ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು ನಿಶ್ಚಿತವಾಗಿದೆ. ಈಗ ಜಮಖಂಡಿ, ಬಾಗಲಕೋಟೆ, ಧಾರವಾಡ ನಗರ, ಶೃಂಗೇರಿ, ಕಾರ್ಕಳ ಸೇರಿ ವಿಧಾನಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ತಿಂಗಳಾಂತ್ಯಕ್ಕೆ ಒಂದು ಕ್ಷೇತರವನ್ನು ಘೋಷಣೆ ಮಾಡಲಾಗುವುದು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲೀಕ್ ಹೇಳಿಕೆ ನೀಡಿದ್ದಾರೆ.
ಮೈಸೂರು (ಡಿ.21): ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದು ನಿಶ್ಚಿತವಾಗಿದೆ. ಈಗ ಜಮಖಂಡಿ, ಬಾಗಲಕೋಟೆ, ಧಾರವಾಡ ನಗರ, ಶೃಂಗೇರಿ, ಕಾರ್ಕಳ ಸೇರಿ ವಿಧಾನಸಭಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು, ತಿಂಗಳಾಂತ್ಯಕ್ಕೆ ಒಂದು ಕ್ಷೇತರವನ್ನು ಘೋಷಣೆ ಮಾಡಲಾಗುವುದು ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲೀಕ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಉದ್ದೇಶದಿಂದ ರಾಜ್ಯದ ಐದು ಕ್ಷೇತ್ರಗಳನ್ನ ಆಯ್ಕೆಮಾಡಿಕೊಂಡಿದ್ದೇನೆ. ಈ ಪೈಕಿ ಒಂದನ್ನು ಈ ತಿಂಗಳ ಅಂತ್ಯಕ್ಕೆ ಪ್ರಕಟಿಸುತ್ತೇನೆ. ಜಮಖಂಡಿ, ಬಾಗಲಕೋಟೆ, ಧಾರವಾಡ ನಗರ, ಶೃಂಗೇರಿ, ಕಾರ್ಕಳ ಈ ಕ್ಷೇತ್ರಗಳ ಆಯ್ಕೆ ಮಾಡಿಕೊಂಡಿದ್ದೇನೆ. ಬಿಜೆಪಿಗೆ ಟಿಕೆಟ್ ಕೇಳಿದ್ದೇವೆ, ಒಂದುವೇಳೆ ಕೊಡದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ. ಪಕ್ಷೇತರವಾಗಿ ಸ್ಪರ್ಧೆಸಿದರು ಹಿಂದುತ್ವದ ಅಜೆಂಡಾದ ಮೂಲಕ ಗೆದ್ದು ಬರುತ್ತೇನೆ ಎಂದು ತಿಳಿಸಿದರು.
undefined
Mutalik: ಕಾರ್ಕಳ 'ಹಿಂದೂ' ಸಮರ: ಮುತಾಲಿಕ್‌ಗಾಗಿ ಕ್ಷೇತ್ರ ಬಿಡ್ತಾರಾ ಸುನೀಲ್ ಕುಮಾರ್?
