Rapid Rashmi: 'ಅಮ್ಮಾ ಸುಮ್ನೆ ತಲೆ ಕೆಡಿಸ್ಬೇಡಾ..' ಪಾಡ್‌ಕಾಸ್ಟ್‌ಗೆ ಬಂದ ಸಿಂಗರ್ ಶ್ರೀನಿಧಿ ಬಳಿಯೇ ತಮ್ಮ ಕಣ್ಣೀರ ಸ್ಟೋರಿ ಹಂಚಿಕೊಂಡ ರಾಪಿಡ್ ರಶ್ಮಿ!

Published : Oct 24, 2026, 02:02 PM IST
Rapid Rashmi Shreenidhi Shastry

ಸಾರಾಂಶ

ಗಾಯಕ ಶ್ರೀನಿಧಿ ಶಾಸ್ತ್ರಿ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ ಜನಪ್ರಿಯ ನಿರೂಪಕಿ ರಾಪಿಡ್ ರಶ್ಮಿ ನೋವಿನ ಘಟನೆಯನ್ನು ಹಂಚಿಕೊಂಡಿದ್ದಾರೆ. ಆವತ್ತು ನಾನು ಲೇಟ್ ಆಗಿ ಮನೆಗೆ ಬಂದಾಗ, ಬಾಗಿಲು ತೆಗೆದ್ರು.. ಊಟ ಮಾಡ್ತಿಯೇನೇ..? ಅಂದ್ರು.. ಅದಕ್ಕೆ ನಾನು 'ಅಮ್ಮಾ ಸುಮ್ನೆ ತಲೆ ಕೆಡಿಸ್ಬೇಡಾ..' ಅಂತ ಹೇಳಿ ಮನೆಯ ಮೇಲ್ಮಹಡಿಗೆ ಹೋಗ್ತಿದ್ದೆ..

ಸಿಂಗರ್ ಶ್ರೀನಿಧಿ ಶಾಸ್ತ್ರಿ ಜೊತೆಗಿನ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಲೈಪ್‌ನ ಕಣ್ಣೀರು ತರಿಸುವ, ಮರೆಯಲಾಗದ ಘಟನೆ ಹಂಚಿಕೊಂಡ ರಾಪಿಡ್ ರಶ್ಮಿ!

ರಾಪಿಡ್ ರಶ್ಮಿ (Rapid Rashmi) ಯಾರಿಗೆ ಗೊತ್ತಿಲ್ಲ? ಚಟಪಟನೆ ಮಾತನ್ನಾಡುವ, ಬೆಂಕಿ-ಬಿರುಗಾಳಿಗಳನ್ನು ಮಾತಿನಲ್ಲಿ ಒಟ್ಟಿಗೇ ತರುವ ಕೆಪ್ಯಾಸಿಟಿ ಇರುವ ಈ ಆಂಕರ್ ಕನ್ನಡಿಗರೆಲ್ಲರಿಗೂ ಚಿರಪರಿಚಿತ. ದಶಕಗಳಿಗಳ ಹಿಂದೆ ರೇಡಿಯೋ ಮೂಲಕ ಮಾತು ಆರಂಭಿಸಿದ ರಾಪಿಡ್ ರಶ್ಮಿ ಇಂದು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಮಿಲಿಯನ್‌ಗಟ್ಟಲೇ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇಂದು ರಾಪಿಡ್ ರಶ್ಮಿ ಸಂದರ್ಶನಗಳನ್ನು ಹುಡುಕಿ ಹುಡುಕಿ ನೋಡುವ ಒಂದು ಅಭಿಮಾನಿ ಬಳಗವೇ ಇದೆ. ಇಂಥ ನಿರೂಪಕಿಯ ಲೈಫ್‌ನಲ್ಲಿ ನಡೆದ ಅದೊಂದು ಘಟನೆ ಎಂಥವರ ಕಣ್ಣಲ್ಲಿ ಕೂಡ ನೀರು ತರಿಸುವಂಥದ್ದು.

ಸ್ವತಃ ರಾಪಿಡ್ ರಶ್ಮಿಯವರು, ಸಿಂಗರ್ ಶ್ರೀನಿಧಿ ಶಾಸ್ತ್ರಿ (Shreenidhi Shastry) ಅವರ ಜೊತೆ ಪಾಡ್‌ಕಾಸ್ಟ್‌ನಲ್ಲಿ ಮಾತನ್ನಾಡುತ್ತಿರುವ ವೇಳೆ ತಮ್ಮದೇ ಜೀವನದಲ್ಲಿ ನಡೆದ ಈ ಕರುಳುಹಿಂಡುವ ಘಟನೆಯನ್ನು ಹೇಳಿಕೊಂಡಿದ್ದಾರೆ. ಕಣ್ಣೀರು ತರಿಸುವ ಈ ಘಟನೆ ಅವರದೇ ಮಾತುಗಳಲ್ಲಿ ಹೀಗಿದೆ ನೋಡಿ..

