹೋದ ಪತ್ನಿಯನ್ನು ಮನಸ್ಸಿನಲ್ಲಿಯೇ ಕೊಂಡಾಡಿದ. ಅವಳು ಅಲ್ಲಿಗೆ ಹೋದ ಕಾರಣಕ್ಕೇನೇ ತನಗೆ ಈ ಒಂದು ಛಾನ್ಸ್ ಸಿಕ್ಕಿತು ಎಂದು ಆಕೆಗೆ ಧನ್ಯವಾದ ಕೂಡ ಸಲ್ಲಿಸಿದ. ಈ ಹಿಂದೆ ಅದೆಷ್ಟು ಸಲ ಹೀಗೆ ಮಾಡಿದ್ನೋ ಗೊತ್ತಿಲ್ಲ. ಆದರೆ ಈ ಸಲ ಆಗಿದ್ದು ಮಾತ್ರ ಯಾರೂ ಊಹಿಸದ ಟ್ವಿಸ್ಟ್. ತಮ್ಮ ಈ ಭೇಟಿಯಾಗಿ ಒಂದು ಹೋಟೆಲ್ ಕೂಡ ಬುಕ್ ಮಾಡಿ, ಅಲ್ಲಿಯೇ ಬರುವಂತೆ ಕಾಲ್ ಗರ್ಲ್ಗೆ ವಿಳಾಸ ವಿನಿಮಯವನ್ನೂ ಮಾಡಿದ. ಆ ಸುಂದರಿಯ ಬರುವಿಕೆಗಾಗಿ ಕಾಯುತ್ತಾ ಕುಳಿತ ಪ್ರಮೋದ್.
ನಿರೀಕ್ಷೆಯಂತೆ ಹೇಳಿದ ಟೈಮ್ಗೆ ಕರೆಕ್ಟಾಗಿ ಅವಳ ಎಂಟ್ರಿ ಆಯಿತು. ಖುಷಿಯಿಂದ ಬಾಗಿಲ ಬಳಿ ಅವಳಿಗಾಗಿ ಸ್ವಾಗತಕ್ಕೆ ಕಾಯುತ್ತಿದ್ದ ಪ್ರಮೋದ್ ಅವಳನ್ನು ನೋಡಿ ಕಕ್ಕಾಬಿಕ್ಕಿಯಾದ. ಅಲ್ಲಿ ಬಂದ ಕಾಲ್ಗರ್ಲ್ಗೂ ಇವನನ್ನು ನೋಡಿ ತಲೆತಿರುಗಿ ಹೋಯ್ತು. ಏಕೆಂದ್ರೆ, ಅಲ್ಲಿಗೆ ಬಂದಿದ್ದ ಕಾಲ್ಗರ್ಲ್ ಬೇರೆ ಮಹಿಳೆಯಲ್ಲ, ಬದಲಿಗೆ ಇವನ ಧರ್ಮಪತ್ನಿಯೇ ಆಗಿದ್ದಳು! ಇಬ್ಬರೂ ಸಿಕ್ಕಿಬಿದ್ದಿದ್ದರು. ಪರಸ್ಪರ ದೂಷಿಸಿಕೊಳ್ಳುವಂತೆ ಇರಲೇ ಇಲ್ಲ. ಇವನೂ ಮಾಡಬಾರದ ಕೆಲಸ ಮಾಡಿದ್ದ, ಅವಳೂ ಅದನ್ನೇ ಮಾಡಿದ್ದಳು. ತವರಿಗೆ ಹೋಗುತ್ತೇನೆ ಎಂದು ಒಂದಿಷ್ಟು ಹಣ ಸಂಪಾದನೆ ಮಾಡಲು ಈ ಹಾದಿ ತುಳಿದಿದ್ದಳು ಪತ್ನಿ! ಈ ಸ್ಟೋರಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ ಇದರ ಸತ್ಯಾಸತ್ಯತೆ ಮಾತ್ರ ತಿಳಿದವರೇ ಹೇಳಬೇಕು. ಮುಂದೇನಾಯ್ತು ಎನ್ನುವುದು ಮಾತ್ರ ಸದ್ಯ ಗೊತ್ತಿಲ್ಲ!
ಆದ್ದರಿಂದ ಹಲವರು ಒಂದೇ ಬೇಡಿಕೆ ಇಡುತ್ತಿದ್ದಾರೆ. ಅದೇನಂದರೆ ಕಾಲ್ ಗರ್ಲ್ ಕಳುಹಿಸುವಂತೆ ಹೇಳುವಾಗ ಅವರ ಫೋಟೋ ಕಡ್ಡಾಯ ಮಾಡಬೇಕು ಎನ್ನುವುದು ಈ ಎಲ್ಲರ ಬೇಡಿಕೆಯಾಗಿದೆ! ಇಲ್ಲದಿದ್ದರೆ ಹೀಗೆಯೇ ಎಡವಟ್ಟಾಗುತ್ತದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ತಮಾಷೆಯ ಕಮೆಂಟ್ಸ್ ಬರುತ್ತಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.