Pregnant without Intercourse: ಲೈಂಗಿಕ ಕ್ರಿಯೆ ನಡೆಸದಿದ್ರೂ ಗರ್ಭಿಣಿಯಾದ ಯುವತಿ! ವೈದ್ಯಲೋಕಕ್ಕೆ ಸವಾಲು: ಆಗಿದ್ದೇನು ನೋಡಿ

Published : Jun 11, 2025, 05:36 PM IST
Pregnant without ever having  intercourse

ಸಾರಾಂಶ

ಗರ್ಭ ಧರಿಸಲು ಲೈಂಗಿಕ ಕ್ರಿಯೆ ನಡೆಯಲೇಬೇಕು ಎನ್ನುವುದು ಸಾಮಾನ್ಯ ಮಾತಾದರೂ, ಇಲ್ಲೊಬ್ಬ ಯುವತಿ ಕೇವಲ ಚುಂಬನದಿಂದ ಗರ್ಭ ಧರಿಸಿದ್ದಾಳೆ. ಅಷ್ಟಕ್ಕೂ ಹೀಗೆ ಆಗಿದ್ದೇಕೆ ನೋಡಿ... 

ವೈದ್ಯಕೀಯ ಜಗತ್ತಿನಲ್ಲಿ ಅನೇಕ ವಿಚಿತ್ರ ಪ್ರಕರಣಗಳು ಬರುತ್ತಲೇ ಇರುತ್ತವೆ. ಕೆಲವೊಮ್ಮೆ ಇದು ವೈದ್ಯಲೋಕಕ್ಕೇ ಸವಾಲು ಎನಿಸುವ ರೀತಿಯಲ್ಲಿ ಇರುತ್ತದೆ. ಇಲ್ಲಿಯವರೆಗೆ ಗರ್ಭಧಾರಣೆಗೆ ಲೈಂಗಿಕತೆ ಅಗತ್ಯ ಎಂದೇ ಎಲ್ಲರೂ ತಿಳಿದುಕೊಂಡಿದ್ದರು. ಆದರೆ, ಮ್ಯಾಸಚೂಸೆಟ್ಸ್‌ನಲ್ಲಿ ವಾಸಿಸುವ ಮಹಿಳೆಯೊಬ್ಬಳು ಸೆ*ಕ್ಸ್​ ಮಾಡದೇ ಗರ್ಭವತಿಯಾಗಿದ್ದಾಳೆ! ಕನ್ಯೆಯಾಗಿದ್ದರೂ ಆಕೆ ಗರ್ಭ ಧರಿಸಿದ್ದಾಳೆ! ತಾನು ಕನ್ಯೆಯಾಗಿರುವಾಗಲೇ ಮೊದಲ ಮಗು ಜನಿಸಿತು ಎಂದೂ ಆಕೆ ಹೇಳಿದ್ದಾಳೆ. ಆಕೆಗೆ ಬಾಯ್​ ಫ್ರೆಂಡ್ ಇದ್ದರೂ, ಆತ ತನ್ನೊಂದಿಗೆ ಲೈಂಗಿಕತೆ ಹೊಂದಿರಲಿಲ್ಲ. ಆದರೂ ಗರ್ಭಿಣಿಯಾಗಿರುವುದಾಗಿ ಹೇಳಿದ್ದಾಳೆ.

ಈ ವಿಷಯವನ್ನು ಮೊದಲು ಯಾರೂ ನಂಬಿರಲಿಲ್ಲ. ಕೊನೆಗೆ ಇದು ವೈದ್ಯರ ಬಳಿಯೂ ಹೋಯಿತು. ಯುವತಿ ತನಗೆ ಹೀಗೆ ಆಗಿರುವುದಾಗಿ ಅಚ್ಚರಿಯಿಂದ ವೈದ್ಯರ ಬಳಿ ಹೋದಳು. ಈ ಸಂದರ್ಭದಲ್ಲಿ ಆಕೆಗೆ ಇನ್ನೂ 19 ವರ್ಷ ವಯಸ್ಸು. ಸಮಂತಾ ಲಿನ್ ಇಸ್ಬೆಲ್ ಎಂಬಾಕೆ ತನ್ನ ಗೆಳೆಯ ಅಲೆಕ್ಸ್ ತನ್ನೊಂದಿಗೆ ಲೈಂಗಿಕತೆ ಹೊಂದಿರಲಿಲ್ಲ. ಆದರೂ ಗರ್ಭಿಣಿಯಾಗಿರುವುದಾಗಿ ಹೇಳಿದಾಗ ವೈದ್ಯರು ಅಚ್ಚರಿ ಪಟ್ಟರು. ಕೊನೆಗೆ ವೈದ್ಯಕೀಯ ತಪಾಸಣೆ ಬಳಿಕ, ಆಕೆ ಹೇಳುತ್ತಿರುವುದು ನಿಜ ಎಂದು ತಿಳಿಯಿತು. ಕೊನೆಗೆ ಆಕೆಯ ಬಗ್ಗೆ ವಿಚಾರಿಸಿದಾಗ, ಅವಳು ಗರ್ಭಿಣಿಯಾಗಿದ್ದು ಹೇಗೆ ಎನ್ನುವ ಬಗ್ಗೆ ವೈದ್ಯರು ಲೆಕ್ಕಾಚಾರ ಹಾಕಿದ್ದಾರೆ.

