ದಾಂಪತ್ಯ ಜೀವನ ಸುಖಕರವಾಗಿರಬೇಕೆಂದ್ರೆ ಸೆಕ್ಸ್ ಪಾತ್ರವೂ ಮುಖ್ಯವಾಗಿರುತ್ತದೆ. ವಯಸ್ಸಾಗ್ತಿದ್ದಂತೆ ದಂಪತಿ ಮಧ್ಯೆ ಸೆಕ್ಸ್ ಬದಲು ಭಾವನೆಗೆ ಹೆಚ್ಚು ಆದ್ಯತೆ ಸಿಕ್ಕಿದ್ರೂ ಲೈಂಗಿಕ ಜೀವನವನ್ನು ಸಂಪೂರ್ಣ ಕೈಬಿಡಬೇಕಾಗಿಲ್ಲ. ರೋಮ್ಯಾನ್ಸ್ ಇರ್ಲೇಬೇಕು.
ಸೆಕ್ಸ್ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಸಂಭೋಗ ಒಂದು ರೀತಿಯಲ್ಲಿ ವ್ಯಾಯಾಮವೇ ಆಗಿದೆ. ಇದು ಕ್ಯಾಲೋರಿ ಕಡಮೆ ಮಾಡುವ ಜೊತೆಗೆ ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ. ವಯಸ್ಸಾಗ್ತಿದ್ದಂತೆ ಜನರು ಮಾನಸಿಕ ಆರೋಗ್ಯದ ಸಮಸ್ಯೆಯನ್ನು ಹೆಚ್ಚಾಗಿ ಅನುಭವಿಸ್ತಾರೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸರಿಯಾಗಿರಬೇಕೆಂದ್ರೆ ವೃದ್ಧಾಪ್ಯದಲ್ಲೂ ಸೆಕ್ಸ್ ಅಗತ್ಯ.ಇದು ಒತ್ತಡ ನಿವಾರಿಸುವುದಲ್ಲದೆ, ಮೆದುಳಿನ ಆರೋಗ್ಯ ಕಾಪಾಡುತ್ತದೆ. ವೃದ್ಧಾಪ್ಯದಲ್ಲೂ ಸೆಕ್ಸ್ ಜೀವಂತವಾಗಿರಬೇಕೆಂದ್ರೆ ಏನು ಮಾಡ್ಬೇಕು ಎಂಬುದು ಇಲ್ಲಿದೆ.
ವೃದ್ಧಾಪ್ಯ (Old Age) ದಲ್ಲಿ ಸೆಕ್ಸ್ (Sex) : ಮನುಷ್ಯನ ವಯಸ್ಸು 50ರ ಗಡಿ ದಾಟುತ್ತಿದ್ದಂತೆ ಜನರು ನನಗೆ ವಯಸ್ಸಾಯ್ತು ಎನ್ನಲು ಶುರು ಮಾಡ್ತಾರೆ. 47 -48ರ ಸಮಯದಲ್ಲಿ ಮದುವೆ ಬಗ್ಗೆ ಆಲೋಚನೆ ಮಾಡೋರು ನಮ್ಮಲ್ಲಿ ಕಮ್ಮಿ. ಅಪ್ಪಿತಪ್ಪಿ 50ರ ನಂತ್ರ ಮದುವೆ (marriage) ಯಾಗಲು ಮುಂದಾದ್ರೆ ಅವನ ಬಗ್ಗೆ ನಾನಾ ಮಾತುಗಳು ಕೇಳಿ ಬರುತ್ತವೆ. ಆದ್ರೆ ತಜ್ಞರ ಪ್ರಕಾರ ವೃದ್ಧಾಪ್ಯದಲ್ಲೂ ಸೆಕ್ಸ್ ಅಗತ್ಯ. ವಯಸ್ಸು 60 ದಾಟಿದ ಮೇಲೂ ಲೈಂಗಿಕ ಜೀವನ ಸಕ್ರಿಯವಾಗಿರಬೇಕು ಎನ್ನುತ್ತಾರೆ.
