ವಿಶ್ವದಲ್ಲಿ ಚಿತ್ರ-ವಿಚಿತ್ರ ಜನರಿದ್ದಾರೆ. ತಮಗಿಷ್ಟ ಬಂದಂತೆ ವಾಸಿಸುವ ಸ್ವಾತಂತ್ರ್ಯ ಅವರಿಗಿದೆ. ಬಟ್ಟೆ ದ್ವೇಷಿಗಳ ಸಂಖ್ಯೆಯೂ ಸಾಕಷ್ಟಿದೆ. ಇಲ್ಲೊಂದು ತಾಯಿ – ಮಗಳು ಮನೆಯಲ್ಲಿ ಸದಾ ಬೆತ್ತಲಾಗಿರಲು ಇಷ್ಟಪಡ್ತಾರಂತೆ. ಅವರ್ಯಾರು ಎನ್ನುವ ಮಾಹಿತಿ ಇಲ್ಲಿದೆ.
ಕೊಲಂಬಿಯಾದ ತಾಯಿ ಮತ್ತು ಮಗಳ ಜೋಡಿ ನೀಡಿದ ಹೇಳಿಕೆ ಜನರನ್ನು ದಿಗ್ಭ್ರಮೆಗೊಳಿಸಿದೆ. ತಾಯಿ ಹಾಗೂ ಮಗಳು ಮನೆಯಲ್ಲಿ ಹೇಗಿರ್ತಾರೆ ಎಂಬುದನ್ನು ಮಾಧ್ಯಮದ ಮುಂದೆ ಹೇಳಿದ್ದಾರೆ. ಇದನ್ನು ಕೇಳಿದ ಜನರು ದಂಗಾಗಿದ್ದಾರೆ. ಭಾರತದಲ್ಲಿ ಮಕ್ಕಳ ಮುಂದೆ ತಾಯಂದಿರು ನಗ್ನತೆಯ ವಿಷ್ಯವನ್ನೇ ಮಾತನಾಡೋದಿಲ್ಲ. ಇನ್ನು ನಗ್ನವಾಗಿರೋದು ದೂರದ ಮಾತು. ಸಾರ್ವಜನಿಕ ಪ್ರದೇಶದಲ್ಲಿರಲಿ ಇಲ್ಲ ಮನೆಯಲ್ಲಿರಲಿ ಬಟ್ಟೆ ಧರಿಸುವುದು ಅನಿವಾರ್ಯ. ತಾಯಿ ಎಷ್ಟು ಆಪ್ತಳಾಗಿದ್ದರೂ ಮಕ್ಕಳ ಮುಂದೆ ಬೆತ್ತಲಾದ್ರೆ ಅದನ್ನು ನಾಚಿಕೆಗೇಡಿ ಕೆಲಸವೆಂದು ಪರಿಗಣಿಸಲಾಗುತ್ತದೆ. ಆದ್ರೆ ಕೊಲಂಬಿಯಾದ ಈ ತಾಯಿ ಮಗಳು ಮನೆಯಲ್ಲಿ ಯಾವಾಗ್ಲೂ ನಗ್ನವಾಗಿ ಇರ್ತಾರಂತೆ. ಯಸ್, ನಾವು ಹೇಳ್ತಿರೋದು ನೂರಕ್ಕೆ ನೂರು ಸತ್ಯ. ಇವ್ರು ಬರೀ ಬೆತ್ತಲಾಗಿ ಮಲಗೋದು ಮಾತ್ರವಲ್ಲ, ಒಟ್ಟಿಗೆ ಮನೆ ಕೆಲಸಗಳನ್ನು ಮಾಡ್ತಾರಂತೆ. ಆಗ ಕೂಡ ನಾವು ಬೆತ್ತಲಾಗಿರ್ತೇವೆ ಎಂದು ಅವರು ಮಾಧ್ಯಮದ ಮುಂದೆ ಹೇಳಿದ್ದಾರೆ.
