ಮಕ್ಕಳ ಓಟ್ಟಾರೆ ಬೆಳವಣಿಗೆಗೆ ಈ ಗುಣವನ್ನು ಪ್ರೋತ್ಸಾಹಿಸಿ

By Suvarna News  |  First Published Jul 26, 2022, 4:27 PM IST

ಮೊನ್ನೆ ಮೊನ್ನೆ ಅಂಗೈನಲ್ಲಿ ಇದ್ದ ಪುಟ್ಟ ಕಂದಮ್ಮ ಇಂದು ಬೆಳೆದು ದೊಡ್ಡವನಾಗಿದ್ದಾನೆ. ಹಿಡಿಯೋದು ಕಷ್ಟ ಕಲಿಸೋದು ಹರಸಾಹಸ. ಅಲ್ಲಿಂದಿಲ್ಲಿಗೆ ಓಡಾಡುತ್ತಾ ತರ್ಲೆ ತುಂಟಾಟಗಳನ್ನು ಮಾಡುತ್ತಾ ನಿಭಾಯಿಸುವುದು ಇಂದಿನ ಪೋಷಕರ ಪಾಡು. ಇದೊಂದು ಎಕ್ಸಾಂ ಎಂದರೆ ತಪ್ಪಾಗುವುದಿಲ್ಲ. ಬೆಳೆಯುವ ಪುಟ್ಟ ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಟ್ರೆöÊನ್ ಮಾಡುವುದು ಅತ್ಯಗತ್ಯ. ಈ ಬಗ್ಗೆ ಕೆಲ ಟಿಪ್ಸ್ ಇಲ್ಲಿದೆ.


ನೋಡ ನೋಡುತ್ತಿದ್ದಂತೆ ಮಗು ಹೇಗೆ ಬೆಳೆಯುತ್ತದೆ ತಿಳಿಯುವುದಿಲ್ಲ. ಬಹುತೇಕ ಮಕ್ಕಳು ದೊಡ್ಡವರನ್ನು ನೋಡಿಕೊಂಡೇ ಬೆಳೆಯುತ್ತಾರೆ ಹಾಗೂ ಅವರನ್ನು ಅನುಸರಿಸುತ್ತಾರೆ. ದೊಡ್ಡವರು ಮಕ್ಕಳೊಂದಿಗೆ ನಯ ವಿನಯದಿಂದ ಮಾತನಾಡಿದರೆ ಅವರೂ ದೊಡ್ಡವರನ್ನು ಗೌರವದಿಂದ ಮಾತನಾಡಿಸುತ್ತಾರೆ. ಅದೇ ಗಢಸು ಧ್ವನಿಯಲ್ಲಿ ಜೋರಾಗಿ ಮಾತನಾಡಿದರೆ ಅವರೂ ಅದನ್ನೇ ಅನುಸರಿಸುತ್ತಾರೆ. ಪುಟ್ಟ ಮಕ್ಕಳ ಬೆಳವಣಿಗೆಯ ಶಕ್ತಿ ಇಂದಿನ ಕಾಲದಲ್ಲಿ ಅಪಾರವಾಗಿದೆ. ಒಂದು ಹೆಜ್ಜೆ ಮುಂದಿಟ್ಟರೆ ಅವರು ನೂರು ಹೆಜ್ಜೆ ಮುಂದಿಡುತ್ತಾರೆ ಅಷ್ಟು ಚುರುಕಾಗಿರುತ್ತಾರೆ.

ಮಕ್ಕಳು ಐದು ವರ್ಷದೊಳಗೆ ಏನು ಕಲಿಯುತ್ತಾರೆ ಅದು ಬಹಳ ಮುಖ್ಯ. ಅದನ್ನು ಅವರು ದೊಡ್ಡವರನ್ನು ನೋಡಿ ಕಲಿಯುವುದರಿಂದ ಪೋಷಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಾನಸಿಕವಾಗಿ ಅಷ್ಟೇ ಅಲ್ಲದೆ ದೈಹಿಕವಾಗಿ ಅವರಿಗೆ ಟ್ರೆöÊನ್ ಮಾಡಬೇಕು. ಫಿಸಿಕಲ್ ಅಭಿವೃದ್ಧಿಯು ಕೇವಲ ದೈಹಿಇಕ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ ಆದರೆ ಮಗುವಿನ ಮೆದುಳು ಮತ್ತು ಫಿಸಿಕಲ್ ಆಯಕ್ಟಿವಿಟಿ ಸಹ ಮಗುವನ್ನು ಹೊಸ ಅನುಭವಗಳಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮೊದಲ ಐದು ವರ್ಷಗಳು ಮಕ್ಕಳ ಬೆಳವಣಿಗೆಗೆ ನಿರ್ಣಾಯಕ. ಇದಲ್ಲದೆ ಅಭಿವೃದ್ಧಿಯು ದೈಹಿಕ ಸಂವಹನ ಮತ್ತು ಭಾಷೆ, ಅರಿವಿನ ಮತ್ತು ಸಾಮಾಜಿಕ ಮತ್ತು ಭಾವನಾತ್ಮಕ ಕ್ಷೇತ್ರಗಳಲ್ಲಿ ಕಂಡುಬರುತ್ತದೆ. ಮಕ್ಕಳಲ್ಲಿ ದೈಹಿಕ ಕೌಶಲ್ಯಗಳು ಮತ್ತು ದೈಹಿಕ ಬೆಳವಣಿಗೆಯ ಪ್ರಾಮುಖ್ಯತೆ ಮತ್ತಯಯ ಮಗುವಿನ ಆರೋಗ್ಯಕಕ್ಕೆ ಪೋಷಕರು ಹೇಗೆ ಸಹಾಯ ಮಾಡಬಹುದು ಮತ್ತು ಗಮನ ಕೊಡಬಹುದು ಎಂಬುದರ ಕುರಿತು ಇಲ್ಲಿದೆ ಕೆಲ ಮಾಹಿತಿ.

