ಮತಗಳ್ಳತನ ಪಿತೂರಿಯ ಹಿಂದೆಯೂ ವಿದೇಶಿ ಕೈವಾಡ? ಸಿಕ್ಕೇ ಬಿಟ್ಟಿತು ಸಾಕ್ಷ್ಯ- ಸಂಕಷ್ಟದಲ್ಲಿ Rahul Gandhi, ಕಾಂಗ್ರೆಸ್​!

Published : Sep 12, 2025, 08:53 PM IST
Rahul Gandhis vote chori document was made out of India

ಸಾರಾಂಶ

ಮತಗಳ್ಳತನದ ಆರೋಪದ ದಾಖಲೆ ಮ್ಯಾನ್ಮಾರ್‌ನಲ್ಲಿ ಸಿದ್ಧಪಡಿಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ರಾಹುಲ್ ಗಾಂಧಿ ಮಂಡಿಸಿದ ದಾಖಲೆಯನ್ನು ಪರಿಶೀಲಿಸಿದಾಗ ಈ ವಿಷಯ ಬಯಲಾಗಿದ್ದು, ಕಾಂಗ್ರೆಸ್​ನಲ್ಲಿ ಆತಂಕ ಮನೆ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಮತಗಳ್ಳತನದ ಆರೋಪ ಬಹಳ ಸದ್ದು ಮಾಡುತ್ತಿದೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೋದಲ್ಲಿ ಬಂದಲ್ಲಿ ಇದೇ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪು ನಡೆದಿಲ್ಲ ಎಂದು ಖುದ್ದು ಚುನಾವಣಾ ಆಯೋಗ ಹೇಳಿದ್ದರೂ ಸಂಸತ್ತಿನ ಅಧಿವೇಶನವನ್ನೂ ನಡೆಸಲು ಕೊಡದೇ ಕಾಂಗ್ರೆಸ್ಸಿಗರ ಭಾರಿ ಕೋಲಾಹಲವನ್ನೇ ಸೃಷ್ಟಿಸಿದ್ದರು. ಕರ್ನಾಟಕದಲ್ಲಿಯೂ ಇದರ ಕಾವು ಬಹು ಜೋರಾಗಿಯೇ ನಡೆಯುತ್ತಿದೆ. ಆದರೆ ಇದೀಗ ಶಾಕಿಂಗ್​ ವಿಷಯವೊಂದು ಬಯಲಿಗೆ ಬಂದಿದೆ. ಅದೇನೆಂದರೆ, ಮತಗಳ್ಳತನ (Vote Chori) ಆರೋಪದ ದಾಖಲೆ ಹಿಂದೆ ವಿದೇಶಿ ಕೈವಾಡ ಇರುವುದು ಬಯಲಾಗಿದೆ? ಈ ಬಗ್ಗೆ ವಿಷಯ ಹೊರಬರುತ್ತಲೇ ಕಾಂಗ್ರೆಸ್​ ಕಾರ್ಯಕರ್ತರು ಸಮರ್ಥಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.

ಸಿಕ್ಕಿದೆ ಪುರಾವೆ!

ಭಾರತ ಚುನಾವಣಾ ಆಯೋಗಕ್ಕೆ (ECI) ಕಳಂಕ ತರುವ 'ವೋಟ್ ಚೋರಿ' ಪಿತೂರಿ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೂಡ ಈಗ ಉತ್ತರಿಸಬೇಕಿದೆ ಎಂದು ಬಿಜೆಪಿ ಹೇಳುತ್ತಿದೆ. ಅಷ್ಟಕ್ಕೂ ಈ ವರ್ಷದ ಆಗಸ್ಟ್ 7 ರಂದು ನಡೆದ ತಮ್ಮ ಪತ್ರಿಕಾಗೋಷ್ಠಿಯಲ್ಲಿ ರಾಹುಲ್​ ಗಾಂಧಿ ಮಂಡಿಸಿದ ದಾಖಲೆಯನ್ನು ಮ್ಯಾನ್ಮಾರ್ ದೇಶದಲ್ಲಿ ಸಿದ್ಧಪಡಿಸಲಾಗಿದೆ ಎಂದು ಇದೀಗ ಬೆಳಕಿಗೆ ಬಂದಿದೆ. ಇದನ್ನು ಮೊದಲು Xನಲ್ಲಿ ರಿವೀಲ್​ ಮಾಡಿದ್ದು, 'ಖುರ್ಪೆಂಚ್'. ರಾಹುಲ್ ಗಾಂಧಿಯವರ 'ವೋಟ್ ಚೋರಿ' ದಾಖಲೆಯನ್ನು ಭಾರತದ ಹೊರಗೆ ರಚಿಸಲಾಗಿದೆ ಎನ್ನುವ ಮೂಲಕ ಬಲವಾದ ಪುರಾವೆಗಳನ್ನು ಅವರು ಹಂಚಿಕೊಂಡಿದ್ದಾರೆ!

