
ಬೆಂಗಳೂರು (ಫೆ.26): ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ ನೀನೂ ಕೂಡ ಇದೇ ರೀತಿಯಲ್ಲಿ ನನಗೆ ಸಹಕರಿಸುವಂತೆ ಅಸಹಜ ಲೈಂಗಿಕತೆಗೆ ಹೆಂಡತಿಯನ್ನು ಒತ್ತಾಯಿಸಿದ್ದಾನೆ. ಆದರೆ, ಇದಕ್ಕೊಪ್ಪದೆ ಅಮ್ಮನಿಗೆ ದೂರು ಹೇಳಿ ಬುದ್ಧಿ ಹೇಳಿದ್ದಕ್ಕೆ ಗಂಡ ಕೋಪಗೊಂಡಿದ್ದಾನೆ. ನಂತರ, ತನ್ನ ಮಗನೆದುರೇ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಕೊನೆಗೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ಕಾಳಿ ನಗರದಲ್ಲಿ ನಡೆದಿದೆ. 6 ವರ್ಷದ ಮಗನ ಕಣ್ಣೆದುರಿಗೆ ಹೆಂಡತಿಯ ಕತ್ತು ಹಿಸುಕಿ ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಮತಾ (33) ಪತಿಯಿಂದ ಕೊಲೆಯಾದ ಪತ್ನಿ. ಪತ್ನಿ ಕೊಲೆ ಬಳಿಕ ನೇಣು ಬಿಗಿದುಕೊಂಡು ಪತಿ ಸುರೇಶ್ (40). ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ದಂಪತಿ ಮಧ್ಯೆ ಜಗಳ ಆಗುತ್ತಿತ್ತು. ಕುಡಿದು ಪತ್ನಿ ಜೊತೆ ಜಗಳ ಮಾಡುತ್ತಿದ್ದನು. ಇವತ್ತು ಬೆಳಗ್ಗೆ ಪತಿ-ಪತ್ನಿ ಮಧ್ಯೆ ಜಗಳ ಉಂಟಾಗಿತ್ತು. ಜಗಳದ ವೇಳೆ ಪತ್ನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಇನ್ನು ಮೃತ ಸುರೇಶ್ ತನ್ನ 6 ವರ್ಷದ ಮಗನ ಮುಂದೆಯೇ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ನಂತರ ತಾನೂ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ಬಗ್ಗೆ ಅವರ 6 ವರ್ಷದ ಮಗ ಅಕ್ಕ-ಪಕ್ಕದ ಮನೆಯವರಿಗೆ ಹೇಳಿದ್ದಾನೆ. ನಂತರ ಬ್ಯಾಡರಹಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಹಾಗೂ ಫಾರೆನ್ಸಿಕ್ ತಂಡದಿಂದ ಪರಿಶೀಲನೆ ಮಾಡಲಾಗಿದೆ. ಮೃತದೇಹಗಳನ್ನ ಆ್ಯಂಬುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ರವಾನಿಸಲಾಗಿದೆ.
ಇದನ್ನೂ ಓದಿ: 2 ಗಂಟೆಯಲ್ಲೇ ಸಂಸಾರವನ್ನೇ ಸರ್ವನಾಶ ಮಾಡಿದ ಕೇರಳದ ಸೈಕೋಪಾತ್, 5 ಮಂದಿಯನ್ನು ಸಾಯಿಸಿ ಪೊಲೀಸರಿಗೆ ಶರಣಾದ!
ಮೂಲತಃ ಸುರೇಶ್ ತುಮಕೂರಿನ ಗುಬ್ಬಿ ತಾಲೂಕಿನ ಸಿ.ಎಸ್. ಪುರದವರು. ಪತ್ನಿ ಮಮತ ತುಮಕೂರು ಜಿಲ್ಲೆ ನಿಡುವಳ್ಳಿಯವರು. ಕಳೆದ 13 ವರ್ಷದ ಹಿಂದೆ ವಿವಾಹ ಮಾಡಿಕೊಂಡಿದ್ದು, ಇತ್ತೀಚೆಗೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದರು. ಇವರಿಗೆ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಹತ್ತು ವರ್ಷ, ಹಾಗೂ ಆರು ವರ್ಷದ ಮಕ್ಕಳಿದ್ದರು. ಸುರೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೆ, ಹೆಂಡತಿ ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ತಮ್ಮ ಜೀವನವನ್ನೇ ದುರಂತವಾಗಿ ಅಂತ್ಯಗೊಳಿಸಿದ್ದಾರೆ.
