ಇತ್ತೀಚಿನ ವರ್ಷಗಳಲ್ಲಿ ಸಣ್ಣಪುಟ್ಟ ಕಾರಣಕ್ಕೆ ವಧು-ವರರು ಮದ್ವೆ ಕ್ಯಾನ್ಸಲ್ ಮಾಡಿಕೊಳ್ಳೋದು ಸಾಮಾನ್ಯ. ಹಾಗೆಯೇ ಇಲ್ಲೊಬ್ಬ ವರ ಮಂಟಪದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ್ದಾನೆ. ಆದ್ರೆ ಸಣ್ಣಪುಟ್ಟ ಕಾರಣಕ್ಕಲ್ಲ. ಮತ್ಯಾಕೆ?
ಉತ್ತರಪ್ರದೇಶ: ಮದುವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಸ್ಪೆಷಲ್ ಡೇ ಆಗಿರುತ್ತದೆ. ಕೇವಲ ಮದುಮಕ್ಕಳು ಮಾತ್ರವಲ್ಲ ಕುಟುಂಬ ಸದಸ್ಯರು, ಬಂಧು ಬಳಗದವರು, ಸ್ನೇಹಿತರು ಎಲ್ಲರೂ ಮದುವೆ ದಿನ ಅಂದ್ರೆ ಖುಷಿ ಪಡುತ್ತಾರೆ. ಆದ್ರೆ ಇತ್ತೀಚಿಗೆ ಕೆಲ ವರ್ಷಗಳಿಂದ ಮದುವೆ ಸುಸೂತ್ರವಾಗಿ ನಡೆಯೋದಕ್ಕಿಂತ ಹೆಚ್ಚಾಗಿ ಸಣ್ಣಪುಟ್ಟ ಕಾರಣಕ್ಕೆ ಕ್ಯಾನ್ಸಲ್ ಆಗೋದೆ ಜಾಸ್ತಿ. ಸಣ್ಣಪುಟ್ಟ ಕಾರಣಕ್ಕೆ ವರ, ವಧು ಮದುವೆ ಕ್ಯಾನ್ಸಲ್ ಮಾಡಿಕೊಳ್ಳುತ್ತಾರೆ. ಮದ್ವೆ ಊಟ ಚೆನ್ನಾಗಿಲ್ಲಾಂತ, ಬ್ಯಾಂಡ್ ಕರೆಸಿಲ್ಲಾಂತ, ಹುಡುಗನ ಕಡೆಯವರು ಬರೋಕೆ ಕಾರು ಕಳಿಸಿಕೊಟ್ಟಿಲ್ಲಾಂತ ಹೀಗೆ ನಾನಾ ಕಾರಣಕ್ಕೆ ಹುಡುಗರು ಮದ್ವೆ ಕ್ಯಾನ್ಸಲ್ ಮಾಡಿಕೊಳ್ತಾರೆ. ಇತ್ತ ಹುಡುಗಿಯರು ಹುಡುಗನ ಮನೆಯಿಂದ ಕೊಟ್ಟ ಸೀರೆ ಚೆನ್ನಾಗಿಲ್ಲ, ಹುಡುಗನ ಮನೆ ಚಿಕ್ಕದು ಅನ್ನೋ ಕಾರಣಕ್ಕೆಲ್ಲಾ ಮದ್ವೆ ಬೇಡ ಅನ್ನುತ್ತಾರೆ.
