Recruitment 2021 : ನಮ್ಮ ಮೆಟ್ರೋ, ಬಾರ್ಡರ್ ರೋಡ್ಸ್‌ ಸಂಸ್ಥೆ ಮತ್ತು BHELನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Dec 7, 2021, 8:01 PM IST
  • ಬಿಎಂಆರ್‌ಸಿಎಲ್ ನಲ್ಲಿ ಖಾಲಿ ಇರುವ 50 ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಬಾರ್ಡರ್ ರೋಡ್ಸ್‌ ಸಂಸ್ಥೆಯಲ್ಲಿ 354 ಹುದ್ದೆಗಳಿಗೆ ಅರ್ಜಿ ಆಹ್ವಾನ
  • BHELನಲ್ಲಿ ಉದ್ಯೋಗ 50 ಸಾವಿರ ರೂ ಸಂಬಳ

ಬೆಂಗಳೂರು(ಡಿ7): ಬೆಂಗಳೂರು (Bengaluru) ಮೆಟ್ರೋ ರೈಲು ನಿಗಮ ನಿಯಮಿತ (BMRCL)  ಗುತ್ತಿಗೆ ಆಧಾರದ ಮೇಲೆ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಸ್ಟೇಷನ್ ಕಂಟ್ರೋಲರ್/ ರೈಲು ನಿರ್ವಾಹಕರ 50 ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. 5 ವರ್ಷಗಳ ಅವಧಿವರೆಗೆ ಗುತ್ತಿಗೆ ಆಧಾರದ ಮೇಲೆ ಅರ್ಹ ಮಾಜಿ ಸೈನಿಕ ಸಿಬ್ಬಂದಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಸ್ಟೇಷನ್‌ ಕಂಟ್ರೋಲರ್ /ಟ್ರೈನ್ ಆಪರೇಟರ್ (ಎಸ್‌ಸಿ/ಟಿಒ) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. 

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ  ಡಿಸೆಂಬರ್ 25ರೊಳಗೆ ಅರ್ಜಿ ಸಲ್ಲಿಸಬಹುದು. ಮತ್ತು ಆರ್ಫ​ಲೈನ್​ ಮೂಲಕ ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.  ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವವರು www.bmrc.co.in.ಈ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಮಾಜಿ ಸೈನಿಕರಾಗಿರಬೇಕು ಜೊತೆಗೆ ಗರಿಷ್ಠ 45 ವರ್ಷ ಮೀರಿರಬಾರದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ವೇತನ ರೂ.33,040 ರಿಂದ ರೂ.63,490 ವರೆಗೆ ಇರಲಿದೆ.

Tap to resize

Latest Videos

undefined

ಬಾರ್ಡರ್ ರೋಡ್ಸ್‌ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ: ಬಾರ್ಡರ್ ರೋಡ್ಸ್‌ ಆರ್ಗನೈಜೇಷನ್‌ (BRO) ಮಲ್ಟಿ ಸ್ಕಿಲ್ಡ್‌ ವರ್ಕರ್, ವೆಹಿಕಲ್ ಮೆಕ್ಯಾನಿಕ್ ಮತ್ತು ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್‌ (OG) ಹುದ್ದೆಗಳನ್ನು ಹೀಗೆ ಒಟ್ಟು 354 ಹುದ್ದೆಗಳಿಗೆ ನೇಮಕ ಮಾಡಲು ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.  ಈ ಮೇಲಿನ ಹುದ್ದೆಗಳಿಗೆ ಕೇವಲ ಪುರುಷರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. ವೇತನ, ಡಿಎ, ಹೆಚ್‌ಆರ್‌ಎ, ಟ್ರಾವೆಲ್ ಅಲೋವೆನ್ಸ್‌ ಅನ್ನು ಭಾರತ ಸರ್ಕಾರದ ನಿಯಮಗಳ ಪ್ರಕಾರ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಈ ವೆಬ್‌ಸೈಟ್‌ : http://www.bro.gov.in/ ಗೆ ಭೇಟಿ ನೀಡಿ. ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ / ಪದವಿ / ಡಿಪ್ಲೊಮ ಪಾಸ್‌ ಜತೆಗೆ ಕಾರ್ಯಾನುಭವ ಹೊಂದಿರಬೇಕು. ವಯೋಮಿತಿ ಅರ್ಹತೆ, ಶುಲ್ಕ, ಅರ್ಜಿ ಸಲ್ಲಿಕೆ ವಿಧಾನ ಮತ್ತಿತರ ಮಾಹಿತಿಗಳನ್ನು ಶೀಘ್ರದಲ್ಲಿ http://www.bro.gov.in/ ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. 

Naukri JobSpeak Index : ನೇಮಕಾತಿ ವಿಷಯದಲ್ಲಿ ಬೆಂಗಳೂರು ನಗರವೇ ಟಾಪ್

BE, B Tech ಆದವರಿಗೆ BHELನಲ್ಲಿ ಉದ್ಯೋಗ:
BHEL Recruitment 2021: ಭಾರತ್ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್(Bharat Heavy Electronics Limited ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 15 ಪ್ರಾಜೆಕ್ಟ್​ ಎಂಜಿನಿಯರ್(Project Engineer) ಹುದ್ದೆಗಳು ಖಾಲಿ ಇದ್ದು, ಬಿಇ, ಬಿ.ಟೆಕ್, ಬಿಎಸ್ಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 6ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಪೋಸ್ಟ್​​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತ್ ಹೆವಿ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ನ ಅಧಿಕೃತ ವೆಬ್​ಸೈಟ್​ bhel.com ಗೆ ಭೇಟಿ ನೀಡಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಹೈದರಾಬಾದ್ ನಲ್ಲಿ ಕೆಲಸ ಮಾಡಬೇಕಾಗುತ್ತದೆ. ತಿಂಗಳಿಗೆ  ₹ 35,000- 50,000 ಸಂಬಳ ನಿಗದಿಪಡಿಸಲಾಗಿದೆ. ಪ್ರಾಜೆಕ್ಟ್​ ಎಂಜಿನಿಯರ್(Electronics)-6, ಪ್ರಾಜೆಕ್ಟ್​ ಎಂಜಿನಿಯರ್ (Mechanical)-6, ಪ್ರಾಜೆಕ್ಟ್​ ಎಂಜಿನಿಯರ್ (computer science​​)-3 ಹೀಗೆ ಒಟ್ಟು 15 ಹುದ್ದೆಗಳು ಖಾಲಿ ಇದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗ- 28 ವರ್ಷ, ಒಬಿಸಿ- 31 ವರ್ಷ, SC/ST-33 ವರ್ಷ ವಯಸ್ಸು ಮೀರಿರಬಾರದು. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಪೋಸ್ಟ್​ ಮೂಲಕ ಕಳುಹಿಸಬೇಕು.
ಮ್ಯಾನೇಜರ್(HR)
ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್
ರವೀಂದ್ರನಾಥ್ ಠಾಗೂರ್ ರಸ್ತೆ
ಮಚಲಿಪಟ್ನಂ-521001
ಆಂಧ್ರ ಪ್ರದೇಶ

RRB NTPC result date: ಜನವರಿ 15ರೊಳಗೆ ರೈಲ್ವೇ ನೇಮಕಾತಿ ಪರೀಕ್ಷಾ ಫಲಿತಾಂಶ ಪ್ರಕಟ

click me!