ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಆಸಕ್ತಿ ಕಮ್ಮಿ ಆಗ್ತಿದ್ಯಾ? ಹೀಗ್ ತಿಳಿಯಿರಿ

By Suvarna NewsFirst Published Jun 18, 2022, 5:07 PM IST
Highlights

ನೀವು ವ್ಯಕ್ತಿಯೊಂದಿಗೆ ಸಂಬಂಧದಲ್ಲಿ ಇದ್ದೀರಾ? ಆದರೂ, ಅವ್ರು ನಿಮ್ಮೊಂದಿಗಿದ್ದಾರೆ ಅನ್ನುವ ಭಾವನೆ ನಿಮ್ಮಲ್ಲಿ ಇಲ್ಲ, ನಿಮ್ಮ ಈ ಸಂಗಾತಿಯ ವರ್ತನೆ ಅಥವಾ ಭಾವನಾತ್ಮಕ ಸ್ಥಿತಿಯನ್ನು ಬದಲಾಯಿಸುವುದು ನಿಮ್ಮ ಗುರಿಯಾಗಿದೆ ಎಂದಾದರೆ ಅದನ್ನು ಪರಿಹರಿಸುವ ಮಾರ್ಗ ಇಲ್ಲಿದೆ. 

ನಿಮ್ಮ ಸಂಗಾತಿ ನಿಮ್ಮಿಂದ ದೂರಾಗುತ್ತಾ ಇದ್ದಾರಾ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಇಲ್ಲಿವೆ ಕೆಲವು ಮಾರ್ಗಗಳು..

ಪ್ರಣಯ ಕಣ್ಮರೆಯಾಗುವುದು.
ನೀವು ಯಾರನ್ನಾದರೂ ಪ್ರೀತಿಸುತ್ತಿರುವಾಗ, ನೀವು ಅವರನ್ನು ಕೀಟಲೆ ಮಾಡುತ್ತಲೇ ಇರುತ್ತೀರಿ, ಹೆಚ್ಚಿನ ಸಮಯವನ್ನು ಅವರೊಂದಿಗೆ ಕಳೆಯುತ್ತೀರಿ, ಹಲವಾರು ಯೋಜನೆಗಳನ್ನು ರೂಪಿಸುತ್ತೀರಿ ಮತ್ತು ಎಲ್ಲವನ್ನೂ ರೋಮ್ಯಾಂಟಿಕ್ ಮಾಡಲು ಪ್ರಯತ್ನಿಸುತ್ತೀರಿ. ನಿಮ್ಮ ಸಂಗಾತಿಯು ಪ್ರೀತಿಯಿಂದ ಹೊರಗುಳಿಯುತ್ತಿದ್ದರೆ, ನೀವು ಸೂಕ್ಷ್ಮವಾಗಿ ಗಮನಿಸಿದಾಗ (Observe) ವ್ಯತ್ಯಾಸಗಳು ನಿಮಗೆ ತಿಳಿಯುತ್ತದೆ. ಒಂದೋ ನೀವು ಕಡಿಮೆ ಲೈಂಗಿಕತೆಯನ್ನು ಹೊಂದಿದ್ದೀರಿ ಅಥವಾ ಅವರು ಬೇರೆಯವರೊಂದಿಗೆ ಲೈಂಗಿಕ ಸಂಬಂಧವನ್ನು ಮಾಡುತ್ತಾರೆ. ಇದರಿಂದಾಗಿ, ನಿಮ್ಮ ಸಂಗಾತಿಯಲ್ಲಿ ಪ್ರಣಯ ಮತ್ತು ಉತ್ಸುಕತೆಯು ಕಡಿಮೆಯಾಗುತ್ತಾ ಬರಬಹುದು. ಇಲ್ಲವಾದರೆ ಅವರ ನಡವಳಿಕೆ ಗಮನಿಸಿ ನಿಮ್ಮ ಮೇಲಿನ ಆಸಕ್ತಿ ಕಡಿಮೆಯಾಗಿದ್ದಾರೆ ಅದು ಅವರ ನಡವಳಿಕೆಯಲ್ಲಿ ತಿಳಿಯುತ್ತದೆ.