ಮಕ್ಕಳು ಅಂತ ಇಗ್ನೋರ್ ಮಾಡೋದು ಬೇಡ, ಅವು ಕಲಿಸೋ ಪಾಠ ಕಲಿತುಕೊಳ್ಳಿ!

Tap to resize

Latest Videos

ಮೋಟಾರ್ ಬೆಳವಣಿಗೆ ಎಂದರೇನು?
ಮಗುವಿನ ಮೂಳೆಗಳು(Bone) ಮತ್ತು ಸ್ನಾಯುಗಳ ದೈಹಿಕ ಬೆಳವಣಿಗೆ ಮತ್ತು ಬಲವರ್ಧನೆ(Strong), ಅವರ ಚಲನೆಗೆ ಸಹಾಯ ಮಾಡುವುದು ಎಂದು. ಇದನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ. ಫೈನ್ ಮೋಟಾರ್(Fine Motor) ಮತ್ತು ಗ್ರಾಸ್ ಮೋಟಾರ್(Gross Motor). ಫೈನ್ ಮೋಟಾರ್ ಎಂದರೆ ಸಣ್ಣ ಸಂಗತಿಗಳಲ್ಲಿನ ಬೆಳವಣಿಗೆ. ಅಂದರೆ ಕೈ, ಮಣಿಕಟ್ಟು, ಬೆರಳು, ಪಾದ, ಕಾಲ್ಬೆರಳು, ತುಟಿ, ನಾಲಿಗೆಂ ಸಣ್ಣ ಚಲನವಾಗಿದೆ. ಗ್ರಾಸ್ ಮೋಟಾರ್ ಅಂದರೆ ಸ್ಥೂಲವಾದ ಕೌಶಲ್ಯಗಳು, ಸ್ನಾಯುಗಳನ್ನು ಅಭಿವೃದ್ಧಿಪಡಿಸುತ್ತದೆ. ಅದು ಶಿಶುಗಳು ತಮ್ಮ ತಲೆಯನ್ನು ಹಿಡಿದಿಟ್ಟುಕೊಳ್ಳಲು, ಕುಳಿತುಕೊಳ್ಳಲು ಮತ್ತು ತೆವಳಲು ಹಾಗೂ ನಂತರ ನಡೆಯಲು(Stepping), ಓಡಾಡಲು, ಜಿಗಿಯುವುದು(Jump) ಮತ್ತು ಸ್ಕಿಪ್(Skip) ಮಾಡಲು ಅನುವು ಮಾಡಿಕೊಡುತ್ತದೆ. 
ಈ ಬೆಳವಣಿಗೆಯು ಆಂತರಿಕೆ ದೇಹದಿಂದ ತಲೆ, ಕುತ್ತಿಗೆ, ತೋಳುಗಳು ಮತ್ಯು ಕಾಲುಗಳೊಂದಿಗೆ ಪ್ರಾರಂಭವಾಗುತ್ತದೆ ಮತ್ತು ನಂತರ ಕೈ, ಪಾದ, ಬೆರಳು ಹಾಗೂ ಕಾಲ್ಬೆರಳುಗಳಂತಹ ಹೊಒರ ದೇಹಕ್ಕೆ ಚಲಿಸುತ್ತದೆ. 

ಫೋಷಕರೇ ಇಲ್ ಕೇಳಿ, ಮಕ್ಕಳ ವಿಶ್ವಾಸ ಹೆಚ್ಚಿಸೋ ಬದಲು ಕುಂದಿಸಬೇಡಿ!