ಇದನ್ನೂ ಓದಿ: ನೀವು ನಿಜವಾದ ಭಾರತೀಯರೇನ್ರೀ...? Rahul Gandhiಗೆ ಸುಪ್ರೀಂಕೋರ್ಟ್​ ಛೀಮಾರಿ

ವೆಬ್‌ಸೈಟ್‌ನಲ್ಲಿ ದಾಖಲೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ವೋಟ್ ಚೋರಿ ಪ್ರೂಫ್' ಪಠ್ಯಕ್ಕೆ ಹೈಪರ್‌ಲಿಂಕ್ ಮಾಡಲಾದ ತಮ್ಮ ವೆಬ್‌ಸೈಟ್‌ನಲ್ಲಿ ದಾಖಲೆಯನ್ನು ಅವರು ಹಂಚಿಕೊಂಡಿದ್ದಾರೆ. ಅವರು ಶೇರ್​ ಮಾಡಿರುವ ಈ ಗೂಗಲ್​ ಫೋಲ್ಡರ್​ನಲ್ಲಿ 'ರಾಹುಲ್ ಗಾಂಧಿಯವರ ಪ್ರಸ್ತುತಿ' ಎಂಬ ಹೆಸರಿನ 3 PDF ಫೈಲ್‌ಗಳನ್ನು ಕಾಣಬಹುದು. ಫೈಲ್‌ಗಳು ಆಗಸ್ಟ್ 7 ರಂದು ರಾಹುಲ್​ ಗಾಂಧಿ ಪ್ರಸ್ತುತಪಡಿಸಿದ ದಾಖಲೆಯ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಆವೃತ್ತಿಗಳನ್ನು ಒಳಗೊಂಡಿವೆ.

ಮ್ಯಾನ್ಮಾರ್ ಪ್ರಮಾಣಿತ ಸಮಯದಲ್ಲಿ ರಚನೆ

ಇದನ್ನು ಸೂಕ್ಷ್ಮವಾಗಿ ನೀಡಿದಾಗ ರಾಹುಲ್ ಗಾಂಧಿಯವರ ಪ್ರಸ್ತುತಿಯ ಎಲ್ಲಾ ಮೂರು ಆವೃತ್ತಿಗಳನ್ನು ಮ್ಯಾನ್ಮಾರ್ ಪ್ರಮಾಣಿತ ಸಮಯ (MMT) ದಲ್ಲಿ ರಚಿಸಲಾಗಿದೆ ಎಂದು ಕಂಡುಬಂದಿದೆ. MMT ಎನ್ನುವುದು ಮ್ಯಾನ್ಮಾರ್‌ನ ಸಮಯ ವಲಯವನ್ನು ಸೂಚಿಸುತ್ತದೆ, ಇದು ಸಂಯೋಜಿತ ಸಾರ್ವತ್ರಿಕ ಸಮಯ (UTC) ಗಿಂತ 6 ಗಂಟೆ 30 ನಿಮಿಷ ಮುಂದಿದೆ. ಭಾರತದಲ್ಲಿ ರಚಿಸಲಾದ PDF ಫೈಲ್‌ಗಳು ನಿಖರವಾದ UTC + 5:30 ಎಂದು ತೋರಿಸುತ್ತದೆ. ಇದು ತೀರಾ ಟೆಕ್ನಿಕಲ್​ ವಿಷಯವಾಗಿದ್ದು, ಆದರೆ ಅದರಿಂದಲೇ ಈ ದಾಖಲೆ ಮ್ಯಾನ್ಮಾರ್​ನಲ್ಲಿ ರೆಡಿಯಾಗಿದ್ದು ಎನ್ನುವುದು ತಿಳಿದುಬಂದಿದೆ!

ಕಾಂಗ್ರೆಸ್ಸಿಗರು ಗರಂ

ಇದನ್ನು ಹಂಚಿಕೊಳ್ಳುತ್ತಲೇ ಕಾಂಗ್ರೆಸ್ ಕೆರಳಿದೆ. ಸೋಷಿಯಲ್​ ಮೀಡಿಯಾದಲ್ಲಿ ಇದರ ವಿರುದ್ಧ ಕಾಂಗ್ರೆಸ್ಸಿಗರು ಹರಿಹಾಯುತ್ತಿದ್ದಾರೆ. ಇದೀಗ ಬಿಜೆಪಿಗೆ ಭಾರಿ ಅಸ್ತ್ರವಾಗಿದೆ. ಈ ಹಿಂದೆ ಕಾಂಗ್ರೆಸ್ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಹಿಡಿದು ರಾಹುಲ್ ಗಾಂಧಿಯವರ ನಿಗೂಢ ವಿದೇಶ ಪ್ರವಾಸಗಳಾಗ ಬಗ್ಗೆ ಈಗ ಪುನಃ ಚರ್ಚೆ ಮಾಡುತ್ತಿದ್ದಾರೆ ಬಿಜೆಪಿ ಬೆಂಬಲಿಗರು. ಟರ್ಕಿಯಂತಹ ಪ್ರತಿಕೂಲ ರಾಷ್ಟ್ರದಲ್ಲಿ ತನ್ನ ಕಚೇರಿಯನ್ನು ತೆರೆಯುವ ಕಾಂಗ್ರೆಸ್ ಯೋಜನೆಗಳು, ಸಂಶಯಾಸ್ಪದ ಸಾಮಾಜಿಕ ಮಾಧ್ಯಮ ಚಟುವಟಿಕೆ ಮತ್ತು ಯಾವುದೇ ಪುರಾವೆಗಳಿಲ್ಲದೆ ಭಾರತೀಯ ಚುನಾವಣಾ ವ್ಯವಸ್ಥೆಯ ಮೇಲೆ ಪದೇ ಪದೇ ಆಕ್ಷೇಪಣೆಗಳನ್ನು ವ್ಯಕ್ತಪಡಿಸುವ ಸಂಘಟಿತ ಪ್ರಯತ್ನಗಳು ಆತಂಕಕಾರಿಯಾಗಿದೆ ಎಂದು ಬಿಜೆಪಿ ಹೇಳಿದೆ.

ಇದನ್ನೂ ಓದಿ: ರಾಹುಲ್​- ಪ್ರಿಯಾಂಕಾ ಯಾರ್ರೀ? ನನ್ನ ಹೆಸರು ದುರ್ಬಳಕೆ ಮಾಡಲು ಅಧಿಕಾರ ಯಾರ್ರಿ ಕೊಟ್ರು?- ಗುಡುಗಿದ ಮಹಿಳೆ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