ಸಭಾಪತಿ ಬಸವರಾಜ ಹೊರಟ್ಟಿ ಅವಿರೋಧ ಆಯ್ಕೆ, ಇಂದು ಘೋಷಣೆ

By Govindaraj SFirst Published Dec 21, 2022, 11:47 AM IST
Highlights

ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಸಂಖ್ಯಾಬಲದ ಕೊರತೆಯಿಂದ ಕಾಂಗ್ರೆಸ್‌, ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾರಣ ಸಭಾಪತಿಯಾಗಿ ಹೊರಟ್ಟಿ ಅವರ ಅವಿರೋಧ ಆಯ್ಕೆ ಖಚಿತವಾಗಿದ್ದು, ಬುಧವಾರ ಅಧಿಕೃತ ಘೋಷಣೆ ಹೊರಬೀಳಲಿದೆ.

ಸುವರ್ಣಸೌಧ (ಡಿ.21): ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಸಂಖ್ಯಾಬಲದ ಕೊರತೆಯಿಂದ ಕಾಂಗ್ರೆಸ್‌, ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ಕಾರಣ ಸಭಾಪತಿಯಾಗಿ ಹೊರಟ್ಟಿ ಅವರ ಅವಿರೋಧ ಆಯ್ಕೆ ಖಚಿತವಾಗಿದ್ದು, ಬುಧವಾರ ಅಧಿಕೃತ ಘೋಷಣೆ ಹೊರಬೀಳಲಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ವಿವಿಧ ನಾಯಕರೊಂದಿಗೆ ಮಂಗಳವಾರ ಬೆಳಗ್ಗೆ 10.30ಕ್ಕೆ ಸುವರ್ಣಸೌಧದ ವಿಧಾನ ಪರಿಷತ್‌ನ ಕಾರ್ಯದರ್ಶಿ ಮಹಾಲಕ್ಷ್ಮಿ ಅವರಿಗೆ ಕಚೇರಿಗೆ ಆಗಮಿಸಿದ ಹೊರಟ್ಟಿನಾಮಪತ್ರ ಸಲ್ಲಿಸಿದರು. ಹೊರಟ್ಟಿ ಅವರ ನಾಮಪತ್ರಕ್ಕೆ ಮೇಲ್ಮನೆಯ ಹಿರಿಯ ಸದಸ್ಯರಾದ ಆಯನೂರು ಮಂಜುನಾಥ್‌ ಮತ್ತು ನಾರಾಯಣಸ್ವಾಮಿ ಸೂಚಕರಾಗಿ ಸಹಿ ಹಾಕಿದ್ದಾರೆ. ಈ ವೇಳೆ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಆರ್‌.ಅಶೋಕ್‌, ಮುರುಗೇಶ ನಿರಾಣಿ, ಶಾಸಕ ರಾಜೂಗೌಡ, ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ ಮತ್ತಿತರ ಸಚಿವ, ಶಾಸಕರು ಹಾಜರಿದ್ದರು.

ಸಚಿವ ನಿರಾಣಿಗೆ ಮಾತಾಡಲು ಅವಕಾಶ ಕೋರಿ ಕಾಂಗ್ರೆಸ್‌, ಜೆಡಿಎಸ್‌ ಧರಣಿ!

ಸಭಾಪತಿ ಸ್ಥಾನಕ್ಕೆ ಡಿ.21ರಂದು ಚುನಾವಣೆ ನಿಗದಿಯಾಗಿತ್ತು. ಪರಿಷತ್‌ನಲ್ಲಿ ಗೆಲುವಿಗೆ ಅಗತ್ಯದಷ್ಟುಸಂಖ್ಯಾಬಲ ಹೊಂದಿರುವ ಬಿಜೆಪಿ ಸೋಮವಾರವಷ್ಟೆಹೊರಟ್ಟಿಅವರನ್ನು ತನ್ನ ಅಭ್ಯರ್ಥಿಯಾಗಿ ಅಂತಿಮಗೊಳಿಸಿತ್ತು. ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಮಪತ್ರ ಸಲ್ಲಿಕೆಯ ಗಡುವಾದ ಮಂಗಳವಾರ ಮಧ್ಯಾಹ್ನ 12 ಗಂಟೆಯಾದರೂ ತಮ್ಮ ಪಕ್ಷಗಳಿಂದ ಯಾವುದೇ ಸದಸ್ಯರಿಂದ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಹೊರಟ್ಟಿ ಆಯ್ಕೆ ಖಚಿತವಾದಂತಾಯ್ತು. ಸಂಖ್ಯಾಬಲ ಇಲ್ಲದ ಕಾರಣ ಉಳಿದ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಬುಧವಾರ ಹೊರಟ್ಟಿಅವರ ಆಯ್ಕೆ ಕುರಿತ ಅಧಿಕೃತ ಘೋಷಣೆ ಹೊರಬೀಳಲಿದೆ.

ಹೊರಟ್ಟಿಅವರು ಇತ್ತೀಚೆಗಷ್ಟೆ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದರು. ಪಕ್ಷ ಸೇರ್ಪಡೆ ಸಮಯದಲ್ಲೇ ಅವರಿಗೆ ಸಭಾಪತಿ ಸ್ಥಾನದ ಭರವಸೆ ನೀಡಲಾಗಿತ್ತು. ಅದರಂತೆ ಈಗ ಅವರಿಗೆ ಮತ್ತೆ ಆ ಸ್ಥಾನ ಒಲಿಯಲಿದೆ. ಈ ಹಿಂದೆ ಕೂಡ ಎರಡು ಬಾರಿ ಸಭಾಪತಿಯಾಗಿ ಹೊರಟ್ಟಿಅವರು ಕಾರ್ಯನಿರ್ವಹಿಸಿದ್ದರು.

ಕಬ್ಬಿನ ಒಟ್ಟಾರೆ ಆದಾಯ ಪರಿಗಣಿಸಿ ರೈತರಿಗೆ ದರ ನಿಗದಿ: ಸಚಿವ ಶಂಕರ ಪಾಟೀಲ್‌

ಕಾಂಗ್ರೆಸ್‌ನ ಹುಕ್ಕೇರಿ ಹಾಜರ್‌!: ಬಸವರಾಜ ಹೊರಟ್ಟಿಅವರ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಮುಖಂಡರ ಜೊತೆಗೆ ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ಹುಕ್ಕೇರಿ ಅವರು ಕೂಡ ಕಾಣಿಸಿಕೊಂಡರು. ಶಾಸಕ ರಾಜೂಗೌಡ ಪ್ರಕಾಶ್‌ ಹುಕ್ಕೇರಿ ಅವರ ಕೈಹಿಡಿದುಕೊಂಡು ಪರಿಷತ್‌ ಕಾರ್ಯದರ್ಶಿ ಮಹಾಲಕ್ಷಿ ಅವರ ಕಚೇರಿಗೆ ಕರೆದುಕೊಂಡು ಬಂದರು. ನಾಮಪತ್ರ ಸಲ್ಲಿಸುವವರೆಗೂ ಬಿಜೆಪಿಯವರ ಜತೆಯಲ್ಲೇ ಇದ್ದ ಹುಕ್ಕೇರಿ ನಂತರ ಅವರ ಜೊತೆಯಲ್ಲೇ ಹೊರನಡೆದರು. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

click me!