ಕಾಣೆಯಾದವರ ಮುಖ ಹಾಲಿನ ಪ್ಯಾಕೆಟ್‌ ಮೇಲೆ; ಕುಟುಂಬದವರ ಜತೆ ಒಟ್ಟಾದವರು ನೂರಾರು?

By Suvarna News  |  First Published Jun 16, 2020, 9:47 AM IST

ಕಾಣೆಯಾದವರನ್ನು ಕುಟುಂಬದವರ ಜತೆ ಸೇರಿಸುವುದಕ್ಕೆ ಆಸ್ಟ್ರೇಲಿಯಾದಲ್ಲಿ ಶುರುವಾಗಿದೆ ಹೊಸ ಅಭಿಯಾನ, ಹಾಲು ಖರೀದಿ ಮಾಡದವರಿಲ್ಲ.........


ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್ ಹಾಗೂ ನ್ಯಾಷನಲ್ ಮಿಸ್ಸಿಂಗ್ ವ್ಯಕ್ತಿಗಳ ಸಮನ್ವಯ ಕೇಂದ್ರ ಮತ್ತು ಕ್ಯಾನಬರಿ ಮಿಲ್ಕ್‌ ಒಟ್ಟಾಗಿ ಸೇರಿಕೊಂಡು ಆಸ್ಟ್ರೇಲಿಯಾದಲ್ಲಿ ಮಿಸ್ ಆಗಿರುವ ಜನರನ್ನು ಕುಟುಂಬದವರ ಜತೆ ಸೇರಿಸಬೇಕೆಂದು ಹೊಸ ರೀತಿಯ ಪ್ರಯೋಗವೊಂದನ್ನು ಶುರು ಮಾಡಿದ್ದಾರೆ.

ಮೊದಲ ಪ್ರಯತ್ನವಾದ ಕಾರಣ ಕಾಣೆಯಾಗಿರುವ 16 ವ್ಯಕ್ತಿಗಳ ಫೋಟೋಗಳನ್ನು 1 ಲೀಟರ್‌ ಹಾಲಿನ ಬಾಟಲ್ ಮೇಲೆ ಅಂಟಿಸಲಾಗಿದ್ದು ಅವರ ಹಿನ್ನೆಲೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತದೆ. ಹಾಲಿನ ಪ್ಯಾಕೆಟ್‌ ಅಥವಾ ಬಾಟಲ್‌ ಆಯ್ಕೆ ಮಾಡಿಕೊಳ್ಳುವ ಕಾರಣ ಆಸ್ಟ್ರೇಲಿಯಾದ ಜನರು ಹೆಚ್ಚಾಗಿ ಹಾಲು ಖರೀದಿ ಮಾಡುತ್ತಾರೆ. ಕಳೆದ ವರ್ಷವೂ ಹೀಗೊಂದು ಅಭಿಯಾನ ಮಾಡಲಾಗಿದ್ದು ಒರ್ವ ವ್ಯಕ್ತಿಯನ್ನು ಆಪ್ತರೊಟ್ಟಿಗೆ ಸೇರಿಸಲು ಸಹಾಯಕಾರಿಯಾಗಿತ್ತು ಎಂದು ಎಫ್‌ಪಿ ಕಮೀಷನರ್‌ ಲೆಸಾ ಗೇಲ್ ಹೇಳಿದ್ದಾರೆ.

Latest Videos

undefined

ಕಾಣೆಯಾದವರ ಬಗ್ಗೆ ಪೊಲೀಸರಿಗೆ ದೂರು ನೀಡಿ ಕೆಲ ತಿಂಗಳುಗಳ ಕಾಲ ಕಾಯುತ್ತೇವೆ ಆದರೆ ಯಾವುದೇ ಮಾಹಿತಿ ಸಿಗದೆ ಸುಮ್ಮನಾಗಿ ಜೀವನ ಎಥಾಸ್ಥಿತಿ ಮರಳುತ್ತದೆ ಆದರೆ ಅವರನ್ನು ಕಳೆದುಕೊಂಡ ನೋವು ಎಂದೂ ಹೋಗುವುದಿಲ್ಲ. ಈ ವಿಚಾರದ ಬಗ್ಗೆ ಧ್ವನಿ ಎತ್ತಿದ ಆಸ್ಟ್ರೇಲಿಯಾ ಪೊಲೀಸರು ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

ಈಗಾಗಲೇ  ಆಯ್ಕೆಯಾಗಿರುವ  16 ವ್ಯಕ್ತಿಗಳ ಕುಟುಂಬಸ್ಥರು ಮಾಹಿತಿ ನೀಡಲು ಒಪ್ಪಿಕೊಂಡಿದ್ದಾರೆ. 'ಇಂತಹ ಕ್ಯಾಂಪೇನ್‌ಗಳನ್ನು ನಾನು ಕಳೆದುಕೊಂಡವರನ್ನು ಹುಡುಕಲು ಸುಲಭ ಮಾಡುತ್ತದೆ. ನಾನು ಒಬ್ಬಂಟಿಗಿ ತಮ್ಮವರನ್ನು ಹುಡುಕುತ್ತಿಲ್ಲ ಎಂಬ ಭಾವನೆ ನೀಡುತ್ತದೆ. ಇವರ ಸಹಾಯ ನನಗೆ ತುಂಬಾನೇ ಅಗತ್ಯ' ಎಂದು ಮಗನನ್ನು ಕಳೆದುಕೊಂಡ ನಿಕೋಲಾ ಸಲ್ಲೀಸ್ ಮಾತನಾಡಿದ್ದಾರೆ.

ಆಸ್ಟ್ರೇಲಿಯಾ ಪೊಲೀಸರು ಪ್ರಕಟಿಸಿರುವ ಒಂದು ವರದಿ ಉದಾಹರಣೆ ಇಲ್ಲಿದೆ:

ಲಾರಾ ಹಾವರ್ತ್ ಎಂಬ 23 ವರ್ಷದ ಯುವತಿ ಜನವರಿ 5, 2008ರಲ್ಲಿ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಸ್ನೇಹಿತೆಯ ಮನೆಗೆ ಹೋಗಿರುತ್ತಾಳೆ. ಆದರೆ ಲಾರಾ ಸ್ನೇಹಿತೆ ಮನೆಗೂ ಹೋಗಿಲ್ಲ ಕೆಲಸಕ್ಕೂ ಹೋಗಿಲ್ಲ. ಪೊಲೀಸರಿಗೆ ದೂರು ನೀಡಿದ ನಂತರ ಲಾರಾ ಕಾರನ್ನು ಪತ್ತೆ ಹಚ್ಚಲಾಗಿತ್ತು. ಆದರೆ ಆಕೆ ಕಾಣೆಯಾಗಿದ್ದಳು. ಲಾರಾ ನೋಡಲು ಫೇರ್‌ ಇದ್ದಳು, ಶಾರ್ಟ್‌ ಹೇರ್‌ ಕಟ್ ಮಾಡಿಸಿ ಕೆಂಪು ಬಣ್ಣ ಹಾಕಿದ್ದಳು. ಈಗ ಆಕೆಗೆ 35 ಆಗಿರುತ್ತಿತು.

ಒಟ್ಟಿನಲ್ಲಿ ಆಸ್ಟ್ರೇಲಿಯಾ ಪೊಲೀಸರು ಶುರು ಮಾಡಿರುವ ಅಭಿಯಾನಕ್ಕೆ ಅಲ್ಲಿನ ಜನರು ಸಾಥ್ ನೀಡಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗಲಿ.

click me!