ಗರ್ಲ್​ಫ್ರೆಂಡ್​ ಪರೀಕ್ಷೆಯಲ್ಲಿ ಫೇಲಾದಳೆಂದು ಶಾಲೆಗೇ ಬೆಂಕಿ ಹಚ್ಚಿದ ಯುವಕ! ಮುಂದೇನಾಯ್ತು ನೋಡಿ

Published : Oct 27, 2026, 12:01 PM IST
Fire to School

ಸಾರಾಂಶ

ಈಜಿಪ್ಟ್‌ನಲ್ಲಿ ಯುವತಿಯೊಬ್ಬಳು ಪರೀಕ್ಷೆಯಲ್ಲಿ ಫೇಲಾದ ಕಾರಣ ಆಕೆಯ ಪ್ರಿಯಕರ ಕೋಪಗೊಂಡು ಶಾಲೆಗೇ ಬೆಂಕಿ ಹಚ್ಚಿದ್ದಾನೆ. ಮದುವೆ ಒಂದು ವರ್ಷ ಮುಂದಕ್ಕೆ ಹೋಗುತ್ತದೆ ಎಂಬ ಹತಾಶೆಯಿಂದ ಈ ಕೃತ್ಯ ಎಸಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಕೈರೋ (ಈಜಿಪ್ಟ್​): ಅಭ್ಯಾಸದ ಕಡೆಗೆ ಗಮನ ಹರಿಸೋದು ಬಿಟ್ಟು ಪ್ರೀತಿ-ಪ್ರೇಮ ಮಾಡಿಕೊಂಡಿದ್ದ ಯುವತಿಯೊಬ್ಬಳು, ಪರೀಕ್ಷೆಯಲ್ಲಿ ಫೇಲಾಗಿಬಿಟ್ಟಳು. ಆದರೆ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಆಕೆಯ ಪ್ರಿಯಕರ ಸಿಕ್ಕಾಪಟ್ಟೆ ಕೋಪಗೊಂಡ. ಆದರೆ ಕೋಪ ಮಾಡಿಕೊಂಡದ್ದು ಪ್ರೇಯಸಿ ಮೇಲೆ ಅಲ್ಲ, ಬದಲಿಗೆ ಆಕೆ ಕಲಿಯುತ್ತಿದ್ದ ಶಾಲೆಯ ಮೇಲೆ. ಇದರಿಂದ ಕೆಂಡಾಮಂಡಲನಾದ 21 ವರ್ಷದ ಯುವಕ, ಶಾಲೆಗೇ ಬೆಂಕಿ ಹಚ್ಚಿದ್ದಾನೆ! ಈ ಮೂಲಕ ತನ್ನ ಪ್ರೇಯಸಿಯನ್ನು ಫೇಲ್​ ಮಾಡಿದ್ದಕ್ಕಾಗಿ ಶಾಲೆಯ ಶಿಕ್ಷಕರ ಮೇಲೆ ಸೇಡು ತೀರಿಸಿಕೊಂಡಿದ್ದಾನೆ.

ಈ ಘಟನೆ ನಡೆದಿರುವುದು ಈಜಿಪ್ಟ್​ನ ಕೈರೋದಲ್ಲಿ. ಸದ್ಯ 21 ವರ್ಷದ ಯುವಕನನ್ನು ಅರೆಸ್ಟ್​ ಮಾಡಲಾಗಿದೆ. ಘರ್ಬಿಯಾ ಗವರ್ನರೇಟ್ ಪೊಲೀಸರ ಪ್ರಕಾರ, ಆ ವ್ಯಕ್ತಿಯನ್ನು ನಾಲ್ಕು ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ ಆದರೆ ತನಿಖೆ ಇನ್ನೂ ಬಾಕಿ ಇದೆ. ಈಜಿಪ್ಟ್‌ನ ರಾಜಧಾನಿ ಕೈರೋದ ಉತ್ತರದಲ್ಲಿರುವ ಮೆನೌಫಿಯಾ ಪ್ರಾಂತ್ಯದಲ್ಲಿ ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಈಜಿಪ್ಟ್‌ನ ಪ್ರಾಸಿಕ್ಯೂಟರ್ ಜನರಲ್ ಹೇಳಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಯುವಕನ ಅರೆಸ್ಟ್​

