ಎರಡನೇ ಹಂತದ ಚುನಾವಣಾ ಪ್ರಚಾರ, ಇಂದಿನಿಂದ ಎರಡು ದಿನ ರಾಜ್ಯದಲ್ಲಿ 7 ಕಡೆ ಮೋದಿ ಅಬ್ಬರ

By Kannadaprabha News  |  First Published May 2, 2023, 9:20 AM IST

 ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರದಿಂದ ಎರಡು ದಿನಗಳ ಕಾಲ ರಾಜ್ಯದಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇಂದು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ.


ಬೆಂಗಳೂರು (ಮೇ.2): ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರದಿಂದ ಎರಡು ದಿನಗಳ ಕಾಲ ರಾಜ್ಯದಲ್ಲಿ ಎರಡನೇ ಹಂತದ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮಂಗಳವಾರ ಚಿತ್ರದುರ್ಗ, ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆ, ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದು, ಬಳಿಕ ಸಂಜೆ ಕಲಬುರಗಿ ನಗರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಬಳಿಕ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬುಧವಾರ ಅಲ್ಲಿಂದ ಮಂಗಳೂರಿಗೆ ಆಗಮಿಸುವ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ, ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೋಟೆನಾಡಲ್ಲಿಂದು ಇಂದು ನರೇಂದ್ರ ಮೋದಿ ಹವಾ: ಕೋಟೆ ನಾಡು ಚಿತ್ರದುರ್ಗಕ್ಕೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಮೋದಿ ಆಗಮನದ ಹಿನ್ನೆಲೆ ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗಿದ್ದು, ಒಂದು ಲಕ್ಷ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಾವೇಶಕ್ಕೆ ಎರಡು ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆ ಇದೆ.

Tap to resize

Latest Videos

ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಇರುವ ಡಿಆರ್‌ಡಿಓ ಏರ್‌ಪೋರ್ಚ್‌ಗೆ ಬೆಳಗ್ಗೆ 10-25ಕ್ಕೆ ರಕ್ಷಣಾ ಇಲಾಖೆ ವಿಶೇಷ ವಿಮಾನದಲ್ಲಿ ಆಗಮಿಸುವ ಪ್ರಧಾನಿ, ನಂತರ ಹೆಲಿಕಾಪ್ಟರ್‌ ಮೂಲಕ ನೇರವಾಗಿ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸುವರು. ಚಿತ್ರದುರ್ಗದ ಸಭೆ ಮುಕ್ತಾಯಗೊಂಡ ನಂತರ 11-50 ಕ್ಕೆ ಸೇನಾ ಹೆಲಿಕಾಪ್ಟರ್‌ನಲ್ಲಿ ನೇರವಾಗಿ ಹೊಸಪೇಟೆಗೆ ತೆರಳುವರು. ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿದೆ. ಐವರು ಎಸ್ಪಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

5 ಕೆಎಸ್ಸಾರ್ಪಿ, 5 ಡಿಎಆರ್‌ ತುಕಡಿ ಹಾಗೂ ಒಂದು ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋದಿಸಲಾಗಿದೆ ಎಂದು ಎಸ್ಪಿ ಪರಶುರಾಂ ಮಾಹಿತಿ ನೀಡಿದರು. ಕಳೆದ ಮೂರು ದಿನಗಳಿಂದ ಹಿರಿಯ ಪೊಲೀಸ್‌ ಅಧಿಕಾರಿಗಳು, ಕೇಂದ್ರ ರಕ್ಷಣಾ ಇಲಾಖೆಯವರು ಚಿತ್ರದುರ್ಗದಲ್ಲಿ ಬೀಡು ಬಿಟ್ಟು ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಸಮಾವೇಶ ನಡೆಯುವ ಸ್ಥಳದಲ್ಲಿ ಸೋಮವಾರ ಹಿರಿಯ ಪೊಲೀಸ್‌ ಅಧಿಕಾರಿಗಳು ಸಭೆ ನಡೆಸಿದರು.

ಮಾರ್ಗ ಬದಲಾವಣೆ: ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ನಗರದ ಸಂಚಾರ ಮಾರ್ಗ ಬದಲಾವಣೆ ಮಾಡಿ ಹಾಗೂ ಪಾಕಿಂರ್‍ಗ್‌ ಸ್ಥಳ ನಿಗದಿಪಡಿಸಿ ಜಿಲ್ಲಾಧಿಕಾರಿ ದಿವ್ಯಾಪ್ರಭು ಆದೇಶ ಹೊರಡಿಸಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಬೆಂಕಿಪೊಟ್ಟಣ, ಲೈಟರ್‌ ಸೇರಿದಂತೆ ಯಾವುದೇ ಸ್ಪೋಟಕ ವಸ್ತುಗಳು, ನೀರಿನ ಬಾಟಲ್‌ ಮತ್ತು ಬ್ಯಾಗ್‌ ಹಾಗೂ ಅಪಾಯ ಉಂಟು ಮಾಡುವ ವಸ್ತುಗಳನ್ನು ತರುವಂತಿಲ್ಲ. ಕಪ್ಪುಬಟ್ಟೆಧರಿಸಿ ಕಾರ್ಯಕ್ರಮಕ್ಕೆ ಬರುವಂತಿಲ್ಲ.