ಐವರು ಸ್ವಾಮೀಜಿಗಳಿಗೆ ಬಿಜೆಪಿ ಟಿಕೆಟ್ ಕೊಡಿ: ಬಿಜೆಪಿಯಿಂದ ಮುಂಬರುವ ಚುನಾವಣೆಯಲ್ಲಿ ಶ್ರಿರಾಮಸೇನೆಯಿಂದ ಸ್ಪರ್ಧಿಸಲು ಒಟ್ಟು 25 ಟಿಕೆಟ್‌ಗಳನ್ನು ಕೇಳಿದ್ದೇವೆ. ಈ ಪೈಕಿ ಐವರು ಸ್ವಾಮೀಜಿಗಳಿಗೂ ಟಿಕೆಟ್ ನೀಡುವಂತೆ ಕೇಳಿದ್ದೇವೆ. ಒಂದು ವೇಳೆ ಕೊಡದಿದ್ದರೂ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇವೆ. ರಾಜ್ಯದಲ್ಲಿ ಎಸ್ಸಿ- ಎಸ್ಟಿ ಮೀಸಲಾತಿ, ಮಹಿಳಾ ಮೀಸಲಾತಿ ಹಾಗೂ ಪದವೀಧರರಿಗೆ ಮೀಸಲಾತಿಯಂತೆ ಬಿಜೆಪಿಯಲ್ಲಿ ಹಿಂದುಗಳಿಗೂ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಾವರ್ಕರ್ ಬೆಳಗಾವಿ ಜೈಲಿನಲ್ಲಿ 100 ದಿನ ಇದ್ದರು: ಬೆಳಗಾವಿ ಸುವರ್ಣ ಸೌದದಲ್ಲಿ ಸಾವರ್ಕರ್ ಫೋಟೋ ಅನಾವರಣಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಖಂಡನೀಯವಾಗಿದೆ. ಸಿದ್ದರಾಮಯ್ಯ ಒಂದೇ ಒಂದು ದಿನ ಅಂಡಮಾನ್ ಜೈಲಿನಲ್ಲಿ ಇದ್ದು ಬರಲಿ ಆಗ ಸಾವರ್ಕರ್ ಅನುಭವಿಸಿದ ಕಷ್ಟ ಏನೂ ಅಂತ ಅವರಿಗೆ ಅರ್ಥ ಆಗುತ್ತದೆ. ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟಗಾರ. ಪಾಕಿಸ್ತಾನದ ಅಧ್ಯಕ್ಷ ಬರುತ್ತಾನೆಂದು ಅವರನ್ನು ಬೆಳಗಾವಿಯ ಇಂಡಲಗ ಜೈಲಿನಲ್ಲಿ ಇಡಲಾಗಿತ್ತು. ಸಾವರ್ಕರ್ ನೂರು ದಿನ ಬೆಳಗಾವಿ ಜೈಲಿನಲ್ಲಿದ್ದರು. ಬೆಳಗಾವಿಗೂ ಸಾವರ್ಕರ್ ಗು ಏನು ಸಂಬಂಧ ಎನ್ನುವ ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು. ಫೋಟೋ ಅನಾವರಣ ಮಾಡಿದ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳನ್ನ ಸಲ್ಲಿಸುತ್ತೇನೆ ಎಂದರು.
ಹಿಂದೂ ಹೆಣ್ಮಕ್ಕಳು ಮುಸ್ಲಿಂ ಯುವಕರ ಬೆನ್ನು ಬೀಳಬೇಡಿ: ಪ್ರಮೋದ ಮುತಾಲಿಕ್
ಸುಪ್ರೀಂ ಕೋರ್ಟ್ ಸುಮೊಟೋ ಕೇಸ್ ದಾಖಲಿಸಬೇಕು: ಇನ್ನು ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ವಿಚಾರ ಸುಪ್ರೀಂ ಕೋರ್ಟಿನಲ್ಲಿದೆ. ಹೀಗಿರುವಾಗ ಗಡಿ ವಿವಾದದ ಬಗ್ಗೆ ಮಾತನಾಡುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಈ ಬಗ್ಗೆ ಮಾತನಾಡಿದರೆ ಯಾರಾದರೂ ನ್ಯಾಯಾಂಗ ನಿಂದನೆ ಕೇಸ್ ಹಾಕಲು ಅವಕಾಶ ಇದೆ. ನಾನು ಕೂಡ ವಕೀಲರೊಂದಿಗೆ ಚರ್ಚೆ ಮಾಡುತ್ತೇನೆ. ಮಹಾರಾಷ್ಟ್ರ ಕಾಂಗ್ರೆಸ್, ಬಿಜೆಪಿಯವರು ನವರು ಬೆಳಗಾವಿ ನಮ್ಮದು ಅಂತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಯವರು ಬೆಳಗಾವಿ ನಮ್ಮದು ಅಂತಾರೆ. ಇವರ ವಿರುದ್ಧ ಸುಪ್ರೀಂ ಕೋರ್ಟ್ ಸುಮೋಟೋ ಕೇಸ್ ದಾಖಲಿಸಿಕೊಂಡು ಕ್ರಮಕೈಗೊಳ್ಳಬೇಕು. ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಅಂತ ಎಲ್ಲರಗೂ ಗೊತ್ತಿರುವ ವಿಚಾರವಾಗಿದೆ ಎಂದರು.