ಮದುವೆ ಮನೆಯಲ್ಲಿ ಏನೇನೆಲ್ಲ ನಡೆಯುತ್ತೆ. ಕೆಲವೊಂದು ನಗು ತರಿಸಿದ್ರೆ ಮತ್ತೆ ಕೆಲವರು ಅಚ್ಚರಿಯುಂಟು ಮಾಡುತ್ತೆ. ಸ್ಟೇಜ್ ಮೇಲೆ ಡಾನ್ಸ್ ಮಾಡೋ ಭರದಲ್ಲಿ ಈ ವಧು ಮಾಡಿಕೊಂಡ ಯಡವಟ್ಟನ್ನು ನೀವೇ ನೋಡಿ
ಮದುವೆ ಅಂದ್ಮೇಲೆ ಡಾನ್ಸ್ ಇರ್ಲೇಬೇಕು. ಹಳ್ಳಿಗಳಲ್ಲಿ ಕೂಡ ಮದುವೆ ಸ್ಟೈಲ್ ಬದಲಾಗಿದೆ. ರಿಸೆಪ್ಷನ್, ಸಂಗೀತ ಕಾರ್ಯಕ್ರಮ ಅಂತಾ ಮದುವೆ ಪಟ್ಟಿಯಲ್ಲಿ ಒಂದಿಷ್ಟನ್ನು ಸೇರಿಸಿಕೊಂಡಿದ್ದಾರೆ. ರಿಸೆಪ್ಷನ್‌ನಲ್ಲಿ ಸ್ಟೇಜ್ ಮೇಲೆ ನಿಲ್ಲುವ ಮಧು ಮಕ್ಕಳಿಗೆ ಸಂಬಂಧಿಕರು, ಸ್ನೇಹಿತರು ಹಾರೈಸುತ್ತಾರೆ. ಉಡುಗೊರೆ ನೀಡ್ತಾರೆ. ಈಗಿನ ದಿನಗಳಲ್ಲಿ ಮದುವೆ ಮಂಟಪದಲ್ಲಿ, ರಿಸೆಪ್ಷನ್ ಸ್ಟೇಜ್ ನಲ್ಲಿ ನಡೆಯುವ ಕೆಲ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ.
ಈಗ ಮತ್ತೊಂದು ವಿಡಿಯೋ (Video) ವೈರಲ್ ಆಗಿದೆ. ಈ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ವಿಡಿಯೋ ಒಂದು ಕಡೆ ಜನರನ್ನು ನಗಿಸಿದ್ರೆ ಇನ್ನೊಂದು ಕಡೆ ಇಂಥ ಜನರೂ ಇರ್ತಾರೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ನಮ್ಮ ದೇಶದಲ್ಲಿ ಇನ್ನೂ ಲಿಂಗ ತಾರತಮ್ಯ ಹೋಗಿಲ್ಲ. ಮದುವೆ (Marriage)ಯಾಗಿ ಜೀವನ ಪೂರ್ತಿ ಜೊತೆಗಿರುವ ಹುಡುಗಿ ತಲೆ ಸುತ್ತಿ ನೆಲಕ್ಕೆ ಬಿದ್ರೂ ಆಕೆಯನ್ನು ಎತ್ತದ, ಆಕೆಯ ಸಹಾಯಕ್ಕೆ ಬರದ ಪುರುಷರಿದ್ದಾರೆ. ಇದಕ್ಕೆ ಈ ವೈರಲ್ ವಿಡಿಯೋ ಕೂಡ ಸಾಕ್ಷಿ. ಸ್ಟೇಜ್ ಮೇಲೆ ವರನ ಕೈ ಹಿಡಿದು ಘೂಮರ್ ಘೂಮರ್ ಅಂತಾ ಸುತ್ತುವ ವಧು, ತಲೆ ತಿರುಗಿ ಬೀಳ್ತಾಳೆ. ಆಕೆ ಬಿದ್ದ ಮೇಲೆ ವರನ ರಿಯಾಕ್ಷನ್ ಅನೇಕ ಬಳಕೆದಾರರ ಗಮನ ಸೆಳೆದಿದೆ.
