ಅನಪೇಕ್ಷಿತ ಗರ್ಭಧಾರಣೆ ತಡೆಯೋದಕ್ಕೆ ಕಾಂಡೋಮ್ ಬಳಸ್ತಾರೆ. ಎಷ್ಟೋ ಕಾರಣಕ್ಕೆ ಕಾಂಡೋಮ್ ಬಳಕೆ ಸರಿಯಾಗದೇ ಅನಾಹುತ ಆಗಬಹುದು. ಕಾಂಡೋಮ್ ಸರಿಯಾದ ಬಳಕೆ ಬಗ್ಗೆ ಇಲ್ಲಿದೆ ಮಾಹಿತಿ.
ಕಾಂಡೋಮ್ ಬಳಸಿಯೂ ಗರ್ಭ ಧರಿಸುವುದು, ಕಾಂಡೋಮ್ ಬಳಕೆ ವೇಳೆ ಎಡವಟ್ಟುಗಳಾಗೋದು ಕಾಮನ್. ಗರ್ಭನಿರೋಧಕವಾಗಿ ಕಾಂಡೋಮ್ ಬಳಸುವುದು ಸುರಕ್ಷಿತದ ಜೊತೆಗೆ ಆರೋಗ್ಯಕರ ಕೂಡ ಹೌದು. ಆದರೆ ಕಾಂಡೋಮ್ ಬಳಕೆ ಮಾಡುವುದರಿಂದ ಶೇ.98 ಮಾತ್ರ ಸುರಕ್ಷಿತ ಸೆಕ್ಸ್ ಮಾಡಲು ಸಾಧ್ಯ. ಇನ್ನು ಎರಡು ಪರ್ಸೆಂಟ್ ಗ್ಯಾರಂಟಿಯನ್ನು ಕಾಡೋಮ್ ಕಂಪನಿಗಳು ಕೂಡ ನೀಡುವುದಿಲ್ಲ. ಆದರೆ ಈ ಎರಡು ಪರ್ಸೆಂಟ್ ಲೆಕ್ಕಾಚಾರಕ್ಕಿಂತಲೂ ಕಾಂಡೋಮ್ ಧರಿಸುವ ವೇಳೆ ಮಾಡುವ ಕೆಲವು ತಪ್ಪುಗಳು ಗರ್ಭ ಧರಿಸೋದಕ್ಕೆ ಕಾರಣವಾಗುತ್ತೆ. ಕೆಲವರಿಗೆ ಕಾಂಡೋಮ್‌ನ್ನು ಸರಿಯಾಗಿ ಬಳಸುವುದು ಹೇಗೆ ಅನ್ನೋದೇ ತಿಳಿದಿರೋದಿಲ್ಲ. ಅವರು ತಮಗೆ ತೋಚಿದಂತೆ ಬಳಸುತ್ತಾರೆ. ಕೆಲವೊಮ್ಮೆ ಸೆಕ್ಸ್ ವೇಳೆಗಿನ ಎಕ್ಸಾಯಿಟ್‌ಮೆಂಟ್‌ನಲ್ಲಿ ತಾಳ್ಮೆ ಕಳೆದುಕೊಂಡು ಹೇಗೆ ಹೇಗೋ ನೆಪ ಮಾತ್ರಕ್ಕೆ ಕಾಂಡೋಮ್ ಧರಿಸೋದೂ ಇದೆ. ಇದು ತುಂಬ ಡೇಂಜರಸ್.
