ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆ –ಔಷಧಿ ಸೇವನೆ ಮಾಡಬಾರದು. ಇದು ಸಮಸ್ಯೆಯನ್ನು ದೊಡ್ಡದು ಮಾಡುತ್ತದೆ. ಇದಕ್ಕೆ ಈ ಹುಡುಗಿ ಕೂಡ ಉದಾಹರಣೆ. ಗರ್ಭಪಾತದ ಮಾತ್ರೆ ಸೇವನೆ ಮಾಡಿದ ಹುಡುಗಿ ತನ್ನ ಕಥೆ ಹೇಳಿದ್ದಾಳೆ.
ವಿದೇಶದಲ್ಲಿ ಮದುವೆಗೆ ಮುನ್ನ ಗರ್ಭ ಧರಿಸೋದು, ಮಕ್ಕಳು ಬೇಡವೆಂದ್ರೆ ಗರ್ಭಪಾತ ಮಾಡಿಸಿಕೊಳ್ಳೋದು ಸಾಮಾನ್ಯ ವಿಷ್ಯ. ಆದ್ರೆ ಭಾರತದಲ್ಲಿ ಮದುವೆಗೆ ಮುನ್ನ ಗರ್ಭ ಧರಿಸೋದು ಅಪರಾಧ. ಮದುವೆಗೆ ಮುನ್ನ ಗರ್ಭಿಣಿಯಾದ ಹುಡುಗಿಯನ್ನು ಎಲ್ಲರೂ ಕೆಟ್ಟ ದೃಷ್ಟಿಯಿಂದ ನೋಡ್ತಾರೆ. ಸಮಾಜದಿಂದ ಆಕೆಯನ್ನು ದೂರವಿಡ್ತಾರೆ. ಮದುವೆಗೆ ಮೊದಲು ಗರ್ಭಧಾರಣೆ ಹಾಗೂ ಗರ್ಭಪಾತ ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಸಾಮಾನ್ಯವಾಗ್ತಿದೆ. ಆದ್ರೆ ಹಳ್ಳಿಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ, ಮದುವೆಗೆ ಮುನ್ನ ಗರ್ಭಧರಿಸಿದರೆ ಅದನ್ನು ಪಾಪವೆಂದೇ ಪರಿಗಣಿಸಲಾಗುತ್ತದೆ. ಜನರ ಕೆಟ್ಟ ಮಾತುಗಳ ಜೊತೆ ಆಪರೇಷನ್ ಅನೇಕ ಹುಡುಗಿಯರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮುಂಬೈ ಹುಡುಗಿಯೊಬ್ಬಳು ಗರ್ಭಧಾರಣೆ ಹಾಗೂ ಆಪರೇಷನ್ ಬಗ್ಗೆ ತನ್ನ ಅನುಭವವನ್ನು ಹೇಳಿಕೊಂಡಿದ್ದಾಳೆ.
ಮುಂಬೈ (Mumbai) ಹುಡುಗಿಗೆ 22 ವರ್ಷ. ಎರಡು ವರ್ಷಗಳ ಹಿಂದೆಯೇ ಬಾಯ್ ಫ್ರೆಂಡ್ (Boy Friend) ಜೊತೆ ಬ್ರೇಕ್ ಅಪ್ ಆಗಿತ್ತಂತೆ. ಆದ್ರೆ ಇಬ್ಬರ ಮಧ್ಯೆ ದೈಹಿಕ ಸಂಬಂಧ ಮುಂದುವರೆದಿತ್ತಂತೆ. ಗರ್ಭಧರಿಸುವ ಕೆಲ ತಿಂಗಳ ಹಿಂದಷ್ಟೆ ಹುಡುಗಿ, ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳಂತೆ. ಹೊಸ ಕೆಲಸ ಆಕೆಗೆ ಖುಷಿ ನೀಡಿತ್ತಂತೆ. ಕೆಲ ದಿನಗಳಿಂದ ತೂಕ ಹೆಚ್ಚಾಗ್ತಿರೋದನ್ನು ಗಮನಿಸಿದ್ದ ಹುಡುಗಿ, ಇದಕ್ಕೆ ಕಾರಣ ಖುಷಿ ಇರಬಹುದು ಎಂದುಕೊಂಡಿದ್ದಳಂತೆ.
