ಐಟಿ ಸಂಸ್ಥೆ ಆಕ್ಸೆಂಚರ್ ಈ ವರ್ಷ ಭಾರತ ಹಾಗೂ ಶ್ರೀಲಂಕಾದಲ್ಲಿರುವ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಹಾಗೂ ಬಡ್ತಿಯನ್ನು ತಡೆ ಹಿಡಿದಿದೆ.
ನವದೆಹಲಿ: ಐಟಿ ಸಂಸ್ಥೆ ಆಕ್ಸೆಂಚರ್ ಈ ವರ್ಷ ಭಾರತ ಹಾಗೂ ಶ್ರೀಲಂಕಾದಲ್ಲಿರುವ ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಹಾಗೂ ಬಡ್ತಿಯನ್ನು ತಡೆ ಹಿಡಿದಿದೆ. ಉದ್ಯೋಗದಲ್ಲಿ ಕಾನೂನಾತ್ಮಕವಾಗಿ ಕಡ್ಡಾಯ ಹಾಜರಿ ಹಾಗೂ ನಿರ್ಣಾಯಕ ಕೌಶಲ್ಯ ಕ್ಷೇತ್ರಗಳಲ್ಲಿ ಉದ್ಯೋಗಿಗಳ ಬದ್ಧತೆಯ ಹೊರತಾಗಿ 2023ರಲ್ಲಿ ಸಂಸ್ಥೆ ಭಾರತ ಹಾಗೂ ಶ್ರೀಲಂಕಾದಲ್ಲಿರುವ ಉದ್ಯೋಗಿಗಳಿಗೆ ವೇತನ ಹೆಚ್ಚಳ ಹಾಗೂ ಬಡ್ತಿ ನೀಡುವುದಿಲ್ಲ ಎಂದು ಆಕ್ಸೆಂಚರ್‌ನ ಭಾರತದ ವ್ಯವಸ್ಥಾಪಕ ನಿರ್ದೇಶಕ ಅಜಯ್ ವಿಜ್ ಉದ್ಯೋಗಿಗಳಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಭಾರತದಲ್ಲಿ ಆಕ್ಸೆಂಚರ್ ಸಂಸ್ಥೆ 3 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.
ಐಟಿ ವಲಯವು ಪ್ರಗತಿಗೆ ಅಡ್ಡಿಯಾಗುವ ಹಲವು ಸಮಸ್ಯೆಗಳನ್ನು(headwinds) ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸಂಸ್ಥೆಯಿಂದ ಉದ್ಯೋಗಿಗಳಿಗೆ ಈ ರೀತಿ ಮೇಲ್ ಬಂದಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಬಂದ ಮಾಹಿತಿ ಪ್ರಕಾರ ಆಕ್ಸೆಂಚರ್ ಸಂಸ್ಥೆ ಅನಗತ್ಯ ಖರ್ಚುವೆಚ್ಚಗಳನ್ನು ಭರಿಸುವುದಕ್ಕೆ ಸಿದ್ಧವಿಲ್ಲ, ಕಳೆದ ಮಾರ್ಚ್‌ನಲ್ಲಿ ಆಕ್ಸೆಂಚರ್ ತನ್ನ 19 ಸಾವಿರ ಉದ್ಯೋಗಿಗಳನ್ನು ತೆಗೆದು ಹಾಕುವುದಾಗಿ ಘೋಷಣೆ ಮಾಡಿತ್ತು.