ಹಲವು ಜೋಡಿಗಳು ಮಂಟಪದಲ್ಲೇ ಮದುವೆ (Marriage) ಕ್ಯಾನ್ಸಲ್ ಮಾಡಿಕೊಂಡ ಹಲವಾರು ಘಟನೆಗಳು ನಡೆದಿವೆ. ಹಾಗೆಯೇ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದ ಘಟನೆಯೊಂದರಲ್ಲಿ ವರ (Groom), ಮಂಟಪದಲ್ಲೇ ಮದುವೆ ಕ್ಯಾನ್ಸಲ್ ಮಾಡ್ಕೊಂಡಿದ್ದಾನೆ. ಹಾಗೆಂದು ಈ ಮದ್ವೆ ಕ್ಯಾನ್ಸಲ್ ಮಾಡ್ಕೊಂಡಿರೋದು ಸಣ್ಣ ಪುಟ್ಟ ಕಾರಣಕ್ಕೇನು ಅಲ್ಲ. ಇಲ್ಲಿ ಮದ್ವೆ ಮಂಟಪದಲ್ಲೇ ವಧುವಿಗೆ ಲವರ್‌ನಿಂದ ಕಾಲ್ ಬಂದಿತ್ತಂತೆ.
Viral Video: ಮಂಟಪದಲ್ಲಿ ವಧುವಿನ ಕಾಲು ಮುಟ್ಟಿ ನಮಸ್ಕರಿಸಿದ ವರ, ವಾವ್ಹ್ ಎಂದ ನೆಟ್ಟಿಗರು
ವರನಿಗೆ, ವಧುವಿನ ಪ್ರೇಮಿಯಿಂದ ಬೆದರಿಕೆ ಕರೆ
ವಧು (Bride) ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ತಿಳಿದ ನಂತರ ವರನೊಬ್ಬ ತನ್ನ ಮದುವೆಯನ್ನು ಮಂಟಪದಲ್ಲಿ ಮಧ್ಯದಲ್ಲಿಯೇ ನಿಲ್ಲಿಸಿದ ಘಟನೆ ನಡೆದಿದೆ. ವಧುವಿನ ಪ್ರೇಮಿ (Lover)ಯಿಂದ ನಿಂದನೀಯ ಮತ್ತು ಬೆದರಿಕೆ ಕರೆ ಬಂದ ನಂತರ ವರನು ಮದುವೆಯನ್ನು ಹಠಾತ್ತನೆ ರದ್ದುಗೊಳಿಸಿದ್ದರಿಂದ ಮದುವೆಯ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಯಿತು. ವರದಿಯ ಪ್ರಕಾರ, ವಧುವಿನ ಪ್ರೇಮಿಯು ಅಪರಿಚಿತ ಸಂಖ್ಯೆಯಿಂದ (Unknown number) ವರನಿಗೆ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದು, ಇದನ್ನು ನೋಡಿ ವರ ಮದುವೆ ಕ್ಯಾನ್ಸಲ್ ಮಾಡ್ಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸಿದ್ಧಾರ್ಥನಗರ ಜಿಲ್ಲೆಯ ಹಳ್ಳಿಯೊಂದರ ಹುಡುಗಿಯ ಮದುವೆಯನ್ನು ಯುವಕನೊಂದಿಗೆ ಮೇ 28ರಂದು ನಿಗದಿಪಡಿಸಲಾಗಿತ್ತು. ನಿಗದಿತ ದಿನಾಂಕದಂದು, ವರನು ವಧುವಿನ ಮನೆಗೆ ಆಗಮಿಸಿದನು. ಜಯಮಾಲಾ ಸಮಾರಂಭದ ಸ್ವಲ್ಪ ಸಮಯದ ನಂತರದ ವರೆಗೂ ಮದುವೆಯ ವಿಧಿವಿಧಾನಗಳು ಸುಗಮವಾಗಿ ನಡೆಯುತ್ತಿದ್ದವು. ಆ ಬಳಿಕ ಸ್ಪಲ್ಪ ಹೊತ್ತಿನಲ್ಲಿ ವರನಿಗೆ ಕರೆ ಬಂತು. ತಕ್ಷಣ ವರ ಮದುವೆ ಕ್ಯಾನ್ಸಲ್ ಮಾಡಿದ್ದಾಗಿ ಹೇಳಿದನು.
