ಹೆಣ್ಣು ಮಗುವಿನ ಅಪ್ಪನಾದ ಶಾಸಕ ಪ್ರದೀಪ್ ಈಶ್ವರ್: 'ಲಕ್ಷ್ಮಿ ಬಂದಿದ್ದಾಳೆ' ಎಂದು ಮುದ್ದಾದ ಕಂದನ ಜೊತೆ ವಿಡಿಯೋ ಶೇರ್​

Published : Nov 18, 2026, 12:06 PM IST
Pradeep Eeshwar

ಸಾರಾಂಶ

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಹೆಣ್ಣು ಮಗುವಿನ ತಂದೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇತ್ತೀಚೆಗೆ ಕಾಲು ಮುರಿತಕ್ಕೊಳಗಾಗಿದ್ದರೂ, ತರಗತಿಯಲ್ಲಿ ಹಾಸಿಗೆಯಿಂದಲೇ ಅವರು ತಮ್ಮ ಕ್ಷೇತ್ರ ಮತ್ತು ಪಾಠದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ನಮ್ಮ ಮನೆಗೆ ‘ಲಕ್ಷ್ಮಿ’ ಆಗಮಿಸಿದ್ದಾಳೆ. ದೇವರ ಆಶೀರ್ವಾದದಿಂದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮಗುವನ್ನು ಹಿಡಿದುಕೊಂಡಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ ಪ್ರದೀಪ್​ ಈಶ್ವರ್. ಲವ್​ ಮಾಕ್ಟೇಲ್ ಸಿನಿಮಾದ ಮುದ್ದು ಮಗಳೆ, ಓ ಮುದ್ದು ಮಗಳೇ, ನಕ್ಕರೂ ಚೆಂದ ಹಾಡನ್ನು ಬ್ಯಾಕ್​ಗ್ರೌಂಡ್​ನಲ್ಲಿ ಪ್ಲೇ ಮಾಡಿಕೊಂಡಿರುವ ಅವರು, ಮಗಳ ಜೊತೆಗಿನ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

41 ವರ್ಷದ ಪ್ರದೀಪ್ ಈಶ್ವರ್ ಅವರ ಪತ್ನಿ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ನಯನಾ ಎಂ. ಈ ದಂಪತಿಗೆ ಇದಾಗಲೇ ಒಂದು ಗಂಡು ಮಗುವಿದ್ದು, ಈಗ ಮಗಳ ಆಗಮನವಾಗಿದೆ. ಶಾಸಕ ಪ್ರದೀಪ್ ಈಶ್ವರ್ ತಂದೆಯಾಗಿರುವ ಸಿಹಿ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ರಾಜಕೀಯ ಗಣ್ಯರು ಹಾಗೂ ಹಿತೈಷಿಗಳಿಂದ ಶುಭಾಶಯ ಕೋರುತ್ತಿದ್ದಾರೆ.

ರಾಜಕೀಯ ಜೀವನ

ಇನ್ನು ಇವರ ರಾಜಕೀಯ ಜೀವನದ ಕುರಿತು ಹೇಳುವುದಾದರೆ, 2018ರಲ್ಲಿ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದರು ಪ್ರದೀಪ್ ಈಶ್ವರ್. ವಿಧಾನಸಭಾ ಚುನಾವಣೆಯಲ್ಲಿ ಅಂದು ಶಾಸಕರಾಗಿದ್ದ ಡಾ. ಕೆ ಸುಧಾಕರ್‌ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ ವಿ ನವೀನ್‌ ಕಿರಣ್‌ ಪರ ಭರ್ಜರಿ ಪ್ರಚಾರ ಮಾಡಿ ಗಮನಸೆಳೆದಿದ್ದ ಪ್ರದೀಪ್ ಈಶ್ವರ್, ಸುಧಾಕರ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಆದರೆ, ಸುಧಾಕರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಬಳಿಕ, 2023ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದ ಪ್ರದೀಪ್‌, ಹಿಂದಿನ ಆಡಳಿತ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಸುಧಾಕರ್ ಅವರ ವಿರುದ್ಧ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಕಾಲು ಮುರಿತ

ಇತ್ತೀಚೆಗೆ ಅವರು ಕಾಲು ಮುರಿತಕ್ಕೊಳಗಾಗಿದ್ದ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಬಿದ್ದು ಗಂಭೀರವಾಗಿ ಗಾಯವಾಗಿದ್ದು, ವೈದ್ಯರು 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಆದರೆ ನನ್ನೊಳಗಿನ ಶಿಕ್ಷಕ ಹಾಗೂ ಆಡಳಿತಗಾರ ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ. ಕೆಲಸ ಮಾಡಬೇಕೆಂದಿದ್ದರೆ, ಅದಕ್ಕೆ ದಾರಿ ಸಿಕ್ಕೇ ಸಿಗುತ್ತದೆ. ಹಾಗಾಗಿ, ನಾವು ನೇರವಾಗಿ ತರಗತಿಯ ಒಳಗೆಯೇ ಹಾಸಿಗೆಯನ್ನು ಸಿದ್ಧಪಡಿಸಿಕೊಂಡಿದ್ದೇನೆ. ನಾನು ನನ್ನ ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದೇನೆ ಮತ್ತು ಅದೇ ಸಮಯದಲ್ಲಿ ಇಲ್ಲಿಂದಲೇ ನನ್ನ ಕ್ಷೇತ್ರದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಗತ್ತಿನ ಅತ್ಯಂತ ದುಬಾರಿ ವಿಚ್ಛೇದನಗಳಿವು: ದಾಂಪತ್ಯ ಮುರಿದುಬಿದ್ದಾಗ ಕೋಟ್ಯಧಿಪತಿಗಳು ತೆತ್ತ ಬೆಲೆ ಎಷ್ಟು ಗೊತ್ತಾ?
ಕೊನೆಗೂ ಡೇಟ್​ ಅನೌನ್ಸ್​ ಮಾಡಿದ Bigg Boss ಐಶ್ವರ್ಯ ಸಿಂಧೋಗಿ-ಶಿಶಿರ್​ ಶಾಸ್ತ್ರಿ: ಶಿವಣ್ಣ ಸೇರಿ ಹಲವರಿಗೆ ​ ಪ್ರೀತಿಯ ಕರೆಯೋಲೆ