
ಕಚೇರಿಯಲ್ಲಿ ಒತ್ತಡದ ಕೆಲಸ, ಹೆಚ್ಚಿನ ಜವಾಬ್ದಾರಿ ಕಾರಣ ತಮ್ಮದೇ ಮದುವೆ, ಹನಿಮೂನ್‌ಗೆ ರಜೆ ಇಲ್ಲದ ಸಾಕಷ್ಟು ಘಟನೆಗಳು ನಡೆದಿದೆ. ತಾಳಿ ಕಟ್ಟುವ ಮುಹೂರ್ತಕ್ಕೆ ಬಿಡುವು ಮಾಡಿಕೊಂಡು ಬಂದು ಮದುವೆಯಾಗ ಘಟನೆಯೂ ನಡೆದಿದೆ. ವಿಶೇಷ ಅಂದರೆ ಇದೀಗ ಮದುವೆ ಮಂಟಪದಲ್ಲಿ ಕೆಲಸ ಮಾಡಿದ ಘಟನೆಯೂ ನಡೆದಿದೆ. ವರ ತಾಳಿ ಕಟ್ಟಿದ ಬೆನ್ನಲ್ಲೇ ವಧು ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡಿದ್ದಾಳೆ. ಕಚೇರಿಯಲ್ಲಿ ಎದುರಾದ ಸಮಸ್ಯೆ ಪರಿಹರಿಸಿ ಬಳಿಕ ಮದುವೆ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಇಲ್ಲಿಗೆ ಕೆಲಸ ಮುಗಿದಿಲ್ಲ. ನವ ಜೋಡಿ ಹನಿಮೂನ್ ತೆರಳಿದ್ದಾರೆ. ಹನಿಮೂನ್‌ನಲ್ಲೂ ಕಚೇರಿ ಮೀಟಿಂಗ್, ಕೆಲಸ ಎಂದು ಹೆಚ್ಚನ ಸಮಯ ಕಳೆದುಹೋಗುತ್ತಿದೆ. ಗಂಡ ಮದುವೆ ಮಂಟಪದಿಂದ ಕಾಯುತ್ತಿರುವ ಗಂಡನ ತಾಳ್ಮೆ ಇನ್ನೂ ಹಾಗೇ ಇದೆ ಅನ್ನೋದು ವಿಶೇಷ.
ಸಹೋದರಿಯ ಮದುವೆ ಹಾಗೂ ಹನಿಮೂನ್ ಕುರಿತು ಸಹೋದರ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಬಹಿರಂಗಪಡಿಸಿದ್ದಾನೆ. ಸಹೋದರಿ ಗೌರಿ ಅಗರ್ವಾಲ್ ಮದುವೆ. ಮದುವೆ ಮಂಟಪದಲ್ಲಿ ತಾಳಿ ಕಟ್ಟಿದ ಬೆನ್ನಲ್ಲೇ ಲ್ಯಾಪ್ ಹಿಡಿದು ಕೆಲಸ ಮಾಡಿ ಸಮಸ್ಯೆ ಬಗೆ ಹರಿಸಿದ್ದಾಳೆ. ಸಹೋದರ ಹಾಗೂ ಸಹೋದರಿ ಇಬ್ಬರು ಕೋಯಲ್ ಎಐ ಅನ್ನೋ ಸ್ಟಾರ್ಟ್ಅಪ್ ಕಂಪನಿ ಆರಂಭಿಸಿದ್ದಾರೆ. ಈ ಕಂಪನಿಯಲ್ಲಿ ಗೌರಿ ಅಗರ್ವಾಲ್ ಸಹ ಸಂಸ್ಥಾಪಕಿ. ಮದುವೆ ಸಮಯದಲ್ಲೇ ಕಂಪನಿಯಲ್ಲಿ ಟೆಕ್ನಿಕಲ್ ಸಮಸ್ಯೆಗಳು ಎದುರಾಗಿದೆ. ಹೀಗಾಗಿ ತಾಳಿ ಕಟ್ಟಿದ ಬೆನ್ನಲ್ಲೇ ಗೌರಿ ಅಗರ್ವಾಲ್ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡಿದ್ದಾರೆ. ಇತ್ತ ಸಹೋದರ ಕೂಡ ಕೆಲಸ ಮಾಡಬೇಕಾಗಿ ಬಂದಿದೆ. ಈ ವೇಳೆ ಗೌರಿ ಅಗರ್ವಾಲ್ ಗಂಡ ಸಿಹಿ ತಿನ್ನುತ್ತಾ ಕಳೆಯಬೇಕಾಗಿ ಬಂದಿದೆ. ನಾನು ಹಾಗೂ ನನ್ನ ಸಹೋದರಿಗೆ ಇಬ್ಬರಿಗೂ ಪೋಷಕರ ಕಡೆಯಿಂದ ಮಂಗಳಾರತಿ ಆಗಿದೆ ಎಂದು ಹೇಳಿಕೊಂಡಿದ್ದಾನೆ.
