ವಯಸ್ಸಿಗೆ ತಕ್ಕಂತೆ ಮಕ್ಕಳ ಭಾವನೆ ಬದಲಾಗುತ್ತೆ. ಹದಿಹರೆಯದ ಮಕ್ಕಳನ್ನು ದಾರಿಗೆ ತರೋದು ಸವಾಲಿನ ಕೆಲಸ. ಮಕ್ಕಳು ಸರಿ ದಾರಿಯಲ್ಲಿ ನಡೆಯುತ್ತಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಹಾಸ್ಟೆಲ್ ಗೆ ಅಟ್ಟಿದ್ರೆ ಅವರು ಸರಿಯಾಗ್ತಾರಾ?
ಸಂಸಾರ ಈಗ ಚಿಕ್ಕದಾಗಿದೆ. ಮನೆಯಲ್ಲಿ ಒಂದೋ ಎರಡೋ ಮಕ್ಕಳಿರ್ತಾರೆ. ತಾವು ಅನುಭವಿಸಿದ ಕಷ್ಟವನ್ನು ಮಕ್ಕಳು ಅನುಭವಿಸಬಾರದು ಎನ್ನುವ ಕಾರಣಕ್ಕೆ ಮಕ್ಕಳನ್ನು ಅತ್ಯಂತ ಪ್ರೀತಿ, ಕಾಳಜಿಯಿಂದ ನೋಡಿಕೊಳ್ತಾರೆ ಪಾಲಕರು. ಮಕ್ಕಳು ಹೇಳಿದ್ದೆಲ್ಲ ಕೊಡಿಸುವ ಪಾಲಕರಿಗೆ ನಂತ್ರ ಮಕ್ಕಳ ಗಲಾಟೆ, ಕೋಪ ಉಸಿರುಗಟ್ಟಿಸಿದಂತಾಗುತ್ತೆ. ಆರಂಭದಲ್ಲಿ ಪ್ರೀತಿ ತೋರಿಸುವ ಪಾಲಕರು, ಮಕ್ಕಳು ಗಲಾಟೆ ಮಾಡಿದಾಗೆಲ್ಲ ಹಾಸ್ಟೆಲ್ ಗೆ ಕಳಸ್ತೇನೆ ಅಂತಾ ಬೆದರಿಸ್ತಾರೆ.
ಹಠಮಾರಿ ಮಕ್ಕಳು ಹಾಸ್ಟೆಲ್ (Hostel) ಗೆ ಹೋದ್ರೆ ಸರಿಯಾಗ್ತಾರೆ ಎನ್ನುವುದು ಅನೇಕ ಪಾಲಕರ ನಂಬಿಕೆ. ಮನೆಯಿಂದ ದೂರವಿರುವ ಮಕ್ಕಳಿಗೆ ಯಾವುದೇ ಸೌಲಭ್ಯ ಸುಲಭವಾಗಿ ಸಿಗೋದಿಲ್ಲ. ತಂದೆ – ತಾಯಿ ಪ್ರೀತಿ (Love) ಯಿಂದಲೂ ವಂಚಿತರಾಗುವ ಮಕ್ಕಳಿಗೆ ಅವರ ಮಹತ್ವ ತಿಳಿಯುತ್ತದೆ. ಹಾಗೆಯೇ ಮಕ್ಕಳು ಶಿಸ್ತು (Discipline) ಕಲಿಯುತ್ತಾರೆ, ಬದುಕು ಹೇಗೆ ಎಂಬುದನ್ನು ಅರಿಯುತ್ತಾರೆ, ತಮ್ಮ ಕೆಲಸ (Work) ವನ್ನು ತಾವೇ ಮಾಡಿಕೊಳ್ಳುವ ಸಾಮರ್ಥ್ಯ ಪಡೆಯುತ್ತಾರೆ. ಇದು ಅವರ ಭವಿಷ್ಯಕ್ಕೆ ಒಳ್ಳೆಯದು ಎಂದು ಭಾವಿಸುವ ಅನೇಕ ಪಾಲಕರಿದ್ದಾರೆ. ಮಕ್ಕಳನ್ನು ಹಾಸ್ಟೆಲ್ ನಲ್ಲಿ ಬಿಡುವ ನಿರ್ಧಾರದ ಬಗ್ಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನೂ ಚರ್ಚೆಯಾಗಿದೆ.
