ಉಗ್ರ ಸಂಘಟನೆ ಬದಲು ಬಜರಂಗದಳ ಬ್ಯಾನ್ ಮಾಡಲು ಕಾಂಗ್ರೆಸ್‌ಗೆ ಆಸಕ್ತಿ, ಹಿಮಂತ ಶರ್ಮಾ ವಾಗ್ದಾಳಿ!

By Suvarna News  |  First Published May 2, 2023, 11:11 AM IST

ಬೆಂಗಳೂರಿಗೆ ಆಗಮಿಸಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬಜರಂಗದಳ ನಿಷೇಧಿಸುವ ಮಾತುಗಳನ್ನಾಡುವ ಮೂಲಕ ಮುಸ್ಲಿಮರ ಒಲೈಗೆ ಕಾಂಗ್ರೆಸ್ ಮುಂದಾಗಿದೆ ಎಂದಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಸುದ್ದಿಗೋಷ್ಠಿ ವಿವರ ಇಲ್ಲಿದೆ.
 


ಬೆಂಗಳೂರು(ಮೇ.02): ಕಾಂಗ್ರೆಸ್ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡಿಲ್ಲ. ಸ್ಥಳೀಯ ಹೋರಾಟಗಾರರನ್ನು ಪಠ್ಯದಲ್ಲಿ ಸೇರಿಸದೆ ಟಿಪ್ಪು, ಔರಂಗಜೇಬ್, ಬಾಬರ್, ಶಹಜಹಾನ್ ಕುರಿತು ಪಠ್ಯದಲ್ಲಿ ಸೇರಿಸಿ ಹೀರೋಗಳಂತೆ ಬಿಂಬಿಸಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಶ್ವಾ ಶರ್ಮಾ ಹೇಳಿದ್ದರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಶರ್ಮಾ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಮುಸ್ಲಿಂ ಸಮುದಾಯ ಒಲೈಕೆ ಮಾಡಲು ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳುತ್ತಿದೆ. ಇವರಿಗೆ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದ ಸಂಘಟನೆಗಳು ಕಾಣಿಸಲೇ ಇಲ್ಲ. ಆದರೆ ಇಂತಹ ಸಂಘಟನೆಗಳನ್ನು ಬಿಜೆಪಿ ನಿಷೇಧಿಸಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. 

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಘಟಾನುಘಟಿ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಇಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬೆಂಗಳೂರಿಗೆ ಆಗಮಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ  ಶರ್ಮಾ, ಅತ್ಯುತ್ತಮ ಪ್ರಣಾಳಿಕೆ ಬಿಡುಗಡೆ ಮಾಡಿದ ರಾಜ್ಯ ಬಿಜೆಪಿ ಘಟಕವನ್ನು ಅಭಿನಂದಿಸಿದ್ದಾರೆ. ಸಮಾನ ನಾಗರೀಕ ಸಂಹಿತೆ ಜಾರಿಗೊಳಿಸುವ ಕುರಿತು ಪ್ರಣಾಳಿಕೆಯಲ್ಲಿ ಬಿಜೆಪಿ ಹೇಳಿದೆ. ಇದಕ್ಕೆ ಬಿಜೆಪಿಯನ್ನು ಅಭಿನಂದಿಸುತ್ತೇನೆ ಎಂದು ಶರ್ಮಾ ಹೇಳಿದ್ದಾರೆ.

Tap to resize

Latest Videos

ರಾಹುಲ್ ಗಾಂಧಿಗೆ ಮತ್ತೊಂದು ಶಾಕ್, ಅದಾನಿ ಟ್ವೀಟ್‌ಗೆ ಕ್ರಿಮಿನಲ್ ಡಿಫಮೇಶನ್ ಎಚ್ಚರಿಕೆ!

