ಐಐಟಿ, ಐಐಎಮ್ ಅಲ್ಲ, ಬಿಟೆಕ್ ವಿದ್ಯಾರ್ಥಿನಿಗೆ ರಾಶಿಗೆ ಒಲಿಯಿತು 85 ಲಕ್ಷ ರೂ ವೇತನದ ಉದ್ಯೋಗ!

Published : Oct 09, 2023, 08:15 PM IST
ಐಐಟಿ, ಐಐಎಮ್ ಅಲ್ಲ, ಬಿಟೆಕ್ ವಿದ್ಯಾರ್ಥಿನಿಗೆ ರಾಶಿಗೆ ಒಲಿಯಿತು 85 ಲಕ್ಷ ರೂ ವೇತನದ ಉದ್ಯೋಗ!

ಸಾರಾಂಶ

ರಾಶಿ ಬಾಗ್ಗಾ ಐಐಟಿ, ಎನ್‌ಐಟಿ ಅಥವಾ ಐಐಎಮ್ ವಿದ್ಯಾರ್ಥಿನಿಯಲ್ಲ. ಈಕೆ IIIT-NR ಸಂಸ್ಥೆಯ ಬಿಟೆಕ್ ವಿದ್ಯಾರ್ಥಿನಿ. ಆದರೆ ರಾಶಿ ಇದೀಗ ಬರೋಬ್ಬರಿ 85 ಲಕ್ಷ ರೂಪಾಯಿ ವೇತನದ ಉದ್ಯೋದ ಗಿಟ್ಟಿಸಿಕೊಂಡು ಸ್ಪೂರ್ತಿಯಾಗಿದ್ದಾರೆ.

ರಾಯ್‌ಪುರ್(ಅ.08) ಐಐಟಿ, ಐಐಎಮ್ ಸೇರಿದಂತೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಕೋಟಿ ರೂಪಾಯಿ ಉದ್ಯೋಗ ಗಿಟ್ಟಿಸಿಕೊಂಡ ಹಲವು ಉದಾಹರಣೆಗಳಿವೆ. ಇದರ ನಡುವೆ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ವಿದ್ಯಾ ಸಂಸ್ಥೆ ರಾಯ್‌ಪುರದ(IIIT-NR)ಬಿಟೆಕ್ ವಿದ್ಯಾರ್ಥಿನಿಯಾಗಿದ್ದ ರಾಶಿ ಬಗ್ಗಾ ಇದೀಗ ದಾಖಲೆ ವೇತನದ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.ಇಷ್ಟೇ ಅಲ್ಲ  IIIT-NR ಕಾಲೇಜಿನ ಇದುವರೆಗಿನ ಗರಿಷ್ಠ ಮೊತ್ತದ ಉದ್ಯೋಗ ಆಫರ್ ಅನ್ನೋ ದಾಖಲೆಯನ್ನು ಬರೆದಿದ್ದಾರೆ.

ರಾಯ್‌ಪುರದ IIIT-NR ಕಾಲೇಜು ಕಳೆದ 5 ವರ್ಷದಲ್ಲಿ ಶೇಕಡಾ 100 ರಷ್ಟು ಪ್ಲೇಸ್‌ಮೆಂಟ್ ದಾಖಲೆ ಹೊಂದಿದೆ. ಈ ಬಾರಿ ಈ ದಾಖಲೆಯಲ್ಲಿ ಮತ್ತೊಂದು ಗರಿಷ್ಠ ಮೊತ್ತದ ದಾಖಲೆಯೂ ಸೇರಿಕೊಂಡಿದೆ. ಅಂತಿಮ ವರ್ಷದ ಬಿಟೆಕ್ ವಿದ್ಯಾರ್ಥನಿಯಾಗಿದ್ದ ರಾಶಿ ಬಗ್ಗಾ, ಕೆಲ ಪ್ರಮುಖ ಕಂಪನಿಗಳ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಕೆಲ ದಿನಗಳ ಹಿಂದೆ ಬೇರೊಂದು ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಆದರೆ ಪ್ರತಿಭಾನ್ವಿತ ರಾಶಿ ಬಗ್ಗಾ ತುಡಿತ ನಿಂತಿರಲಿಲ್ಲ. ಮತ್ತೆ ಸಂದರ್ಶನದಲ್ಲಿ ಪಾಲ್ಗೊಂಡ ರಾಶಿ ಬಗ್ಗಾ ಇದೀಗ ವಾರ್ಷಿಕ 85 ಲಕ್ಷ ರೂಪಾಯಿ ವೇತನ ಗಿಟ್ಟಿಸಿಕೊಂಡಿದ್ದಾರೆ.