ಮೋಟಾರ್ ಸ್ಕಿಲ್ (Motor Skill) ಏಕೆ ಮುಖ್ಯ?
ಮಗುವಿಗೆ ತನ್ನ ಕೆಲಸಗಳನ್ನು ಸ್ವತಂತ್ರವಾಗಿ ಮಾಡಲು ಮತ್ತು ಚಲಿಸಲು, ಅರಿವಿನ ಮತ್ತು ಸಂವೇದನಾ ಬೆಳವಣಿಗೆಯನ್ನು ಅಭಿವೃದ್ಧಿ ಪಡಿಸಲು, ಆತ್ಮವಿಶ್ವಾಸ ಮತ್ತು ಸ್ವಾತಂತ್ರö್ಯವನ್ನು ಹೆಚ್ಚಿಸಲು, ಅಭಿವೃದ್ಧಿಯ ಮೈಲಿಗಲ್ಲುಗಳನ್ನು ಸಾಧಿಸಲು ಮತ್ತು ಆರಂಭಿಕ  ದೈಹಿಕ ವಿಳಂಬ ಮತ್ತು ಒಬ್ಬರ ಬೆಳವಣಿಗೆಗೆ ಅಡ್ಡಿಯಾಗುವ ಪರಿಸ್ಥಿತಿಗಳನ್ನು ತಡೆಯಲು ಈ ಮೋಟಾರ್ ಸ್ಕಿಲ್ ಅಂದರೆ ದೈಹಿಕ ಕೌಶಲ್ಯಗಳ ಅಗತ್ಯವಿದೆ. ಈ ಬಗ್ಗೆ ಪೋಷಕರು ಪ್ರತೀ ದಿನ ಹೆಚ್ಚಿನ ಪ್ರಮಾಣದಲ್ಲಿ ಕಾಳಜಿ ವಹಿಸಬೇಕು.

ಪೋಷಕರು ಏನು ಮಾಡಬೇಕು?
ಮಗುವಿನ ಬೆಳವಣಿಗೆಯ ಒಂದೊAದು ಹಂತವನನ್ನೂ ಪೋಷಕರು ಎಂಜಾಯ್ ಮಾಡಬೇಕು. ಅವರ ಒಂದೊAದು ಕಲಿಕೆಗೂ ರೆಸ್ಪಾಂಡ್ ಮಾಡುವುದರಿಂದ ಅವರ ಕಲಿಕೆಗೆ ಉತ್ತೇಜಿಸಿದಂತೆ. ಮಗು ತೆವಳಲು ಆರಂಭಿಸಿದರೆ ಮುಂದೆ ಹೆಜ್ಜೆ ಇಡಲು ಪ್ರೋತ್ಸಾಹಿಸಿ ಅದನ್ನು ಕಲಿಸುವುದು. ಹೀಗೆ ಅಂಬೆಗಾಲಿಡುವುದು, ಒಂದೊAದೇ ಹೆಜ್ಜೆ ಇಡುವುದು, ವಸ್ತುಗಳನ್ನು ಹಿಡಿದಿಟ್ಟುಕೊಳ್ಳುವುದು, ಜಿಗಿಯುವುದು ಮತ್ತು ಪ್ರತೀ ದಿನ ಅವರಿಗೆ ಆಟವಾಡಲು ಪ್ರೋತ್ಸಾಹಿಸುವುದಲ್ಲದೆ, ಅವರೊಟ್ಟಿಗೆ ಪೋಷಕರು ಆಟವಾಡುವುದು. ಇದರಿಂದ ಮಗು ಹಾಗೂ ಪೋಷಕರ ನಡುವಿನ ಬಾಂಡ್ ಮತ್ತಷ್ಟು ಹೆಚ್ಚಿಸಬಹುದು.

ಮಗುವಿನ ಎದುರು ಒಂದು ಗೊಂಬೆಯನ್ನಿಟ್ಟು ಅದನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವುದು. ಮಗುವಿನ ಆ ಪ್ರಯತ್ನವನ್ನು ಗಮನಿಸಬೇಕಲ್ಲದೆ, ಒಂದು ವೇಳೆ ಮಗು ಬಿದ್ದರೂ ಹೆದರದೇ ಅದಕ್ಕೆ ಮತ್ತೆ ಪ್ರಯತ್ನಿಸುವಂತೆ ಬೆಂಬಲಿಸಬೇಕು. ಹೀಗೆ ಮಾಡುವುದರಿಂದ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದರೊಂದಿಗೆ ಮಕ್ಕಳು ತಮ್ಮಷ್ಟಕ್ಕೆ ತಾವೇ ಹಲ್ಲುಜ್ಜುವುದು(Brushing), ಆಹಾರ ಸೇವಿಸುವುದು(Eating), ಪೆನ್ಸಿಲ್ ಹಿಡಿದು ಒಂದು ಬುಕ್ಕಿನಲ್ಲಿ ಗೀಚುವುದು, ಪಸಲ್ ಜೋಡಿಸುವುದು, ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸುವುದು, ಆಡುವುದು(Playing). ಹೀಗೆ ಮಾಡುವುದನ್ನು ತಡೆಯದೇ ಪ್ರೋತ್ಸಾಹಿಸಬೇಕು.

click me!