ಸದ್ಯ ಗೌರಿ ಅಗರ್ವಾಲ್ ಹನಿಮೂನ್ ತೆರಳಿದ್ದಾಳೆ. ಆದರೆ ಹನಿಮೂನ್‌ನಲ್ಲೂ ದಿನಕ್ಕೆ 3 ಗಂಟೆ ಕಚೇರಿ ಸಿಬ್ಬಂದಿಗಳ ಜೊತೆ ಮೀಟಿಂಗ್ ಮಾಡುತ್ತಾಳೆ. ಕೆಲ ಸಂದರ್ಭದಲ್ಲಿ ಸಮಸ್ಯೆ ಬಗೆ ಹರಿಸಲು ವಿಳಂಬವಾಗುತ್ತದೆ. ಹೀಗಾಗಿ ಸಹೋದರಿ ಹೆಚ್ಚಿನ ಸಮಯ ಲ್ಯಾಪ್‌ಟಾಪ್ ಹಿಡಿದೇ ಕಳೆಯಬೇಕಾಗಿದೆ ಎಂದು ಸಹೋದರ ಹೇಳಿಕೊಂಡಿದ್ದಾನೆ.
ಈ ಪೋಸ್ಟ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಟಾರ್ಟ್ಅಪ್ ಸಂಸ್ಥಾಪಕರು, ಕಂಪನಿ ಆರಂಭಿಸಿದವರು ಪಾಡು ಇದು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಉದ್ಯೋಗಿಯಾಗಿದ್ದರೆ ರಡೆ ಹಾಕಿ ಹೋಗಬಹುದು. ಆದರೆ ಕಂಪನಿ ಕಟ್ಟಿ ಬೆಳೆಸುವ ಸಂದರ್ಭದಲ್ಲಿ ಸಂಸ್ಥಾಪಕರು, ನಿರ್ದೇಶಕರ ಪಾಡು ಇದು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಫೋಟೋದಲ್ಲಿ ಆಕೆಯ ಗಂಡ ಉತ್ತಮ ಬೆಂಬಲ ನೀಡಿದ ರೀತಿ ಕಾಣುತ್ತಿದೆ. ಆದರೆ ಅಮೂಲ್ಯ ಸಮಯವನ್ನು ಉತ್ತಮವಾಗಿ ಕಳೆಯಿರಿ ಎಂದು ಹಲವರು ಸಲಹೆ ನೀಡಿದ್ದಾರೆ.ಇದೇ ವೇಳೆ ಕೆಲವರು ಗಂಡನ ತಾಳ್ಮೆ ಮೆಚ್ಚಬೇಕು, ಮಂಟಪದಿಂದ ಕಾಯುತ್ತಿದ್ದಾನೆ, ಹನಿಮೂನ್‌ನಲ್ಲೂ ಕಾಯುತ್ತಿದ್ದಾರೆ. ಇದು ಸರಿಯೇ ಎಂದು ಹಲವರು ಪ್ರಶ್ನಿಸಿದ್ದಾರೆ.
2025ರಲ್ಲಿ ಸಹೋದರ ಹಾಗೂ ಸಹೋದರಿ ಇಬ್ಬರು ಸೇರಿ ಸ್ಟಾರ್ಟ್ಅಪ್ ಕಂಪನಿ ಶುರು ಮಾಡಿದ್ದಾರೆ. ಗೌರಿ ಅಗರ್ವಾಲ್ ಕಂಪನಿ ಸಿಟಿಒ ಆಗಿದ್ದರೆ, ಮೆಹೂಲ್ ಅಗರ್ವಾಲ್ ಕಂಪನಿ ಸಿಇಒ. ಇಬ್ಬರು ಜೊತೆಯಾಗಿ ಆರಂಭಿಸಿದ ಕಂಪನಿ ಹಂತ ಹಂತವಾಗಿ ಬೆಳೆಯುತ್ತಿದೆ. ಇಬ್ಬರು ಸಮಯ ನೋಡದೆ ಕೆಲಸ ಮಾಡಿ ಕಂಪನಿಯನ್ನು ಲಾಭದಾಯ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.