ಮುಟ್ಟು 10 ದಿನ ಮುಂದೆ ಹೋಗಿದ್ರಿಂದ ಹುಡುಗಿ ಪ್ರೆಗ್ನೆನ್ಸಿ (Pregnancy) ಟೆಸ್ಟ್ ಮಾಡಿದ್ದಳಂತೆ. ಅದ್ರಲ್ಲಿ ಪಾಸಿಟಿವ್ ಬಂದಿರೋದನ್ನು ನೋಡಿ ದಂಗಾಗಿದ್ದಳಂತೆ. ಆದ್ರೆ ಅದನ್ನು ನಂಬದ ಹುಡುಗಿ ಮತ್ತೆ ನಾಲ್ಕು ದಿನ ಕಾದಿದ್ದಳಂತೆ. ಮತ್ತೆ ಪರೀಕ್ಷೆ ಮಾಡಿದಾಗ್ಲೂ ಆಕೆ ಗರ್ಭಿಣಿ ಎಂಬುದು ದೃಢಪಟ್ಟಿತ್ತಂತೆ. ಬೆಳಗಿನ ಜಾವ 3.30ಕ್ಕೆ ಪರೀಕ್ಷೆ ಮಾಡಿಕೊಂಡಿದ್ದ ಹುಡುಗಿ, ಬೆಳಿಗ್ಗೆ ಬ್ಲಡ್ ಟೆಸ್ಟ್ ಗೆ ಕೊಟ್ಟು ಕಚೇರಿಗೆ ಹೋಗಿದ್ದಳಂತೆ.
ಅಲ್ಟ್ರಾಸೌಂಡ್ ಟೆಸ್ಟ್ ಕೂಡ ಮಾಡಿಸಿದ್ದಳಂತೆ. 6 ರಿಂದ 7 ವಾರದ ಭ್ರೂಣ ಬೆಳೆಯುತ್ತಿದೆ ಎಂಬ ಸಂಗತಿ ಆಕೆಗೆ ಗೊತ್ತಾಗಿತ್ತಂತೆ. ನಂತ್ರ ಗರ್ಭಪಾತದ ಮಾತ್ರೆ ಸೇವನೆ ಮಾಡಿದ್ದಳಂತೆ. ಆದ್ರೆ ಮಾತ್ರೆ ಸೇವನೆ ಮಾಡಿದ ನಂತ್ರ ನನ್ನ ಜೀವ ಹೈರಾಣವಾಗಿತ್ತು ಎನ್ನುತ್ತಾಳೆ ಮಹಿಳೆ. ಇದ್ರಿಂದ ಸಾಕಷ್ಟು ಸಮಸ್ಯೆ ಎದುರಿಸಿದ್ದೆ. ಹೊಟ್ಟೆಯಲ್ಲಿ ಏನಾಗ್ತಿದೆ ಎಂಬುದು ಗೊತ್ತಾಗ್ತಿರಲಿಲ್ಲ ಎನ್ನುತ್ತಾಳೆ.
ಹೀಗೆಲ್ಲಾ ಆಗುತ್ತಾ..? ಮದ್ವೆಯಾಗಿ ಗಂಡನ ಮೇಲೆ ಲವ್ವಾಗೋಕೆ ಮೂರು ವರ್ಷ ಬೇಕಾಯ್ತಂತೆ !
