ಗಂಡ ಹೆಂಡತಿ ಸಂಬಂಧದಲ್ಲಿ ಜಗಳಗಳು ಸಹಜ. ಆದರೆ ಇಬ್ಬರ ನಡುವೆ ಪ್ರೀತಿ ಇದ್ದರೆ ಜೀವನ ಪೂರ್ತಿ ಖುಷಿಯಾಗಿರಬಹುದು. ಗಂಡ ಹೆಂಡತಿ ಬಾಂಧವ್ಯ ಗಟ್ಟಿಯಾಗಿರಲು ಕೆಲವು ನಿಯಮಗಳನ್ನು ಪಾಲಿಸಬೇಕು. ಅವುಗಳನ್ನು ಇಲ್ಲಿ ತಿಳಿಯೋಣ.
ಗಂಡ ಹೆಂಡತಿ ಬಾಂಧವ್ಯ ಅಂದ್ರೆ ತುಂಬಾನೇ ಸ್ಪೆಷಲ್. ಒಬ್ಬರ ಇಷ್ಟಗಳನ್ನು ಮತ್ತೊಬ್ಬರು ತಿಳಿದುಕೊಳ್ಳುತ್ತಾ.. ಒಬ್ಬರ ಅಭಿಪ್ರಾಯಗಳನ್ನು ಇನ್ನೊಬ್ಬರು ಗೌರವಿಸುತ್ತಾ, ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾ ಇಬ್ಬರು ವ್ಯಕ್ತಿಗಳು ಜೀವನ ಪೂರ್ತಿ ಒಟ್ಟಿಗೆ ಇರುತ್ತಾರೆ. ಗಂಡ ಹೆಂಡತಿ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿರಬೇಕು ಅಂದ್ರೆ, ಸಂಸಾರ ಖುಷಿಯಾಗಿರಬೇಕು ಅಂದ್ರೆ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಅವು ನಿಮ್ಮ ವೈವಾಹಿಕ ಜೀವನವನ್ನು ಇನ್ನಷ್ಟು ಚೆನ್ನಾಗಿ ಮಾಡುತ್ತವೆ. ಅವುಗಳನ್ನು ಇಲ್ಲಿ ತಿಳಿಯೋಣ.
ಸಂಬಂಧದಲ್ಲಿ ಸೈಲೆಂಟ್ ಆಗಿರುವುದು ಒಳ್ಳೆಯದಲ್ಲ!
ನಿಮ್ಮ ಸಂಗಾತಿಯೊಂದಿಗೆ ಪ್ರತಿಯೊಂದು ವಿಷಯದ ಬಗ್ಗೆ ಮುಕ್ತವಾಗಿ ಮಾತಾಡಬೇಕು. ಏನನ್ನಾದರೂ ಮನಸ್ಸಿನಲ್ಲಿ ಇಟ್ಟುಕೊಂಡರೆ ಅದು ನಿಮ್ಮನ್ನು ಕಾಡುತ್ತದೆ. ಒಬ್ಬರ ಆಲೋಚನೆಗಳು, ಫೀಲಿಂಗ್ಸ್, ನೋವುಗಳನ್ನು ಒಬ್ಬರೊಂದಿಗೆ ಹಂಚಿಕೊಳ್ಳಬೇಕು. ಭಯವಿಲ್ಲದೆ ಏನನ್ನಾದರೂ ಹೇಳುವಂತಿರಬೇಕು. ಇದು ನಂಬಿಕೆಯನ್ನು ಹೆಚ್ಚಿಸುವುದಲ್ಲದೆ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.
ಇದನ್ನೂ ಓದಿ: ಸಂಬಂಧಗಳನ್ನು ಗಟ್ಟಿಗೊಳಿಸಲು ನಿಮ್ಮ ಸಂಗಾತಿಗೆ ಈ ಐದು ಸುಳ್ಳುಗಳನ್ನು ಹೇಳಿ!
ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡಿ
ಈ ಬ್ಯುಸಿ ಲೈಫ್‌ನಲ್ಲಿ ಸಂಬಂಧಗಳಿಂದ ಒಂಟಿಯಾಗಿ ದೂರ ಪ್ರಯಾಣ ಮಾಡುವುದು ಈಗಂತೂ ಕಾಮನ್ ಆಗಿಬಿಟ್ಟಿದೆ. ಅದಕ್ಕೆ ನಿಮ್ಮ ಸಂಗಾತಿಯೊಂದಿಗೆ ಕ್ವಾಲಿಟಿ ಟೈಮ್ ಕಳೆಯುವುದು ತುಂಬಾನೇ ಮುಖ್ಯ. ಇಬ್ಬರಿಗೂ ಇಷ್ಟವಾದವುಗಳನ್ನು ಒಟ್ಟಿಗೆ ಮಾಡಿ. ಸಿನಿಮಾಕ್ಕೆ ಹೋಗುವುದು ಅಥವಾ ಕ್ಯಾಂಡಲ್ ಲೈಟ್ ಡಿನ್ನರ್ ಮಾಡುವುದು ಇತ್ಯಾದಿ. ಇವು ನಿಮ್ಮ ಬಾಂಧವ್ಯವನ್ನು ಗಟ್ಟಿಯಾಗಿ ಇಡುವುದಲ್ಲದೆ ಪ್ರೀತಿಯನ್ನು ಉಳಿಸುತ್ತದೆ.
