ಕೋಪದಲ್ಲಿ ಮೂಗು ಕೊಯ್ದುಕೊಳ್ಳಬಾರದು ಅಂತಾ ದೊಡ್ಡವರು ಹೇಳ್ತಾರೆ. ಜಗಳವಾಡುವಾಗ್ಲೂ ನಾವೇನು ಹೇಳ್ತಿದ್ದೇವೆ ಎನ್ನುವ ಅರಿವು ನಮಗಿರಬೇಕು. ಸಿಟ್ಟಿನಲ್ಲಿ ಆಡಿದ ಮಾತಿಗೆ ಮುಂದೆ ಪಶ್ಚಾತ್ತಾಪಪಡಬೇಕಾಗುತ್ತದೆ. ಸಂಸಾರ ಸುಖ ಹಾಳಾಗಲೂಬಹು
ಪತಿ – ಪತ್ನಿ ಮಧ್ಯೆ ಜಗಳ ಆಗೋದು ಸಾಮಾನ್ಯ. ಕೆಲವೊಮ್ಮೆ ಜಗಳ ಎಷ್ಟರ ಮಟ್ಟಿಗೆ ದೊಡ್ಡದಾಗಿರುತ್ತೆ ಅಂದ್ರೆ ಕೂಗಾಟದಲ್ಲಿ ಅವರು ಏನು ಹೇಳ್ತಿದ್ದಾರೆ ಎನ್ನುವ ಅರಿವು ಅವರಿಗೆ ಇರೋದಿಲ್ಲ. ಅಲ್ಲಿ, ಪತಿ – ಪತ್ನಿ ಪಾಲಕರು, ಮಕ್ಕಳು, ಅವರ ಮಾಜಿ ಪ್ರೇಮಿಗಳು ಕೂಡ ಬಂದು ಹೋಗಿರ್ತಾರೆ. ಇದೇ ವೇಳೆ ಕೆಲವೊಂದು ಸತ್ಯ ಹೊರಗೆ ಬೀಳೋದಿದೆ. ಸಣ್ಣ ವಿಷ್ಯಕ್ಕೆ ನಡೆದ ಜಗಳ ಬೇರೆ ವಿಷ್ಯಕ್ಕೆ ತಿರುಗಿ ನಂತ್ರ ಇಬ್ಬರು ವಿಚ್ಛೇದನ ಪಡೆದ ಘಟನೆಗಳೂ ಇವೆ. ಈಗ ರೆಡ್ಡಿಟ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ನಡೆದ ಆಘಾತಕಾರಿ ವಿಷ್ಯವನ್ನು ಹೇಳಿಕೊಂಡಿದ್ದಾನೆ. ಅದಕ್ಕೆ ಬಳಕೆದಾರರು ಸಾಕಷ್ಟು ಕಮೆಂಟ್ ಕೂಡ ಮಾಡಿದ್ದಾರೆ.
ಜಗಳದ ಮಧ್ಯೆ ಪತ್ನಿ, ಮಗು ನಿನ್ನದಲ್ಲ ಎಂದಿದ್ದಾಳೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪತಿ, ಡಿಎನ್ಎ (DNA) ಪರೀಕ್ಷೆ ಮಾಡಿಸಿದ್ದಾನೆ. ನಂತ್ರ ಬಂದ ಸತ್ಯ ಹಾಗೂ ಕೊನೆಯಲ್ಲಿ ಪತ್ನಿ ಹೇಳಿದ ಮಾತು ಆತನ ಜೀವನವನ್ನೇ ಬದಲಿಸಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು ಎಂಬ ವಿವರ ಇಲ್ಲಿದೆ.
undefined
ಸುಶಾಂತ್ ಸಿಂಗ್ ಸಾವಿಗಾಗಿ ಗರ್ಲ್‌ಫ್ರೆಂಡ್ ರಿಯಾ ಚಕ್ರವರ್ತಿ ಮಾಟ-ಮಂತ್ರ ಮಾಡಿದ್ರಾ?
