ಮದ್ದೂರು ಗಲಭೆ ಹಿಂದೇ ಸರ್ಕಾರದ ಕೈವಾಡ: ಸಂಸದ ಗೋವಿಂದ ಕಾರಜೋಳ ಆರೋಪ

Published : Sep 12, 2025, 07:43 PM IST
Govinda Karajola

ಸಾರಾಂಶ

ಮದ್ದೂರು ಗಣೇಶೋತ್ಸವ ವೇಳೆ ನಡೆದ ಗಲಭೆಯಲ್ಲಿ ಸರ್ಕಾರದ ಕೈವಾಡವಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ಮುನಿರಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂ ಧರ್ಮ ಭವ್ಯ ಸಂಸ್ಕೃತಿ ಹೊಂದಿದೆ. ಗಣೇಶೋತ್ಸವ ಎಂದರೆ ಪ್ರತಿಯೊಬ್ಬರಿಗೂ ಉತ್ಸಾಹ-ಉಲ್ಲಾಸ.

ಮುನಿರಾಬಾದ್‌ (ಸೆ.12): ಮದ್ದೂರು ಗಣೇಶೋತ್ಸವ ವೇಳೆ ನಡೆದ ಗಲಭೆಯಲ್ಲಿ ಸರ್ಕಾರದ ಕೈವಾಡವಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ಮುನಿರಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂ ಧರ್ಮ ಭವ್ಯ ಸಂಸ್ಕೃತಿ ಹೊಂದಿದೆ. ಗಣೇಶೋತ್ಸವ ಎಂದರೆ ಪ್ರತಿಯೊಬ್ಬರಿಗೂ ಉತ್ಸಾಹ-ಉಲ್ಲಾಸ. ಈ ಉತ್ಸವವನ್ನು ಶತಮಾನಗಳಿಂದ ಆಚರಿಸಿಕೊಂಡು ಬಂದಿದ್ದೇವೆ. ಇಲ್ಲಿ ಪ್ರತಿಯೊಬ್ಬರಿಗೂ ಪೂಜೆ ಮಾಡುವ ಅವಕಾಶವಿದೆ. ಆದರೆ, ರಾಜ್ಯ ಸರ್ಕಾರ ಹಿಂದೂಗಳನ್ನು ಹತ್ತಿಕ್ಕಲು ಹಾಗೂ ಹಿಂದೂಗಳ ಮೇಲೆ ಕಳಂಕ ತರಲು ಗಣೇಶೋತ್ಸವದ ವೇಳೆ ಗಲಭೆ ಸೃಷ್ಟಿಸಿದೆ. ಕೈಯಲ್ಲಿ ಕೇಸರಿ ಧ್ವಜ ಹಿಡಿದುಕೊಂಡವರ ಮೇಲೆ ವಿನಾಕಾರಣ ದೂರು ದಾಖಲಿಸಲಾಗುತ್ತಿದೆ. ಇದು ಸರಿಯಲ್ಲ. ಸರ್ಕಾರ ಹಿಂದೂಗಳ ವಿರುದ್ಧ ಧಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಸರ್ಕಾರ ಖಂಡಿತವಾಗಿಯೂ ಡಿಸೆಂಬರ್ 31 ದಾಟಲ್ಲ

ಕಾಂಗ್ರೆಸ್ ಸರ್ಕಾರದಲ್ಲಿನ ಕಚ್ಚಾಟ ಗಮನಿಸಿದರೆ ಖಂಡಿತವಾಗಿಯೂ ಡಿಸೆಂಬರ್ 31 ದಾಟುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಸರ್ಕಾರದಲ್ಲಿ ಸದ್ಯ 70-80 ಜನ ಶಾಸಕರು ಅಸಮಾಧಾನಿತರಾಗಿದ್ದಾರೆ. ಎರಡು ವರ್ಷ ಆಯ್ತು ಅಧಿಕಾರಕ್ಕೆ ಬಂದು. ಗ್ರಾಮಗಳಲ್ಲಿ ಒಂದೇ ಒಂದು ಕಾಮಗಾರಿ ಆಗಿಲ್ಲ. ಹಳ್ಳಿ ಜನ ಛೀಮಾರಿ ಹಾಕುತ್ತಿದ್ದಾರೆ ಎಂದು ಹೈಕಮಾಂಡ್ ನಾಯಕರ ಮುಂದೆ ಅಸಮಾಧಾನ ತೋಡಿಕೊಂಡಿದ್ದಾರೆ. 52 ಜನ ನಾಯಕರು ಪತ್ರವನ್ನೂ ಕೊಟ್ಟಿದ್ದಾರೆ. ಬಡವರಿಗೆ ಮನೆ ಕೊಡೋಕೆ ಆಗ್ತಿಲ್ಲ. ಅವರಿಗೆ ಮನೆ ಕೊಡಬೇಕೆಂದರೆ ₹25000 ದುಡ್ಡು ಕೇಳಲಾಗುತ್ತಿದೆ ಎಂದು ಸುರ್ಜೆವಾಲಾ ಹಾಗೂ ಖರ್ಗೆ ಎದುರು ಹೇಳುತ್ತಿದ್ದಾರೆ.

