Karnataka Election 2023: ಕಾಂಗ್ರೆಸ್‌, ಬಿಜೆಪಿ ಹೊರತು ಪಡಿಸಿ ಮತ್ತಾರಿಗೂ ಇಲ್ಲ ಮತ ಭಾಗ್ಯ..!

By Kannadaprabha News  |  First Published May 17, 2023, 12:33 PM IST

ಮತದಾರರು ಬರೀ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಅಥವಾ ಬಿಜೆಪಿಗೆ ಮಾತ್ರ ಮತ ನೀಡಿದ್ದಾರೆಯೇ ಹೊರತು, ಆಮ್‌ ಆದ್ಮಿ ಪಕ್ಷವಾಗಲಿ ಅಥವಾ ಇತರೆ ಸ್ಥಳೀಯ ಪಕ್ಷಗಳಿಗಾಗಲಿ ಅಥವಾ ಪಕ್ಷೇತರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ.


ಬಸವರಾಜ ಹಿರೇಮಠ

ಧಾರವಾಡ(ಮೇ.17):  ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ವಿಧಾನಸಭಾ ಚುನಾವಣೆಯ ಮತದಾನದ ಕ್ರಮವನ್ನು ಗಮನಿಸಿದಾಗ, ಮತದಾರರು ಬರೀ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಅಥವಾ ಬಿಜೆಪಿಗೆ ಮಾತ್ರ ಮತ ನೀಡಿದ್ದಾರೆಯೇ ಹೊರತು, ಆಮ್‌ ಆದ್ಮಿ ಪಕ್ಷವಾಗಲಿ ಅಥವಾ ಇತರೆ ಸ್ಥಳೀಯ ಪಕ್ಷಗಳಿಗಾಗಲಿ ಅಥವಾ ಪಕ್ಷೇತರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕುಂದಗೋಳದಲ್ಲಿ ಮಾತ್ರ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸಿ ಟಿಕೆಟ್‌ ಸಿಗದೇ ಪಕ್ಷೇತರರಾಗಿ ಕಣದಲ್ಲಿದ್ದ ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡರ ಒಟ್ಟು ಮತಗಳಲ್ಲಿ ಶೇ. 19.62ರಷ್ಟಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Tap to resize

Latest Videos

ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಲ್ಕು ಹಾಗೂ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದಿವೆ. ಈ ಎರಡು ಪಕ್ಷಗಳ ಅಭ್ಯರ್ಥಿಗಳನ್ನು ಹೊರತು ಪಡಿಸಿ ಒಟ್ಟು 78 ಅಭ್ಯರ್ಥಿಗಳು ಆಮ್‌ ಆದ್ಮಿ, ಜೆಡಿಎಸ್‌ ಹಾಗೂ ಇತರ ಪಕ್ಷಗಳಿಂದ ಮತ್ತು ಪಕ್ಷೇತರರಾಗಿ ಕಣದಲ್ಲಿದ್ದರು. ಬಿಜೆಪಿ ಒಟ್ಟು ಮತಗಳಲ್ಲಿ ಶೇ. 47.34ರಷ್ಟುಪಡೆದು ಅತೀ ಹೆಚ್ಚು ಮತ ಗಳಿಸಿದ ಹೆಗ್ಗಳಿಕೆ ಹೊಂದಿದೆ. ಕಾಂಗ್ರೆಸ್‌ ನಾಲ್ಕು ಸ್ಥಾನಗಳನ್ನು ಗೆದ್ದರೂ ಅದು ಪಡೆದ ಶೇಕಡಾವಾರು ಮತ ಶೇ.45.47. ಎರಡೂ ಪಕ್ಷಗಳು ಸೇರಿ ಶೇ. 92.61ರಷ್ಟುಮತಗಳನ್ನು ಪಡೆದುಕೊಂಡಿದ್ದರೆ, ಉಳಿದೆಲ್ಲ ಪಕ್ಷ ಹಾಗೂ ಪಕ್ಷೇತರು ಸೇರಿ ಶೇ. 2.69ರಷ್ಟನ್ನು ಗಳಿಸಿವೆ. ನೋಟಾ ಮತಗಳ ಪಾಲು ಶೇ. 4.7ರಷ್ಟು.