2023ರ ಹಣಕಾಸು ವರ್ಷದ ಆರಂಭದಲ್ಲಿ ಸಂಸ್ಥೆಯೂ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸವಾಲಿನಿಂದ ಕೂಡಿದ ಸ್ಥಿತಿಯನ್ನು ಸಂಸ್ಥೆ ಅನುಭವಿಸಿದೆ ಹಾಗೂ ಬೆಳವಣಿಗೆ ವಿಚಾರದಲ್ಲೂ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಆಗಿದೆ ಎಂದು ಸಂಸ್ಥೆ ನಿರ್ದೇಶಕ ನಿರ್ದೇಶಕ ಅಜಯ್ ವಿಜ್ (Ajay Vij) ಹೇಳಿದ್ದಾರೆ. ಸೆಪ್ಟೆಂಬರ್-ಆಗಸ್ಟ್ ಹಣಕಾಸು ವರ್ಷವನ್ನು ಅಳವಡಿಸಿಕೊಂಡಿರುವ ಡಬ್ಲಿನ್‌ನಲ್ಲಿರುವ ಆಕ್ಸೆಂಚರ್‌ನ ಪ್ರಧಾನ ಕಚೇರಿಯೂ ಕಳೆದ ತ್ರೈಮಾಸಿಕದಲ್ಲಿ ಮಿಶ್ರ ಸಂಖ್ಯೆಯನ್ನು (ಕಾಲು ಮುಕ್ಕಾಲೂ) ಹೊಂದಿದೆ. ಹಾಗೂ 20204ನೇ ಹಣಕಾಸು ವರ್ಷಕ್ಕಾಗಿ ಅದರ ಮಾರ್ಗದರ್ಶನವು ಕಳೆದ 16 ವರ್ಷಗಳಲ್ಲಿ ಎರಡನೇ ಅತ್ಯಂತ ಕಡಿಮೆ ಮಾರ್ಗದರ್ಶನವೆನಿಸಿದೆ.
ಜಾಗತಿಕ ಹಸಿವು ಸೂಚ್ಯಂಕ: 111ನೇ ಸ್ಥಾನಕ್ಕೆ ಕುಸಿದ ಭಾರತ: ಕೇಂದ್ರದಿಂದ ವರದಿ ತಿರಸ್ಕಾರ
ವಿಜ್ ((Accenture managing director))ತನ್ನ ಇಮೇಲ್‌ನಲ್ಲಿ, ನಮ್ಮ ಕೊಡುಗೆಗಳ ನಿಯಮವೂ, ಸಾಮರ್ಥ್ಯ ಮತ್ತು ಸ್ಥಳದ ಆಧಾರದ ಮೇಲೆ ನಿರ್ಣಯವಾಗುತ್ತದೆ. ಅದು ಆಕ್ಸೆಂಚರ್‌ಗೆ ಕೈಗೆಟುಕುವ ಬೆಲೆಯಲ್ಲಿದೆ. ನಮ್ಮ ಸೇವೆಗಳ ಸ್ಪರ್ಧಾತ್ಮಕ ಬೆಲೆ ಸೇರಿದಂತೆ ನಮ್ಮ ವ್ಯಾಪಾರದ ಒಳಿತಿಗೆ ನಮ್ಮ ವೇತನದಾರರನ್ನು ಮಾರುಕಟ್ಟೆಯೊಂದಿಗೆ ಜೋಡಿಸುವುದು ಅತ್ಯಗತ್ಯವಾಗಿದೆ. ನಮ್ಮ ಕಾರ್ಯಕ್ಷಮತೆಯ ಸಂದರ್ಭವನ್ನು ಗಮನಿಸಿದರೆ, ಕೆಲವು ನಿರ್ಣಾಯಕ ಕೌಶಲ್ಯ ಕ್ಷೇತ್ರಗಳಲ್ಲಿ ಕಾನೂನುಬದ್ಧವಾಗಿ ಕಡ್ಡಾಯ ಅಥವಾ ಬದ್ಧತೆಯನ್ನು ಹೊರತುಪಡಿಸಿ ನಾವು ಈ ವರ್ಷ ಯಾವುದೇ ಮೂಲ ವೇತನ ಹೆಚ್ಚಳವನ್ನು ಒದಗಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದು ಅನ್ವಯವಾಗುವಲ್ಲೆಲ್ಲಾ ವ್ಯಕ್ತಿಯ ಕೊಡುಗೆಗಳ ಆಧಾರದ ಮೇಲೆ ವೈಯಕ್ತಿಕ ಕಾರ್ಯಕ್ಷಮತೆಯ ಬೋನಸ್‌ಗಳನ್ನು ಪಾವತಿಸಲಾಗುತ್ತದೆ ಎಂದು ವಿಜ್ ಅವರು ತಮ್ಮ ಉದ್ಯೋಗಿಗಳಿಗೆ ಕಳುಹಿಸಿದ ಮೇಲ್‌ನಲ್ಲಿ ಹೇಳಿದ್ದಾರೆ.
89 ವರ್ಷದ ವೃದ್ಧನಿಗೆ ವಿಚ್ಛೇದನ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ಹೇಳಿದ್ದೇನು?