ಆದ್ಯತೆಗಳನ್ನು (Importance) ಬದಲಾಯಿಸುವುದು
ಅವರು ನಿಮ್ಮಲ್ಲಿ ಆಸಕ್ತಿಯನ್ನು ಕಡಿಮೆಗೊಳಿಸಿದಾಗ, ಅವರು ನಿಮ್ಮೊಂದಿಗೆ ಸಮಯ ಕಳೆಯುವ ಬಗ್ಗೆ ಕಾಳಜಿ ವಹಿಸುವುದಿಲ್ಲ. ಒಂದೋ ಅವರು ಯೋಜನೆಗಳನ್ನು ರದ್ದುಗೊಳಿಸುತ್ತಾರೆ ಇಲ್ಲವೇ ನಿಮ್ಮನ್ನು ಬಹಿಷ್ಕರಿಸುತ್ತಾರೆ. ಆದರೆ, ಅವರ ಸ್ನೇಹಿತರೊಂದಿಗೆ (Friends) ಸಂತೋಷದಿಂದ ಹೋಗುತ್ತಾರೆ. ಇಷ್ಟೇ ಅಲ್ಲ, ಅವರ ದಿನಚರಿಯ ಬಗ್ಗೆ, ವೇಳಾಪಟ್ಟಿ ಮತ್ತು ಜೀವನದ ಬಗ್ಗೆ ನಿಮಗೆ ತಿಳಿಸಲು ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಕೆಲವೊಮ್ಮೆ ಅವರು ನಿಮಗೆ ತಮ್ಮ ಆಯ್ಕೆಯ ಕಡೆಯ ಸ್ಥಾನ ನೀಡುತ್ತಾರೆ.

ಸಣ್ಣ ವಿಷಯಗಳಿಗೆ ಸಿಟ್ಟಾಗುತ್ತಾರೆ (Angry)
ಜಗಳಗಳು ಮತ್ತು ವಾದಗಳು ಸಂಬಂಧದ ಒಂದು ಭಾಗವಾಗಿದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ, ಅಂತಹ ವಿಷಯಗಳನ್ನು ಸುಲಭವಾಗಿ ಪರಿಹರಿಸಬಹುದು. ಆದರೆ ಇತ್ತೀಚೆಗೆ, ನಿಮ್ಮ ಸಂಗಾತಿಯು ಸಣ್ಣ ವಿಷಯಗಳಿಗೆ ಕಿರಿಕಿರಿಯನ್ನು ಅನುಭವಿಸುತ್ತಾನೆ, ಸಾಕಷ್ಟು ಜಗಳವಾಡುತ್ತಾರೆ ಮತ್ತು ಅಂತಹ ವಿಷಯಗಳನ್ನು ಮಾತನಾಡಲು ಅಥವಾ ಪರಿಹರಿಸಲು ಸಹ ಕಾಳಜಿ ವಹಿಸುವುದಿಲ್ಲ ಎಂದಾದಾಗ ಅದು ಯೋಚಿಸಬೇಕಾದ ವಿಷಯ. ಯಾರ ತಪ್ಪೇ ಇರಲಿ, ಅವರು ನಿಮ್ಮೊಂದಿಗೆ ಸಿಟ್ಟಾಗುತ್ತಾರೆ ಮತ್ತು ಯಾವಾಗಲೂ ಅಸಭ್ಯವಾಗಿ ವರ್ತಿಸುತ್ತಾರೆ. ಒಟ್ಟಿನಲ್ಲಿ ನಿಮ್ಮ ಬಗ್ಗೆ ಅವರು ಕಡಿಮೆ ಗೌರವ ತೋರುತ್ತಾರೆ.

