Asianet Suvarna News Asianet Suvarna News

NABARD Recruitment 2021: ವಿವಿಧ ಹುದ್ದೆಗಳ ನೇಮಕಾತಿಗೆ ನಬಾರ್ಡ್ ಅರ್ಜಿ ಆಹ್ವಾನ

  • ವಿವಿಧ ಹುದ್ದೆಗಳ ನೇಮಕಾತಿಗೆ ನಬಾರ್ಡ್ ಅರ್ಜಿ ಆಹ್ವಾನ
  • ಡಿಸೆಂಬರ್ 19ರೊಳಗೆ ಅರ್ಜಿ ಸಲ್ಲಿಸಲು ಸೂಚನೆ
  • ಕನಿಷ್ಠ 5 ವರ್ಷಗಳ ಅನುಭವ ಇರುವವರಿಗೆ ಆದ್ಯತೆ
NABARD Recruitment 2021 Apply Online for 6 Job Vacancies gow
Author
Bengaluru, First Published Dec 11, 2021, 8:22 PM IST

ಬೆಂಗಳೂರು (ಡಿ.11): ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD), ಸ್ಪೆಷಲಿಸ್ಟ್ ಕನ್ಸಲ್ಟೆಂಟ್ (specialist consultants) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಬಾರ್ಡ್‌ ಸ್ಪೆಷಿಯಲಿಸ್ಟ್‌ ಕನ್ಸಲ್‌ಟಂಟ್ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ನಡೆಯಲಿದ್ದು, ಆಯ್ಕೆಯಾದವರು ಮುಂಬೈ (Mumbai) ಹೆಡ್‌ ಆಫೀಸ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಒಟ್ಟು 6 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ www.nabard.org ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 19.

ಚೀಫ್ ಟೆಕ್ನಾಲಜಿ ಆಫೀಸರ್-1,  ಚೀಫ್ ರಿಸ್ಕ್‌ ಮ್ಯಾನೇಜರ್-1, ಡಾಟಾ ಡಿಸೈನರ್ -1,  ಲೀಡ್ ಬಿಐ ಡಿಸೈನರ್-1, ಇಟಿಎಲ್ ಡಿಸೈನರ್-1,  ಸ್ಪೆಷಿಯಲಿಸ್ಟ್‌ ಆಫೀಸರ್ - (ಲೀಗಲ್) -1 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಅನುಗುಣವಾಗಿ ಬಿಇ / ಬಿ.ಟೆಕ್/ ಬಿಸಿಎ / ಎಂಸಿಎ / ಎಲ್‌ಎಲ್‌ಎಂ ಅನ್ನು ಪ್ರಥಮ ದರ್ಜೆಯಲ್ಲಿ ಸರ್ಕಾರಿ ಅಂಗೀಕೃತ ವಿಶ್ವ ವಿದ್ಯಾಲಯಗಳಿಂದ ಪಡೆದಿರಬೇಕು. 

ಡಿಸೆಂಬರ್ 01, 2021 ಕ್ಕೆ 62 ವರ್ಷ ವಯೋಮಿತಿ ಮೀರದವರು, ಕನಿಷ್ಠ 5 ವರ್ಷಗಳ ಅನುಭವ ಇರುವವರು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ನ ಅಧಿಕೃತ ವೆಬ್‌ಸೈಟ್‌ www.nabard.org ನಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಸ್‌ಸಿ / ಎಸ್‌ಟಿ / PWBD ಅಭ್ಯರ್ಥಿಗಳು ಇಂಟಿಮೇಷನ್‌ ಚಾರ್ಜ್‌ ರೂ.50 ಪಾವತಿಸಬೇಕು. ಇತರೆ ಎಲ್ಲ ವರ್ಗದ ಅಭ್ಯರ್ಥಿಗಳು ರೂ.800 ಪಾವತಿಸಬೇಕು.

