Karnataka CM Announcement: ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಹೈಕಮಾಂಡ್ ಸಂಧಾನ ಸೂತ್ರವೇನು?

By Gowthami KFirst Published May 17, 2023, 11:49 AM IST
Highlights

ಕಗ್ಗಂಟಾಗಿದ್ದ Karnataka new CM ಅನ್ನು ಆರಿಸುವಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಬಹುತೇಕ ಯಶಸ್ವಿಯಾಗಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದಿಕೃತಾಗಿ ಘೋಷಿಸುವ ವಿರೀಕ್ಷೆ ಇದೆ. 

ಬೆಂಗಳೂರು (ಮೇ.17):  ಕರ್ನಾಟಕ ಸಿಎಂ ಯಾರಾಗ್ತಾರೆ ಎಂಬ ಪ್ರಶ್ನೆಗೆ ಮದ್ಯಾಹ್ನ ಅಧಿಕೃತ ತೆರೆ ಬೀಳಲಿದೆ. ಸಿದ್ದರಾಮಯ್ಯ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲಾಗಿದ್ದು, ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಎಂದು ಘೋಷಿಸಲು ಸಿದ್ದತೆ ನಡೆದಿದೆ. ಡಿಕೆಶಿ ಅವರಿಗೆ ಡಿಸಿಎಂ ಜೊತೆಗೆ ಎರಡು ಪ್ರಬಲ ಖಾತೆ ನೀಡಲೂ ನಿರ್ಧರಿಸಲಾಗಿದೆ, ಎನ್ನಲಾಗುತ್ತಿದೆ. ಮದ್ಯಾಹ್ನ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳಲಿದೆ. ಘೋಷಣೆಗೂ ಮುನ್ನವೇ ಸಿದ್ದರಾಮಯ್ಯ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಮನೆಯ ಹತ್ತಿರ ಶುಭಾಶಯ ಕೋರಿ ಮನೆ ಮುಂದೆ ಬ್ಯಾನರ್ ಅಳವಡಿಲಾಗುತ್ತಿದೆ. ಈ ನಡುವೆ ಇಬ್ಬರು ನಾಯಕರ ನಡುವೆ ಕಾಂಗ್ರೆಸ್ ಹೈ ಕಮಾಂಡ್ ಸಂಧಾನ ಯಶಸ್ವಿಯಾಗಿದ್ದು ಹೇಗೆ? ಸಂಧಾನಕ್ಕೆ ಬಳಸಿದ ಸೂತ್ರಗಳೇನು ಎಂಬುದು ಇಲ್ಲಿದೆ.

ರಾಹುಲ್ ಗಾಂಧಿ ಮನೆಯಲ್ಲಿ ಇದೀಗ ತಾನೇ ಸಭೆ ಆರಂಭವಾಗಿದ್ದು, ಇಬ್ಬರೂ ನಾಯಕರನ್ನು ಕೂರಿಸಿಕೊಂಡು ಮಾತನಾಡುತ್ತಿದ್ದಾರೆ. ಮೊದಲ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿದ್ದು, ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಮುಂದುವರಿಯಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಯಾವುದೇ ಗುಟ್ಟು ಬಿಟ್ಟುಕೊಡಲು ಸಾಧ್ಯವಿಲ್ಲವಾದರೂ, ರಾಜಕೀಯ ಮೂಲಗಳು ಇಂಥ ಮಾಹಿತಿಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಏರಬಹುದು. 

ಸಿದ್ದು ಸಿಎಂ, ಡಿಕೆಶಿ ಡಿಸಿಎಂ

ಡಿಕೆಶಿ ರಾಜಿಯಾಗಿದ್ದು ಹೇಗೆ? 
ಒಕ್ಕಲಿಗ ಸಮುದಾಯದ ಪ್ರಬಲ ನಾಯಕನೆಂಬ ಕಾರಣಕ್ಕೂ ತಮಗೇ ಸಿಎಂ ಪಟ್ಟ ನೀಡಬೇಕೆಂದು ಬಿಗಿ ಪಟ್ಟು ಹಿಡಿದಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್ ಹೈ ಕಮಾಂಡ್ ಸಮಾಧಾನ ಮಾಡಿದ್ದು, ಕೆಲವೂ ಒಕ್ಕಲಿಗ ಶಾಸಕರೂ ಸಿದ್ದರಾಮಯ್ಯ ಅವರು ಪರ ಇದ್ದಾರೆಂಬುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಜಾರಿ ನಿರ್ದೇಶನಾಲಯದ ಪ್ರಕರಣ ಎದುರಿಸುತ್ತಿರುವ ಡಿಕೆಶಿಗೆ ಮುಂದಾಗಬಹುದಾದ ಸಾಧಕ ಬಾದಕಗಳನ್ನು ಹೇಳಿ, ಮುಂದಿನ ಲೋಕಸಭಾ ಚುನಾವಣೆವರೆಗೂ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಮಂತ್ತರ ಜಪಿಸುವುದು ಅನಿವಾರ್ಯ. ನಂತರ ಬೇಕಾದರೆ ಮುಂದಿನ ನಡೆ ನೋಡಿಕೊಳ್ಳೋಣ ಎನ್ನುವ ಮೂಲಕ ಪಟ್ಟು ಬಿಡದ ಶಿವಕುಮಾರ್ ಅವರ ಮನಸ್ಸನ್ನು ಬದಲಿಸುವಲ್ಲಿ ಹೈ ಕಮಾಂಡ್ ಯಶಸ್ವಿಯಾಗಿದೆ.  