ಮಗಳ ಡಿಎನ್ ಎ ಪರೀಕ್ಷೆ (Test) ಮಾಡಿಸಿದ ಪತಿ : ಪತಿ – ಪತ್ನಿ ಇಬ್ಬರು ಯಾವುದೋ ವಿಷ್ಯಕ್ಕೆ ಜೋರಾಗಿ ಕಿತ್ತಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಪತ್ನಿ, ಮಗು ನಿನ್ನದಲ್ಲ ಎಂದು ಪತಿಗೆ ಹೇಳಿದ್ದಾಳೆ. ಇದನ್ನು ಕೇಳಿದ ಪತಿ ಆಘಾತಕ್ಕೊಳಗಾಗಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದಾನೆ. ತಕ್ಷಣ ಮನೆಯಿಂದ ಹೊರಗೆ ಹೋದ ಪತಿ, ಡಿಎನ್ ಎ ಪರೀಕ್ಷೆ ಕಿಟ್ ತಂದಿದ್ದಲ್ಲದೆ, ಮಗಳ ಪರೀಕ್ಷೆ ನಡೆಸಿದ್ದಾನೆ. ಪರೀಕ್ಷೆ ನಡೆದ 48 ಗಂಟೆ, ಪತಿ ತನ್ನ ಉಸಿರುಬಿಗಿ ಹಿಡಿದು ಓಡಾಡಿದ್ದಾನೆ. ಕೊನೆಗೂ ಡಿಎನ್ ಎ ಪರೀಕ್ಷೆ ವರದಿ ಬಂದಿದೆ. ಅದ್ರಲ್ಲಿ ಮಗು ತನ್ನದೇ ಎಂಬುದು ಖಾತರಿಯಾಗಿದೆ. ಪತ್ನಿ ಈ ವಿಷ್ಯದಲ್ಲಿ ಸುಳ್ಳು ಹೇಳಿದ್ದಾಳೆ ಎಂದುಕೊಂಡ ಪತಿ, ನಿಟ್ಟುಸಿರುಬಿಟ್ಟಿದ್ದಲ್ಲದೆ ಈ ವಿಷ್ಯವನ್ನು ಪತ್ನಿಗೆ ಹೇಳಲು ಮುಂದಾಗಿದ್ದಾನೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಈ ವಿಷಯಗಳನ್ನ ಅರಿತುಕೊಂಡ್ರೆ ಸಂಬಂಧ ಮುರಿಯೋದಿಲ್ಲ
ಪತ್ನಿಯಿಂದ ಗೊತ್ತಾಯ್ತು ಕಟು ಸತ್ಯ : ಪತ್ನಿಗೆ ಡಿಎನ್ ಎ ವರದಿ ಬಗ್ಗೆ ಸರಿಯಾಗಿ ಮಾಹಿತಿ ನೀಡುವ ಬದಲು ಪತಿ ಕೂಡ ಸುಳ್ಳು ಹೇಳಿದ್ದಾನೆ. ಡಿಎನ್ ಎ ವರದಿಯಲ್ಲಿ ಮಗು ನನ್ನದಲ್ಲ ಎಂಬ ಮಾಹಿತಿ ಸಿಕ್ಕಿದೆ ಎಂದಿದ್ದಾನೆ. ಆಗ ಪತ್ನಿ, ತನ್ನ ಅಕ್ರಮ ಸಂಬಂಧ (Relationship) ದ ಬಗ್ಗೆ ಹೇಳಿದ್ದಾಳೆ. ಪತಿಯ ಹಳೆ ಸ್ನೇಹಿತನ ಜೊತೆ ಸಂಬಂಧದಲ್ಲಿದ್ದೆ. ಹಾಗಾಗಿ ಮಗು ಆತನದಿರಬೇಕು ಎಂದಿದ್ದಾಳೆ.
ವಾಸ್ತವವಾಗಿ, ದಂಪತಿ ಕೆಲ ದಿನ ಬೇರೆ ಇದ್ದರು. ಈ ವೇಳೆ ಪತಿ ಹುಡುಗಿಯರ ಜೊತೆ ಫ್ಲರ್ಟ್ ಮಾಡ್ತಿದ್ದಾನೆ ಎಂಬುದನ್ನು ತಿಳಿದ ಪತ್ನಿ, ಕೋಪಗೊಂಡು ಆತನ ಸ್ನೇಹಿತನೊಬ್ಬನ ಜೊತೆ ಸಂಬಂಧ ಬೆಳೆಸಿದ್ದಳು. ಕೆಲ ದಿನಗಳ ಮತ್ತೆ ಎಲ್ಲವೂ ಸರಿಯಾಗಿತ್ತು. ಆ ನಂತ್ರ ಪತ್ನಿ ಗರ್ಭಿಣಿ ಎಂಬುದು ತಿಳಿದಿತ್ತು. ತನಗೆ ಜನಿಸಿದ ಮಗು, ಪತಿಯ ಸ್ನೇಹಿತನದ್ದು ಎಂದೇ ಪತ್ನಿ ಭಾವಿಸಿದ್ದಳು. ಈ ಎಲ್ಲ ವಿಷ್ಯವನ್ನು ಆಕೆ ಪತಿ ಮುಂದೆ ಹೇಳಿದ್ದಾಳೆ.
ಈ ಸಂಗತಿ ತಿಳಿದ ನಂತ್ರ ಪತಿ ಡಿಎನ್ ಎ ಸತ್ಯ ಹೇಳಿದ್ದಾನೆ. ಇದನ್ನು ಕೇಳಿದ ಪತ್ನಿ, ಪತಿಯನ್ನು ಅಪ್ಪಿಕೊಂಡು ಅತ್ತಿದ್ದಲ್ಲದೆ ಕ್ಷಮೆ ಕೇಳಿದ್ದಾಳೆ. ಆದ್ರೆ ಪತ್ನಿ ತಪ್ಪು ಮಾಡಿದ್ದಾಳೆ ಎನ್ನುವ ಪತಿ, ಆಕೆಯನ್ನು ಕ್ಷಮಿಸಲು ಸಿದ್ಧವಿಲ್ಲ. ಇಲ್ಲಿಗೆ ಎಲ್ಲ ಮುಗಿದಿದೆ. ಪತ್ನಿ ನನಗೆ ಮೋಸ ಮಾಡಿದ್ದಾಳೆ ಎನ್ನುವ ಪತಿ, ವಿಚ್ಛೇದನದ (Divorce) ನಿರ್ಧಾರ ತೆಗೆದುಕೊಂಡಿದ್ದಾನೆ.