
ಕಳೆದ ಎರಡ್ಮೂರು ದಿನಗಳಿಂದ ಕಾರ್ಪೋರೇಟ್ ಮಹಿಳಾ ಉದ್ಯೋಗಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಈ ಸಂಬಂದ ಧೀರ್ಘವಾದ ಚರ್ಚೆಗಳು ಶುರುವಾಗಿವೆ. ಕೆಲವರು ಯುವತಿಗೆ ನಿಮಗ್ಯಾಕೆ ಬೇರೆಯವರ ಖಾಸಗಿ ವಿಷಯ. ಕೆಲಸಕ್ಕೆ ಮಾಡೋಕೆ ಬಂದ್ದಿದ್ದೀಯಾ, ನಿನ್ನ ವೃತ್ತಿಜೀವನದ ಮೇಲೆ ಗಮನವಿರಲಿ ಎಂದು ಸಲಹೆ ನೀಡಿದ್ದಾರೆ. ಯುವತಿಯ ಈ 31 ಸೆಕೆಂಡ್ ವಿಡಿಯೋ ಕಾರ್ಪೋರೇಟ್ ವಲಯದಲ್ಲಿ ಹಲ್-ಚಲ್ ಸೃಷ್ಟಿಸಿದ್ದು, ಆಕೆ ಯಾವ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾಳೆ ಎಂದು ನೆಟ್ಟಿಗರು ಹುಡುಕಾಟ ನಡೆಸುತ್ತಿದ್ದಾರೆ. ಒಂದು ವೇಳೆ ಯುವತಿಯ ಸಹೋದ್ಯೋಗಿಗಳು ಈ ವಿಡಿಯೋ ನೋಡಿದ್ದರೆ ಆ ಕೆಲಸ ನೂರಕ್ಕೆ ನೂರರಷ್ಟು ಹೋಗಿರುತ್ತೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಈ ವೈರಲ್ ವಿಡಿಯೋ ಅಂಕಿತ್ ಪಾಂಡೆ (Ankit Pandey/ @iamankitpande) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈವರೆಗೆ 3 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಹಾಗೆಯೇ 500ಕ್ಕೂ ಅಧಿಕ ಬಾರಿ ರೀಟ್ವೀಟ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ವಿವಾಹಿತ ಪುರುಷರು ಕೂಡ ಅಕ್ರಮ ಸಂಬಂಧ ಹೊಂದಿರುತ್ತಾರೆ. ಹೆಂಡತಿ ಇದ್ರೂ ಅವರು ಬೇರೆ ಬೇರೆ ಮಹಿಳೆಯರೊಂದಿಗೆ ಮಲಗುತ್ತಾರೆ. ನೀವು ಅವರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ನೆಟ್ಟಿಗರೊಬ್ಬರು ಯುವತಿಯನ್ನು ಪ್ರಶ್ನೆ ಮಾಡಿದ್ದಾರೆ.
ಹೆಲೋ ಗೆಳೆಯರೇ, ನಾನು ನಿಮ್ಮೊಂದಿಗೆ ವಿಷಯವೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನಗೆ 21 ವರ್ಷ ವಯಸ್ಸು, ಇಲ್ಲಿ ನಾನೊಬ್ಬಳೇ ಸಿಂಗಲ್. ಆದ್ರೆ ಇಲ್ಲಿರೋರು ಅಕ್ರಮ ಸಂಬಂಧ ಹೊಂದಿದ್ದಾರೆ. ಆದ್ರೆ ನನ್ನೊಂದಿಗೆ ಇರೋರಿಗೆ ಮದುವೆಯಾಗಿ ಒಳ್ಳೆಯ ಪತಿ ಇದ್ದಾರೆ. ಆದ್ರೆ ಅವರ ಅಫೇರ್ ನಡೆಯುತ್ತಿದೆ. ನನಗೆ ಒಬ್ಬ ಒಳ್ಳೆಯ ಹುಡುಗ ಸಿಗ್ತಿಲ್ಲ. ಇದನ್ನೆಲ್ಲಾ ನೋಡಿದ್ಮೇಲೆ ಹೇಗೆ ಸಾಧ್ಯ ಎಂದು ಹೇಳಿ ಯುವತಿ ವಿಡಿಯೋ ಮಾಡಿದ್ದಾಳೆ. ಆದ್ರೆ ಈ ಯುವತಿ ಯಾರು? ಈಕೆ ಎಲ್ಲಿ ಕೆಲಸ ಮಾಡ್ತಿದ್ದಾಳೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಈ ವಿಡಿಯೋವನ್ನು ಹಂಚಿಕೊಂಡಿರುವ ಅಂಕಿತ್ ಪಾಂಡೆ ಸಹ ಎಕ್ಸ್ ಖಾತೆಯಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ಕಾರ್ಪೋರೇಟ್ ಕಚೇರಿಗಳಲ್ಲಿ ಸದ್ದಿಲ್ಲದೇ ವಿವಾಹೇತರ ಸಂಬಂಧಗಳ ಸಂಪರ್ಕದ ವಲಯಗಳಾಗಿ ಬದಲಾಗುತ್ತಿವೆ. ಮುಂಬೈನಲ್ಲಿರುವ ನನ್ನ ಸ್ನೇಹಿತ ಆತನ ಆಫಿಸ್‌ನ ಹಲವು ವಿವಾಹಿತ ಮಹಿಳೆಯರು ತಮ್ಮ ಸಹೋದ್ಯೋಗಿಗಳೊಂದಿಗೆ ಹಾಸಿಗೆ ಹಂಚಿಕೊಳ್ಳುತ್ತಾರೆ. ಬಹಿರಂಗವಾಗಿ ಚೆಲ್ಲಾಟ, ಆಫಿಸ್ ಟೂರ್‌ಗಳನ್ನು ಖಾಸಗಿ ರಜಾದಿನಗಳಂತೆ ಎಂಜಾಯ್ ಮಾಡ್ತಾರೆ ಎಂದು ಹೇಳಿಕೊಂಡಿದ್ದಾನೆ. ಅವನನ್ನು ಸಹ ಒಬ್ಬರು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಆತ ಒಪ್ಪಿಕೊಂಡಿಲ್ಲ ಎಂದು ಅಂಕಿತ್ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಇಂದು ಉದ್ಯೋಗಿಗಳು ಪರಸ್ಪರ ಕಾಫಿ ಕಪ್ ಹಿಡಿದುಕೊಂಡು ಸ್ಪರ್ಶಿಸುತ್ತಾ ತಿರುಗಾಡುತ್ತಿರುತ್ತಾರೆ. ಸಾರ್ವಜನಿಕವಾಗಿ ಚೆಲ್ಲಾಟವಾಡುತ್ತಾರೆ. ಆಫಿಸ್ ಕಾರ್ನರ್‌ಗಳಲ್ಲಿ ಮುದ್ದಾಡುತ್ತಾರೆ ಎಂದು ಅಂಕಿತ್ ಪಾಂಡೆ ಆರೋಪಿಸುತ್ತಾರೆ. ಈ ಎಲ್ಲದರ ನಡುವೆ ಮನೆಯಲ್ಲಿ ಗಂಡಂದಿರು, ಪತ್ನಿ ಓವರ್ ಟೈಂ ಕೆಲಸ ಮಾಡ್ತಿದ್ದಾಳೆ. ಆಫಿಸ್ ಕೆಲಸಕ್ಕಾಗಿ ಪ್ರವಾಸ ಮಾಡ್ತಿದ್ದು, ವೃತ್ತಿಜೀವನದ ಮೇಲೆ ಕೇಂದ್ರಿಕರಿಸಿದ್ದಾಳೆ ಎಂದು ಭಾವಿಸುತ್ತಾರೆ.
ಮುಂದುವರಿದು, ಪ್ರತಿಯೊಂದು ಕಾರ್ಪೋರೇಟ್ ಕಂಪನಿ ಮತ್ತು ಕೆಲಸ ಮಾಡುವ ಎಲ್ಲಾ ಮಹಿಳೆಯರು ಈ ರೀತಿಯಾಗಿರುತ್ತಾರೆ ಎಂದು ನಾನು ಹೇಳುತ್ತಿಲ್ಲ ಎಂದು ಅಂಕಿತ್ ಹೇಳುತ್ತಾರೆ. ಆದರೆ ಇಂದಿನ ಆಧುನಿಕ ಕಾರ್ಪೊರೇಟ್ ಸಂಸ್ಕೃತಿಯನ್ನು ನಟಿಸುವುದು ಅಪರೂಪವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.