87 ವರ್ಷದ ಪ್ರಸಿದ್ಧ ಪೇಂಟರ್ ಮಗುವಿಗೆ ತಾಯಿಯಾದ 37 ವರ್ಷದ ಪತ್ನಿ, ಉಳಿದ ಮಕ್ಕಳೊಂದಿಗೆ ಬಂಧವೇ ಕಟ್

Published : Dec 18, 2025, 12:19 PM IST
Chinese painter

ಸಾರಾಂಶ

Painter becomes father at 87 : ಚೀನಾದಲ್ಲಿ ಪೇಂಟರ್ ಫ್ಯಾನ್ ಝೆಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ನಾಲ್ಕನೇ ಬಾರಿ ಅಪ್ಪನಾಗಿದ್ದಾರೆ. 87 ವರ್ಷದ ವ್ಯಕ್ತಿ 37 ವರ್ಷದ ಪತ್ನಿಯಿಂದ ಗಂಡು ಮಗು ಪಡೆದಿದ್ದಾರೆ.

ಚೀನಾದ ಪ್ರಸಿದ್ಧ ಪೇಂಟರ್ ಫ್ಯಾನ್ ಝೆಂಗ್ (Fan Zeng) ತಮ್ಮ 87ನೇ ವಯಸ್ಸಿನಲ್ಲಿ ಮತ್ತೊಮ್ಮೆ ಅಪ್ಪನಾಗಿ ಬಡ್ತಿ ಪಡೆದಿದ್ದಾರೆ. ಫ್ಯಾನ್ ಝೆಂಗ್ ಅವರ ನಾಲ್ಕನೇ ಪತ್ನಿ 37 ವರ್ಷದ ಕ್ಸು ಇತ್ತೀಚಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪತ್ನಿಗೆ ಗಂಡು ಮಗು ಜನಿಸಿದೆ ಎಂಬ ವಿಷ್ಯವನ್ನು ಫ್ಯಾನ್ ಝೆಂಗ್ ಡಿಸೆಂಬರ್ 11 ರಂದು ಅಧಿಕೃತಗೊಳಿಸಿದ್ದಾರೆ. ಪತ್ನಿ ಕ್ಸು ಜೊತೆ ಬೇರೆ ಮನೆಗೆ ಶಿಫ್ಟ್ ಆಗಿರುವ ವಿಷ್ಯವನ್ನು ಹೇಳಿಕೊಂಡಿದ್ದಾರೆ. ಫ್ಯಾನ್ ಎಲ್ಲಾ ಕುಟುಂಬದ ಜವಾಬ್ದಾರಿಯನ್ನು ಕ್ಸುಗೆ ಹಸ್ತಾಂತರಿಸಿದ್ದಾರೆ. ಇತರ ಮಕ್ಕಳ ಜೊತೆ ಔಪಚಾರಿಕ ಸಂಬಂಧವನ್ನು ಕಡಿದುಕೊಂಡಿದ್ದಾರೆ.

ಫ್ಯಾನ್ ಝೆಂಗ್ ಯಾರು?

ಝೆಂಗ್ ಒಬ್ಬ ಪ್ರಸಿದ್ಧ ಚೀನೀ ಕಲಾವಿದ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, 2008 ಮತ್ತು 2024 ರ ನಡುವೆ, ಝೆಂಗ್ ಅವರ ವರ್ಣಚಿತ್ರಗಳು ಮತ್ತು ಕಲಾಕೃತಿಗಳು ಒಟ್ಟು 4 ಬಿಲಿಯನ್ ಯುವಾನ್ಗಳಿಗಿಂತ ಹೆಚ್ಚು ಅಂದ್ರೆ ಸುಮಾರು 567 ಮಿಲಿಯನ್ ಡಾಲರ್ ಗೆ ಮಾರಾಟವಾಗಿದ್ದವು. ಝೆಂಗ್, ಹತ್ತು ವರ್ಣಚಿತ್ರಗಳು ಸುಮಾರು 10 ಮಿಲಿಯನ್ ಯುವಾನ್ಗಿಂತ ಹೆಚ್ಚು ಬೆಲೆಗೆ ಮಾರಾಟವಾಗಿವೆ. ಇದರಲ್ಲಿ 1991 ರಲ್ಲಿ ಝೆಂಗ್ ರಚಿಸಿದ ವಿಶೇಷ ಚಿತ್ರಕಲೆಯೂ ಸೇರಿದೆ. ಇದು 2011 ರಲ್ಲಿ ಬೀಜಿಂಗ್ ಹರಾಜಿನಲ್ಲಿ 18.4 ಮಿಲಿಯನ್ ಯುವಾನ್ಗೆ ಮಾರಾಟವಾಗಿದೆ.

ತಾಳಿ ಕಟ್ಟಿದ ಬೆನ್ನಲ್ಲೇ ಆಫೀಸ್ ಕೆಲಸಕ್ಕೆ ಕೂತ ವಧು, ಹನಿಮೂನ್‌ನಲ್ಲೂ ಆನ್‌ಲೈನ್

ಝೆಂಗ್ ಬರೀ ಕಲಾವಿದರು ಮಾತ್ರವಲ್ಲ ಕ್ಯಾಲಿಗ್ರಾಫರ್ ಕೂಡ ಹೌದು. ಸುಂದರವಾದ ಕೈಬರಹದ ಕೃತಿಗಳು 0.11 ಚದರ ಮೀಟರ್ಗೆ ಸುಮಾರು 200,000 ಯುವಾನ್ ಗಳಂತೆ ಮಾರಾಟವಾಗುತ್ತವೆ. ಝೆಂಗ್ ಅವರ ಕೃತಿಗಳನ್ನು ಚೀನಾದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ದೇಶಗಳಲ್ಲಿಯೂ ಪ್ರದರ್ಶನಗೊಳ್ಳುತ್ತವೆ. ಜನರು ಈಗ್ಲೂ ಅವರ ಕಲೆಗೆ ಆಕರ್ಷಿತರಾಗಿದ್ದಾರೆ. ವರ್ಣಚಿತ್ರ ಮತ್ತು ಕೈಬರಹ ಖರೀದಿಗೆ ಉತ್ಸುಕರಾಗಿದ್ದಾರೆ.

ಝೆಂಗ್ ವೈವಾಹಿಕ ಜೀವನ

ಕಳೆದ ಹಲವಾರು ವರ್ಷಗಳಿಂದ, ಝೆಂಗ್ ತಮ್ಮ ವೈಯಕ್ತಿಕ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷದ ಏಪ್ರಿಲ್ನಲ್ಲಿ, ಝೆಂಗ್ ಕ್ಸು ಮೆಂಗ್ ಎಂಬ ಮಹಿಳೆಯೊಂದಿಗೆ ನಾಲ್ಕನೇ ಬಾರಿ ಮದುವೆ ಆದ್ರು. 37 ವರ್ಷದ ಕ್ಸು, ಝೆಂಗ್ಗಿಂತ 50 ವರ್ಷ ಕಿರಿಯವರು. ಕ್ಸು, ಝೆಂಗ್ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಇಬ್ಬರೂ ಹತ್ತಿರವಾಗಿದ್ದಾರೆ. ಇದೇ ಅವರಿಬ್ಬರ ಮದುವೆಗೆ ಕಾರಣವಾಗಿದೆ. ಝೆಂಗ್ ಈ ಹಿಂದೆ ಮೂರು ಬಾರಿ ವಿವಾಹವಾಗಿದ್ದರು. ಎರಡನೇ ಪತ್ನಿಗೆ ಫ್ಯಾನ್ ಕ್ಸಿಯಾವೋಹುಯಿ ಎಂಬ ಮಗಳಿದ್ದಾಳೆ. ಝೆಂಗ್ ಅವರ ಮೂರನೇ ಪತ್ನಿಗೆ ಮದುವೆಗೆ ಮೊದಲು ಇಬ್ಬರು ಮಕ್ಕಳಿದ್ದರು. ಅವರು ಝೆಂಗ್ ಉಪನಾಮ ಬಳಸುತ್ತಿದ್ದಾರೆ. 

ಪ್ರಖ್ಯಾತ ಸಿನಿಮಾ ನಟಿ-ನಿರೂಪಕಿ ಜೊತೆ ಆರ್‌ಸಿಬಿ ಮಾಜಿ ಪ್ಲೇಯರ್‌ ಡೇಟಿಂಗ್‌?

ಆಗಸ್ಟ್ ನಲ್ಲಿ ಅವರ ಮಗಳು ಫ್ಯಾನ್ಸ್ ಕ್ಸಿಯಾವೋಹುಯಿ, ಕ್ಸು ಮೇಲೆ ಆರೋಪ ಮಾಡಿದ್ದರು. ತಂದೆ ನಮ್ಮ ಸಂಪರ್ಕಕ್ಕೆ ಸಿಗ್ತಿಲ್ಲ. ಕ್ಸು ನಿಯಂತ್ರಣದಲ್ಲಿ ತಂದೆ ಇದ್ದಾರೆಂದು ಆರೋಪಿಸಿದ್ದರು. ಈಗ ಕ್ಸುಗೆ ಮಗು ಜನಿಸ್ತಿದ್ದಂತೆ ಝೆಂಗ್ ಉಳಿದ ಎಲ್ಲ ಮಕ್ಕಳ ಸಂಬಂಧ ಕಡಿದುಕೊಂಡಿರುವುದಾಗಿ ಘೋಷಣೆ ಮಾಡಿದ್ದಾರೆ. ಮನೆ ಬದಲಿಸಿದ್ದು, ಮನೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕ್ಸುಗೆ ನೀಡಿದ್ದಾರೆ. ಮಲ ಮಕ್ಕಳಿಗೆ ತಮ್ಮ ಉಪನಾಮ ಬಳಸದಂತೆ ಅವರು ಎಚ್ಚರಿಕೆ ಕೂಡ ನೀಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ವಿಷಯವನ್ನ ಬೇರೆಯವ್ರಿಗೆ ಹೇಳಿದ್ರೆ ನಿಮ್ಮ ಖ್ಯಾತಿ ಕೆಲವೇ ನಿಮಿಷದಲ್ಲಿ ಹಾಳಾಗುತ್ತೆ, ಗೇಲಿ ಮಾಡ್ತಾರೆ
ಟಿವಿ ನೋಡ್ತಿದ್ದ ಬಾಲಕಿಗೆ ಅಪ್ಪನ ಆಗಮನದ ಬಗ್ಗೆ ಸೂಚನೆ ನೀಡಿದ ಜರ್ಮನ್ ಶೆಫರ್ಡ್‌ ಶ್ವಾನ: ವೀಡಿಯೋ ಭಾರಿ ವೈರಲ್