ಜಗಳವನ್ನು ಪ್ರೀತಿಯಿಂದ ಪರಿಹರಿಸಿಕೊಳ್ಳಬೇಕು
ಪ್ರತಿ ಸಂಬಂಧಗಳಲ್ಲಿ ಅಥವಾ ದಂಪತಿಗಳಲ್ಲಿ ಆಗಾಗ ಮುನಿಸು ಜಗಳ ಸಾಮಾನ್ಯವಾಗಿ ಇದ್ದೇ ಇರುತ್ತವೆ. ಆದರೆ ಅದರಲ್ಲಿ ಗೆಲ್ಲಲು ಪ್ರಯತ್ನಿಸಬೇಡಿ. ತಾಳ್ಮೆಯಿಂದ ಸಮಸ್ಯೆಯನ್ನು ಪರಿಹರಿಸಲು ಟ್ರೈ ಮಾಡಿ. ಕೋಪದಲ್ಲಿ ಕಠಿಣವಾದ ಪದಗಳನ್ನು ಬಳಸದೆ ಸಮಾಧಾನವಾಗಿ ಮಾತಾಡಿ. ಒಂದು ಸಲ ತಪ್ಪಾಗಿ ಮಾತಾಡಿದರೆ ಎದುರಿಗಿರುವವರ ಮನಸ್ಸಿಗೆ ನೋವಾಗುತ್ತದೆ. ಅದನ್ನು ಅಷ್ಟು ಬೇಗ ಮರೆಯಲು ಸಾಧ್ಯವಿಲ್ಲ.
ಥ್ಯಾಂಕ್ಯೂ ಹೇಳುವುದು, ಮೆಚ್ಚಿಕೊಳ್ಳುವುದು ಬಾಂಧವ್ಯವನ್ನು ಬಲಪಡಿಸುತ್ತದೆ
ನಿಮ್ಮ ಸಂಗಾತಿ ಮಾಡುವ ಸಣ್ಣ ಪ್ರಯತ್ನಗಳನ್ನು ಕೂಡ ಮೆಚ್ಚಿಕೊಳ್ಳಲು ಕಲಿಯಿರಿ. ಸಣ್ಣ ವಿಷಯಗಳಿಗೆ ಕೂಡ ಥ್ಯಾಂಕ್ಸ್ ಹೇಳಿ. ಇದು ನಿಮ್ಮ ಸಂಗಾತಿಗೆ ಸ್ಪೆಷಲ್ ಫೀಲಿಂಗ್ ಬರುವಂತೆ ಮಾಡುವುದಲ್ಲದೆ ರಿಲೇಷನ್‌ಶಿಪ್ ಅನ್ನು ಪ್ರೀತಿ, ಗೌರವದಿಂದ ತುಂಬಿಸುತ್ತದೆ.
ಪ್ರತಿ ಪರಿಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿರಿ
ಮದುವೆ ಬಾಂಧವ್ಯ ಜೀವನ ಪೂರ್ತಿ ಇರುತ್ತದೆ. ಇದರಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತವೆ. ನಿಮ್ಮ ಸಂಗಾತಿ ಸಕ್ಸಸ್ ಆದಾಗ ಸೆಲೆಬ್ರೇಟ್ ಮಾಡಿ. ಕಷ್ಟ ಸಮಯದಲ್ಲಿ ಸಪೋರ್ಟ್ ಮಾಡಿ. ಇದು ಒಬ್ಬರ ಮೇಲೊಬ್ಬರಿಗೆ ಇರುವ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಇದನ್ನೂ ಓದಿ: ಬಾಯ್‌ಫ್ರೆಂಡ್ ಜೊತೆ ಓಡಿ ಹೋದ ತಾಯಿ, 2 ವರ್ಷ ಮನೆಯಲ್ಲಿ ಏಕಾಂಗಿಯಾಗಿ ಕಳೆದ 9 ವರ್ಷದ ಮಗ
ರೊಮ್ಯಾಂಟಿಕ್ ಕೆಲಸಗಳು
ಬ್ಯುಸಿ ಲೈಫ್‌ನಲ್ಲಿ ಆಗಾಗ ನಮ್ಮ ಸಂಗಾತಿಗೆ ಸ್ಪೆಷಲ್ ಫೀಲಿಂಗ್ ಬರುವಂತೆ ಮಾಡುವುದನ್ನು ಮರೆತುಬಿಡುತ್ತೇವೆ. ಆದರೆ ಸಕ್ಸಸ್ ಫುಲ್ ಮ್ಯಾರೀಡ್ ಲೈಫ್‌ಗಾಗಿ ಸಣ್ಣ ಸಣ್ಣ ರೊಮ್ಯಾಂಟಿಕ್ ಕೆಲಸಗಳು ತುಂಬಾನೇ ಅವಶ್ಯಕ. ಸರ್ ಪ್ರೈಸ್ ಪ್ಲಾನ್ ಮಾಡಿ. ಲವ್ ಮೆಸೇಜ್‌ಗಳನ್ನು ಕಳುಹಿಸಿ. ಅಥವಾ ಗಿಫ್ಟ್ ಕೊಡಿ. ಇದು ನಿಮ್ಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಕ್ಷಮಿಸಲು ಕಲಿಯಿರಿ
ಸಣ್ಣ ಸಣ್ಣ ತಪ್ಪುಗಳನ್ನು ಪ್ರತಿಯೊಬ್ಬರೂ ಮಾಡ್ತಾರೆ. ನಿಮ್ಮ ಸಂಗಾತಿ ಮೇಲೆ ಕಠಿಣವಾಗಿ ವರ್ತಿಸಬೇಡಿ. ಅವರಿಗೆ ಇಂಪ್ರೂವ್ ಮಾಡಿಕೊಳ್ಳಲು ಅವಕಾಶ ಕೊಡಿ. ಹಳೆಯ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಮುಂದೆ ಸಾಗಿ.