ದಾಖಲೆಯ 22 ಲಕ್ಷದ ವೇತನ ಪಡೆದು ಇತಿಹಾಸ ನಿರ್ಮಿಸಿದ ಎಂಎಂಎಂಯುಟಿ ಮೂವರು ವಿದ್ಯಾರ್ಥಿನಿಯರು!

2023ರ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿನಿ ರಾಶಿ ಬಗ್ಗಾ ಇದೀಗಗ IIIT-NR ಕಾಲೇಜಿನಲ್ಲಿ ಪಡೆದ ಗರಿಷ್ಠ ಮೊತ್ತದ ಆಫರ್ ಅನ್ನೋ ದಾಖಲೆ ಬರೆದಿದ್ದಾರೆ. 2022ರಲ್ಲಿ ಚಿಂಕಿ ಕರ್ದಾ 57 ಲಕ್ಷ ರೂಪಾಯಿ ಉದ್ಯೋಗ ಆಫರ್ ಪಡೆದುಕೊಂಡಿದ್ದರು. ಇದು IIIT-NR ಕಾಲೇಜಿನ ಗರಿಷ್ಠ ಆಫರ್ ಆಗಿತ್ತು. ಇದೀಗ ಈ ದಾಖಲೆಯನ್ನು ರಾಶಿ ಬಗ್ಗಾ ಮುರಿದಿದ್ದಾರೆ.

ಸಾಮಾನ್ಯವಾಗಿ ಐಐಟಿ, ಎನ್ಐಟಿ, ಐಐಎಂ ಸೇರಿದಂತೆ ಕೆಲ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ದಾಖಲೆ ಮೊತ್ತ ವೇತನದ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. 2020ರಲ್ಲಿ ಇದೇ  IIIT NR ಕಾಲೇಜಿನ ವಿದ್ಯಾರ್ಥಿ ವಾರ್ಷಿಕ 1 ಕೋಟಿ ರೂಪಾಯಿ ಮೊತ್ತದ ಉದ್ಯೋಗ ಆಫರ್ ಗಿಟ್ಟಿಸಿಕೊಂಡಿದ್ದರು. ಇದು ಅತ್ಯಧಿಕ ಮೊತ್ತದ ದಾಖಲೆ ಬರೆದಿತ್ತು. ಆದರೆ ಕೋವಿಡ್ ಕಾರಣದಿಂದ ವಿದ್ಯಾರ್ಥಿಗೆ ಕೆಲಸಕ್ಕೆ ಸೇರಲು ಸಾಧ್ಯವಾಗಿರಲಿಲ್ಲ. ಹೀಗಾಗಿ IIIT NR ಪೈಕಿ ಆಫರ್ ಮಾತ್ರವಲ್ಲ , ಗರಿಷ್ಠ ಮೊತ್ತದ ವೇತನದ ಉದ್ಯೋಗಕ್ಕೆ ಸೇರಿದ ಹೆಗ್ಗಳಿಕೆ ರಾಶಿ ಬಗ್ಗಾ ಪಾಲಾಗಿದೆ.

ಇನ್ಫೋಸಿಸ್ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭ: ಟೆಕ್ಕಿಗಳಿಗೆ ಈ ಬಾರಿಯಾದ್ರೂ ಸಿಗುತ್ತಾ ವೇತನ ಹೆಚ್ಚಳ?

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?