ದಾವೋಸ್‌ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಸೆ*ಕ್ಸ್‌ ವರ್ಕರ್‌ಗಳಿಗೆ ಡಿಮಾಂಡ್‌, 5 ಮಹಿಳೆಯರ ನಾಲ್ಕು ದಿನದ ಡ್ಯೂಟಿಗೆ 1 ಕೋಟಿ ವೆಚ್ಚ!

Published : Jan 27, 2026, 01:29 PM IST
wef

ಸಾರಾಂಶ

ಪ್ರತಿವರ್ಷ ದಾವೋಸ್‌ನಲ್ಲಿ ನಡೆಯುವ ವಿಶ್ವ ಆರ್ಥಿಕ ಸಮ್ಮೇಳನದ ಸಮಯದಲ್ಲಿ ಸೆ*ಕ್ಸ್‌ ವರ್ಕ್‌ಗೆ ಬೇಡಿಕೆ ಗಗನಕ್ಕೇರುತ್ತದೆ. ಪ್ರಖ್ಯಾತ ವ್ಯಕ್ತಿಗಳು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ, ಲೈಂಗಿಕ ಪಾರ್ಟಿಗಳು ಮತ್ತು ವಿಚಿತ್ರ ರೋಲ್‌-ಪ್ಲೇಗಳಿಗಾಗಿ ಎಸ್ಕಾರ್ಟ್‌ಗಳನ್ನು ಬುಕ್‌ ಮಾಡುತ್ತಾರೆ.

ಬೆಂಗಳೂರು (ಜ.27): ಪ್ರತಿವರ್ಷ ಜನವರಿಯಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನ (WEF) ಬರೀ ವ್ಯವಹಾರ ಕಾರಣಕ್ಕೆ ಮಾತ್ರವೇ ಸುದ್ದಿಯಾಗೋದಿಲ್ಲ, ಅಲ್ಲಿ ನೆರೆದಿರುವ ಸಿಇಒ ಹಾಗೂ ರಾಜಕಾರಣಿಗಳ ರಂಗುರಂಗಿನ ಜೀವನ ಕೂಡ ಸುದ್ದಿಯಾಗುತ್ತದೆ. ವಿಶ್ವ ಆರ್ಥಿಕ ಸಮ್ಮೇಳನದ ಸಮಯದಲ್ಲಿ ಸ್ವಿಸ್‌ ಸಿಟಿ ದಾವೋಸ್‌ನಲ್ಲಿ ಸೆ*ಕ್ಸ್‌ ವರ್ಕ್‌ ಅನ್ನೋದು ನಿರೀಕ್ಷೆಗೂ ಮೀರಿ ದುಬಾರಿಯಾಗಿರುತ್ತದೆ. ಅದಕ್ಕೆ ಕಾರಣವೂ ಇದೆ.

ಡೇಲಿಮೇಲ್‌ ಪತ್ರಿಕೆ ವಾರಪೂರ್ತಿ ನಡೆದ ಸಮ್ಮೇಳನದ ಇನ್ನೊಂದು ಮಗ್ಗುಲಿನ ಬಗ್ಗೆ ಸಚಿತ್ರ ವರದಿ ಮಾಡಿದೆ. ಐವರು ಮಹಿಳೆಯರ ಜೊತೆ ನಾಲ್ಕು ದಿನಗಳ ಸೆ*ಕ್ಸ್‌ ಪಾರ್ಟಿಗಾಗಿ ಪ್ರಖ್ಯಾತ ವ್ಯಕ್ತಿಯೊಬ್ಬರು ಬರೋಬ್ಬರಿ 1.12 ಕೋಟಿ ಖರ್ಚಿ ಮಾಡಿದ್ದಾರೆ. ಈ ನಾಲ್ಕು ದಿನಗಳ ಕಾಲ ಭಿನ್ನ ಭಿನ್ನ ರೋಲ್‌ ಪ್ಲೇ ರಿಕ್ವೆಸ್ಟ್‌ಗಳು ಕೂಡ ಆತನಿಂದ ಬಂದಿದ್ದವು ಎಂದು ಯುವತಿ ಹೇಳಿದ್ದಾಳೆ.

WEF ಸೆ*ಕ್ಸ್‌ ವರ್ಕ್‌ ಪೀಕ್‌ ಸೀಸನ್‌

ಪೇಯ್ಡ್‌ ಡೇಟಿಂಗ್ ಅಪ್ಲಿಕೇಶನ್ Titt4tat ನ ಪಿಆರ್ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಆಂಡ್ರಿಯಾಸ್ ಬರ್ಗರ್, ವಿಶ್ವ ಅರ್ಥಿಕ ವೇದಿಕೆ "ಸಂಪೂರ್ಣ ಪೀಕ್ ಸೀಸನ್" ಎಂದು ಕರೆದರು, "ಈ ಒಂದು ವಾರದಲ್ಲಿ ಬೇಡಿಕೆ ಸುಮಾರು 4,000% ರಷ್ಟು ಹೆಚ್ಚಾಗಿದೆ" ಎಂದಿದ್ದಾರೆ.