ಮೊದಲೇ ಹೇಳಿದಂತೆ ಈಗಿನ ಮಕ್ಕಳಿಗೆ ಹಿರಿಯರ ಮೇಲೆ ಗೌರವ ಬಹಳ ಕಡಿಮೆ. ಮಕ್ಕಳು ತಮ್ಮ ತಂದೆ – ತಾಯಿಯಿಂದ ಬೇರೆ ಮಕ್ಕಳ ಪಾಲಕರು ಇಷ್ಟಪಡ್ತಾರೆ. ತಾಯಿಯಾದವಳು ಸ್ಟೈಲಿಶ್ ಆಗಿರ್ಬೇಕು, ಆಕೆಗೆ ಇಂಗ್ಲಿಷ್ ಪಟ ಪಟ ಅಂತಾ ಮಾತನಾಡೋಕೆ ಬರಬೇಕು, ಒಳ್ಳೆ ನೌಕರಿಯಲ್ಲಿರಬೇಕು ಎಂಬುದು ಅನೇಕ ಮಕ್ಕಳ ಆಸೆ. ಸೀರೆಯುಟ್ಟ ಅಥವಾ ಸಿಂಪಲ್ ಬಟ್ಟೆ ಧರಿಸಿ, ಓದಿನಲ್ಲಿ ಸ್ವಲ್ಪ ಹಿಂದಿರುವ ತಾಯಂದಿರನ್ನು ಪ್ರೀತಿ ಮಾಡದ ಮಕ್ಕಳ ಗುಂಪೊಂದಿದೆ. ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳ ವರ್ತನೆಯಲ್ಲಿ ನೀವು ಭಿನ್ನತೆಯನ್ನು ನೋಡ್ಬಹುದು. ಒಂಭತ್ತರಿಂದ ಸುಮಾರು 20 ವರ್ಷದ ಮಧ್ಯದಲ್ಲಿರುವ ಬಹುತೇಕ ಹೆಣ್ಮಕ್ಕಳಿಗೆ ಅಮ್ಮನನ್ನು ಕಂಡ್ರೆ ಅಷ್ಟಕಷ್ಟೆ.
ಇದು ಸೀಮಾ ಹೈದರ್ ಉಲ್ಟಾ ಕೇಸ್: ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿ ಭೇಟಿಯಾಗಲು ಪಾಕ್‌ಗೆ ಹೋದ ಭಾರತೀಯ ಮಹಿಳೆ
ಮನೆಯಲ್ಲಿ ಅಮ್ಮ – ಮಕ್ಕಳ ಮಧ್ಯೆ ನಡೆಯುವ ಕಿರಿಕಿರಿ ಕಡಿಮೆಯಾಗ್ಲಿ, ಉಡಾಫೆ, ಮನಸ್ಸಿಗೆ ಬಂದಿದ್ದನ್ನು ಮಾತನಾಡುವ, ಮೊಂಡು ಹಠದ ಮಗಳು ಸರಿಯಾಗ್ಲಿ ಅಂತಾ ಮಕ್ಕಳನ್ನು ಕೆಲ ಪಾಲಕರು ಹಾಸ್ಟೆಲ್ ಗೆ ಹಾಕ್ತಾರೆ. ಆದ್ರೆ ಭಾಗ್ಯಲಕ್ಷ್ಮಿ ಧಾರಾವಾಹಿಯನ್ನು ಇದೇ ಸ್ವಭಾವದ ತನ್ನ ಮಗಳನ್ನು ಹಾಸ್ಟೆಲ್ ಗೆ ಕಳುಹಿಸಲು ಭಾಗ್ಯ ಒಪ್ಪಿಲ್ಲ.
14ರ ಹರೆಯದಲ್ಲಿ ಮಕ್ಕಳನ್ನು ಹಾಸ್ಟೆಲ್ ಗೆ ಕಳುಹಿಸೋದು ತಪ್ಪು ಎನ್ನುತ್ತಾಳೆ ಭಾಗ್ಯ. ಹಣದ ಬೆಲೆ ತಿಳಿಯದೆ ತಮಗೆ ಬೇಕಾದಂತೆ ವರ್ತಿಸುವ ಮಕ್ಕಳಿಗೆ ಒಂದೇಟು ಹಾಕಿ, ಬುದ್ದಿ ಹೇಳೋದು ಅಪ್ಪ – ಅಮ್ಮನ ಕೆಲಸ ಎಂಬುದು ಭಾಗ್ಯ ಥಿಯೇರಿ. ಮನೆಯಲ್ಲಿ ಅಪ್ಪ – ಅಮ್ಮನ ನೆರಳಿನಲ್ಲಿದ್ದು, ಅವರು ಹೇಳುವ ಪಾಠಗಳನ್ನೇ ಕೇಳದ ಮಕ್ಕಳು ಹಾಸ್ಟೇಲ್ ನಲ್ಲಿ ಒಂದೋ ಎರಡೋ ದಿನದಲ್ಲಿ ಬದಲಾಗ್ತಾರೆ ಅನ್ನೋದು ಭ್ರಮೆ ಎನ್ನುತ್ತಾಳೆ ಭಾಗ್ಯ.
