ಮಕ್ಕಳಿಗೆ ಒಳ್ಳೆ ಅಡಿಪಾಯ ಸಿಕ್ಕಾಗ ಮಾತ್ರ ಅವರು ಸಾಧಿಸಲು ಸಾಧ್ಯ. ವಿದ್ಯಾಭ್ಯಾಸದ ವಿಷ್ಯದಲ್ಲೂ ಇದು ಸತ್ಯ. ಮಕ್ಕಳು ಸರಿಯಾಗಿ ಓದಿದ್ರೆ ಮಾತ್ರ ಉತ್ತಮ ಅಂಕ ಬರುತ್ತದೆ. ಉತ್ತಮ ಅಂಕ ಅವರ ಅತ್ಯುತ್ತಮ ಭವಿಷ್ಯಕ್ಕೆ ನೆರವಾಗುತ್ತದೆ.
ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಮಕ್ಕಳ ಓದು ಮುಖ್ಯವಾಗುತ್ತದೆ. ಮಕ್ಕಳು ಚೆನ್ನಾಗಿ ಓದಿ, ಹೆಚ್ಚು ಮಾರ್ಕ್ಸ್ ತೆಗೆದ್ರೆ ಮಾತ್ರ ಒಳ್ಳೆ ಕಾಲೇಜಿನಲ್ಲಿ ಅಡ್ಮಿಷನ್ ಸಿಗಲು ಸಾಧ್ಯ. ಸರ್ಕಾರಿ ನೌಕರಿಯಿಂದ ಹಿಡಿದು ಎಲ್ಲ ನೌಕರಿಗೂ ಮಕ್ಕಳ ಮಾರ್ಕ್ಸ್ ಮುಖ್ಯವಾಗುತ್ತದೆ. ನೂರಕ್ಕೆ ನೂರು ಅಂಕ ತೆಗೆದ್ರೂ ಕಡಿಮೆ ಎನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಹೆಚ್ಚು ಮಾರ್ಕ್ಸ್ ತೆಗೆಯಬೇಕೆಂದ್ರೆ ಮಕ್ಕಳು ಹೆಚ್ಚೆಚ್ಚು ಓದುವುದು ಮಾತ್ರವಲ್ಲ ಓದಿದ್ದನ್ನು ನೆನಪಿಟ್ಟುಕೊಳ್ಳಬೇಕು. ಅನೇಕ ಮಕ್ಕಳು ಓದುವ ವಿಷ್ಯದಲ್ಲಿ ನಿರ್ಲಕ್ಷ್ಯ ತೋರಿಸ್ತಾರೆ. ಇದ್ರಿಂದ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಾರೆ. ಮಕ್ಕಳನ್ನು ಚುರುಕ ಮಾಡ್ಬೇಕೆಂಬುದು ಎಲ್ಲ ಪಾಲಕರ ಆಸೆ. ಇದೇ ಕಾರಣಕ್ಕೆ ಒಳ್ಳೆ ಸ್ಕೂಲಿಗೆ ಮಕ್ಕಳನ್ನು ಸೇರಿಸಿ ವಿದ್ಯಾಭ್ಯಾಸ ನೀಡ್ತಾರೆ. ಆದ್ರೆ ಮಕ್ಕಳು ಓದಿನಲ್ಲಿ ಹಿಂದೆ ಬಿದ್ರೆ ಪಾಲಕರು ನೋವು ಅನುಭವಿಸ್ತಾರೆ. ಮಕ್ಕಳು ಓದಿನಲ್ಲಿ ಚುರುಕಾಗಬೇಕೆಂದ್ರೆ, ಹೆಚ್ಚು ಮಾರ್ಕ್ಸ್ ತೆಗೆದುಕೊಳ್ಳಬೇಕೆಂದ್ರೆ ಪಾಲಕರು ಕೆಲ ನಿಯಮ ಮಾಡ್ಬೇಕು. ಅದ್ರಂತೆ ನಡೆಯಲು ಮಕ್ಕಳಿಗೆ ಸಲಹೆ ನೀಡಬೇಕು. ನಾವಿಂದು ಮಕ್ಕಳನ್ನು ಓದಿಸೋದು ಹೇಗೆ ಎಂಬ ವಿಷ್ಯವನ್ನು ನಿಮಗೆ ಹೇಳ್ತೇವೆ.