ISEC RECRUITMENT: ಬೆಂಗಳೂರಿನ ISEC ಸಂಸ್ಥೆಯಲ್ಲಿ ಸರಕಾರಿ ಉದ್ಯೋಗಕ್ಕೆ ಅರ್ಹರಿಂದ ಅರ್ಜಿ ಆಹ್ವಾನ

ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು ಮತ್ತು ಕಾರ್ಯಾನುಭವದ ಆಧಾರದಲ್ಲಿ 1:10 ಅನುಪಾತದಲ್ಲಿ ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಲಾಗುತ್ತದೆ. ಅಯ್ಕೆಯಾದ ಅಭ್ಯರ್ಥಿಗಳಿಗೆ ರೂ.1.50 ಲಕ್ಷದಿಂದ ರೂ.3.75 ಲಕ್ಷದವರೆಗೆ ವೇತನ ಇರಲಿದೆ. 

ಪ್ರಾರಂಭದಲ್ಲಿ 3 ವರ್ಷದ ವರೆಗೆ ನೇಮಕ ಮಾಡಲಾಗುತ್ತದೆ. ಬಳಿಕ ಅಗತ್ಯತೆ ಮತ್ತು ಅಭ್ಯರ್ಥಿ ಕಾರ್ಯಕ್ಷಮತೆಗೆ ಅನುಗುಣವಾಗಿ ಮತ್ತೆ ಎರಡು ವರ್ಷ ಉದ್ಯೋಗ ಅವಧಿ ವಿಸ್ತರಣೆ ಮಾಡುವ ಅವಕಾಶ ಇರುತ್ತದೆ.

Railway Recruitment: ದಕ್ಷಿಣ ಮಧ್ಯ ರೈಲ್ವೆ ಮತ್ತು ಸೆಂಟ್ರಲ್ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆ

ಎಸ್‌ಬಿಐನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ:
ಭಾರತೀಯ ಸ್ಟೇಟ್ ಬ್ಯಾಂಕ್‌ ನಲ್ಲಿ (State Bank of India) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನಾಂಕವಾಗಿದೆ. ಒಟ್ಟು 1226 ಸರ್ಕಲ್ ಬೇಸ್ಡ್​ ಆಫೀಸರ್ (Circle Based Officer) ಹುದ್ದೆಗಳು ಖಾಲಿ ಇದ್ದು, ಅರ್ಹ ಪದವೀಧರರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಉದ್ಯೋಗ ಪಡೆಯಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ ಎಸ್​ಬಿಐನ ಅಧಿಕೃತ ವೆಬ್​ಸೈಟ್​ sbi.co.in ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

Karnataka High Court Recruitment: ಕರ್ನಾಟಕ ಹೈ ಕೋರ್ಟ್ ನಲ್ಲಿ ಖಾಲಿ ಇರುವ 21

ಬ್ಯಾಂಕ್ ಆಫ್​ ಬರೋಡದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ: ಬ್ಯಾಂಕ್ ಆಫ್​ ಬರೋಡ (Bank of Baroda) ಖಾಲಿ ಇರುವ 52  ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 52 ಐಟಿ ಪ್ರೊಫೆಶನಲ್ (IT professional) ಹುದ್ದೆಗಳು ಖಾಲಿ ಇದ್ದು,  ಬಿಇ, ಬಿ ಟೆಕ್ ಪಾಸಾಗಿರುವ ಅಭ್ಯರ್ಥಿಗಳನ್ನು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಆಸಕ್ತರು ಆನ್​ಲೈನ್ (Online)​ ಮೂಲಕ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗ ಆಸಕ್ತರು ಬ್ಯಾಂಕ್​ ಆಫ್​ ಬರೋಡದ (Bank of Baroda) ಅಧಿಕೃತ ವೆಬ್​ಸೈಟ್​​ www.bankofbaroda.in ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ. 

Follow Us:
Download App:
  • android
  • ios