ನಾನು ಮತ್ತು ನನ್ನ ಗೆಳೆಯ ಯಾವತ್ತಿಗೂ ಸೆ*ಕ್ಸ್​ ಮಾಡಿರಲಿಲ್ಲ. ಆದರೆ ಪರಸ್ಪರ ಚುಂಬಿಸುತ್ತಿದ್ದೆವು ಎಂದು ವೈದ್ಯರಿಗೆ ಆತ ತಿಳಿಸಿದ್ದಾಳೆ. ಪ್ರಕರಣದ ಸಂಪೂರ್ಣ ವಿವರಗಳನ್ನು ನೀಡುತ್ತಾ, ಆಕೆ, ಆ ರಾತ್ರಿ ನಾನು ಮತ್ತು ಆತ ಇಬ್ಬರೂ ಸಾಕಷ್ಟು ಚುಂಬಿಸಿದ್ದೆವು. ಆದರೆ ಸೆ*ಕ್ಸ್​ ಮಾಡಿರಲಿಲ್ಲ. ಆದರೆ ಕೊನೆಗೆ ನನ್ನ ಮಾಸಿಕ ಋತುಸ್ರಾವ 2-3 ತಿಂಗಳು ನಿಂತಾದ ನಾನು ಗರ್ಭಿಣಿ ಎನ್ನುವುದು ತಿಳಿಯಿತು. ಇದು ಹೇಗೆ ಆಯಿತು ಎಂದು ತಿಳಿಯದೇ ವೈದ್ಯರ ಬಳಿ ಹೋದೆ. ಆ ಸಂದರ್ಭದಲ್ಲಿ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಅದಕ್ಕೆ ವೈದ್ಯರು ಗರ್ಭಧಾರಣೆಯ ಪರೀಕ್ಷೆಯನ್ನು ಮಾಡುವಂತೆ ಹೇಳಿದರು. ಆದರೆ ನಾನು ಇದು ಸಾಧ್ಯವೇ ಇಲ್ಲ ಎಂದು ವೈದ್ಯರಿಗೆ ಹೇಳಿದರೂ ಅವರು ತಪಾಸಣೆ ಮಾಡಿದಾಗ ಗರ್ಭಿಣಿ ಎನ್ನುವುದು ತಿಳಿಯಿತು ಎಂದಿದ್ದಾಳೆ.

 

ಕೊನೆಯ ವೈದ್ಯರು ಇದು ಅಪರೂಪದ ಪ್ರಕರಣಗಳಲ್ಲಿ ಸಾಧ್ಯ ಎಂದು ಹೇಳಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆ ಯುಕೆ ಲೈಂಗಿಕ ಕ್ರಿಯೆ ನಡೆಸದೆಯೇ ಮಹಿಳೆ ಗರ್ಭಿಣಿಯಾಗಬಹುದು ಎಂದು ಹೇಳುತ್ತದೆ. ಲೈಂಗಿಕ ಕ್ರಿಯೆ ನಡೆಸದೆಯೇ ಪುರುಷನ ವೀರ್ಯವು ಮಹಿಳೆಯ ದೇಹಕ್ಕೆ ಹೋಗಿ ಅವಳ ಮೊಟ್ಟೆಯನ್ನು ಫಲವತ್ತಾಗಿಸಿದಾಗ ಇದು ಸಂಭವಿಸಬಹುದು ಎನ್ನುವುದು ವೈದ್ಯರ ಮಾತು. ಇದು ಬಹಳ ವಿರಳವಾಗಿ ಸಂಭವಿಸುತ್ತದೆ. ಆದರೆ ಪುರುಷನ ವೀರ್ಯವು ಮಹಿಳೆಯ ದೇಹವನ್ನು ಅವನ ಬೆರಳುಗಳ ಮೂಲಕ ಪ್ರವೇಶಿಸಿ ಅಲ್ಲಿಂದ ಅವಳ ಅಂಡಾಶಯಕ್ಕೆ ಹೋಗಿ ಮೊಟ್ಟೆಯೊಂದಿಗೆ ಬೆಸೆಯಿದರೆ, ಮಹಿಳೆ ಗರ್ಭಿಣಿಯಾಗುವ ಸಾಧ್ಯತೆ ಇದೆ. ಏಕೆಂದರೆ ಇವರಿಬ್ಬರೂ ಸೆ*ಕ್ಸ್​ ಮಾಡದಿದ್ದರೂ ಎಲ್ಲಾ ಕಡೆ ಚುಂಬಿಸುವ ಕಾರ್ಯದಲ್ಲಿ ತೊಡಗಿದ್ದರಿಂದ ಈ ರೀತಿ ಆಗಿರಬಹುದು ಎಂದಿದ್ದಾರೆ ವೈದ್ಯರು. ಅಂದಹಾಗೆ, ಸಮಂತಾ ಲಿನ್ ಇಸ್ಬೆಲ್​ಗೆ ಈಗ 28 ವರ್ಷ ವಯಸ್ಸು. ಆಕೆ ಇಬ್ಬರು ಮಕ್ಕಳ ಅಮ್ಮ. ಮೊದಲನೆಯದ್ದು ಲೈಂಗಿಕ ಕ್ರಿಯೆ ಇಲ್ಲದೇ ಹುಟ್ಟಿದ ಮಗುವಾಗಿದ್ದು, ಅದು ಕೂಡ ಆರೋಗ್ಯವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