undefined
ಭಾರತೀಯ ತಳಿ ಗೋಮೂತ್ರದಲ್ಲೇ ತಲೆ ತೊಳಿತಾರೆ ಆಫ್ರಿಕನ್ ಆದಿವಾಸಿಗಳು! ಡಾ ಬ್ರೋ ಹೇಳಿದ್ದು ಕೇಳಿ
manu_choudhary_bmr61 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮದುವೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವೈರಲ್ ವೀಡಿಯೊದಲ್ಲಿ ನವವಿವಾಹಿತರು ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ವರ, ವಧುವಿನ ಕೈಯನ್ನು ಮೇಲಕ್ಕೆ ಎತ್ತಿ ಹಿಡಿದಿದ್ದಾನೆ. ಹಿನ್ನಲೆಯಲ್ಲಿ ಘೂಮರ್-ಘೂಮರ್ ಹಾಡು ಪ್ಲೇ ಆಗುತ್ತಿದೆ. ವಧು ಹಾಡಿಗೆ ತಕ್ಕಂತೆ ರೌಂಡ್ ಹಾಕ್ತಾ ನೃತ್ಯ ಮಾಡ್ತಿದ್ದಾಳೆ. ಒಂದೋ ಎರಡೋ ರೌಂಡ್ ಹಾಕಿದ್ರೆ ಏನೂ ಆಗ್ತಿರಲಿಲ್ಲ. ಆದ್ರೆ ವಧು ಚೆಂಡಿನಂತೆ ರೌಂಡ್ ಹಾಕ್ತಾನೆ ಇದ್ದಾಳೆ. ಲೆಕ್ಕವಿಲ್ಲದಂತೆ ರೌಂಡ್ ಹೊಡೆದ ವಧುವಿಗೆ ಕೊನೆಯಲ್ಲಿ ನಿಲ್ಲಲ್ಲು ಸಾಧ್ಯವಾಗೋದಿಲ್ಲ. ತಲೆ ಸುತ್ತಿ ಹಿಂದಕ್ಕೆ ವಾಲುತ್ತಾಳೆ. ಆಗ್ಲೂ ವರ ಆಕೆಯನ್ನು ಹಿಡಿಯೋದಿಲ್ಲ. ನಂತ್ರ ವಧು ಮುಂದಕ್ಕೆ ಬೀಳ್ತಾಳೆ. ಆಕೆ ಕೆಳಗೆ ಬೀಳ್ತಿದ್ದಂತೆ ವರ ದೂರ ಸರಿಯುತ್ತಾನೆ. ಇನ್ನೊಬ್ಬ ಮಹಿಳೆ ಬಂದು ವಧುವನ್ನು ಮೇಲಕ್ಕೆತ್ತುವ ಪ್ರಯತ್ನ ನಡೆಸ್ತಾಳೆ. ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಹಂಚಿಕೊಂಡ ಈ ವಿಡಿಯೋವನ್ನು ಈವರೆಗೆ 1 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಮೂರು ಲಕ್ಷದ 25 ಸಾವಿರಕ್ಕಿಂತಲೂ ಹೆಚ್ಚು ಲೈಕ್ಸ್ ಇದಕ್ಕೆ ಬಂದಿದೆ. ಸುಮಾರು 4,200 ಕಾಮೆಂಟ್ ಬಂದಿದೆ.
ಇನ್ಸ್ಟಾಗ್ರಾಮ್ ಬಳಕೆದಾರರಲ್ಲಿ ಕೆಲವರು ಎಂತಹ ವರ.. ವಧು ಬಿದ್ರೂ ಕಾಪಾಡಲಿಲ್ಲ, ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಎಂದು ವರದ ವರ್ತನೆಯನ್ನು ದೂರಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನೋಡಿ ನಕ್ಕಿದ್ದಾರೆ. ಹಳ್ಳಿಗರಲ್ಲಿ ಎಷ್ಟೊಂದು ಅಹಂಕಾರವಿದೆ. ಮದುಮಗ ವಧುವನ್ನು ಎತ್ತಲಿಲ್ಲ, ದುರಹಂಕಾರ ನೋಡಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ವಧುವಿಗೆ ಹಾಕಿದ್ದ ಸೆಲ್ ಖಾಲಿಯಾಯ್ತು. ಇನ್ನೊಂದು ತೆಗೆದುಕೊಂಡು ಬನ್ನಿ ಅಂತಾ ತಮಾಷೆ ಮಾಡಿದ್ದಾರೆ. ಇಷ್ಟು ರೌಂಡ್ ಹೊಡೆಯೋಕೆ ಈಕೆಗೆ ಹೇಳಿದ್ಯಾರು ಅಂತಾ ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ.
ಇಷ್ಟಪಡೋರ ವ್ಯಕ್ತಿತ್ವದ ಬಗ್ಗೆ ತಿಳಿಬೇಕಾ? ಹಾಗಿದ್ರೆ ಅವರಿಷ್ಟದ ಕಲರ್ ಯಾವ್ದು ಕೇಳಿ…
ಮೂರ್ಚೆ ಹೋಗಿದ್ದು ಒಳ್ಳೆಯದಾಯ್ತು, ಇಲ್ಲ ಅಂದ್ರೆ ಶಕ್ತಿಮಾನ್ ಆಗ್ತಿದ್ದಳು ಎಂದು ಇನ್ನೊಬ್ಬರು ಬರೆದ್ರೆ, ಈಗ್ಲೇ ಹೀಗೆ ಇನ್ನು ಫಸ್ಟ್ ನೈಟ್ ನಲ್ಲಿ ಈಕೆ ಕಥೆ ಏನು ಅಂತಾ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ರಾಜಸ್ತಾನಿ ಸ್ಟೈಲ್. ಇಲ್ಲಿ ವಧು, ಹೀಗೆ ಸುತ್ತು ಹೊಡೆದು ಹೊಡೆದು ಮೂರ್ಛೆ ಹೋಗ್ತಾಳೆ. ನಾನು ನೋಡಿದ ರಾಜಸ್ತಾನಿ ಮದುವೆಯಲ್ಲೆಲ್ಲ ಇದು ಆಗಿದೆ ಎಂದು ಇನ್ನೊಬ್ಬರು ತಲೆಗೆ ಹುಳು ಬಿಟ್ಟಿದ್ದಾರೆ.