ಮೊದಲ ಡೇಟ್‌ನಲ್ಲೇ ಬಯಲಾಯ್ತು ಯುವಕನ ರಹಸ್ಯ... ಡಿನ್ನರ್‌ ಆದ 2 ಗಂಟೆ ಬಳಿಕ ಯುವತಿ ಕೊಟ್ಟ ಟ್ವಿಸ್ಟ್‌ಗೆ ನೆಟ್ಟಿಗರ ಮೆಚ್ಚುಗೆ

Published : Jul 19, 2026, 09:12 AM IST
'I'm Married,' He Confessed During Dinner—What She Did Next Is Going Viral

ಸಾರಾಂಶ

ರೆಡ್ಡಿಟ್‌ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ ಆಧುನಿಕ ಡೇಟಿಂಗ್‌ನ ಕರಾಳ ಮುಖವನ್ನು ತೋರಿಸುತ್ತದೆ. ಮದುವೆ ಮುಚ್ಚಿಟ್ಟು ಡೇಟಿಂಗ್ ನಾಟಕ ಆಡಿದ ವ್ಯಕ್ತಿಯ ವಿರುದ್ಧ ಮಹಿಳೆ ತಳೆದ ನಿರ್ಧಾರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ತನಗೆ ಮಾತ್ರ Open Relationship ಗೆ ಅವಕಾಶವಿದೆ ಎಂದ ವಂಚಕನಿಗೆ ಗೌರವ ನೀಡದೆ, ವೈನ್ ಬಾಟಲಿಯೊಂದಿಗೆ ಆಕೆ ಹೊರನಡೆದ ಶೈಲಿ ಸದ್ಯ ಜಾಲತಾಣದ ಹಾಟ್ ಟಾಪಿಕ್ ಆಗಿದೆ.

ನ್ಯೂಯಾರ್ಕ್: ಆಧುನಿಕ ಡೇಟಿಂಗ್ ಜಗತ್ತು ಈಗಾಗಲೇ ಸಾಕಷ್ಟು ಗೊಂದಲಗಳಿಂದ ಕೂಡಿದೆ. ಆದರೆ ಮೊದಲ ಭೇಟಿಯಲ್ಲೇ (First Date) ಅನಿರೀಕ್ಷಿತ ಟ್ವಿಸ್ಟ್ ಎದುರಾದರೆ ಪರಿಸ್ಥಿತಿ ಏನಾಗಬೇಡ? ರೆಡ್ಡಿಟ್‌ನ 'r/MildlyInfuriating' ವೇದಿಕೆಯಲ್ಲಿ ಮಹಿಳೆಯೊಬ್ಬರು ಹಂಚಿಕೊಂಡಿರುವ ಇಂತಹದ್ದೇ ಒಂದು ಘಟನೆ ಸದ್ಯ ಇಂಟರ್ನೆಟ್‌ನಲ್ಲಿ ದೂಳೆಬ್ಬಿಸುತ್ತಿದೆ. ಈ ಪೋಸ್ಟ್‌ಗೆ ಬರೋಬ್ಬರಿ 66,000ಕ್ಕೂ ಹೆಚ್ಚು ಲೈಕ್ಸ್ (ಅಪ್‌ವೋಟ್‌ಗಳು) ಮತ್ತು 3,000ಕ್ಕೂ ಅಧಿಕ ಕಾಮೆಂಟ್‌ಗಳು ಬಂದಿದ್ದು, ಮೋಸಗಾರನಿಗೆ ಮಹಿಳೆ ಕಲಿಸಿದ ಪಾಠಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ರೋಮ್ಯಾಂಟಿಕ್ ಡಿನ್ನರ್‌ನಲ್ಲಿ ಸಿಕ್ಕ ಶಾಕ್:

ಮಹಿಳೆಯು ಒಬ್ಬ ವ್ಯಕ್ತಿಯೊಂದಿಗೆ ರೆಸ್ಟೋರೆಂಟ್‌ಗೆ ಡಿನ್ನರ್ ಡೇಟ್‌ಗಾಗಿ ತೆರಳಿದ್ದರು. ಅಲ್ಲಿ ಅವರಿಬ್ಬರು ಕ್ಯಾಲಿಫೋರ್ನಿಯಾದ ಪ್ರಸಿದ್ಧ 'ರೋಂಬೌರ್' (Rombauer) ವೈನ್ ಕುಡಿಯುತ್ತಾ ಸುಮಾರು ಎರಡು ಗಂಟೆಗಳ ಕಾಲ ಆನಂದವಾಗಿ ಕಾಲ ಕಳೆದರು. ಆದರೆ ಮಾತುಕತೆಯ ಮಧ್ಯದಲ್ಲಿ ಆ ವ್ಯಕ್ತಿ ಹಠಾತ್ ಆಘಾತಕಾರಿ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾನೆ. ತನಗೆ ಈಗಾಗಲೇ ಮದುವೆಯಾಗಿದೆ ಎಂಬ ಸತ್ಯವನ್ನು ಆತ ಒಪ್ಪಿಕೊಂಡಿದ್ದಾನೆ. ನೆಟ್ಟಿಗರು ಈ ಬಗ್ಗೆ ಹೆಚ್ಚಿನ ವಿವರ ಕೇಳಿದಾಗ, ಆಕೆ "ಆತ ಹೆಂಡತಿಯಿಂದ ಬೇರ್ಪಟ್ಟಿಲ್ಲ, ವಿಚ್ಛೇದನವನ್ನೂ ಪಡೆದಿಲ್ಲ ಮತ್ತು ಆತ ವಿಧುರನೂ ಅಲ್ಲ. ತನಗೆ ಡೇಟಿಂಗ್ ಮಾಡಲು ಅನುಮತಿಯಿದೆ ಆದರೆ ಹೆಂಡತಿಗೆ ಇಲ್ಲ ಎಂದು ಆತ ಉದ್ಧಟತನದಿಂದ ಹೇಳಿದ" ಎಂದು ಸ್ಪಷ್ಟಪಡಿಸಿದ್ದಾರೆ.