ಸುರ್ಜೆವಾಲಾ ಅವರು ತೇಪೆ ಹಚ್ಚುವ ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ತೇಪೆ ಹಚ್ಚುವುದು ಅಂದರೆ ಹಳೆಯ ಬಟ್ಟೆಗಳಿಗೆ ಹೊಲಿಗೆ ಹಾಕಿದಂತೆ. ಆ ಹೊಲಿಗೆ ಬಹಳ ದಿನ ಉಳಿಯಲ್ಲ. ಬಟ್ಟೆ ಜಿಗಿಸತ್ತ ಮೇಲೆ ಹೊಲಿಗೆ ಬಿಚ್ಚಿಹೋಗುತ್ತೆ ಎಂದು ಲೇವಡಿ ಮಾಡಿದರು. ನನ್ನ ಮಂತ್ರಿ ಮಾಡಿಲ್ಲ. ನಿನ್ನ ಮಂತ್ರಿ ಮಾಡಿಲ್ಲ ಎಂದು ಈ ಸರ್ಕಾರ ಇದ್ದರೆ ಎಷ್ಟು, ಹೋದ್ರೆ ಎಷ್ಟು ಎಂದು ರಾಯರಡ್ಡಿ, ಬಿ.ಆರ್. ಪಾಟೀಲ, ದೇಶಪಾಂಡೆ ಅಂತಹ ಹಿರಿಯರು ಹೇಳುತ್ತಿದ್ದಾರೆ. ಸರ್ಕಾರದಲ್ಲಿ ನಾಲ್ಕು ಗುಂಪುಗಳಾಗಿ ಕಚ್ಚಾಡುತ್ತಿದ್ದಾರೆ. ಅಲ್ಪಸಂಖ್ಯಾತ, ದಲಿತ, ಒಕ್ಕಲಿಗ, ಲಿಂಗಾಯತ ಎಂದು ಸತ್ತ ದನ ತಿನ್ನಲು ರಣಹದ್ದುಗಳಂತೆ ಕಚ್ಚಾಡುತ್ತಿದ್ದಾರೆ. ಇದನ್ನು ನೋಡಿದರೆ ಈ ಸರ್ಕಾರ ಖಂಡಿತವಾಗಿಯೂ ಡಿಸೆಂಬರ್ 31 ದಾಟುವುದಿಲ್ಲ ಎಂದು ಪುನರುಚ್ಚರಿಸಿದರು.

ಕಾಂಗ್ರೆಸ್‌ನ ಒಡಕಿನ ಲಾಭವನ್ನ ಬಿಜೆಪಿ ಪಡೆದುಕೊಳ್ಳುತ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಸೆಂಬರ್ 31ರ ನಂತ್ರ ಹೇಳುತ್ತೇನೆ. ನಾವು ಯಾವುದೇ ಕಾರಣಕ್ಕೂ ತೇಪೆ ಸರ್ಕಾರ ಮಾಡಲ್ಲ. ಹಾಲು ಕುಡಿದೇ ಸಾಯುತ್ತಿದ್ದಾರೆ. ನಾವೇಕೆ ವಿಷ ಹಾಕೋಣ. ಮಧ್ಯಂತರ ಚುನಾವಣೆ 224 ಜನರಿಗೆ ಇಷ್ಟ ಇರಲಿಕ್ಕಿಲ್ಲ. ಪರಿಸ್ಥಿತಿ ಹಂಗಿದೆ ಎಂದು ಹೇಳಿದರು. ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌ನ ಲೋಕಾಯುಕ್ತರ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!