ಅವರು ನಿಮ್ಮ ವಿಷಯಗಳ ಬಗ್ಗೆ ಕಾಳಜಿ (Care) ವಹಿಸುವುದಿಲ್ಲ
ನೀವೊಬ್ಬರೇ ಸಂಬಂಧವನ್ನು ಉಳಿಸಿಕೊಳ್ಳಲು ಕೆಲಸ ಮಾಡಲು ಸಾಧ್ಯವಿಲ್ಲ. ಇದಕ್ಕೆ ನಿಮ್ಮ ಸಂಗಾತಿಯ ಪ್ರಯತ್ನದ (Efforts) ಅಗತ್ಯವೂ ಇದೆ. ನೀವು ಮಾತನಾಡುತ್ತಿರುವುದು, ಪ್ರಶ್ನೆಗಳನ್ನು ಕೇಳುವುದು ಮತ್ತು ಅವರು ಅದಕ್ಕೆ ಯಾವುದೇ ಉತ್ತರ ನೀಡದೆ ಇರುವುದು ಅಥವಾ ಅಸ್ಪಷ್ಟ ಉತ್ತರಗಳನ್ನು ಹಿಂತಿರುಗಿಸುವುದನ್ನು ನೀವು ಕಂಡುಕೊಂಡರೆ. ಇದು ಅವರಿಗೆ ನಿಮ್ಮೊಂದಿಗೆ ತೊಡಗಿಸಿಕೊಳ್ಳಲು ಆಸಕ್ತಿಯ ಕೊರತೆಯನ್ನು ತೋರಿಸುತ್ತದೆ. ನಿಮ್ಮ ನಡುವೆ ನಡೆಯುತ್ತಿರುವ ವಿಷಯಗಳ ಬಗ್ಗೆ ಅವರು ನಿಮಗೆ ಯಾವುದೇ ಸ್ಪಷ್ಟತೆಯನ್ನು ನೀಡುವುದಿಲ್ಲ. ಆದರೂ ನೀವು ಮಾತ್ರ ಸಂವಹನ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೀರಿ ಎಂದರ್ಥ.

ಸಮಸ್ಯೆ ಪರಿಹಾರಕ್ಕೆ ಸಲಹೆಗಳು
ನೀವಿಬ್ಬರೂ ಕುಳಿತು ನಿಮ್ಮ ದಿನದ ಚಿಕ್ಕ ವಿವರಗಳನ್ನು ವಿನಿಮಯ (Exchange) ಮಾಡಿಕೊಳ್ಳಲು ಪ್ರಯತ್ನಿಸಿ. ಆದಷ್ಟು ಫೋನ್ ದೂರ ಇರಿಸಿ ಒಬ್ಬರಿಗೆ ಇನ್ನೊಬ್ಬರು ಹೆಚ್ಚಿನ ಸಮಯ ನೀಡಿಕೊಳ್ಳಿ. ದೂರದಲ್ಲಿರುವ ಸ್ನೇಹಿತರನ್ನು ಹತ್ತಿರ ಮಾಡುವ ಫೋನು ಹತ್ತಿರವೇ ಇರುವ ಸಂಗಾತಿಯನ್ನು ದೂರ ಮಾಡದೆ ಇರುವ ಹಾಗೆ ನೋಡಿಕೊಳ್ಳಿ. ಪ್ರತಿಯೊಂದು ಸಂದರ್ಭದಲ್ಲಿಯೂ ತಪ್ಪು ಇನ್ನೊಬ್ಬ ವ್ಯಕ್ತಿಯದೇ ಆಗಿರುತ್ತದೆ ಎಂದು ಭಾವಿಸಬಾರದು. ನಿಮಗೇ ತಿಳಿಯದೆ ನಿಮ್ಮಿಂದ ಅವರಿಗೆ ಬೇಸರ ಆಗಿರಬಹುದು. ಅದಕ್ಕಾಗಿ ಸರಿಯಾಗಿ ಯೋಚಿಸಿ ನಿರ್ಧಾರಗಳನ್ನು (Decision) ತೆಗೆದುಕೊಳ್ಳಿ.

ಸಂಬಂಧವು ಕಾಲಕಾಲಕ್ಕೆ ಏರಿಳಿತಗಳ ಮೂಲಕ ಸಾಗುತ್ತದೆ. ನೀವು ಅದನ್ನು ಕಾರ್ಯಗತಗೊಳಿಸಲು ನಿಮ್ಮ ಎಲ್ಲಾ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೀರ, ಆದರೂ ಇನ್ನೂ ವ್ಯತ್ಯಾಸವನ್ನು ಸರಿ ಮಾಡಲು ಸಾಧ್ಯವಾಗದಿದ್ದರೆ, ನೀವು ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳಬೇಕಾಗಬಹುದು ಮತ್ತು ಮುಂದುವರಿಯುವುದನ್ನು ಮರುಚಿಂತನೆ ಮಾಡಬೇಕಾಗಬಹುದು.

 

 

click me!