ಬಡ್ಡೆತದೆ ಬುಡ್ಲಾ: ಅವ್ವಾ...! ಎಂದು ನಾಯಿ ಮಡಿಲಿಗೆ ಜಿಗಿದ ಬೇಬಿ ಕೋಲ!

Published : Oct 13, 2019, 02:47 PM IST
ಬಡ್ಡೆತದೆ ಬುಡ್ಲಾ: ಅವ್ವಾ...! ಎಂದು ನಾಯಿ ಮಡಿಲಿಗೆ ಜಿಗಿದ ಬೇಬಿ ಕೋಲ!

ಸಾರಾಂಶ

ಈ ನಾಯಿ ಹಾಗೂ ಮರಿ ಕೋಲದ ಒಡನಾಟವೇ ವಿಭಿನ್ನ| ನಾಯಿ ಸುತ್ತಾಡಲು ಬಂದ್ರೆ ಸಾಕು ಎಲ್ಲಿದ್ರೂ ಓಡಿ ಬರುತ್ತೆ ಬೇಬಿ ಕೋಲ| ನಾಲ್ಕು ತಿಂಗಳ ಪುಟ್ಟ ಕೋಲಗೆ ಈ ನಾಯಿಯೇ ಅಮ್ಮನಂತೆ| ವೈರಲ್ ಆಯ್ತು ವಿಡಿಯೋ

ನವದೆಹಲಿ[ಅ.13]: ಸೋಶಿಯಲ್ ಮೀಡಿಯಾದಲ್ಲಿ ಹಲವರು ಫೋಟೋ, ವಿಡಿಯೋಗಳು ವೈರಲ್ ಆಗುತ್ತವೆ. ಹೀಗಿರುವಾಗ ಸದ್ಯ ಮುದ್ದಾದ ನಾಯಿ ಹಾಗೂ ಮರಿ ಕೋಲದ ವಿಡಿಯೋ ಒಂದು ನೆಟ್ಟಿಗರ ಮನ ಕದ್ದಿದೆ. ನಾಯಿಯನ್ನೇ ತನ್ನ ತಾಯಿಯೆಂದು ಭಾವಿಸಿರುವ ಪುಟ್ಟ ಕೋಲ ಬೆನ್ನಿನ ಮೇಲೆ ಹತ್ತಿ ನಡೆಸುತ್ತಿರುವ ಕುಚೇಷ್ಟೆ ಎಲ್ಲರಿಗೂ ಇಷ್ಟವಾಗಿದೆ.

ಯೂಟ್ಯೂಬ್ ಬಳಕೆದರ ಹೆನ್ರಿ ಎಂಬವರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅತ್ತ ಪುಟ್ಟ ಕೋಲ ನಾಯಿಯ ಬೆನ್ನಿನ ಮೇಲೆ ಹತ್ತಿ ಇಳಿದು ಕುಚೇಷ್ಟೆ ನಡೆಸುತ್ತಿದ್ದರೆ, ಇತ್ತ ನಾಯಿ ಇದ್ಯಾಕೆ ಹೀಗಾಡುತ್ತಿದೆ ಎಂಬ ಕನ್ಫ್ಯೂಸಿಂಗ್ ಲುಕ್ ಕೊಡುತ್ತಿದೆ. ಇದಕ್ಕೆ ತಲೆ ಕೆಡಿಸಿಕೊಳ್ಳದ ಪುಟ್ಟ ಕೋಲ ತನ್ನ ಕುಚೇಷ್ಟೆ ಮುಂದುವರೆಸಿದೆ. ನಾಯಿ ಅದನ್ನೆಷ್ಟೇ ತಡೆಯಲು ಯತ್ನಿಸಿದರೂ, ಪುಟ್ಟ ಮರಿ ತನ್ನ ತುಂಟಾಟ ಮುಂದುವರೆಸಿದೆ.

ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಹೆನ್ರಿ 'ಒಂದು ಬೆಳಗ್ಗೆ ನನ್ನ ನಾಯಿ ಟೋನಿಯನ್ನು ಹೊರಗೆ ಸುತ್ತಾಡಲು ಕರೆದೊಯ್ದಾಗ ಹೀಗಾಯ್ತು' ಎಂದಿದ್ದಾರೆ. ಅಲ್ಲದೇ 'ಈ 4 ತಿಂಗಳ ಕೋಲ ನಾವಿದ್ದ ಪ್ರದೇಶದಲ್ಲೇ ಇರುತ್ತದೆ. ಟೋನಿ ಹೊರ ಹೋದಾಗೆಲ್ಲಾ ಇದು ತನ್ನ ಕುಚೇಷ್ಟೆ ಮುಂದುವರೆಸುತ್ತದೆ. ಟೋನಿ ಕೂಡಾ ಯಾವತ್ತೂ ಈ ಮರಿ ಕೋಲವನ್ನು ಹೆದರಿಸಿಲ್ಲ. ಶಾಂತವಾಗಿ ಅದರ ಕುಚೇಷ್ಟೆ ಸಹಿಸಿಕೊಳ್ಳುತ್ತದೆ' ಎಂದಿದ್ದಾರೆ.

'ಈ ವಿಡಿಯೋ ಬಹಳ ಮಜಾದಾಯಕ ಹಾಗೂ ವಿಭಿನ್ನವಾಗಿದೆ. ಹೀಗಾಗಿ ಇದನ್ನು ನಾನು ರೆಕಾರ್ಡ್ ಮಾಡಿದೆ. ಇದು ನೋಡುಗರಿಗೂ ಖುಷಿ ಕೊಡುತ್ತದೆ. ಧನ್ಯವಾದಗಳು' ಎಂದು ಬರೆದಿದ್ದಾರೆ. 

ಈ ವಿಡಿಯೋ ಹಲವರ ಮನ ಕದ್ದಿದ್ದು, ಬಹಳ ಮುದ್ದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಪ್ರಾಣಿಗಳ ಈ ಒಡನಾಟಕ್ಕೆ ಮಾರು ಹೋಗಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Chanakya niti: ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಈ ತಪ್ಪು ಮಾಡಬೇಡಿ!