Titt4tat ನಲ್ಲಿ, ದಾಖಲೆಯ ಅತ್ಯಂತ ದುಬಾರಿ ಬುಕಿಂಗ್ ಎಂದರೆ "ಐದು ಯುವತಿಯರನ್ನು 4 ದಿನಗಳವರೆಗೆ ಬುಕ್ ಮಾಡಿರುವುದು". ಇದರ ಒಟ್ಟು ಮೊತ್ತಒಟ್ಟು ಮೊತ್ತ 96.000 CHF (£90,000) ಆಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 1.12 ಕೋಟಿ ರೂಪಾಯಿ. ಇದರಲ್ಲಿ ಹೋಟೆಲ್‌ ರೂಮ್‌, ರೆಸ್ಟೋರೆಂಟ್‌, ಡ್ರಿಂಕ್ಸ್‌ ಹಾಗೂ ಉಡುಗೊರೆಯ ಯಾವುದೇ ಹೆಚ್ಚುವರಿ ವೆಚ್ಚ ಕೂಡ ಇಲ್ಲ' ಎಂದು ಬರ್ಗರ್‌ ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

ಸ್ವಿಸ್ ಎಸ್ಕಾರ್ಟ್ ಏಜೆನ್ಸಿ, ಮೈಲೇಡೀಸ್, ಡೈಲಿ ಮೇಲ್‌ಗೆ ನೀಡಿದ ಮಾಹಿತಿಯ ಪ್ರಕಾರ, ಒಂದೇ ಎಸ್ಕಾರ್ಟ್ ಬುಕಿಂಗ್‌ಗೆ 20000 ಯುರೋಗಳು (£17,000) (ರೂ. 21,29,057) ವೆಚ್ಚವಾಗಿದೆ.. ಗ್ರಾಹಕರು ನಿರ್ದಿಷ್ಟವಾಗಿ 'ಹೈಕ್ಲಾಸ್ ಎಸ್ಕಾರ್ಟ್‌ಗಳು' ಮತ್ತು 'ಗರ್ಲ್‌ಫ್ರೆಂಡ್ ಎಕ್ಸ್‌ಪೀರಿಯನ್ಸ್‌' ಎಂದು ಕರೆಯಲ್ಪಡುವ, ಡಿನ್ನರ್‌, ಇವೆಂಟ್ಸ್‌ ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ಒಡನಾಟವನ್ನು ಬಯಸುತ್ತಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

""ವೃತ್ತಿಪರ ಎಸ್ಕಾರ್ಟ್‌ಗಳಲ್ಲದ, ಬದಲಾಗಿ ನಿಯಮಿತ ಕೆಲಸಗಳನ್ನು ಮಾಡುವ ಮತ್ತು ವಿದ್ಯಾರ್ಥಿನಿಯರಂತಹ ಮಹಿಳೆಯರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಪ್ರಸ್ತುತ, ಅಮೆರಿಕದ ಶಿಕ್ಷಕಿಯೊಬ್ಬರು ದಾವೋಸ್‌ನಲ್ಲಿ ತಮ್ಮ ಎಸ್ಕಾರ್ಟ್‌ ಸೇವೆ ನೀಡುತ್ತಿದ್ದಾರೆ" ಎಂದು ಬರ್ಗರ್ ಹೇಳಿದದಾರೆ. "WEF ನಲ್ಲಿ ಪದವಿ ಪಡೆದಿರುವ ಹುಡುಗಿಯರು, ಬಹುಭಾಷೆ ಬಲ್ಲವರಿಗೆ ಸಾಕಷ್ಟು ಬೇಡಿಕೆ ಇದೆ. ಕಳೆದ ವರ್ಷ WEF ಅಲ್ಲಿ ಜಾಗತಿಕ ಕಂಪನಿಯ ಸಿಇಒ ಒಬ್ಬರ ವೀಕೆಂಡ್‌ ಪಾರ್ಟಿಗೆ ಜೊತೆಯಾಗಿದ್ದ ಯುವತಿಗೆ ಕೊನೆಗೆ ಅದೇ ಕಂಪನಿಯಲ್ಲಿ ದೊಡ್ಡ ವೇತನದ ಕೆಲಸವನ್ನೂ ಪಡೆದರು ಎಂದಿದ್ದಾರೆ.