ಮಹಿಳೆಯ ಚಾಣಾಕ್ಷ ನಡೆ ಮತ್ತು ವೈರಲ್ ರಿವೇಂಜ್:

ವ್ಯಕ್ತಿಯ ಮದುವೆಯ ಸೀಕ್ರೆಟ್ ತಿಳಿಯುತ್ತಿದ್ದಂತೆ ಆಕೆ ಅಲ್ಲಿ ಒಂದು ಕ್ಷಣವೂ ವ್ಯರ್ಥ ಮಾಡದೆ ತಕ್ಷಣವೇ ಎದ್ದು ಹೊರನಡೆದಿದ್ದಾರೆ. ಆದರೆ ಬರಿಗೈಲಿ ಹೋಗದ ಆಕೆ, ಟೇಬಲ್ ಮೇಲಿದ್ದ ದುಬಾರಿ ವೈನ್ ಬಾಟಲಿಯನ್ನು ತನ್ನೊಂದಿಗೇ ಕೊಂಡೊಯ್ದಿದ್ದಾರೆ. "ಹೌದು, ನಾನು ಹೊರನಡೆದೆ ಮತ್ತು ನನ್ನೊಂದಿಗೆ ವೈನ್ ಬಾಟಲಿಯನ್ನು ತೆಗೆದುಕೊಂಡೆ. ವ್ಯರ್ಥವಾದ ಸಂಜೆಗೆ ಇದೇ ನ್ಯಾಯಯುತ ಪರಿಹಾರ" ಎಂದು ಆಕೆ ಬರೆದಿದ್ದಾರೆ.

ರೆಡ್ಡಿಟ್‌ನಲ್ಲಿ ಹರಿದುಬಂದ ಕಾಮೆಂಟ್‌ಗಳ ಮಹಾಪೂರ:

ಈಕೆಯ ಈ ಸಮಯಪ್ರಜ್ಞೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ವೈನ್‌ಗೆ ಯಾವುದೇ ರಹಸ್ಯ ಕುಟುಂಬವಿರುವುದಿಲ್ಲ, ಒಳ್ಳೆಯ ವೈನ್ ಅನ್ನು ಮೋಸಗಾರನಿಗಾಗಿ ವ್ಯರ್ಥ ಮಾಡಬಾರದು" ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಫೋಟೋದಲ್ಲಿದ್ದ ಆ ವ್ಯಕ್ತಿಯ ಉಡುಪನ್ನು ಗಮನಿಸಿ, "ಮೊದಲ ಡೇಟ್‌ಗೆ ರೆಸ್ಟೋರೆಂಟ್‌ಗೆ ಬೇಸ್‌ಬಾಲ್ ಕ್ಯಾಪ್ (ಟೋಪಿ) ಧರಿಸಿ ಬರುವುದೇ ದೊಡ್ಡ ರೆಡ್ ಫ್ಲ್ಯಾಗ್ (ಅಪಾಯದ ಮುನ್ಸೂಚನೆ)" ಎಂದು ಲೇವಡಿ ಮಾಡಿದ್ದಾರೆ. ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ತಮಗಾದ ಇಂತಹದೇ ವಿಚಿತ್ರ ಡೇಟಿಂಗ್ ಅನುಭವಗಳನ್ನು ಹಂಚಿಕೊಳ್ಳಲು ಇತರರಿಗೂ ಪ್ರೇರಣೆಯಾಗಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

50ನೇ ಹುಟ್ಟುಹಬ್ಬಕ್ಕೆ ಮಗಳಿಂದ ಬೈಕ್ ಗಿಫ್ಟ್; ಅಪ್ಪನ ಕಣ್ಣೀರು ನೋಡಿದರೆ ನಿಮ್ಮ ಕಣ್ಣೂ ಒದ್ದೆಯಾಗುತ್ತೆ
ಗಂಡ ಒಳ್ಳೇವ್ನೆ, ಸಂಸಾರನೂ ಚೆನ್ನಾಗಿದೆ... ಆದ್ರೂ ಈಕೆ ಯಾಕೆ ಡಿವೋರ್ಸ್ ಕೇಳಿದ್ಲು?