ಆವತ್ತು ನಾನು ಲೇಟ್ ಆಗಿ ಮನೆಗೆ ಬಂದಾಗ, ಬಾಗಿಲು ತೆಗೆದ್ರು.. ಊಟ ಮಾಡ್ತಿಯೇನೇ..? ಅಂದ್ರು.. ಅದಕ್ಕೆ ನಾನು 'ಅಮ್ಮಾ ಸುಮ್ನೆ ತಲೆ ಕೆಡಿಸ್ಬೇಡಾ..' ಅಂತ ಹೇಳಿ ಮನೆಯ ಮೇಲ್ಮಹಡಿಗೆ ಹೋಗ್ತಿದ್ದೆ.. ಆಗ ಅಮ್ಮ 'ಚಪಾತಿ, ಬೆಂಡೆ ಕಾಯಿ ಪಲ್ಯ ಇದೆ, ತಿಂತೀಯಾ?' ಅಂತ ಕೇಳಿದ್ರು.. ನಾನು ಅದಕ್ಕೆ 'ಬೇಡ ಅಂತ ಹೇಳಿದ್ರೆ ನಂಗೆ ಗೊತ್ತಾಗಲ್ವಾ?' ಅಂತ ಹೇಳಿ ಮೇಲೆ ಹೋದೆ.. ಅದೇ ನಾನು ಅಮ್ಮನ ಜೊತೆ ಆಡಿರೋ ಲಾಸ್ಟ್ ಮಾತುಕತೆ..

ಮೇಲೆ ಹೋದೆ.. ಮಲಗಿಕೊಂಡೆ.. ಮರುದಿನ ಬೆಳಿಗ್ಗೆ ಸುಮಾರು 8.30ಕ್ಕೆ ನನ್ನ ಪತಿ ಗಮನಿಸಿದಾರೆ- ಸಾಮಾನ್ಯವಾಗಿ ನಮ್ಮಮ್ಮ ಬೆಳಿಗ್ಗೆ 6.30ಕ್ಕೆಲ್ಲಾ ಎದ್ದು, ಕಾಫಿ ಬೆರೆಸೋದಕ್ಕೆ ಅದೂ ಇದೂ ಮಾಡೋದಕ್ಕೆ ಎದ್ದಿರ್ತಾರೆ.. ಆದ್ರೆ ಆವತ್ತು ಎದ್ದಿರಲಿಲ್ಲ.. ಆದ್ರೆ, ಅವ್ರು ಅಮ್ಮನ ಜೊತೆ ಅಷ್ಟೇನೂ ಕ್ಲೋಸ್ ಆಗಿ ಇರ್ಲಿಲ್ಲ.. ಅದಕ್ಕೆ ಅವ್ರು ಅಮ್ಮ ಎಲ್ಲೂ ಕಾಣಿಸ್ತಿಲ್ಲ ಹೊರಗೆ ಅಂದ್ಕೊಂಡ್ರೂ ಸುಮ್ನೆ ಆಗ್ಬಿಟ್ಟಿದಾರೆ.. 8.33 ದಾಟಿದ್ರೂ ಕಾಣಿಸಿಲ್ವಲ್ಲಾ ಅಂದಾಗ, ನನ್ ಹತ್ರ ಬಂದು ಎಬ್ಬಿಸಿ ಹೇಳಿದಾರೆ..

ನಾವಿಬ್ರೂ ಹೋಗಿ ನೋಡ್ತೀವಿ.. ಅಮ್ಮ ಹಾಗೇ ರೂಮಿನಲ್ಲಿ ಮಲಗಿದ್ರು.. ನಾನು ಅದನ್ನ ನೋಡಿದಾಗ್ಲೇ ನಂಗೆ ಶಾಕ್.. ಯಾಕಂದ್ರೆ, ನನ್ ಅಮ್ಮ ಹಾಗೆ ಮಲಗೋದು ಅಸಾಧ್ಯ.. ಹತ್ರ ಹೋಗಿ ನೋಡ್ತೀವಿ, ಅಮ್ಮ ಅದಾಗಲೇ ಪ್ರಾಣ ಬಿಟ್ಟಿದ್ರು..