ಮಂಟಪದಿಂದ ಓಡಿ ಹೋದ ವರ, 20 ಕಿ.ಮೀ. ಬೆನ್ನಟ್ಟಿ ವಾಪಾಸ್ ಕರೆ ತಂದ ವಧು!
ಅಪರಿಚಿತ ವ್ಯಕ್ತಿ ಕಳುಹಿಸಿದ ಫೋಟೋಸ್ ನೋಡಿ ಮಂಟಪದಿಂದ ಕೆಳಗಿಳಿದ ವರ
ಕರೆ ಮಾಡಿದವನು ವರನನ್ನು ನಿಂದಿಸಿದ್ದಾನೆ ಎಂದು ಸಂಬಂಧಿಕರು ತಿಳಿಸಿದರು. 'ನೀನು ಮದುವೆಯಾಗುತ್ತಿರುವ ಹುಡುಗಿ ನಮ್ಮವಳು. ನಿನಗೆ ಇದನ್ನು ನಂಬಲು ಕಷ್ಟವಾದರೆ ಫೋಟೋ ಮತ್ತು ವೀಡಿಯೊವನ್ನು ಕಳುಹಿಸಲಾಗಿದೆ' ಎಂದು ಅಪರಿಚಿತ ವ್ಯಕ್ತಿ ಹೇಳಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ನಂತರ ವರನು ವಿಡಿಯೋ ಮತ್ತು ಫೋಟೋಗಳನ್ನು ನೋಡಿ ವೇದಿಕೆಯಿಂದ ಇಳಿದನು.
ನಂತರ 112ಕ್ಕೆ ಡಯಲ್ ಮಾಡುವ ಮೂಲಕ ಯಾರೋ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸರ ತಂಡವೂ ಸ್ಥಳಕ್ಕೆ ತಲುಪಿತು. ಪೊಲೀಸರು, ಗ್ರಾಮದ ಮುಖಂಡರು ಹಾಗೂ ಗ್ರಾಮದ ಕೆಲ ಪ್ರಮುಖರು ಹಾಗೂ ಸಂಬಂಧಿಕರು ಮದುವೆ ರದ್ದು ಮಾಡದಂತೆ ವರನಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ ವರನು ತನ್ನ ನಿರ್ಧಾರವನ್ನು ಬದಲಾಯಿಸಲ್ಲಿಲ್ಲ. ವಧುವಿನ ಮನೆಯವರು ಪದೇ ಪದೇ ವಿನಂತಿಸಿದರೂ ಮೆರವಣಿಗೆಯೊಂದಿಗೆ ಮದುವೆ ಮನೆಯಿಂದ ನಿರ್ಗಮಿಸಿನು, ಮದುವೆಗೆ ಅಡ್ಡಿಪಡಿಸಿದ ವ್ಯಕ್ತಿಯ ವಿರುದ್ಧ ವಧುವಿನ ತಂದೆ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಆಹಹಾ ಎಂಥಾ ಸ್ನೇಹಿತರು ನೋಡಿ: ಅರಿಶಿಣ ಶಾಸ್ತ್ರದ ವೇಳೆ ವರನಿಗೆ ಬೀರ್ ಅಭಿಷೇಕ ಮಾಡಿದ ಗೆಳೆಯರು
ಇದೇ ವೇಳೆ ವಿಡಿಯೋ ಹಾಗೂ ಫೋಟೋ ಕಳುಹಿಸಿದ ಪ್ರೇಮಿ ಸಿಕ್ಕಿಬಿದ್ದಿದ್ದಾನೆ. ವಧುವಿನ ತಂದೆಯ ದೂರಿನ ಮೇರೆಗೆ ಮದುವೆಗೆ ಅಡ್ಡಿಪಡಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಸಿಒ ಗರ್ವಿತ್ ಸಿಂಗ್ ಅಮರ್ ತಿಳಿಸಿದರು. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.