2.05 Crore Job Offer : ರೈತನ ಮಗನಿಗೆ ಉಬರ್ ನೀಡ್ತು ಜಾಬ್ ಜಾಕ್ ಪಾಟ್!

By Suvarna News  |  First Published Dec 11, 2021, 9:21 PM IST

ಉತ್ತರಾಖಂಡದ ಬಡ ರೈತನ ಪುತ್ರನಿಗೆ ಉಬರ್ ಕಂಪನಿಯ ಆಫರ್
ಐಐಟಿ ಗುವಾಹಟಿಯಲ್ಲಿ 2ನೇ ವರ್ಷದ ಎಂ-ಟೆಕ್ ಓದುತ್ತಿರುವ ರೋಹಿತ್ ನೇಗಿ
ವ್ಯಾಸಂಗ ಮುಗಿದ ಬಳಿಕ ಉಬರ್ ಇಂಟರ್ ನ್ಯಾಷನಲ್ ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಹುದ್ದೆ


ಬೆಂಗಳೂರು (ಡಿ.11): ಎಲ್ಲಾ ಕಷ್ಟಗಳು ಎದುರಿಸಿ ಯಶಸ್ಸಿನ ಶಿಖರ ಹತ್ತಿದಾಗ ಮನಸ್ಸಿಗೆ ಸಿಗುವ ಖುಷಿಯೇ ವಿವರಿಸಲು ಸಾಧ್ಯವಾಗದೇ ಇರುವಂಥದ್ದು. ಬಡ ಮಧ್ಯಮ ವರ್ಗ ಕುಟುಂಬದ ವಿದ್ಯಾರ್ಥಿಗಳ ಪಾಲಿಗೆ ಐಐಟಿಯಂಥ ಸಂಸ್ಥೆಗಳಲ್ಲಿ ಓದುವುದೇ ಮಹತ್ತರ ಸಾಧನೆ. ಇಲ್ಲಿನ ಓದಿಗೆ ತಕ್ಕಂತೆ ಸೂಕ್ತ ಕೆಲಸ ಸಿಕ್ಕರೆ ಅದಕ್ಕಿಂತ ಸಮಾಧಾನ ಇನ್ನೊಂದಿರುವುದಿಲ್ಲ.  ಉತ್ತರಾಖಂಡದ (Uttarakhand) ಪುಟ್ಟ ಹಳ್ಳಿ ಕೋಟದ್ವಾರ್ ನ (Kotdwar) ಹುಡುಗ ರೋಹಿತ್ ನೇಗಿಗೆ (Rohit Negi ) ಸಿಕ್ಕಿರುವ ಅವಕಾಶವೇ ಹಾಗಿದೆ. ಐಐಟಿ ಗುವಾಹಟಿಯಲ್ಲಿ(IIT Guwahati) 2ನೇ ವರ್ಷದ ಎಂಟೆಕ್ (MTech) ಓದುತ್ತಿರುವ ರೈತನ ಮಗ ರೋಹಿತ್ ನೇಗಿಗೆ ಉಬರ್ ಇಂಟರ್ ನ್ಯಾಷನಲ್ (Uber International) ಜಾಬ್ ಆಫರ್ ನೀಡಿದೆ. ಉಬರ್ (Uber ) ಸಂಸ್ಥೆಯು ಈ ಹುಡಗನಿಗೆ ನೀಡಲಿರುವ ವೇತನ ಎಷ್ಟು ಗೊತ್ತೇ 2.05 ಕೋಟಿ ರೂಪಾಯಿ!

22 ವರ್ಷದ ರೋಹಿತ್ ತಮ್ಮ ವಿದ್ಯಾಭ್ಯಾಸ ಮುಗಿದ ಬಳಿಕ ಉಬರ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ (Software Engineer) ಆಗಿ ಕೆಲಸ ಮಾಡಲಿದ್ದಾರೆ. ಪ್ರತಿ ತಿಂಗಳಿಗೆ ಇವರ ವೇತನ 96 ಲಕ್ಷ ಇರಲಿದ್ದು, ಒಟ್ಟಾರೆ ಸಿಟಿಸಿ 2.05 ಕೋಟಿ ಆಗಿರಲಿದೆ. ಹಾಗಂತ ರೋಹಿತ್ ಪಾಲಿಗೆ ಈ ಜಾಬ್ ಬಹಳ ಸುಲಭವಾಗಿ ಬಂದಿದ್ದಲ್ಲ. ರೈತನ ಮಗನಾಗಿದ್ದರೂ ಸಹ ರೋಹಿತ್ ಅವರ ತಂದೆ ಮಗನ ಕನಸಿಗೆ ಬೆನ್ನೆಲುಬಾಗಿ ನಿಂತಿದ್ದರು. ಆತನ ಸಾಧನೆಗೆ ಯಾವುದೇ ಅಡ್ಡಿಯಾಗಬಾರದು ಎನ್ನುವ ನಿಟ್ಟಿನಲ್ಲಿ ಸಕಲ ಪ್ರಯತ್ನವನ್ನು ಮಾಡಿದ್ದು ಅವರ ತಂದೆ.