ಮಕ್ಕಳ (Child) ಓದು ಸುಧಾರಿಸಲು ಈ ಮಾರ್ಗ ಅನುಸರಿಸಿ :
ಟೈಂ ಟೇಬಲ್ (Time Table) ಸಿದ್ಧಪಡಿಸಿ : ಮಕ್ಕಳು ಓದಿಗಿಂತ ಬೇರೆ ಕೆಲಸ (Work) ದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಟಿವಿ ಹಾಗೂ ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಮೊಬೈಲ್ ಕೈನಲ್ಲಿ ಹಿಡಿದ್ರೆ ಸಮಯ ಸರಿದದ್ದು ತಿಳಿಯೋದಿಲ್ಲ. ಹಾಗಾಗಿ ನೀವು ಟೈಂ ಟೇಬಲ್ ಸಿದ್ಧಪಡಿಸಿ. ದಿನದ 24 ಗಂಟೆಯಲ್ಲಿ 2 ಗಂಟೆಯಾದ್ರೂ ಮಕ್ಕಳಿಗೆ ಓದಲು ಹೇಳಬೇಕು. ಆರಂಭದಲ್ಲಿ ಮಕ್ಕಳು ಕಿರಿಕಿರಿ ಅನುಭವಿಸಬಹುದು. ಆದ್ರೆ ನಂತ್ರ ಅವರಿಗೆ ಇದು ಅಭ್ಯಾಸವಾಗುತ್ತದೆ. ಟೈಂ ಟೇಬಲ್ ಗೆ ಅವರು ಹೊಂದಿಕೊಳ್ತಾರೆ. ಅದ್ರ ಪ್ರಕಾರ ಓದಲು ಶುರು ಮಾಡ್ತಾರೆ. ಚಿಕ್ಕವರಿರುವಾಗ್ಲೇ ಅವರಿಗೆ ಟೈಂ ಟೇಬಲ್ ರೂಢಿ ಮಾಡಿದ್ರೆ ಮುಂದೆ ಅವರ ಓದು ಸುಲಭವಾಗುತ್ತದೆ.
ಮಧ್ಯ ಮಧ್ಯ ಬ್ರೇಕ್ ಇರಲಿ : ಒಂದೇ ಕಡೆ ಎರಡು ಗಂಟೆಗಳ ಕಾಲ ಕುಳಿತು ಓದಲು ಅನೇಕ ಮಕ್ಕಳಿಗೆ ಆಗೋದಿಲ್ಲ. ಬೇಸರ ಬರಲು ಶುರುವಾಗುತ್ತದೆ. ಮಕ್ಕಳು ಓದಿ (Read) ನಲ್ಲಿ ಆಸಕ್ತಿ ಕಳೆದುಕೊಳ್ತಾರೆ. ಪಾಲಕರು ಬೈಯ್ಯುತ್ತಾರೆ ಎನ್ನುವ ಕಾರಣಕ್ಕೆ ಓದಿನ ನಾಟಕ ಶುರು ಮಾಡ್ತಾರೆ. ನಿಮ್ಮ ಮಕ್ಕಳೂ ಹಾಗೇ ಮಾಡ್ತಿದ್ದರೆ ನೀವು ಓದಿನ ಮಧ್ಯೆ ಮಕ್ಕಳಿಗೆ ಬ್ರೇಕ್ ನೀಡಿ. ಸಣ್ಣ ಬ್ರೇಕ್ ನಂತ್ರ ಮಕ್ಕಳು ಫ್ರೆಶ್ ಆಗುವ ಕಾರಣ ಓದಿದ್ದು ತಲೆಯಲ್ಲಿ ಉಳಿಯುತ್ತದೆ.