ಹೀಗೆ ನೀವು ಮಾಡುವ ತಪ್ಪುಗಳು ಕೂಡ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಕಾಂಡೋಮ್ ಅನ್ನು ತುಂಬಾ ಜಾಗರೂಕವಾಗಿ ಧರಿಸಬೇಕು. ಸೆಕ್ಸ್ ವೇಳೆ ಅವಸರದಲ್ಲಿ ಸರಿಯಾಗಿ ಧರಿಸಿಲ್ಲ ಎಂದು ನಿಮಗೆ ಅನಿಸಿದರೆ ಅದನ್ನು ತೆಗೆದುಹಾಕಿ ಮತ್ತು ಹೊಸ ಕಾಂಡೋಮ್ ಧರಿಸಿ. ಅದೇ ಕಾಂಡೋಮ್ ಅನ್ನು ಮತ್ತೆ ಹಾಕಿಕೊಳ್ಳೋದು ಬೇಡ. ಗುಪ್ತಾಂಗದ ಗಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಇರುತ್ತದೆ. ಗಾತ್ರಕ್ಕೆ ತಕ್ಕಂಥಾ ಕಾಂಡೋಮ್‌ಗಳು ಲಭ್ಯವಿದೆ. ಸರಿಯಾದ ಗಾತ್ರದ ಕಾಂಡೋಮ್ ಬಳಸಿ. ಸಣ್ಣ ಗಾತ್ರಗಳನ್ನು ಧರಿಸುವುದರಿಂದ ಅವು ಸೆಕ್ಸ್ ಮಾಡುವಾಗ ಹರಿದು ಹೋಗಬಹುದು. ದೊಡ್ಡ ಗಾತ್ರದ ಕಾಂಡೋಮ್ ಬಳಿಸಿದರೆ ಜಾರಿ ಹೋಗಬಹುದು.
ಲೈಂಗಿಕ ಜೀವನ ಎಂಜಾಯ್ ಮಾಡಬೇಕಂದ್ರೆ ಸಂಗಾತಿಯ ಪ್ಲೆಜರ್ ಪಾಯಿಂಟ್ ತಿಳ್ಕೊಳಿ…
ಹೆಚ್ಚುವರಿ ರಕ್ಷಣೆಗಾಗಿ ಕೆಲವರು ಎರಡು ಕಾಂಡೋಮ್‌ಗಳನ್ನು ಧರಿಸುತ್ತಾರೆ. ಹಾಗೆ ಧರಿಸುವುದು ಸಂಪೂರ್ಣವಾಗಿ ತಪ್ಪು ಆಲೋಚನೆ. ಹಾಗೆ ಮಾಡುವುದರಿಂದ ಕಾಂಡೋಮ್ ಹರಿದುಹೋಗುವ ಅಥವಾ ಜಾರಿಬೀಳುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಆದ್ದರಿಂದ ಅದನ್ನು ಮಾಡಬೇಡಿ. ಕಾಂಡೋಮ್ ಅನ್ನು ಯಾವಾಗ ಹಾಕಬೇಕೆಂದು ಪುರುಷರು ತಿಳಿದಿರಬೇಕು. ಶಿಶ್ನವು ನೆಟ್ಟಗಾಗುವ ಮುಂಚೆಯೇ ಕಾಂಡಮ್ ಧರಿಸಬಾರದು. ನಿಮಿರುವಿಕೆಯನ್ನು ತಲುಪುವ ಮೊದಲು ನೀವು ಅದನ್ನು ಹಾಕಿಕೊಂಡರೆ, ನೀವು ಅದನ್ನು ಸರಿಯಾಗಿ ಧರಿಸದೇ ಇರುವ ಸಾಧ್ಯತೆ ಹೆಚ್ಚು. ಇದು ಗರ್ಭಧಾರಣೆ ಅಥವಾ ಅಸುರಕ್ಷಿತ ಅಪಾಯವನ್ನು ಮತ್ತಷ್ಟು ಹೆಚ್ಚಿಸಬಹುದು. ಕಾಂಡೋಮ್ ಸರಾಗವಾಗಿ ನಿಮ್ಮ ಗುಪ್ತಾಂಗದಲ್ಲಿ ಕೂತಿದರೆ ಎಂದರೆ ನೀವು ಸೂಕ್ತವಾಗಿ ಧರಿಸಿದ್ದೀರಿ ಎಂದರ್ಥ.