ಮಗುವನ್ನು ಬೋರ್ಡಿಂಗ್ ಶಾಲೆಗೆ ಕಳುಹಿಸುವ ಅನಾನುಕೂಲಗಳು : ಪ್ರತಿಯೊಂದು ನಾಣ್ಯಕ್ಕೂ ಎರಡು ಮುಖಗಳಿರುವಂತೆ ಮಕ್ಕಳನ್ನು ಹಾಸ್ಟೆಲ್, ಬೋರ್ಡಿಂಗ್ ಸ್ಕೂಲ್ ಗೆ ಕಳಿಸುವುದ್ರಿಂದ ಲಾಭ, ನಷ್ಟ ಎರಡೂ ಇದೆ. ನಾವು ಇಲ್ಲಿ ನಷ್ಟದ ಬಗ್ಗೆ ನಿಮಗೆ ಹೇಳ್ತೇವೆ.
Love Horoscope: ಈ ರಾಶಿಯವರು ಪ್ರಪೋಸ್ ಮಾಡಬೇಡಿ; ಲವ್ ಫೇಲ್ ಆಗುವ ಸಾಧ್ಯತೆ ಇದೆ..!
ಕುಟುಂಬದ ಜೊತೆ ಬಾಂಧವ್ಯ (Family Bonding) ಕಡಿತ : ಮಕ್ಕಳು ಸುಧಾರಿಸಲಿ, ಪಾಲಕರ ಮಹತ್ವ ಮಕ್ಕಳಿಗೆ ತಿಳಿಯಲಿ ಎನ್ನುವ ಕಾರಣಕ್ಕೆ ನೀವು ಮಕ್ಕಳನ್ನು ಹಾಸ್ಟೆಲ್, ಬೋರ್ಡಿಂಗ್ ಸ್ಕೂಲ್ ಗೆ ಕಳುಹಿಸುತ್ತಿದ್ದರೆ ಈ ನಿರ್ಧಾರದಿಂದ ಹಿಂದೆ ಸರಿಯಿರಿ. ಅನೇಕ ಬಾರಿ ಮಕ್ಕಳು ಸುಧಾರಿಸುವ ಬದಲು, ಕುಟುಂಬಕ್ಕೆ ಹತ್ತಿರವಾಗುವ ಬದಲು ಮತ್ತಷ್ಟು ದೂರವಾಗ್ತಾರೆ.
ಸ್ಪರ್ಧೆ (Competation) : ಪ್ರತಿ ಕ್ಷೇತ್ರದಲ್ಲೂ ಸ್ಪರ್ಧೆ ಇದ್ದೇ ಇದೆ. ಇದರ ಪರಿಣಾಮ ವಸತಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಮೇಲೂ ಕಾಣಬಹುದಾಗಿದೆ. ತಮ್ಮ ಸಹಪಾಠಿಗಳು ಮತ್ತು ಇತರರಿಗಿಂತ ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಸಾಧನೆ ಮಾಡಲು ಅವರು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ.
ದಾರಿ ತಪ್ಪುವ ಸಾಧ್ಯತೆ : ಬೋರ್ಡಿಂಗ್ ಸ್ಕೂಲ್ (Residentil School) ಬೇರೆ ಹಾಸ್ಟೆಲ್ ಬೇರೆ. ನಿಮ್ಮ ಮಕ್ಕಳು ಬೋರ್ಡಿಂಗ್ ಸ್ಕೂಲ್ ನಲ್ಲಿದ್ದರೆ ಕಟ್ಟುನಿಟ್ಟಿನ ನಿಯಮದ ಕಾರಣ ವಯಸ್ಸಿಗಿಂತ ಹೆಚ್ಚು ಪ್ರಬುದ್ಧರಾಗಬೇಕಾಗುತ್ತದೆ. ಇನ್ನು ಹಾಸ್ಟೆಲ್ ನಲ್ಲಿ ಉಳಿದ ಮಕ್ಕಳ ಜೊತೆ ಸೇರಿ ನಿಮ್ಮ ಮಕ್ಕಳು ದಾರಿ ತಪ್ಪುವ ಅಪಾಯ ಹೆಚ್ಚಿರುತ್ತದೆ. ಮಕ್ಕಳ ವರ್ತನೆಯ ಬಗ್ಗೆ ಪಾಲಕರು ಕಣ್ಣಿಡಲು ಇಲ್ಲಿ ಸಾಧ್ಯವಾಗೋದಿಲ್ಲ. ಮಕ್ಕಳು ಆಡಿದ್ದೇ ಆಟ. ಹೊಸ ಚಟಗಳಿಗೆ ಬಲಿಯಾಗುವ, ಹಿರಿಯ ವಿದ್ಯಾರ್ಥಿಗಳ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆ ಇಲ್ಲಿ ಹೆಚ್ಚಿರುತ್ತದೆ.