ಪ್ರೇಮ ವಿವಾಹಕ್ಕೆ ಯಾರ ಅನುಮತಿಯೂ ಬೇಕಿಲ್ಲ. ವಯಸ್ಕರಾಗಿದ್ದರೆ ಸಾಕು. ಎಲ್ಲರ ವಿರೋಧ ಕಟ್ಟಿಕೊಂಡು ನೋಂದಣಿ ಕೇಂದ್ರದಲ್ಲಿ ಮದುವೆಯಾಗುವ ಪ್ರೇಮಿಗಳ ಸಂಖ್ಯೆ ಕಡಿಮೆ ಏನೂ ಇಲ್ಲ. ಆದರೆ ಗುಜರಾತ್ ಸರ್ಕಾರ ಇದೀಗ ಪ್ರೇಮ ವಿವಾಹಕ್ಕೂ ಪೋಷಕರ ಅನುಮತಿ ಕಡ್ಡಾಯಗೊಳಿಸುವ ಸಾಧ್ಯತೆ ಕುರಿತು ಅಧ್ಯಯನ ಮಾಡಲು ಮುಂದಾಗಿದೆ.
ಅಹಮ್ಮದಾಬಾದ್(ಜು.31) ಪ್ರೀತಿಸಿ ಮದುವೆಯಾಗುವುದು ಹೊಸ ವಿಚಾರವಲ್ಲ. ಪ್ರೀತಿಗೆ ಪೋಷಕರ ವಿರೋಧ ಸೇರಿದಂತೆ ಹಲವು ಅಡೆತಡೆಗಳು ಇದ್ದೇ ಇವೆ. ಮಕ್ಕಳನ್ನು ಬೆಳೆಸಿ ಕೊನೆಗೆ ದಿಢೀರ್ ಆಗಿ ಪ್ರೀತಿ ಹೆಸರಲ್ಲಿ ನಾಪತ್ತೆಯಾಗುವು ಪ್ರಕರಣಗಳು ನಡೆಯುತ್ತಲೇ ಇದೆ. ಇತ್ತ ಪೋಷಕರ ದೂರು ಆಕ್ರಂದನ, ಬಳಿಕ ಹಲವು ಆರೋಪಗಳು ಸಾಮಾನ್ಯವಾಗುತ್ತಿದೆ. ಪ್ರೇಮ ವಿವಾಹದಿಂದ ಸೃಷ್ಟಿಯಾಗುತ್ತಿರುವ ಅನಗತ್ಯ ವಿವಾದ, ಆರೋಪಗಳನ್ನು ತಪ್ಪಿಸಲು ಗುಜರಾತ್ ಸರ್ಕಾರ ಹೊಸ ಆಲೋಚನೆಯನ್ನು ಮುಂದಿಟ್ಟಿದೆ. ಪ್ರೇಮ ವಿವಾಹಗಳಲ್ಲಿ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸುವ ಸಾಧ್ಯತೆಗಳ ಕುರಿತು ಅಧ್ಯಯನ ಮಾಡಲು ಗುಜರಾತ್ ಮುಂದಾಗಿದೆ. ಈ ಕುರಿಕು ಸ್ವತಃ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಮೆಹ್ಸಾನಾದಲ್ಲಿ ಪಾಟಿದಾಸ್ ಸಮುದಾಯದ ಸರ್ದಾರ್ ಪಟೇಲ್ ಗ್ರೂಪ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭೂಪೇಂದ್ರ ಪಟೇಲ್, ಪ್ರೇಮ ವಿವಾಹದ ಕುರಿತು ಹೊಸ ಆಲೋಚನೆಯನ್ನು ಬಿಚ್ಚಿಟ್ಟಿದ್ದಾರೆ. ಹೆಣ್ಣುಮಕ್ಕಳು ಮದುವೆಗಾಗಿ ಓಡಿ ಹೋಗುವ ಘಟನೆಗಳು ಹೆಚ್ಚಾಗುತ್ತದೆ. ಪ್ರೀತಿಸಿ ಎಲ್ಲರನ್ನೂ ಒಪ್ಪಿಸಿ ಮದುವೆಯಾಗಿ. ಓಡಿ ಹೋಗುವ ಸಂಪ್ರದಾಯದಿಂದ ಅಪಾಯ ಹಾಗೂ ಸಂಕಷ್ಟಗಳು ಹೆಚ್ಚು. ಕುಟುಂಬದ ನೆರವು ಇರುವುದಿಲ್ಲ. ಹೀಗಾಗಿ ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕುರಿತ ಸಾಧ್ಯತೆಗಳು, ಕಾನೂನು ಪರಿಮಿತಿ ಸೇರಿದಂತೆ ಹಲವು ವಿಚಾರಗಳ ಕುರಿತು ಅಧ್ಯಯನ ನಡೆಸಲಾಗುತ್ತದೆ ಎಂದು ಭೂಪೇಂದ್ರ ಪಟೇಲ್ ಹೇಳಿದ್ದಾರೆ.