undefined
ಇದು ರೀಲ್ ಅಲ್ಲ ರಿಯಲ್ ಸೀತಾರಾಮಂ; ಪ್ರೀತಿಗಾಗಿ ಅರಮನೆ ತೊರೆದ ಜಪಾನ್ ರಾಜಕುಮಾರಿ
ಅಧ್ಯಯನದ ಪ್ರಕಾರ, ಮಾನವರು ಸ್ವಾಭಾವಿಕವಾಗಿ ಅನ್ಯೋನ್ಯತೆಯನ್ನು ಬಯಸುತ್ತಾರೆ. ವಯಸ್ಸಿನೊಂದಿಗೆ ಈ ಅಗತ್ಯವು ಕಡಿಮೆಯಾಗುವುದಿಲ್ಲ. ಜೀವನದ ಇತರ ಸಮಯಗಳಿಗಿಂತ ವೃದ್ಧಾಪ್ಯದಲ್ಲಿ ಮನಸ್ಸು ಹೆಚ್ಚು ಅನ್ಯೂನ್ಯತೆ ಬಯಸುತ್ತದೆ. ಆರೋಗ್ಯಕರ ಲೈಂಗಿಕ ಜೀವನವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
60ರ ನಂತ್ರ ಏಕೆ ಬೇಕು ಸೆಕ್ಸ್?: ಕೆಲ ಬಾರಿ ಮಕ್ಕಳ ಸಂತೋಷಕ್ಕಾಗಿ ವೃದ್ಧ ದಂಪತಿ ಪ್ರತ್ಯೇಕ ಮನೆಗಳಲ್ಲಿ ವಾಸ ಮಾಡುತ್ತಾರೆ. ಆದ್ರೆ ಬೇರೆ ಇರುವುದು ಅವರಿಗೆ ಇಷ್ಟವಿರೋದಿಲ್ಲ. ಭಾವನಾತ್ಮಕ ಅಗತ್ಯಗಳು ಮತ್ತು ಆಸೆ ಅವರನ್ನು ಒಟ್ಟಿಗೆ ಇರುವಂತೆ ಪ್ರೇರೇಪಿಸುತ್ತದೆ. 60 ದಾಟಿದ ನಂತರ ಸೆಕ್ಸ್ ಅಂದ್ರೆ ನಗೋರೇ ಜಾಸ್ತಿ. ನಮ್ಮಲ್ಲಿ 50ರ ಗಡಿ ದಾಟುತ್ತಿದ್ದಂತೆ ಸಂಗಾತಿ ಬೇರೆ ಮಲಗಲು ಶುರು ಮಾಡ್ತಾರೆ. ತಜ್ಞರ ಪ್ರಕಾರ, ವೃದ್ಧಾಪ್ಯದಲ್ಲಿ ಸೆಕ್ಸ್ ಯಾಕೆ ಅನಿವಾರ್ಯವೆಂದ್ರೆ ಇದು ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಿ, ಹೃದಯದ ಆರೋಗ್ಯ ಕಾಪಾಡಿ, ಅರಿವಿನ ಕಾರ್ಯವನ್ನು ಸುಧಾರಿಸಬಹುದು. ಮಾನಸಿಕ ಆರೋಗ್ಯ ಇದ್ರಿಂದ ವೃದ್ಧಿಯಾಗುತ್ತದೆ.
ಡೈವೋರ್ಸ್ ಪಡೆದ ತಿಂಗಳ ಒಳಗೆ 2ನೇ ಮದುವೆಗೆ ರೆಡಿಯಾದ ಮೆಗಾ ಕುಟುಂಬದ ಕುಡಿ ನಿಹಾರಿಕಾ?