ಯಡಿಯೂರಪ್ಪ, ಶೆಟ್ಟರ್, ಈಶ್ವರಪ್ಪರನ್ನು ಕಡೆಗಣಿಸಿರೋದು ಬಿಜೆಪಿ‌ಯ ಇಂದಿನ ಸ್ಥಿತಿಗೆ ಕಾರಣ: ದಿಂಗಾಲೇಶ್ವರ ಸ್ವಾಮೀಜಿ

ಧಾರವಾಡ ಗ್ರಾಮೀಣ ಭಾಗದಲ್ಲಿ ಬಿಜೆಪಿ ಶೇ. 43.04, ಕಾಂಗ್ರೆಸ್‌ ಶೇ. 53.92 ಮತ್ತು ಜೆಡಿಎಸ್‌ ಶೇ. 0.56 ಮತಗಳನ್ನು ಗಳಿಸಿವೆ. ನೋಟಾ ಮತಗಳ ಪ್ರಮಾಣ ಶೇ. 0.92. ಎಂಟು ಪಕ್ಷೇತರ ಅಭ್ಯರ್ಥಿಗಳು ಶೇ. 0.92 ಮತಗಳನ್ನು ಹಂಚಿಕೊಂಡಿದ್ದಾರೆ. ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಶೇ. 39.45, ಕಾಂಗ್ರೆಸ್‌ ಶೇ. 53.16 ಮತ್ತು ಜೆಡಿಎಸ್‌ ಶೇ. 4.27 ಮತ ಪಡೆದಿವೆ. ನೋಟಾ ಪ್ರಮಾಣ ಶೇ. 0.69, ಒಂಭತ್ತು ಅಭ್ಯರ್ಥಿಗಳು ಹಂಚಿಕೊಂಡಿರುವ ಮತಗಳು ಶೇ. 1.25. ಕುಂದಗೋಳದಲ್ಲಿ ಬಿಜೆಪಿ ಶೇ.49.07, ಕಾಂಗ್ರೆಸ್‌ ಶೇ.26.28, ಜೆಡಿಎಸ್‌ ಶೇ.2.78, ಆಪ್‌ ಶೇ.0.4, ನೋಟಾ ಶೇ.0.65 ಹಾಗೂ ಹತ್ತು ಪಕ್ಷೇತರರು ಶೇ.20.4 ಮತಗಳನ್ನು ಪಡೆದಿದ್ದಾರೆ. ಪಕ್ಷೇತರರು ಪಡೆದ ಮತದಲ್ಲಿ ಎಸ್‌.ಐ. ಚಿಕ್ಕನಗೌಡರ ಪಾಲು ಶೇ. 19.62ರಷ್ಟಿದೆ. ಕಲಘಟಗಿಯಲ್ಲಿ ಕಾಂಗ್ರೆಸ್‌ ಶೇ. 52.86, ಬಿಜೆಪಿ ಶೇ. 44.01, ಜೆಡಿಎಸ್‌ ಶೇ. 0.55, ಆಮ್‌ ಆದ್ಮಿ ಶೇ. 0.31, ನೋಟಾ ಶೇ. 0.7 ಮತ್ತು ಎಂಟು ಪಕ್ಷೇತರರು ಶೇ. 1.56 ಮತ ಸಂಪಾದಿಸಿದ್ದಾರೆ.

Dharwad Constituency Results 2023: ಸೋಲು ಮರೆತು, ಲೋಕಸಭೆ ಚುನಾವಣೆಗೆ ಶೆಟ್ಟರ್‌ ತಯಾರಿ?