ಗರ್ಭಪಾತದ ಮಾತ್ರೆ ಸೇವಿಸಿ ಯಾತನೆ ಅನುಭವಿಸಿದ ಹುಡುಗಿ ಕೆಲ ದಿನಗಳ ನಂತ್ರ ಸೋನೊಗ್ರಾಫಿ ಮಾಡಿಸಿದ್ದಳಂತೆ. ಆಗ ಸ್ವಲ್ಪ ಟಿಶ್ಯೂ ಗರ್ಭದಲ್ಲಿರೋದು ಗೊತ್ತಾಯಿತಂತೆ. ನಂತ್ರ ಅದನ್ನು ಕ್ಲೀನ್ ಮಾಡಿಸಿದೆ. ಅದರಿಂದ ಹೆಚ್ಚು ನೋವಾಗ್ಲಿಲ್ಲ ಎನ್ನುತ್ತಾಳೆ ಹುಡುಗಿ. ಆದ್ರೆ ಹಣ ಹೆಚ್ಚು ಖರ್ಚಾಗಿತ್ತು ಎನ್ನುತ್ತಾಳೆ. ಮನೆಯವರಿಗೆ ಯಾವುದೇ ವಿಷ್ಯವನ್ನು ಹುಡುಗಿ ತಿಳಿಸಿರಲಿಲ್ಲವಂತೆ. ಎಲ್ಲ ಖರ್ಚನ್ನು ನಾನೇ ಭರಿಸಿದ್ದೆ. ಆದ್ರೆ ಕ್ಲೀನಿಂಗ್ ಗೆ ಹೆಚ್ಚಿನ ಹಣ ಬೇಕಾಗಿದ್ದರಿಂದ ಮಾಜಿ ಬಾಯ್ ಫ್ರೆಂಡ್ ಗೆ ವಿಷ್ಯ ಹೇಳ್ಬೇಕಾಯ್ತು. ಆತ ಖರ್ಚಿನಲ್ಲಿ ಅರ್ಧ ನಾನು ಕೊಡ್ತೇನೆ ಎಂದಿದ್ದ ಎನ್ನುತ್ತಾಳೆ ಹುಡುಗಿ.
ಯಾವುದೂ ಸಿನಿಮಾದಲ್ಲಿ ತೋರಿಸಿದ ಹಾಗೆ ಇರಲಿಲ್ಲ. ನನಗೆ ಮಗುವಿನ ಹಾರ್ಟ್ ಬೀಟ್ ಕೇಳಿ ಒಮ್ಮೆ ಶಾಕ್ ಆಯ್ತು. ನಂತ್ರ ನಾನು ನಾರ್ಮಲ್ ಆದೆ. ನನಗೆ ಏನು ಮಾಡ್ಬೇಕು ಎನ್ನುವುದು ತಿಳಿದಿತ್ತು. ಶಾಂತವಾಗಿ ನಾನು ಎಲ್ಲವನ್ನೂ ಎದುರಿಸಿದೆ ಎನ್ನುತ್ತಾಳೆ ಹುಡುಗಿ.
ಲೈಂಗಿಕಾಸಕ್ತಿ ಹೆಚ್ಚಬೇಕೆಂದರೆ ಮನಸ್ಸು, ತಿನ್ನೋ ಆಹಾರದಲ್ಲೂ ಆಗಬೇಕು ಚೇಂಜಸ್!
ಈ ಘಟನೆಯಲ್ಲಿ ಬೇರೆ ಯಾವುದೂ ನನಗೆ ಬೇಸರತರಿಸಿಲ್ಲ. ಆದ್ರೆ ಇದ್ರಿಂದ ನಮ್ಮ ಚರ್ಮದ ಸೌಂದರ್ಯ ಹಾಳಾಗಿದೆ. ಘಟನೆ ನಡೆದು 6 ತಿಂಗಳಾದ್ರೂ ಚರ್ಮ ನಾರ್ಮಲ್ ಆಗ್ಲಿಲ್ಲ ಎಂಬುದು ಹುಡುಗಿ ನೋವು. ನಾನು ಎಲ್ಲವನ್ನೂ ಈಗ ಮರೆತಿದ್ದೇನೆ. ಆದ್ರೆ ನೋವಿಲ್ಲದ ಆಪರೇಷನ್ ಮಾತ್ರೆ ಸಿಕ್ಕಿದ್ದರೆ ಒಳ್ಳೆಯದಿತ್ತು ಎನ್ನುತ್ತಾಳೆ ಹುಡುಗಿ. ನಾನು ಸೇವನೆ ಮಾಡಿದ ಮಾತ್ರೆ ನೂರಕ್ಕೆ ನೂರರಷ್ಟು ಕ್ಲೀನ್ ಮಾಡಲಿಲ್ಲ. ಗರ್ಭಪಾತದ ಮಾತ್ರೆ ಸೇವನೆ ಮಾಡಿದ ನಂತ್ರ ವಿಪರೀತ ನೋವು ತಿಂದಿದ್ದೇನೆ. ಏಳಲೂ ಸಾಧ್ಯವಾಗ್ತಿರಲಿಲ್ಲ ಎನ್ನುತ್ತಾಳೆ ಹುಡುಗಿ.