ಸೆ*ಕ್ಸ್‌ ಪಾರ್ಟಿ, ರೋಲ್‌ ಪ್ಲೇ ರಿಕ್ವೆಸ್ಟ್‌

ಮೈಲೇಡೀಸ್‌ನ ವಕ್ತಾರರು ಹೇಳುವ ಪ್ರಕಾರ,WEFನಲ್ಲಿ ಖಾಯಂ ಆಗಿ ಭಾಗಹಿಸುವ ವ್ಯಕ್ತಿಯೊಬ್ಬರು ಎಸ್ಕಾರ್ಟ್‌ ಬುಕ್‌ ಮಾಡಿದ್ದರು. ಅವರದ್ದು ಒಂದೇ ಒಂದು ರಿಕ್ವೆಸ್ಟ್‌ ಏನಿತ್ತೆಂದರೆ, ತಮಗೆ ಪಿಜ್ಜಾ ತಂದುಕೊಡುವ ಹುಡುಗಿ ಸ್ವೆಂಟ್‌ ಪ್ಯಾಂಟ್‌ನಲ್ಲಿ ಬರಬೇಕು ಅನ್ನೋದು. ಆತ ತನ್ನ ಐಷಾರಾಮಿ ಸೂಟ್‌ಅನ್ನು ಖಾಲಿ ಮಾಡಿ, ಆ ಯುವತಿಯ ಜೊತೆ ನೆಲದ ಮೇಲೆ ಕುಳಿತು, ಪಿಜ್ಜಾ ತಿಂದು ಸಂಪೂರ್ಣ ನೀರಸವಾದ ವಿಷಯಗಳನ್ನು ಆಕೆಯ ಜೊತೆ ಮಾತನಾಡಲು ಬಯಸಿದ್ದ ಎಂದು ವಕ್ತಾರ ತಿಳಿಸಿದ್ದಾರೆ.

ಇನ್ನೊಂದು ಬುಕ್ಕಿಂಗ್‌ ನಾಲ್ಕು ಗಂಟೆಯದ್ದಾಗಿತ್ತು. ಅದರಲ್ಲಿ ಒಬ್ಬ ಮಹಿಳೆ ಸಿಇಒ ಅವರ ಮುಖ್ಯ ಭಾಷಣವನ್ನು ಅಭ್ಯಾಸ ಮಾಡಲು ಸಹಾಯ ಮಾಡಬೇಕಾಗಿತ್ತು. ಆಕೆ ಕೇವಲ ತೋಳು ಕುರ್ಚಿಯಲ್ಲಿ ಸದ್ದಿಲ್ಲದೆ ಕುಳಿತುಕೊಳ್ಳಬೇಕಿತ್ತು. ಸೊಗಸಾದ ಡ್ರೆಸ್‌ಅನ್ನು ಧರಿಸಿಕೊಂಡು ಪ್ರೇಕ್ಷಕಳ ರೀತಿ ಇರಬೇಕಿತ್ತು. ಅವರು ತಮ್ಮ ಭಾಷಣವನ್ನು ಪೂರ್ವಾಭ್ಯಾಸ ಮಾಡುವಾಗ ಅವರ ಮಾತನ್ನು ಕೇಳುವ ರೋಲ್‌ ಮಾಡಬೇಕಾಗಿತ್ತು" ಎಂದು ಸಂಸ್ಥೆ ಹೇಳಿದೆ.

ಮಹಿಳೆಯರನ್ನು ಅತಿರಂಜಿತ ಲೈಂಗಿಕ ಅನುಭವಗಳಿಗಾಗಿ ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರನ್ನು ಹೆಚ್ಚಾಗಿ NDA ಗಳಿಗೆ ಸಹಿ ಹಾಕುವಂತೆ ಮಾಡಲಾಗುತ್ತದೆ ಎಂದು ಬರ್ಗರ್ ಹೇಳಿದರು. "ಅತ್ಯಂತ ತೀವ್ರವಾದ ಡೇಟಿಂಗ್ ಎಂದರೆ ಲೈಂಗಿಕ ಪಾರ್ಟಿ, ನಿಜವಾಗಿಯೂ ಹುಚ್ಚುತನದ ಕಾಮಪ್ರಚೋದಕ, ಹುಚ್ಚುತನದ ಪಾತ್ರಾಭಿನಯ ಇತ್ಯಾದಿ ಕೂಡ ಇರುತ್ತವೆ" ಎಂದು ಅವರು ಹೇಳಿದರು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವು ಹುಡುಗಿಯರು ಮದುವೆಯಾದ ಪುರುಷರನ್ನು ಪ್ರೀತಿಸಲು ಇವೇ ಕಾರಣಗಳಂತೆ
ಮೊದಲ ರಾತ್ರಿಗೂ ಮೊದಲೇ ಮಗುವಿಗೆ ಜನ್ಮ ನೀಡಿದ ವಧು