ಅವಧಿ ಮೀರಿದ ಕಾಂಡೋಮ್‌ಗಳು (Expired Condoms) ಸಾಮಾನ್ಯವಾಗಿ ಒಡೆಯುವಿಕೆಗೆ ಕಾರಣವಾಗುವುದರಿಂದ ಇದು ದೊಡ್ಡ ತಪ್ಪಾಗಿರಬಹುದು, ಇದು ನಿಮ್ಮ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುವುದಲ್ಲದೆ, ನಿಮ್ಮನ್ನು ಸೋಂಕುಗಳಿಗೆ (Infection) ಗುರಿಪಡಿಸುತ್ತದೆ. ಆದ್ದರಿಂದ, ನೀವು ಕಾಂಡೋಮ್ ಖರೀದಿಸುವ ಮೊದಲು, ತಯಾರಿಕೆ ಮತ್ತು ಮುಕ್ತಾಯದ ದಿನಾಂಕವನ್ನು ಪರಿಶೀಲಿಸಿ. ಕಾಂಡೋಮ್‌ಗಳ ಅವಧಿ ಮುಗಿಯುವ ಸಾಧ್ಯತೆ ಇರುವುದರಿಂದ ಅವುಗಳನ್ನು ಮೊದಲೇ ತಂದು ಸಂಗ್ರಹಿಸುವುದನ್ನು ತಪ್ಪಿಸಿ.
ಕಾಂಡೋಮ್‌ಗಳನ್ನು ಒಮ್ಮೆ ಮಾತ್ರ ಬಳಸಬೇಕು ಮತ್ತು ಹಲವಾರು ಬಾರಿ ಬಳಸಬಾರದು. ಕಾಂಡೋಮ್‌ಗಳ ಪುನರಾವರ್ತಿತ ಬಳಕೆಯು ಅದನ್ನು ಹಾನಿಗೊಳಗಾಗಿಸಬಹುದು. ಸ್ಖಲನದ ನಂತರ ಪ್ರತಿ ಕಾಂಡೋಮ್ ಅನ್ನು ವಿಲೇವಾರಿ ಮಾಡುವುದು ಉತ್ತಮ.
ಟೀನೇಜ್ ಮಕ್ಕಳಿಗೆ ಹೀಗೆ ನೋಡಿಕೊಂಡರೆ ದಾರಿ ತಪ್ಪೋದಿಲ್ಲ ಅಂತಾರೆ ಸುಧಾಮೂರ್ತಿ!
ನೀವು ಸ್ಖಲನ ಮಾಡಿದ ನಂತರ, ಸಾಧ್ಯವಾದಷ್ಟು ಬೇಗ ಕಾಂಡೋಮ್ ಅನ್ನು ತೆಗೆದುಹಾಕುವುದು ಮುಖ್ಯ. ಪುರುಷರು ಸಾಮಾನ್ಯವಾಗಿ ಸ್ಖಲನದ ನಂತರ ತಮ್ಮ ನಿಮಿರುವಿಕೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ಇದು ಕಾಂಡೋಮ್ ಜಾರಿಬೀಳಲು ಮತ್ತು ವೀರ್ಯವನ್ನು ಸುರಿಯುವುದಕ್ಕೆ ಕಾರಣವಾಗಬಹುದು. ಇದನ್ನು ತಡೆಗಟ್ಟಲು ಸ್ಖಲನದ ತಕ್ಷಣ ಕಾಂಡೋಮ್ ಅನ್ನು ತೆಗೆದುಹಾಕಿ.
ಕಾಂಡೋಮ್ ಬಳಕೆಯನ್ನು ಸರಿಯಾಗಿ ಮಾಡಿದಷ್ಟು ಗರ್ಭಧಾರಣೆ ಸಮಸ್ಯೆಗಳಿಂದ ಹೊರಗೆ ಬರಬಹುದು. ಈ ಬಗ್ಗೆ ಅವಜ್ಞೆ ನಿರ್ಲಕ್ಷ ಮಾಡುವುದು ಸರಿಯಲ್ಲ.