ವೃದ್ಧಾಪ್ಯದಲ್ಲಿ ಎದುರಾಗುತ್ತೆ ಈ ಸಮಸ್ಯೆ : ವಯಸ್ಸಾದಂತೆ ದೇಹದಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಇದು ಲೈಂಗಿಕ ಜೀವನಕ್ಕೆ ಅಡ್ಡಿಯಾಗಬಹುದು. ಯೋನಿ ಶುಷ್ಕತೆ ಮತ್ತು ಮಹಿಳೆಯರಲ್ಲಿ ಕಡಿಮೆಯಾಗುವ ಲೈಂಗಿಕ ಬಯಕೆ, ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಸಮಸ್ಯೆ ಕಾಡಬಹುದು. ಆಗ ಲೈಂಗಿಕ ಆಟಿಕೆಗಳು, ಲೂಬ್ರಿಕಂಟ್‌ಗಳು ಮತ್ತು ವೈಬ್ರೇಟರ್‌ಗಳ ಸಹಾಯವನ್ನು ತೆಗೆದುಕೊಳ್ಳಬಹುದು.
ಹೀಗಿರಲಿ ವೃದ್ಧರ ದಾಂಪತ್ಯ ಜೀವನ :
ಪರಸ್ಪರ ಭಾವನೆ ಹಂಚಿಕೊಳ್ಳಿ : ವಯಸ್ಸಾದ್ಮೇಲೆ ಜೀವನದಲ್ಲಿ ಬಹಳಷ್ಟು ಬದಲಾವಣೆ ಕಾಣುತ್ತದೆ. ವೃದ್ಧರ ಆಲೋಚನೆ, ಭಯ ಮತ್ತು ಭಾವನೆಯಲ್ಲಿ ಏರುಪೇರು ಕಾಣಿಸಿಕೊಳ್ಳುತ್ತದೆ. ಅದನ್ನು ವೃದ್ಧರು ಪರಸ್ಪರ ಹಂಚಿಕೊಳ್ಳಬೇಕು. ಆಗ ದಾಂಪತ್ಯ ಮತ್ತಷ್ಟು ಗಟ್ಟಿಯಾಗುತ್ತದೆ.
ಹೊಸ ಪ್ರಯೋಗ : ದಾಂಪತ್ಯವನ್ನು ಗಟ್ಟಿಗೊಳಿಸಲು ನಿರಂತರ ಪ್ರಯತ್ನ ಮುಖ್ಯ. ನೀರಸ ಜೀವನ ಲೈಂಗಿಕ ಜೀವನವನ್ನೂ ಹಾಳು ಮಾಡಬಹುದು. ಹಾಗಾಗಿ ಆಗಾಗ ಇಬ್ಬರೂ ಹೊಸ ಪ್ರಯತ್ನ ಮಾಡಿ. ದೂರ ಮಲಗುವ ಬದಲು ಒಟ್ಟಿಗೆ ಮಲಗಿ. ಆರೋಗ್ಯ ಚೆನ್ನಾಗಿರುವ ಸಂದರ್ಭದಲ್ಲಿ ಲೈಂಗಿಕ ಆನಂದವನ್ನು ಪಡೆಯಿರಿ.
ಪರಸ್ಪರರಿಗೆ ನೆರವಾಗಿ : ಜವಾಬ್ದಾರಿ ಕಾರಣಕ್ಕೆ ಮಧ್ಯವಯಸ್ಸಿನಲ್ಲಿ ಪರಸ್ಪರ ಸಮಯ ನೀಡಲು ಸಮಯ ಇರದೇ ಹೋಗಬಹುದು. ಆದ್ರೆ ಈಗಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಒಬ್ಬರಿಗೊಬ್ಬರು ಆಸರೆಯಾಗಿ. ಸಂಗಾತಿ ಕೆಲಸವನ್ನು ಮೆಚ್ಚಿ, ಹೊಗಳಿ. ಸಂಗಾತಿ ಜೊತೆ ಗುಣಮಟ್ಟದ ಸಮಯ ಕಳೆಯಿರಿ. ತಿಂಗಳಲ್ಲಿ ಒಂದು ದಿನ ಹೊರಗೆ ಸುತ್ತಾಡಿ ಬನ್ನಿ.