ಪರಸ್ಪರ ಬೆತ್ತಲಾಗಿ ಜೀವನ ಸಾಗಿಸ್ತಾರೆ ತಾಯಿ – ಮಗಳು :
ಕೊಲಂಬಿಯಾ (Colombia) ದಲ್ಲಿ ಇದು ಸಾಮಾನ್ಯ : ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ತಾಯಿ – ಮಗಳು ಈ ಸಂಗತಿಯನ್ನು ಹೇಳಿದ್ದಾರೆ. ಮನೆ (home) ಯಲ್ಲಿ ಬೆತ್ತಲಾಗಿರುವ ಮಗಳ ವಯಸ್ಸು 27 ವರ್ಷ. ಆಕೆ ಹೆಸರು ಪೌಲ (Paula). ಆಕೆ ತಾಯಿಗೆ 46 ವರ್ಷ. ಹೆಸರು ಫ್ರಾನ್ಸಿಯಾ. ತಾಯಿ ಫ್ರಾನ್ಸಿಯಾ ಹಾಗೂ ಮಗಳು ಪೌಲಿ ಮನೆಯಲ್ಲಿ ನಗ್ನವಾಗಿ ಇರೋದನ್ನು ಇಷ್ಟಪಡ್ತಾರಂತೆ. ಆದರ್ಶ ಜಗತ್ತಿನಲ್ಲಿ ನಾನು ನನ್ನ ತಾಯಿಯೊಂದಿಗೆ ದಿನದ ಎಲ್ಲಾ ಸಮಯದಲ್ಲೂ ಬೆತ್ತಲೆಯಾಗಿ ಕಳೆಯುತ್ತೇನೆ. ಹಾಸಿಗೆಯಲ್ಲೂ ಬೆತ್ತಲಾಗಿ ಇರ್ತೇನೆ ಎಂದು ಪೌಲಾ ಕಾರ್ಯಕ್ರಮದಲ್ಲಿ ಹೇಳಿದ್ದಾಳೆ. ಕೊಲಂಬಿಯಾದ ಅನೇಕ ಕುಟುಂಬದಲ್ಲಿ ಇದು ಸಾಮಾನ್ಯ. ಕುಟುಂಬದ ಮುಂದೆ ಅವರು ಬೆತ್ತಲಾಗಿರಲು ಇಷ್ಟಪಡ್ತಾರೆ. ಇದರಿಂದಾಗಿ ನಾವು ಇನ್ನೂ ಹತ್ತಿರವಾಗಿದ್ದೇವೆ ಎನ್ನುತ್ತಾಳೆ ಮಗಳು ಪೌಲ.
ಬೆತ್ತಲಾಗಿ ಅಡುಗೆ ಮಾಡ್ತಾರೆ : ಪೌಲಾ ಮತ್ತು ಫ್ರಾನ್ಸಿಯಾ ಒಟ್ಟಿಗೆ ಬೆತ್ತಲೆಯಾಗಿ ಸಮಯ ಕಳೆಯುವುದನ್ನು ಆನಂದಿಸುತ್ತಾರಂತೆ. ಒಟ್ಟಿಗೆ ಹಾಸಿಗೆಯಲ್ಲಿ ಬೆಳಗಿನ ಆಹ್ಲಾದವನ್ನು ಬೆತ್ತಲಾಗಿ ಸವಿಯುತ್ತೇವೆ ಎನ್ನುತ್ತಾರೆ ಅವರು. ಅಷ್ಟೇ ಅಲ್ಲ, ನಗ್ನಾವಸ್ಥೆಯಲ್ಲಿಯೇ ನಾವು ಅಡುಗೆ ಮಾಡ್ತೇವೆ. ಮನೆಯನ್ನು ಸ್ವಚ್ಛಗೊಳಿಸ್ತೇವೆ ಎಂದು ಪೌಲಾ ಹೇಳ್ತಾಳೆ.
ಇದನ್ನೂ ಓದಿ: ಮಹಿಳೆಯರಲ್ಲಿ ಸ್ವಾಭಾವಿಕವಾಗಿ ಸೆಕ್ಸ್ ಡ್ರೈವ್ ಹೆಚ್ಚಿಸುವುದು ಹೇಗೆ ?