ಶೇಕಾಡ 4  ಮುಸ್ಲಿಮ್ ಮೀಸಲಾತಿಯನ್ನು ಹಿಂತೆಗೆದಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಅಂಬೇಡ್ಕರ್ ಸಂವಿಧಾನ ರಚನೆ ವೇಳೆ ಧರ್ಮ ಆಧಾರಿತ ಮೀಸಲಾತಿ ನೀಡುವ ಕುರಿತು ಹೇಳಿಲ್ಲ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ.  ಬೊಮ್ಮಾಯಿ ಸರ್ಕಾರ ಈ ಮೀಸಲಾತಿಯನ್ನು ತೆಗೆದುಹಾಕಿದೆ. ಧರ್ಮ ಆಧಾರಿತ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಕಾಂಗ್ರೆಸ್‌ನಿಜವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ನೀಡಿಲ್ಲ. ರಾಣಿ ಚೆನ್ನಮ್ಮ, ಕೆಂಪೇಗೌಡ, ಬಸವೇಶ್ವರ ಕುರಿತು ಪಠ್ಯದಲ್ಲಿ ಹೆಚ್ಚು ಹಾಕಿಲ್ಲ. ಕಾಂಗ್ರೆಸ್‌ಗೆ ಟಿಪ್ಪು ಮಾತ್ರ ಗೊತ್ತು. ಎಲ್ಲಾ ಪಠ್ಯದಲ್ಲಿ ಕಾಂಗ್ರೆಸ್ ಔರಂಗಜೇಬ್, ಟಿಪ್ಪು, ಶಹಜಾನ್, ಬಾಬರ್ ಬಗ್ಗೆ ಪಠ್ಯದಲ್ಲಿ ಹಾಕಿ ಸ್ವಾತಂತ್ರ್ಯ ಹೋರಾಟಗಾರರಂತೆ ಬಿಂಬಿಸಿದ್ದರು. ಆದರೆ ಸ್ಥಳೀಯ ಹೀರೋಗಳನ್ನು ಪಠ್ಯದಲ್ಲಿ ಹಾಕುವ ಕೆಲಸ ಕಾಂಗ್ರೆಸ್ ಮಾಡಿಲ್ಲ ಎಂದು ಶರ್ಮಾ ಹೇಳಿದ್ದಾರೆ.  

ಮದರಸಾ ಶಿಕ್ಷಣ ಸಂಪೂರ್ಣ ಮುಚ್ಚುವ ಸೂಚನೆ ನೀಡಿದ ಸಿಎಂ ಹಿಮಂತ ಬಿಸ್ವಾ ಶರ್ಮಾ!

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಹೇಳುತ್ತಿದೆ. ಕಾಂಗ್ರೆಸ್ ನಾಯಕರಿಗೆ ದ್ವೇಷಬಿತ್ತು, ಉಗ್ರ ಚಟುವಟಿಕೆಯಲ್ಲಿ ತೊಡಗಿರುವ  ಯಾವುದೇ ಸಂಘಟನೆಗಳು ಕಾಣಿಸಿಲ್ಲ. ಆದರೆ ಬಿಜೆಪಿ ಅಂತಹ ಸಂಘಟನೆಗಳನ್ನು ನಿಷೇಧ ಮಾಡಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಮುಸ್ಲಿಂ ಸಮುದಾಯವನ್ನು ಒಲೈಸಲು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ದೇಶ ವಿರೋಧಿ ಕೆಲಸ ಮಾಡುವವರು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರಿಗೆ ಅಣ್ಣತಮ್ಮಂದಿರು. ಹಿಂದೂ ಸಮಾಜ ಇದನ್ನು ಒಪ್ಪಲ್ಲ. ಎಲ್ಲರು ಒಗ್ಗಾಟಾಗಬೇಕಿದೆ‌‌‌. ಕರ್ನಾಟಕವನ್ನು ಮಲಪುರಂ ಆಗಲು ನಾವು ಬಿಡಲ್ಲ. ಮಲಪುರಂನಲ್ಲಿ ಹಿಂದೂಗಳು ಬದುಕಲು ಆಗತ್ತಿಲ್ಲ. ಇದು ಕರ್ನಾಟಕದಲ್ಲಿ ಆಗಲು ಬಿಡುವುದಿಲ್ಲ. ಕಾಂಗ್ರೆಸ್ ಒಲೈಕೆ ಮಾಡುತ್ತಾ ಇದೀಗ ಮುಸ್ಲಿಂ ಮತಗಳಿಂದಲೇ ಗೆದ್ದು ಬನ್ನಿ ಎಂದು ಹಿಮಂತ ಬಿಸ್ವಾ ಶರ್ಮಾ ಸವಾಲು ಹಾಕಿದ್ದಾರೆ.

click me!