ಅಸಹಜ ಲೈಂಗಿಕತೆಗೆ ಒತ್ತಾಯಿಸಿದ್ದೇ ಹತ್ಯೆಗೆ ಕಾರಣ: ಕಳೆದ 13 ವರ್ಷಗಳ ಹಿಂದೆ ಸುರೇಶ್ ಹಾಗೂ ಮಮತಾ ಮದುವೆಯಾಗಿದ್ದರು. ಒಂದಷ್ಟು ವರ್ಷ ತುಮಕೂರು, ಒಂದಷ್ಟು ವರ್ಷ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ದುಡಿದು ತಿಂತೀವಿ ಅಂತಾ ಬೆಂಗಳೂರಿಗೆ ಬಂದಿದ್ದರು. ಆದರೆ, ಸೆಕ್ಸ್ ವಿಚಾರಕ್ಕೆ ಪತ್ನಿ ಮಮತಾ ಜೊತೆಗೆ ಆಗಾಗ ಜಗಳ ಮಾಡುತ್ತಿದ್ದನು. ತನ್ನ ಮೊಬೈಲ್ ಫೋನ್‌ನಲ್ಲಿ ವಿಡಿಯೋ ತೋರಿಸಿ, ಅದೇ ರೀತಿ ಸಹಕರಿಸಲು ಒತ್ತಾಯ ಮಾಡುತ್ತಿದ್ದನು. ಈ ಬಗ್ಗೆ ಬೇಸತ್ತಿದ್ದ ಹೆಂಡತಿ ಗಂಡನ ಕಿರುಕುಳದ ಬಗ್ಗೆ ಆಕೆಯ ತಾಯಿಯ ಬಳಿ ಹೇಳಿಕೊಂಡಿದ್ದಳು. ಮಮತಾ ಕೆಲಸಕ್ಕೆ ಹೋಗಿ ಬಂದು ಹಣ ಕೊಡುತ್ತಿದ್ದರೂ, ಜೀವನ ನಿರ್ವಹಣೆ ಬಗ್ಗೆ ಗಂಡ ಗಲಾಟೆ ಮಾಡುತ್ತಿದ್ದನು. ಈ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ದಂಪತಿ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಎರಡೂ ಕಡೆ ಮನೆಯವರು ಮಾತಾಡಿ ವಿಚ್ಚೇಧನ ಪಡೆದುಕೊಳ್ಳಲು ನಿರ್ಧರಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ಅತ್ಯಾಚಾರ ದೂರು ಕೊಡಲು ಬಂದ ಅಪ್ರಾಪ್ತೆಯನ್ನು, ಮತ್ತೆರಡು ಬಾರಿ ರೇಪ್ ಮಾಡಿದ ಪೊಲೀಸ್ ಕಾನ್‌ಸ್ಟೇಬಲ್!
ಇದಾದ ನಂತರ ದೊಡ್ಡ ಮಗನನ್ನ ನಾವು ನೋಡಿಕೊಳ್ಳುತ್ತೇವೆ ಎಂದು 10 ವರ್ಷದ ಮಗನನ್ನು ಸುರೇಶನ ಪೋಷಕರು ಕರೆದೊಯ್ದಿದ್ದರು. ಸಣ್ಣ ಮಗ ಅಪ್ಪ ಸುರೇಶ್, ಅಮ್ಮ ಮಮತಾ ಜೊತೆಯಲ್ಲಿದ್ದನು. ಇಂದು ಬೆಳಗ್ಗೆ ಮತ್ತೆ ಪತಿ-ಪತ್ನಿ ಮಧ್ಯೆ ಜಗಳ ಶುರುವಾಗಿದ್ದು, ಇಬ್ಬರ ಸಾವಿನಲ್ಲಿ ಅಂತ್ಯವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.