ಅರ್ಜುನ್‌ ಸರ್ಜಾ ಕಿರಿ ಮಗಳು ಅಂಜನಾ ಮದುವೆ, ಯಾವ ಫೋಟೋದಲ್ಲೂ ಕಾಣಿಸದ ಹಿರಿ ಅಳಿಯ ಉಮಾಪತಿ ರಾಮಯ್ಯ!

Published : Oct 26, 2026, 07:09 PM ISTUpdated : Oct 26, 2026, 07:10 PM IST
Anjana Arjun Isai Nattar Marriage Photos Missing Umapathy Ramaiah

ಸಾರಾಂಶ

ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅವರ ವಿವಾಹ ಇಟಲಿಯಲ್ಲಿ ಇತ್ತೀಚೆಗೆ ನೆರವೇರಿದೆ. ಆದರೆ ಈ ಮದುವೆಯ ಯಾವುದೇ ಫೋಟೋಗಳಲ್ಲಿ ಹಿರಿಯ ಅಳಿಯ ಉಮಾಪತಿ ರಾಮಯ್ಯ ಕಾಣಿಸಿಲ್ಲ. ಇದರಿಂದ ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ದಾಂಪತ್ಯದ ಬಗ್ಗೆ ನೆಟ್ಟಿಗರಲ್ಲಿ ಅನುಮಾನ ಶುರುವಾಗಿದೆ.

ಬೆಂಗಳೂರು (ಅ.26): ದೂರದ ಇಟಲಿ ಟುಸ್ಕಾನಿಯಲ್ಲಿ ಅರ್ಜುನ್‌ ಸರ್ಜಾ ಕುಟುಂಬ ತಮ್ಮ ಮನೆಯ ಕಿರಿಮಗಳ ಮದುವೆಯ ಸಂಭ್ರಮದಲ್ಲಿದೆ. ಅಕ್ಟೋಬರ್‌ 19ರಂದು ಮದುವೆ ನಡೆದಿದ್ದು, ಒದಲು ಹಿಂದೂ ಸಂಪ್ರದಾಯದಂತೆ ಬಳಿಕ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಅಂಜನಾ ಅರ್ಜುನ್‌ ಹಾಗೂ ಇಸಯ್‌ ನಟ್ಟರ್‌ ಅವರ ವಿವಾಹ ನೆರವೇರಿದೆ. ನfಟರ್‌ ಹಾಗೂ ಅಂಜನಾ ಕಳೆದ 14 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ದೀರ್ಘಕಾಲದ ಪ್ರೀತಿಗೆ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದರಿಂದ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅ.19 ರಂದು ಸ್ವತಃ ಅಂಜನಾ ಅರ್ಜುನ್‌ ಮದುವೆಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯನ್ನು ಅಧಿಕೃತಗೊಳಿಸಿದ್ದರು.

ಮದುವೆಯ ಸಾಕಷ್ಟು ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಯಾವ ಫೋಟೋದಲ್ಲೂ ಅರ್ಜುನ್‌ ಸರ್ಜಾ ಕುಟುಂಬದ ಹಿರಿ ಅಳಿಯ ಹಾಗೂ ಐಶ್ವರ್ಯಾ ಅರ್ಜುನ್‌ ಅವರ ಪತಿ ಉಮಾಪತಿ ರಾಮಯ್ಯ ಮಾತ್ರ ಕಾಣಿಸುತ್ತಿಲ್ಲ. ಇದೇ ಹಲವರಿಗೆ ಅಚ್ಚರಿಯಾಗಿ ಕಂಡಿದೆ.

ಅಂಜನಾ ಅರ್ಜುನ್‌ ಮದುವೆಯಲ್ಲಿ ಎರಡೂ ಕಡೆಯ ಫ್ಯಾಮಿಲಿಯೊಂದಿಗೆ ನವ ವಧು-ವರ ಫೋಟೋ ತೆಗೆದುಕೊಂಡಿದ್ದಾರೆ. ಅರ್ಜುನ್‌ ಸರ್ಜಾ ಕುಟುಂಬದಲ್ಲಿ, ಅರ್ಜುನ್‌ ಸರ್ಜಾ, ಪತ್ನಿ ನಿವೇದಿತಾ, ಐಶ್ವರ್ಯಾ ಅರ್ಜುನ್‌ ಮಾತ್ರ ಭಾಗಿಯಾಗಿದ್ದಾರೆ. ಯಾವ ಫೋಟೋದಲ್ಲೂ ಉಮಾಪತಿ ರಾಮಯ್ಯ ಇಲ್ಲದೇ ಇರುವುದು ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ನಾದಿನಿಯ ಮದುವೆಯಲ್ಲಿ ಹಿರಿಯ ಅಳಿಯ ಫೋಟೋದಲ್ಲಿ ಮಿಸ್‌ ಆಗಿರುವುದು ಸಣ್ಣ ವಿಚಾರವಲ್ಲ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಆರಂಭದಲ್ಲಿ ಹಿಂದು ಮದುವೆಯ ಸಂಪ್ರದಾಯದಲ್ಲಿ ಉಮಾಪತಿ ರಾಮಯ್ಯ ಮಿಸ್‌ ಆಗಿದ್ದರೆ, ನಂತರ ನಡೆದ ಕ್ರಿಶ್ಚಿಯನ್‌ ಸಂಪ್ರದಾಯದ ಮದುವೆಯಲ್ಲೂ ಉಮಾಪತಿ ರಾಮಯ್ಯ ಮಿಸ್‌ ಆಗಿರುವುದು ಐಶ್ವರ್ಯಾ ಅರ್ಜುನ್‌ ಹಾಗೂ ಉಮಾಪತಿ ರಾಮಯ್ಯ ನಡುವೆ ಎಲ್ಲವೂ ಸರಿ ಇದ್ಯಾ? ಇಲ್ಲವೋ ಅನ್ನೋ ಅನುಮಾನ ಶುರುವಾಗಿದೆ.

