ಅನಂತ್-ರಾಧಿಕಾ ಅದ್ಧೂರಿ ಮದುವೆಗೂ ಮುನ್ನ ಮುಖೇಶ್ -ನೀತಾ ಅಂಬಾನಿಯಿಂದ ಮಗನಿಗೆ ಮತ್ತೊಂದು ಸಪ್ರೈಸ್!

By Gowthami K  |  First Published Jun 29, 2024, 12:55 PM IST

ಜುಲೈ 12 ರಂದು ಅನಂತ್ ಮತ್ತು ರಾಧಿಕಾ  ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.  ಇದಕ್ಕೂ ಮುನ್ನ ನೀತಾ ಮತ್ತು ಮುಖೇಶ್ ಅಂಬಾನಿ ಮತ್ತೊಂದು ಅರ್ಥಗರ್ಭಿತವಾದ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಿದೆ.


ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪ್ರಸ್ತುತ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ಸಮಾರಂಭದ ತಯಾರಿಯಲ್ಲಿ ನಿರತರಾಗಿದ್ದಾರೆ. ಜುಲೈ 12 ರಂದು ಅನಂತ್ ಮತ್ತು ರಾಧಿಕಾ  ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

ಆದರೆ ಈ  ಅದ್ಧೂರಿ ವಿವಾಹಕ್ಕೂ ಮುನ್ನ ಅಂಬಾನಿ ಕುಟುಂಬ ಮತ್ತೊಂದು ಸುತ್ತಿನ ಅದ್ಧೂರಿ ವಿವಾಹ ಪೂರ್ವ ಸಂಭ್ರಮಾಚರಣೆಗೆ ಮುಂದಾಗಿದೆ. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಜುಲೈ 2 ರಂದು ಪಾಲ್ಘರ್‌ನ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ಬಡ ವರ್ಗದವರಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಲು ಸಿದ್ಧರಾಗಿದ್ದಾರೆ.

Latest Videos

ಕ್ರಿಕೆಟಿಗ ಶಮಿ ಜೊತೆ ಮದುವೆ ಎಂಬ ಸುದ್ದಿ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡ ಸಾನಿಯಾ!

ಈಗಾಗಲೇ ಅನಂತ್ ಮತ್ತು ರಾಧಿಕಾ ಮದುವೆಯ ಎರಡು ಅದ್ಧೂರಿ ವಿವಾಹಪೂರ್ವ ಸಮಾರಂಭವನ್ನು ಅಂಬಾನಿ ಕುಟುಂಬ ಮಾಡಿದೆ. ಮೊದಲ ವಿವಾಹಪೂರ್ವ ಸಮಾರಂಭ ಗುಜರಾತ್‌ನ ಜಾಮ್ ನಗರದಲ್ಲಿ ಮಾಡಿತ್ತು. ಬಳಿಕ ಎರಡನೇ ವಿವಾಹಪೂರ್ವ ಸಮಾರಂಭ ಇಟಲಿಯಲ್ಲಿ ಕ್ರೂಸ್‌ ನಲ್ಲಿ ಮಾಡಲಾಗಿತ್ತು. ಇದೀಗ ಮೂರನೇ ವಿವಾಹಪೂರ್ವ ಕಾರ್ಯಕ್ರಮವನ್ನು ಬಡವರ ಸಾಮೂಹಿಕ ವಿವಾಹವನ್ನು ಪಾಲ್ಘರ್‌ನ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ನಡೆಸಲಿದೆ.

ಇತ್ತೀಚೆಗಷ್ಟೇ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯ ಆಮಂತ್ರಣವು ವೈರಲ್ ಆಗಿದ್ದು, ಇದು ಅತ್ಯಂತ ವೈಭವೋಪೇತವಾಗಿದೆ. ದೇಶ ಮತ್ತು ವಿದೇಶದ ಗಣ್ಯರು ಇಬ್ಬರ ಮದುವೆಗೆ ಸಾಕ್ಷಿಯಾಗಲಿದ್ದು, ಈ ವಿಶೇಷ ಆಮಂತ್ರಣ ಪತ್ರಿಕೆಯನ್ನು ಅತ್ಯಾಪ್ತರಿಗೆ, ವಿಶೇಷ ಆಹ್ವಾನಿತರಿಗೆ ಅಂಬಾನಿ ಕುಟುಂಬ ವಿತರಿಸುತ್ತಿದೆ.

ಹನಿಮೂನ್ ಫೋಟೋ ಹಂಚಿಕೊಂಡ ಸಿದ್ಧಾರ್ಥ್ ಮಲ್ಯ, ಸ್ಟಾರ್ ನಟಿಯರೊಂದಿಗಿನ ಡ ...