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ, ಮೋದಿಯೇ ಗೇಮ್‌ಚೇಂಜರ್‌: ಜೀ-ಮ್ಯಾಟ್ರಿಜ್‌ ಸಮೀಕ್ಷೆ

ಸಮಾರಂಭಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ, ಚಿತ್ರದುರ್ಗಕ್ಕೆ ಬೆಂಗಳೂರು, ಕಡೆಯಿಂದ ಬರುವ ವಾಹನಗಳು ಕ್ಯಾದಿಗೆರೆಯಿಂದ ಹೊಸ ಬೈಪಾಸ್‌ ಮೂಲಕ ಸಂಚರಿಸಿ, ಎನ್‌ಎಚ್‌ 50 ಪಿಳ್ಳೆ ಕೇರನಹಳ್ಳಿ ಮೂಲಕ ಚಿತ್ರದುರ್ಗ ನಗರ ಪ್ರವೇಶಿಸುವುದು. ದಾವಣಗೆರೆ ಕಡೆಯಿಂದ ಬರುವ ವಾಹನಗಳು ಜೆಎಂಐಟಿ ಸರ್ಕಲ್‌ ಮೂಲಕ ನಗರ ಪ್ರವೇಶಿಸಬೇಕು. ಬೆಂಗಳೂರು, ಚಳ್ಳಕೆರೆ, ಹೊಸಪೇಟೆ, ದಾವಣಗೆರೆ ಕಡೆಗೆ ಚಲಿಸುವ ಕೆಎಸ್‌ಆರ್‌ಟಿಸಿ ಮತ್ತು ಇತರ ವಾಹನಗಳು ಬಸ್‌ ನಿಲ್ದಾಣದಿಂದ ಜೆಎಂಐಟಿ ಸರ್ಕಲ್‌ ಮೂಲಕ ಸೀಬಾರ ಕ್ರಾಸ್‌ ಅಥವಾ ಎನ್‌ಎಚ್‌.50 ಮೂಲಕ ಹೊಸ ಬೈಪಾಸ್‌ ರಸ್ತೆ ಸೇರುವುದು. ಶಿವಮೊಗ್ಗ, ದಾವಣಗೆರೆ ಚಳ್ಳಕೆರೆ, ಬೆಂಗಳೂರು, ಹೊಸಪೇಟೆ ಕಡೆಗೆ ಚಲಿಸುವ ಖಾಸಗಿ ಬಸ್‌ ಹಾಗೂ ಇತರೆ ವಾಹನಗಳು ಎಪಿಎಂಸಿ ಮೆದೇಹಳ್ಳಿ ರಸ್ತೆ ಮೂಲಕ ಹಾಯ್ದು ಸೀಬಾರ ಕ್ರಾಸ್‌ ಅಥವಾ ಎನ್‌.ಹೆಚ್‌.50 ಮೂಲಕ ಹೊಸ ಬೈಪಾಸ್‌ಗೆ ಹೋಗಬೇಕು ಎಂದು ತಿಳಿಸಿದ್ದಾರೆ.

ಅಂಬಾದೇವಿಯ ಆಶೀರ್ವಾದದಿಂದ ಅದೊಂದು ಆದ್ರೆ ಸವದಿ ಹೆಣ ಬಿದ್ದಂಗೆ ಲೆಕ್ಕ

ಪಾರ್ಕಿಂಗ್‌ ಸ್ಥಳಗಳು: ಕಾರ್ಯಕ್ರಮ ಸ್ಥಳಕ್ಕೆ ಬೆಂಗಳೂರು, ಹಿರಿಯೂರು ಕಡೆಯಿಂದ ಆಗಮಿಸುವ ವಾಹನಗಳು ಹಳೇ ಬೆಂಗಳೂರು ರಸ್ತೆಯಲ್ಲಿ ಪಾಕಿಂರ್‍ಗ್‌ ಮಾಡಬೇಕು. ಬಳ್ಳಾರಿ ಹಾಗೂ ಚಳ್ಳಕೆರೆ ಕಡೆಯಿಂದ ಆಗಮಿಸುವ ವಾಹನಗಳು ಶನೇಶ್ವರ ದೇವಸ್ಥಾನ, ಶ್ರೀರಾಮಕಲ್ಯಾಣ ಮಂಟಪದ ಬಳಿ ಪಾರ್ಕಿಂಗ್‌, ತುರುವನೂರು ಕಡೆಯಿಂದ ಬರುವ ವಾಹನಗಳು ವೆಂಕಟೇಶ್ವರ ಸ್ವಾಮಿ ದೇವಾಲಯದ ಅವರಣದಲ್ಲಿ ನಿಲುಗಡೆ ಮಾಡಬೇಕು. ಹೊಸಪೇಟೆ, ಜಗಳೂರು, ದಾವಣಗೆರೆ ಕಡೆಯಿಂದ ಬರುವ ವಾಹನಗಳನ್ನು ಪೊಲೀಸ್‌ ಸಮುದಾಯ ಭವನ ಹಾಗೂ ಕೆಇಬಿ ಸಮುದಾಯ ಭವನದ ಬಳಿ, ಶಿವಮೊಗ್ಗ ಹೊಳಲ್ಕೆರೆ ಕಡೆಯಿಂದ ಬರುವ ವಾಹನಗಳು ಮಾಳಪ್ಪನಹಟ್ಟಿ, ಮುರುಘಾ ಮಠ, ಜೆಎಂಐಟಿ ರೈಲ್ವೆ ಕ್ರಾಸಿಂಗ್‌ ಮೂಲಕ ಸಂಚರಿಸಿ ಎಪಿಎಂಸಿಯಲ್ಲಿ ನಿಲುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರಧಾನಿ ಶ್ರೀ ಅವರ ಸಾರ್ವಜನಿಕ ಕಾರ್ಯಕ್ರಮಗಳ ವಿವರ 02-05-2023.

Live ವೀಕ್ಷಿಸಿ

📺 https://t.co/f0Y1PCWtBA
📺 https://t.co/UZeGf8NPSm
📺 https://t.co/l09JPM9gUd pic.twitter.com/5OElID0zgz

— BJP Karnataka (@BJP4Karnataka)
click me!