ಐಶ್ವರ್ಯಾ ಅರ್ಜುನ್‌ ಕೊನೆಯ ಬಾರಿಗೆ ಪತಿಯ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ವರ್ಷದ ಜನವರಿ 15 ರಂದು. ಸಂಕ್ರಾಂತಿ ಹಾಗೂ ಪೊಂಗಲ್‌ ಶುಭಾಶಯ ಕೋರುತ್ತಾ ಕುಟುಂಬದ ಫೋಟೋವನ್ನು ಹಂಚಿಕೊಂಡಿದ್ದರು. ಇದರಲ್ಲಿ ಉಮಾಪತಿ ಅವರೊಂದಿಗೆ ಇರುವ ಒಂದು ಸಿಂಗಲ್‌ ಫೋಟೋ ಹಾಗೂ ಕುಟುಂಬದ ಜೊತೆ ಇರುವ ಇನ್ನೊಂದು ಫೋಟೋ ಹಂಚಿಕೊಂಡಿದ್ದರು.

ಒಂದೇ ಒಂದು ಫೋಟೋ ಹಂಚಿಕೊಳ್ಳದ ಐಶ್ವರ್ಯಾ ಅರ್ಜುನ್‌

ಈ ಫೋಟೋ ಹಂಚಿಕೊಂಡು ಹತ್ತು ತಿಂಗಳಾಗಿದೆ. ನಂತರದ ಯಾವೊಂದು ಫೋಟೋದಲ್ಲೂ, ಗ್ರೂಪ್‌ ಫೋಟೋದಲ್ಲೂ ಉಮಾಪತಿ ರಾಮಯ್ಯ ಅವರ ಫೋಟೋ ಇಲ್ಲ. ಆದರೆ, ಅವರ ಮದುವೆಯ ಹಳೇ ಫೋಟೋಗಳು ಮಾತ್ರ ಇಂದಿಗೂ ಅವರ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿದೆ. ಇನ್ನು ಉಮಾಪತಿ ರಾಮಯ್ಯ ಕೂಡ 2025ರ ಜನವರಿಯಂದು ಸಂಕ್ರಾಂತಿಗೆ ಪತ್ನಿ ಜೊತೆ ಇರುವ ಪೋಸ್ಟ್‌ ಹಾಕಿದ್ದೇ ಕೊನೆ. ಆ ನಂತರ ಒಂದೇ ಒಂದು ಪೋಸ್ಟ್‌ ಹಂಚಿಕೊಂಡಿಲ್ಲ. ಇದೆಲ್ಲವನ್ನೂ ಗಮನಿಸಿರುವ ನೆಟ್ಟಿಗರು ಅರ್ಜುನ್‌ ಸರ್ಜಾ ಹಿರಿ ಮಗಳ ಸಂಸಾರ ಸರಿ ಇದ್ಯಾ ಅಥವಾ ಬೇರೇನಾದರೂ ವಿಚಾರ ಆಗಿದ್ಯಾ ಅನ್ನೋ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಉಮಾಪತಿ ರಾಮಯ್ಯ ನಟ ಹಾಗೂ ಹಿರಿಯ ನಟ ತಂಬಿ ರಾಮಯ್ಯ ಅವರ ಪುತ್ರ. 2024ರ ಜೂನ್ 10 ರಂದು ಚೆನ್ನೈನಲ್ಲಿ ಅದ್ದೂರಿಯಾಗಿ ಇವರ ವಿವಾಹ ಸಮಾರಂಭ ನೆರವೇರಿತ್ತು. ಆ ಬಳಿಕ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಕೂಡ ನಡೆದಿತ್ತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

21 ವರ್ಷದ ಆಟೋ ಚಾಲಕನ 'ಮದುವೆ ಮೆಂಟಾಲಿಟಿ'ಗೆ ನಟಿ ಸೃಷ್ಟಿ ಅಗರ್ವಾಲ್ ಶಾಕ್! ವಿಡಿಯೋ ವೈರಲ್
'ಟಕ್ ಟಕ್' ಎಂದು ಸೈಬರ್ ಕ್ರೈಂ ಬಾಗಿಲು ಬಡಿದ ರಶ್ಮಿಕಾ-ವಿಜಯ್ ಜೋಡಿ.. ಯಾರಿಗೆಲ್ಲಾ ಈಗ ಎದೆಯಲ್ಲಿ ಗಡಗಡ ನಡುಕ?