ನಗರದಲ್ಲೂ ಪಕ್ಷೇತರರ ನಿರ್ಲಕ್ಷ್ಯ

ನಗರ ಪ್ರದೇಶದಲ್ಲೂ ಪಕ್ಷೇತರರ ಮತದಾರರ ಮೇಲೆ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ. ಹು-ಧಾ ಪಶ್ಚಿಮದಲ್ಲಿ ಬಿಜೆಪಿಗೆ ಶೇ. 59.45, ಕಾಂಗ್ರೆಸ್ಸಿಗೆ ಶೇ. 36.77, ಜೆಡಿಎಸ್‌ಗೆ ಶೇ. 0.7, ಆಮ್‌ ಆದ್ಮಿ ಪಕ್ಷಕ್ಕೆ ಶೇ. 0.46 ಮತ್ತು 11 ಪಕ್ಷೇತರರ ಅಭ್ಯರ್ಥಿಗಳಿಗೆ ಒಟ್ಟಾಗಿ ಶೇ. 1.51. ಮತಗಳು ಬಿದ್ದಿದ್ದು ನೋಟಾ ಪ್ರಮಾಣ ಶೇ. 1.06 ಇದೆ. ಹು-ಧಾ ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿ ಶೇ. 59.27, ಕಾಂಗ್ರೆಸಿಗೆ ಶೇ. 37.89, ಜೆಡಿಎಸ್‌ ಗೆ ಶೇ. 0.32, ಆಮ್‌ ಆದ್ಮಿಗೆ 0.29 ಹಾಗೂ 12 ಪಕ್ಷೇತರರಿಗೆ ಒಟ್ಟಾಗಿ ಶೇ.1.52 ಹಾಗೂ ನೋಟಾ ಶೇ.0.78 ದೊರೆತಿವೆ. ಇನ್ನು, ಹು-ಧಾ ಪೂರ್ವದಲ್ಲಿ ಕಾಂಗ್ರೆಸ್ಸಿಗೆ ಶೇ.57.47 ಬಿಜೆಪಿಗೆ ಶೇ.35.69, ಜೆಡಿಎಸ್‌ ಗೆ ಶೇ. 0.61, ಆಮ್‌ ಆದ್ಮಿಗೆ ಶೇ.0.38 ಏಳು ಪಕ್ಷೇತರರಿಗೆ ಒಟ್ಟು ಶೇ. 5.33 ಮತ್ತು ನೋಟಾ ಲೆಕ್ಕಕ್ಕೆ ಶೇ. 0.54 ಮತಗಳು ದೊರೆತಿವೆ.

ಏತಕ್ಕಾಗಿ ವಿಫಲ

ಸಣ್ಣ-ಪುಟ್ಟಪಕ್ಷಗಳು ಮತ್ತು ಪಕ್ಷೇತರರು ಸರ್ಕಾರದಲ್ಲಿ ಇರುವ ಸಾಧ್ಯತೆ ಕಡಿಮೆ ಎಂದು ಭಾವಿಸಿರುವ ಮತದಾರರು ಸರ್ಕಾರ ರಚನೆ ಮಾಡುವ ಸಾಮರ್ಥ್ಯ ಇರುವ ರಾಷ್ಟ್ರೀಯ ಪಕ್ಷಗಳತ್ತ ಒಲವು ತೋರಿರುವುದು ಈ ಮತದಾನದ ಕ್ರಮವನ್ನು ಗಮನಿಸಿದಾಗ ಕಂಡು ಬರುವ ಅಂಶ. ಅಭ್ಯರ್ಥಿ ಎಷ್ಟೇ ಬಲಶಾಲಿಯಾಗಿದ್ದರೂ ಒಂದು ಪ್ರಮುಖ ಪಕ್ಷದಲ್ಲಿ ಇರದಿದ್ದರೆ ಅವನಿಂದ ಅಭಿವೃದ್ಧಿ ಕಾರ್ಯ ಕಷ್ಟಸಾಧ್ಯ ಎಂಬ ಮತದಾರರ ಭಾವನೆ ಅವರು ಪಕ್ಷೇತರರನ್ನು ನಿರ್ಲಕ್ಷಿಸಿರುವುದಕ್ಕೆ ಸಾಕ್ಷಿಯಾಗಿದೆ.

click me!