ನಿಮ್ ಮಗುವಿಗೆ ಮುದ್ದು ಹೆಚ್ಚಾಗಿ, ಶಿಸ್ತು ಕಡಿಮೆಯಾಗ್ತಿದ್ಯಾ ? ತಿಳ್ಕೊಳ್ಳೋದು ಹೇಗೆ ?
ಇಂಟರ್ನೆಟ್ (Internet) ಸಹಾಯ ಪಡೆಯಬಹುದು : ಮಕ್ಕಳಿಗೆ ಅನೇಕ ಹಾಡುಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ. ಹಾಗೆ ಓದಿದ್ರೆ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಆಗ ನೀವು ಇಂಟರ್ನೆಟ್ ಸಹಾಯ ಪಡೆಯಬಹುದು. ಮಕ್ಕಳಿಗೆ ಹಾಡುಗಳನ್ನು ಮೊಬೈಲ್ ನಲ್ಲಿ ಹಚ್ಚಿ, ಪದೇ ಪದೇ ತೋರಿಸ್ತಿದ್ದರೆ ಅವರಿಗೆ ಬೇಗ ಕಂಠಪಾಠವಾಗುತ್ತದೆ. ಮಕ್ಕಳು ದೊಡ್ಡವರಾಗಿದ್ದರೆ ಅವರಿಗೆ ಬರದ ಬೇರೆ ವಿಷಯಗಳನ್ನು ಕೂಡ ಇಂಟರ್ನೆಟ್ ಸಹಾಯದಿಂದ ಕಲಿಸಬಹುದು.
ಏಟು ನೀಡದೆ, ಒತ್ತಾಯವಿಲ್ಲದೆ ಕಲಿಸಿ : ಮಕ್ಕಳಿಗೆ ಓದು ಇಷ್ಟವಿಲ್ಲವೆಂದಾಗ ಪಾಲಕರು ಒತ್ತಡ ಹೇರುತ್ತಾರೆ. ಕೆಲ ಪಾಲಕರು ಮಕ್ಕಳಿಗೆ ಬೈದು, ಹೊಡೆದು ಕಲಿಸಲು ಮುಂದಾಗ್ತಾರೆ. ಹೀಗೆ ಮಾಡಿದಾಗ ಮಕ್ಕಳ ಆಸಕ್ತಿ ಮತ್ತಷ್ಟು ಕಡಿಮೆಯಾಗುತ್ತದೆ. ಹಾಗಾಗಿ ಯಾವುದೇ ಒತ್ತಡವಿಲ್ಲದೆ, ಆರಾಮವಾಗಿ ಕಲಿಸಲು ಪ್ರಯತ್ನಿಸಿ.
ಹುಡುಗಿ ದೃಷ್ಟಿಯಲ್ಲಿ ಒಳ್ಳೆಯವರಾಗಬೇಕೆಂದು ಹೋಗಿ ಈ ತಪ್ಪು ಮಾಡ್ಬೇಡಿ
ಆಟದ ಮೂಲಕ ಪಾಠ : ಮಕ್ಕಳಿಗೆ ಯಾವ ವಿಷ್ಯ ಕಷ್ಟವಾಗ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಮಕ್ಕಳು ಯಾಕೆ ಓದುತ್ತಿಲ್ಲ ಎಂಬ ಕಾರಣ ಪತ್ತೆ ಮಾಡಿ. ಅನೇಕ ಮಕ್ಕಳಿಗೆ ಆಟದಲ್ಲಿ ಹೆಚ್ಚು ಆಸಕ್ತಿಯಿರುತ್ತದೆ. ಇಂಥ ಸಂದರ್ಭದಲ್ಲಿ ಆಟದ ಮೂಲಕ ನೀವು ಅವರಿಗೆ ಪಾಠ ಹೇಳಬೇಕಾಗುತ್ತದೆ.