
ಬೆಂಗಳೂರು(ಫೆ.12): ಇದು ಆನ್‌ಲೈನ್ ಯುಗ ಎಂದು ಹೇಳುವುದನ್ನು ಕೇಳಿರುತ್ತೇವೆ. ತಿನ್ನುವುದಕ್ಕೂ, ಬಟ್ಟೆ ಖರೀದಿಗೂ, ದಿನಬಳಕೆ ವಸ್ತುವಿಗೆ, ಜೀವನ ಸಂಗಾತಿ ಹುಡುಕುವುದು ಎಲ್ಲವೂ ಆನ್‌ಲೈನ್. ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್‌ನಲ್ಲಿಯೇ ಎಂಗೇಜ್‌ಮೆಂಟ್‌ಗಳೂ ನಡೆಯುತ್ತಿದೆ.
ಉತ್ತರ ಭಾರತದ ಜೋಡಿಯೊಂದು ಮೊಬೈಲ್ ವಿಡಿಯೋ ಕಾಲ್ ಮೂಲಕವೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯವರಲ್ಲರೂ ಹೊಸ ಬಟ್ಟೆ ತೊಟ್ಟು, ಸಂಭ್ರಮಕ್ಕೆ ಸಿದ್ಧರಾಗಿ ಮೊಬೈಲ್‌ಗಳನ್ನು ಮಣೆಯ ಮೇಲೆ ಕೂರಿಸಿ ನಿಶ್ಚಿತಾರ್ಥ ಮುಗಿಸಿದ್ದಾರೆ.
ವಧುವಿನ ತಲೆಗೆ ಸಂಪ್ರದಾಯಿಕ ದುಪಟ್ಟಾ ಹೊದಿಸುವ ಕಾರ್ಯ, ಉಡುಗೊರೆ ನೀಡುವುದು, ಸೀರೆಯನ್ನು ಮೊಬೈಲ್ ಮುಂದೆ ಇಡಲಾಗಿದೆ. ಸಂಪ್ರದಾಯಿಕವಾಗಿ ಯಾವ ರೀತಿ ನಿಶ್ಚಿತಾರ್ಥ ನೆರವೇರುತ್ತದೆಯೋ ಅದೇ ರೀತಿ ಎಲ್ಲ ಕ್ರಮಗಳನ್ನು ನೆರವೇರಿಸಿದ್ದು, ವಧು ವರರ ಸ್ಥಳದಲ್ಲಿ ಮಾತ್ರ ಮೊಬೈಲ್‌ಗಳು ಕುಳಿತಿದ್ದವು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.