ಕೆಲ ವರ್ಷಗಳ ಹಿಂದೆ ನಡೆದಿರುವ ಈ ಘಟನೆಯ ವಿಚಾರಣೆ ನಡೆದು ಇದೀಗ ಯುವಕನನ್ನು ಅರೆಸ್ಟ್​ ಮಾಡಲಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಮತ್ತು ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ತ್ವರಿತವಾಗಿ ನಂದಿಸುವಲ್ಲಿ ಯಶಸ್ವಿಯಾದರು, ಆದರೆ ಶಾಲೆಯ ಪ್ರಾಂಶುಪಾಲರ ಕಚೇರಿ ಮತ್ತು ಕೇಂದ್ರ ಆಡಳಿತ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಪ್ರಾಸಿಕ್ಯೂಷನ್ ಹೇಳಿಕೆಯ ಪ್ರಕಾರ, ಕೆಲವು ವಿದ್ಯಾರ್ಥಿಗಳ ದಾಖಲೆಗಳು ಸಹ ನಾಶವಾಗಿವೆ. ಶಾಲೆಯ ನಿಯಂತ್ರಣ ಕೊಠಡಿಗೆ ಬೆಂಕಿ ಹಚ್ಚಿದ ನಂತರ, ಆ ವ್ಯಕ್ತಿ ಅಲ್ಲಿಂದ ಓಡಿಹೋಗಿ ತನ್ನ ಊರಿನ ಹಳ್ಳಿಯ ಸುತ್ತಲೂ ಎಲ್ಲೋ ಅಡಗಿಕೊಂಡನು. ಆದಾಗ್ಯೂ, ಬೆಂಕಿಯನ್ನು ನೋಡಿದ ಕೆಲವು ಜನರು ಅವನ ಅಡಗುತಾಣವನ್ನು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರು. ಅವರು ಅವನ ನೋಟದ ನಿಖರವಾದ ವಿವರಣೆಯನ್ನು ಸಹ ನೀಡಿದರು.

ಯುವಕನ ಕೋಪಕ್ಕೆ ಕಾರಣವೇನು?

ಅಸಲಿಗೆ ಆಗಿದ್ದೇನೆಂದರೆ, ಈ ಯುವಕ ಹಾಗೂ ಹೀಗೂ ಮಾಡಿ, ಈ ಮದುವೆಗೆ ತನ್ನ ಅಪ್ಪ-ಅಮ್ಮನನ್ನು ಒಲಿಸಿದ್ದ. ಹುಡುಗಿ ಕೂಡ ತನ್ನ ಶಿಕ್ಷಣ ಮುಗಿದ ಮೇಲೆ ಮದುವೆಯಾಗೋಣ ಎಂದಿದ್ದಳು. ಆದರೆ ಫೇಲ್​ ಆಗಿಬಿಟ್ಟಳು. ಒಂದೆಡೆ, ಹುಡುಗಿ ಜಾಣೆಯಲ್ಲ ಎನ್ನೋದು ತನ್ನ ಪಾಲಕರಿಗೆ ತಿಳಿಯುತ್ತದೆ ಎನ್ನುವ ಕೋಪ ಒಂದೆಡೆಯಾದರೆ, ಅವಳು ಫೇಲ್​ ಆದ ಕಾರಣ, ಆಕೆ ಮರುವರ್ಷ ಪರೀಕ್ಷೆ ಬರೆಯಬೇಕು. ಇದರಿಂದ ಮದುವೆ ಒಂದು ವರ್ಷ ಮುಂದಕ್ಕೆ ಹೋಗುತ್ತದೆ ಎನ್ನುವ ಒತ್ತಡದಲ್ಲಿ ಯುವಕ ಇದ್ದ ಎನ್ನುವುದು ತನಿಖೆ ವೇಳೆ ತಿಳಿದುಬಂದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಂದನ್‌ ಶೆಟ್ಟಿ ಮೈಮಾಟ ಸಾಂಗ್‌ಗೆ ಟಾಂಗ್‌ ಕೊಟ್ರಾ ನಿವೇದಿತಾ ಗೌಡ, ಹಳೆ ದೆವ್ವ ನನ್ನ ಬಿಡ್ತಿಲ್ಲ ಅಂದಿದ್ದು ಯಾರಿಗೆ?
Spandana Somanna ಮದುವೆ ಯಾವಾಗ? ವಿವಾಹದ ನಂತ್ರ ಬಣ್ಣದ ಲೋಕಕ್ಕೆ ಗುಡ್​ಬೈ ಹೇಳ್ತಾರಾ? ಏನಂದ್ರು ನಟಿ