"ಬಡ ಮಧ್ಯಮ ವರ್ಗದ ಕುಟುಂಬ ನಮ್ಮದು. ನಮ್ಮ ಕುಟುಂಬದ ತಿಂಗಳಿನ ಖರ್ಚು 10 ಸಾವಿರಕ್ಕಿಂತಲೂ ಕಡಿಮೆ. ನನ್ನ ತಂದೆ ರೈತ. ತಾಯಿ  ಗೃಹಿಣಿ, ಸಹೋದರಿ ನರ್ಸ್ ಆಗಿದ್ದಾರೆ. 2.05 ಕೋಟಿ ರೂಪಾಯಿ ಸಂಬಳದ ಕೆಲಸ ಅಂದ ಕೂಡಲೇ ಮನೆಯವರ ಸಂಭ್ರಮ ಹೇಳ ತೀರದಾಗಿದೆ. ನಿಜಕ್ಕೂ ಬಹಳ ಖುಷಿಯಾಗುತ್ತಿದೆ' ಎಂದು ರೋಹಿತ್ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

Elon Musk Tweet: ಕೋಟಿ ಗಳಿಸುವ  ಜಾಬ್ ಬಿಟ್ಟು ಈ ಕೆಲಸ ಮಾಡ್ತಾರಂತೆ ಮಸ್ಕ್!
ಶಾಲಾ ವ್ಯಾಸಂಗ ಮುಗಿದ ಬಳಿಕ ನೇಗಿ, ಉತ್ತರಾಖಂಡದ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ್ದರು. ಆದರೆ, ಪದವಿಯಲ್ಲಿ ಅವರಿಗೆ ಉತ್ತಮ ಗ್ರೇಡ್ ಗಳು ಸಿಕ್ಕಿರಲಿಲ್ಲ. ಹಾಗಿದ್ದರೂ ಪರಿಶ್ರಮಪಟ್ಟು ಓದಿದ ರೋಹಿತ್, ಗೇಟ್ (GATE) ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆದು ಐಐಟಿ ಗುವಾಹಟಿಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದರು.

NABARD Recruitment 2021: ವಿವಿಧ ಹುದ್ದೆಗಳ ನೇಮಕಾತಿಗೆ ನಬಾರ್ಡ್ ಅರ್ಜಿ ಆಹ್ವಾನ
"2020 ಗೇಟ್ ಪರೀಕ್ಷೆಗೆ ಒಂದು ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದು ಬಹಳ ಕಠಿಣ ಪರೀಕ್ಷೆ. ಇದರಲ್ಲಿ 202ನೇ ಸ್ಥಾನ ಪಡೆದಿದ್ದ ನಾನು, ಐಐಟಿ ಗುವಾಹಟಿಯಲ್ಲಿ ಎಂಟೆಕ್ ಓದಲು ಅರ್ಹತೆ ಪಡೆದುಕೊಂಡಿದ್ದೆ" ಎಂದು ತಮ್ಮ ಗೇಟ್ ಪರೀಕ್ಷೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ. ಉಬರ್ ನಡೆಸಿದ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ನಡೆಸಿದ ಮೂರೂ ಸುತ್ತುಗಳನ್ನು ಯಶಸ್ವಿಯಾಗಿ ಪೂರೈಸಿದ ರೋಹಿತ್, ಕೋಟಿ ರೂಪಾಯಿಯ ಜಾಬ್ ಆಫರ್ ಅನ್ನು ಪಡೆದಿದ್ದಾರೆ. ಇಡೀ ಕೋಟದ್ವಾರ್ ನಲ್ಲಿ ಇಷ್ಟು ದೊಡ್ಡ ಮೊತ್ತದ ಸ್ಯಾಲರಿ ಪಡೆದ ಹುಡುಗ ರೋಹಿತ್.

ತಮ್ಮ ಕೆಲಸದ ಬಗ್‌ಗೆ ಬಹಳ ಖುಷಿ ಹೊಂದಿರುವ ರೋಹಿತ್, ಆರಂಭದಲ್ಲಿ ಒಂದು ವರ್ಷ ಭಾರತದಲ್ಲಿರುವ ಉಬರ್ ಕಚೇರಿಯಲ್ಲಿಯೇ ಕೆಲಸ ಮಾಡಲಿದ್ದಾರೆ. ಆ ಬಳಿಕ ಉಬರ್ ಅಂತಾರಾಷ್ಟ್ರೀಯ ಕಚೇರಿಗೆ ತೆರಳಲಿದ್ದಾರೆ. ಕೋಡಿಂಗ್ ಹೊರತಾಗಿ, ಕ್ರಿಪ್ಟೋಕರೆನ್ಸಿ (cryptocurrency) ಹಾಗೂ ಕ್ರಿಕೆಟ್ ನಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಸಂಕಲ್ಪ ಹಾಗೂ ಕಠಿಣ ಪರಿಶ್ರಮವೇ ಯಶಸ್ಸಿನ ನಿಜವಾದ ಮಂತ್ರ ಮತ್ತು ಅದಕ್ಕೆ ರೋಹಿತ್ ನೇಗಿ ನೈಜ ಉದಾಹರಣೆ ಎಂದರೂ ತಪ್ಪಲ್ಲ.

click me!