ಮದುವೆಯ ಆಮಂತ್ರಣವು ದೀಪಗಳಿಂದ ಅಲಂಕರಿಸಲ್ಪಟ್ಟ ವಿಶೇಷ ಬಾಕ್ಸ್ ಮತ್ತು ಕೆಂಪು ಬಣ್ಣದ ಅಲಂಕಾರಿಕ ದೇವಾಲಯದಂಥ ರಚನೆ ಹೊಂದಿದೆ. ಇದನ್ನು ತೆರೆದಾಗ ಹಿನ್ನೆಲೆಯಲ್ಲಿ ಶ್ಲೋಕ ಮೊಳಗುತ್ತದೆ. ಒಳಗೆ ಬೆಳ್ಳಿಯ ದೇಗುಲವಿದೆ. ಅದರ ನಾಲ್ಕೂ ದಿಕ್ಕಿನಲ್ಲಿ ಚಿನ್ನದ ವಿಗ್ರಹಗಳನ್ನು ಕಾಣಬಹುದು. ಭಗವಾನ್ ಗಣಪತಿ, ರಾಧಾ-ಕೃಷ್ಣ ಮತ್ತು ದುರ್ಗಾದೇವಿಯನ್ನು ಕಾಣಬಹುದು. ಇದು ನಿಜವಾಗಿಯೂ ಶ್ರೇಷ್ಠತೆ ಮತ್ತು ಸಂಪ್ರದಾಯದ ಸಂಕೇತವಾಗಿದೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹ ನಡೆಯಲಿದ್ದು. ಮುಖ್ಯ ಸಮಾರಂಭಗಳು ಶುಕ್ರವಾರ, ಜುಲೈ 12 ರಂದು ಶುಭ ವಿವಾಹ ನಡೆಯಲಿದೆ. ಸಾಂಪ್ರದಾಯಿಕ ಉಡುಗೆಯನ್ನು ಧರಿಸುವ ಮೂಲಕ ಅತಿಥಿಗಳು ಈ ಸಂದರ್ಭದಲ್ಲಿ ಹಾಜರಿರಿ ಎಂದು ಅಂಬಾನಿ ಕುಟುಂಬ ಮನವಿ ಮಾಡಿಕೊಂಡಿದೆ. ಜುಲೈ 13 ರ ಶನಿವಾರದಂದು ಶುಭ್ ಆಶೀರ್ವಾದ್  ಕಾರ್ಯಕ್ರಮದ ಮೂಲಕ ಆಚರಣೆಗಳು ಮುಂದುವರಿಯುತ್ತವೆ. 

ಅಂತಿಮ ಕಾರ್ಯಕ್ರಮವಾದ ಮಂಗಲ್ ಉತ್ಸವ ಅಥವಾ ವಿವಾಹದ ಆರತಕ್ಷತೆಯನ್ನು ಜುಲೈ 14 ರ ಭಾನುವಾರದಂದು ನಿಗದಿಪಡಿಸಲಾಗಿದೆ. ಈ  ಸಂದರ್ಭದಲ್ಲಿ ಅತಿಥಿಗಳು 'ಭಾರತೀಯ ಚಿಕ್'  ಉಡುಗೆ ತೊಡುವಂತೆ ಕೇಳಿಕೊಳ್ಳಲಾಗಿದೆ. 

ಎನ್ಕೋರ್ ಹೆಲ್ತ್‌ಕೇರ್ ಸಿಇಒ ವೀರೇನ್ ಮರ್ಚೆಂಟ್ ಮತ್ತು ಉದ್ಯಮಿ ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರು ಅಂಬಾನಿ ಕುಟುಂಬದ ಸೊಸೆಯಾಗುತ್ತಿದ್ದು,  ಎರಡು ಪ್ರಮುಖ ಕೈಗಾರಿಕೋದ್ಯಮಿ ಕುಟುಂಬಗಳು ಈ ಮೂಲಕ ಸಂಬಂಧಿಕರಾಗುತ್ತಿದ್ದಾರೆ. 

ಇತ್ತೀಚಿನ ಸಂದರ್ಶನವೊಂದರಲ್ಲಿ, ರಾಧಿಕಾ ಮರ್ಚೆಂಟ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡುತ್ತಾ ಇಶಾ ಅಂಬಾನಿ , "ಅನಂತ್ ಯಾವಾಗಲೂ ನನ್ನ ಜೀವನದಲ್ಲಿ ಮಗುವಿನಂತೆ ಇದ್ದಾನೆ, ನಾನು ಪ್ರೀತಿಸಿದ ವ್ಯಕ್ತಿ, ಹಾಗಾಗಿ ನಾನು ರಾಧಿಕಾಳನ್ನು ತಾಯಿಯ ಕಣ್ಣಿನಲ್ಲಿ ನೋಡುತ್ತೇನೆ. ನನ್ನ ಅಮ್ಮ, ಶ್ಲೋಕಾ ಮತ್ತು ರಾಧಿಕಾ ನನ್ನ ಆಪ್ತರು ಮತ್ತು ನನ್ನ ಮೊದಲ ಸ್ನೇಹಿತರ ಸಾಲಲಿದ್ದಾರೆ ಎಂದಿದ್ದರು. 

click me!