ನಾವಿಬ್ಬರೂ ಒಂದೇ : ತಾಯಿಯಾದವಳು ಮಗಳನ್ನು ನಗ್ನಾವಸ್ಥೆಯಲ್ಲಿ ನೋಡುವುದು ಸಾಮಾನ್ಯ. ಆದ್ರೆ ತಾಯಿ ಮಗಳ ಮುಂದೆ ಬೆತ್ತಲಾಗುವುದು ಬಹಳ ಅಪರೂಪ. ವಯಸ್ಸಿಗೆ ಬಂದ ಮಗಳ ಮುಂದೆ ನಗ್ನವಾಗಿ ಹೋಗಲು ತಾಯಂದಿರುವ ನಾಚಿಕೊಳ್ತಾರೆ. ಅದನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಆದ್ರೆ ಫ್ರಾನ್ಸಿಯಾ ಹೇಳೋದೇ ಬೇರೆ. ನಾವಿಬ್ಬರು ಬೇರೆ ರೀತಿಯಲ್ಲಿ ಸಮಯ ಕಳೆಯುವುದನ್ನು ಕಲ್ಪಿಸಿಕೊಳ್ಳಲೂ ನನ್ನಿಂದ ಸಾಧ್ಯವಿಲ್ಲ ಎನ್ನುತ್ತಾಳೆ ಫ್ರಾನ್ಸಿಯಾ. ನಾನು ನನ್ನ ಮಗಳೊಂದಿಗೆ ಬೆತ್ತಲೆಯಾಗಿರುವುದು ತುಂಬಾ ಸಹಜ. ನಾವಿಬ್ಬರೂ ಒಂದೇ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾಳೆ ಫ್ರಾನ್ಸಿಯಾ. ನನಗೆ ಪೌಲಾ ಬಗ್ಗೆ ಎಲ್ಲವೂ ತಿಳಿದಿದೆ ಎಂದು ತಾಯಿ ಹೇಳಿದ್ದಾಳೆ.
ಅಲ್ಲಿಂದ ಶುರುವಾಯ್ತು ಆಪ್ತತೆ : ತಾಯಿ ಮಗಳಿಬ್ಬರ ಮಧ್ಯೆ ಆಪ್ತತೆ ಹೆಚ್ಚಿದೆ. ಫ್ರಾನ್ಸಿಯಾ ಅಮೆರಿಕಾಕ್ಕೆ ಹೋದಾಗ ಪೌಲಾ ಚಿಕ್ಕವಳಾಗಿದ್ದಳಂತೆ. 9 ವರ್ಷದ ಮಗಳ ಜೊತೆ ಫ್ರಾನ್ಸಿಯಾ ಅಮೆರಿಕಾಕ್ಕೆ ತೆರಳಿದ್ದಳಂತೆ. ಬೇರೆ ದೇಶಕ್ಕೆ ತೆರಳುವುದು ಮತ್ತು ಬೇರೆ ಭಾಷೆಯನ್ನು ಕಲಿಯುವುದು ಎಲ್ಲವೂ ನಿಜವಾಗಿಯೂ ಕಠಿಣವಾಗಿತ್ತು. ಅಂದಿನಿಂದ ನಾವು ತುಂಬಾ ಹತ್ತಿರವಾಗಿದ್ದೇವೆ ಎನ್ನತ್ತಾಳೆ ಪೌಲಾ. ಕೊಲಂಬಿಯಾದಲ್ಲಿ ಇದು ಮಾಮೂಲಿ. ಹಾಗಾಗಿಯೇ ನಮಗೂ ಇದು ವಿಶೇಷ ಎನ್ನಿಸುವುದಿಲ್ಲ ಎನ್ನುತ್ತಾಳೆ ಪೌಲ.
ಇದನ್ನೂ ಓದಿ: Relationship Tips: ತಾಯಿ ಖುಷಿಯಾಗಿದ್ರೆ ನಿಮ್ಮ ಲೈಫ್ ಸೂಪರ್
ಆದ್ರೆ ತಾಯಿ – ಮಗಳ ಈ ಆಪ್ತತೆಯನ್ನು ಅನೇಕರು ಟೀಕಿಸಿದ್ದಾರೆ. ಮತ್ತೆ ಕೆಲವರು ಸ್ವಲ್ಪ ವಿಚಿತ್ರವೆನಿಸಿದ್ರೂ ನಾಚಿಕೆಪಡುವಂಥದ್ದೇನೂ ಇಲ್ಲ ಎಂದಿದ್ದಾರೆ.