ಜೀವನಕ್ಕೆ ಯಾವುದೇ ಗ್ಯಾರಂಟಿ ಇಲ್ಲ

ನಾನು ಯಾಕೆ ಇದನ್ನ ಹೇಳ್ದೆ ಅಂದ್ರೆ.. ಲೈಫ್ ಯಾವಾಗ್ಲೂ ಅನ್‌ಸರ್ಟ್ನ್.. ಜೀವನಕ್ಕೆ ಯಾವುದೇ ಗ್ಯಾರಂಟಿ ಇಲ್ಲ.. ಅಮ್ಮಂದಿರ ಲವ್ ಇದ್ಯಲ್ಲಾ, ಅದು ತುಂಬಾನೇ ತ್ಯಾಗಪೂರ್ಣ ಹಾಗೂ ಸ್ವಾರ್ಥರಹಿತವಾದ (Sacrifice and Unconditional Love). ಬೇರೆಯವ್ರಿಗೆ ಧಾರೆ ಎರೆಯೋದು ಅವ್ರ ಲೈಫ್.. 'ಎಂದಿದ್ದಾರೆ ರಾಪಿಡ್ ರಶ್ಮಿ.

ಉದಯೋನ್ಮುಖ ಗಾಯಕ ಶ್ರೀನಿಧಿ ಶಾಸ್ರಿ ಜೊತೆಗಿನ ತಮ್ಮ ಸಂದರ್ಶನದಲ್ಲಿ, ಆಂಕರ್ ರಾಪಿಡ್ ರಶ್ಮಿಯವರು ತಮ್ಮ ಜೀವನದ ಮರೆಯಲಾಗದ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ಎಂಥವರ ಕಣ್ಣಲ್ಲೂ ನೀರು ಹರಿಸುವ ಈ ಘಟನೆ ತಿಳಿದು, ಹಲವರು ಅವರ ಯೂಟ್ಯೂಬ್ ಚಾನೆಲ್‌ ಲಿಂಕ್‌ಗೆ ವಿಭಿನ್ನವಾದ ಮನಕಲಕುವ ಕಾಮೆಂಟ್ ಮಾಡಿದ್ದಾರೆ. ಅವುಗಳನ್ನು ನೋಡುತ್ತಿದ್ದರೆ ಕಣ್ಣೀರು ಕೆನ್ನೆಯನ್ನು ತೋಯಿಸಿಬಿಡುತ್ತದೆ.

ಒಂದು ಮಾತಂತೂ ಸತ್ಯ.. ಪ್ರತಿಯೊಂದು ಸಂಬಂಧವೂ ಮುಖ್ಯವೇ.. ಆದರೆ, ಅಮ್ಮ-ಮಕ್ಕಳ ಬಾಂಧವ್ಯದ ಆ ಸಂಗತಿ ಬೇರೆಯದೇ ಲೋಕ. 'ಕಳೆದುಕೊಂಡಾಗಲೇ ಆ ವ್ಯಕ್ತಿಯ ಬೆಲೆ ತಿಳಿಯೋದು' ಎಂಬ ಮಾತಿನಂತೆ, ಅಮ್ಮಂದಿರ ಆ ತ್ಯಾಗಮಯಿ, ಕರುಣಾಮಯಿ ವ್ಯಕ್ತಿತ್ವಕ್ಕೆ ಸಾಟಿ ಜಗತ್ತಿನಲ್ಲಿ ಯಾರಿದ್ದಾರೆ? ರಾಪಿಡ್ ರಶ್ಮಿ ಲೈಫಲ್ಲಿ ನಡೆದ ಈ ನೋವಿನ ಘಟನೆ, ಆ ಬಳಿಕ ಮನಃಪರಿವರ್ತನೆಗೊಂಡು ಪಕ್ವವಾದ ಅವರ ನೋವಿನ ನುಡಿ ಕೇಳಿದ ಯಾರೇ ಆದರೂ ಜೀವನದಲ್ಲಿ ಬದಲಾಗುವುದು ಖಂಡಿತ ಎನ್ನಬಹುದು.

ಗಾಯಕ ಶ್ರೀನಿಧಿ ಶಾಸ್ತ್ರಿ ಜೊತೆಗಿನ ರಾಪಿಡ್ ರಶ್ಮಿ ಪಾಡ್‌ಕಾಸ್ಟ್‌ ನೋಡಲು ಈ ಲಿಂಕ್ ಕ್ಲಿಕ್ ಮಾಡಿ:

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದೆ ಪ್ರಿಯಾಂಕಾ ಜಾರಕಿಹೊಳಿ-ಗೌತಮ್ ನಿಶ್ಚಿತಾರ್ಥ: ಇಬ್ಬರಲ್ಲಿ ಅತಿಹೆಚ್ಚು ಶಿಕ್ಷಣ ಪಡೆದವರಾರು? ಆಸ್ತಿ ಎಷ್ಟಿದೆ?
ರೆಸ್ಟೋರೆಂಟ್​ನಲ್ಲಿ ಮೊದಲ ಭೇಟಿ: Love At First Sight; ರಾಜೀವ್​ ಗಾಂಧಿ-ಸೋನಿಯಾ ಲವ್​ ಸ್ಟೋರಿ ಇದು