'ಬೀಸೋ ಗಾಳಿಗೂ.. ಬೀಳೋ ಮರಕ್ಕೂ ಲವ್ವಾಗಿದೆ..' 47ರ ಮಹಿಳೆಯನ್ನು ಮದುವೆಯಾದ 76ರ ವೃದ್ಧ!
ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕುರಿತು ಸಂವಿಧಾನ ಏನು ಹೇಳುತ್ತದೆ? ಕಾನೂನು ಏನಿದೆ? ಪೋಷಕರ ತೊಳಲಾಟ, ಆಕ್ರಂದನ, ಆರೋಪ, ದೂರುಗಳನ್ನೂ ದೃಷ್ಟಿಯಲ್ಲಿಟ್ಟುಕೊಂಡು ಅಧ್ಯಯನ ನಡೆಸಲಾಗತ್ತದೆ. ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯ ಸದ್ಯಕ್ಕೆ ಅಧ್ಯಯನ ವಸ್ತು. ಈ ಕುರಿತು ಸರ್ಕಾರಕ್ಕೆ ಪೂರ್ವನಿಯೋಜಿತ ನಿರ್ಧಾರಗಳಿಲ್ಲ. ಅಧ್ಯಯನ ವರದಿ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ವಯಸ್ಕರ ಪ್ರೇಮ ವಿವಾಹವನ್ನು ಪೋಷಕರು ತಿರಸ್ಕರಿಸಿದಾ ಏನು ಮಾಡಬೇಕು? ಓಡಿ ಹೋದ ಬಳಿಕ ಹೆಣ್ಣುಮಕ್ಕಳು ಸಂಕಷ್ಟಕ್ಕೆ ಸಿಲುಕಿದ ಹಲವು ಉದಾಹರಣೆಗಳಿವೆ. ಇದರ ಬದಲು ವ್ಯವಸ್ಥೆಯಲ್ಲಿ ಯಾವ ರೀತಿ ಬದಲಾವಣೆ ತರಲು ಸಾಧ್ಯ? ಹೆಣ್ಣುಮಕ್ಕಳ ಸುರಕ್ಷತೆ, ಪೋಷಕರ ಭದ್ರತೆ ಸೇರಿದಂತೆ ಹಲವು ವಿಚಾರಗಳು ಇದರಲ್ಲಿದೆ. ಸರ್ಕಾರ ಪ್ರೇಮ ವಿವಾಹಕ್ಕೆ ವಿರುದ್ಧವಾಗಿಲ್ಲ. ಆದರೆ ಇದಕ್ಕೊಂದು ವ್ಯವಸ್ಥೆ ಬೇಕಿದೆ ಎಂದು ಭೂಪೇಂದ್ರ ಪಟೇಲ್ ಹೇಳಿದ್ದಾರೆ.
Relationship Tips : ಐ ಲವ್ ಯೂ ಆದ್ರೆ ಮದುವೆಯಾಗಲ್ಲ… ಇಂಥ ಸ್ಥಿತಿ ಎದುರಿಸಿದ್ರಾ?
ಇದೀಗ ಗುಜರಾತ್ ಮುಖ್ಯಮಂತ್ರಿ ಹೇಳಿದೆ ಹೊಸ ವಿಚಾರದ ಕುರಿತು ಚರ್ಚೆಗಳು ಆರಂಭಗೊಂಡಿದೆ. ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯ ವಿಷಯಕ್ಕೆ ಪರ ವಿರೋಧಗಳು ಸಾಮಾನ್ಯ. ಆದರೆ ಅಧ್ಯಯನ ವರದಿ ಏನು ಹೇಳಲಿದೆ ಅನ್ನೋ ಕುತೂಹಲ ಇದೀಗ ಹೆಚ್ಚಾಗಿದೆ.