ಸಿದ್ದರಾಮಯ್ಯ ಅವರ ನಿವಾಸದಲ್ಲಿ ತಮ್ಮ ನೆಚ್ಚಿನ ಕಟ್‌ಔಟ್‌ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ, ಜೈಕಾರ ಕೂಗುತ್ತಿದ್ದಾರೆ. ಅತ್ತ ದೆಹಲಿಯಲ್ಲಿ 10ಜನಪಥ್‌ನಲ್ಲಿರುವ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕರ್ನಾಟಕ ಕಾಂಗ್ರೆಸ್‌ನ ಉಭಯ ನಾಯಕರು ಸಭೆ ನಡೆಸಲಿದ್ದು, ಅಲ್ಲಿ ನಡೆಯುತ್ತಿರುವ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರಾದ ಭೈರತಿ ಬಸವರಾಜ್, ಜಮೀರ್ ಆಹ್ಮದ್ ಸೇರಿ ಹಲವರು ಸಿದ್ದರಾಮಯ್ಯ ಅವರ ಜೊತೆ ಇದ್ದು, ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಶಾಸಕರ ಬೆಂಬಲ ಇರುವುದನ್ನು ಮನವರಿಕೆ ಮಾಡುವಲ್ಲಿ ಯಶಸ್ವಿಯಾದಂತೆ ಕಾಣಿಸುತ್ತಿದೆ. 

ಸಿದ್ಧರಿಂದ ಸಮ್ಮಿಶ್ರ ಸರಕಾರದಲ್ಲಿ ತೊಂದರೆಯಾಗಿತ್ತು: ಡಾ.ಸುಧಾಕರ್

ಮೇ 10ರಂದು Karnataka Assembly Election ನಡೆದಿತ್ತು. ಮೇ 13ರಂದು ನಡೆದ ಫಲತಾಂಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಇಬ್ಬರೂ ಬಲಾಬಲದ ಶಕ್ತಿ ಪ್ರದರ್ಶನ ಮಾಡುತ್ತಾರೆಂಬ ಊಹೆ ಸುಳ್ಳಾಗಿ, ಕಾಂಗ್ರೆಸ್ 135 ಸ್ಥಾನಗಳನ್ನು ಗೆಲ್ಲುವ ಮೂಲಕ ನಿಚ್ಛಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಯಿತು. ಬಿಜೆಪಿಗೆ 66 ಸ್ಥಾನಗಳು ಬಂದರೆ, ಜೆಡಿಎಸ್ ಕೇವಲ 19 ಸ್ಥಾನಗಳಿಗೆ ತೃಪ್ತಿ ಪಡಬೇಕಾಯಿತು. ಇತರರು ನಾಲ್ಕು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರು. 

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಯಾರಾಗಬಹುದೆಂಬ ಮುಖ್ಯಮಂತ್ರಿ ಎಂಬ ಕುತೂಹಲಕ್ಕೆ ಸದ್ಯಕ್ಕಂತೂ ತೆರೆ ಬಿದ್ದಿದೆ. ಏನಿದೆ ಸಂಧಾನ ಸೂತ್ರ, ಹೇಗೆ ನಡೆಯುತ್ತೆ ಸರಕಾರ, ಕಾಂಗ್ರೆಸ್ ನೀಡುರವ ಗ್ಯಾರಂಟಿಗಳು ಹೇಗೆ ಜಾರಿಯಾಗುತ್ತವೆಂಬ ಬಗ್ಗೆ ಕನ್ನಡಿಗರೂ ಸಿಕ್ಕಾಪಟ್ಟೆ ಕುತೂಹಲದಿಂದ ಕಾಯುತ್ತಿದ್ದಾರೆ. 

ಕರ್ನಾಟಕದಲ್ಲಿ ಗೆದ್ದೆವು ಎಂದ ಮಾತ್ರಕ್ಕೆ ಇವಿಎಂ ಬಗೆಗಿನ ನಮ್ಮ ಪ್ರಶ್ನೆಗಳು ನಿಲ್ಲಲ್ಲ: ಕಾಂಗ್ರೆಸ್ ನಾಯಕ ಪವನ್ ಖೇರಾ

click me!