
ಬ್ರೆಜಿಲ್(ಆ.21) ಕೊರೋನಾ ಅಟ್ಟಹಾಸ ಜೋರಾದ ನಂತರದಲ್ಲಿ ಅರ್ಧಕ್ಕಿಂತ ಹೆಚ್ಚು ಜನ ವರ್ಕ್ ಫ್ರಾಂ ಹೋಂ ನಂಬಿಕಂಡಿದ್ದಾರೆ.ಕಾರ್ಪೋರೇಟ್ ಕಂಪನಿಗಳು ಮೀಟಿಂಗ್ ಗಳನ್ನು ಆಪ್ ಬಳಸಿ ಮಾಡುತ್ತಿವೆ. ಆದರೆ ಇಂಥದ್ದೇ ಒಂದು ಸಂದರ್ಭದಲ್ಲಿ ಎಡವಟ್ಟಾಗಿಹೋಗಿದೆ.
ಮೀಟಿಂಗ್ ನಡೆಯುತ್ತಿದ್ದ ವೇಳೆಯೇ ಜೋಡಿಯೊಂದು ಸೆಕ್ಸ್ ನಲ್ಲಿ ತೊಡಗಿದೆ. ಕ್ಯಾಮರಾ ಆಫ್ ಮಾಡಲು ಮರೆತುಹೋಗಿದೆ ಪಾಪ! ಆದರೆ ಇದು ಆಗಿದ್ದು ಬ್ರೆಜಿಲ್ ನ ರಿಯೋ ಡಿ ಜನೈರೊ ನಗರದ ಕೌನ್ಸಿಲ್ ಮೀಟಿಂಗ್ ನಲ್ಲಿ! ಲೈವ್ ಸ್ಟ್ರೀಮ್ ನಲ್ಲಿ ಮೀಟಿಂಗ್ ಪ್ರದರ್ಶನ ಸಹ ಆಗುತ್ತಿತ್ತು.
ಆ ತರ ಸೆಕ್ಸ್ ಬೇಕು ಎಂದ ಇಂಜಿನಿಯರ್ ಹೆಂಡತಿಯಿಂದಲೆ ಕೊಲೆಯಾಗಿ ಹೋದ
ಶಾಲಾ ಮಕ್ಕಳಿಗೆ ಸೌಲಭ್ಯ ನೀಡುವ ಸಂಬಂಧ ಸಭೆ ನಡೆಯುತ್ತಿತ್ತು. ಜೋಡಿ ಸೆಕ್ಸ್ ನಲ್ಲಿ ತೊಡಗಿದ್ದರೂ ಉಳಿದ ಸದಸ್ಯರು ಸಭೆಯನ್ನು ಮೊಟಕು ಮಾಡಲಿಲ್ಲ. ಯಾವ ಕ್ಯಾಮರಾದಲ್ಲಿ ಸೆಕ್ಸ್ ದೃಶ್ಯ ಬಿತ್ತಾರವಾಗುತ್ತಿತ್ತೋ ಅದರ ಆಡಿಯೋ ಬಂದ್ ಮಾಡಲು ತಿಳಿಸಿದೆವು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಶಾಲಾ ಮಕ್ಕಳ ಸಮಸ್ಯೆ ಬಗ್ಗೆ ಚರ್ಚೆ ನಡೆಸಬೇಕಿದ್ದರೆ ಇಂಥ ಘಟನೆಯೊಂದು ಆಗಿಹೋಗಿದೆ. ಈ ಬಗ್ಗೆ ತನಿಖೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಆನ್ ಲೈನ್ ಮೀಟಿಂಗ್, ಚಾಟಿಂಗ್ ಎಷ್ಟು ಎಚ್ಚರ ವಹಿಸಿದರೂ ಸಾಲದು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.