ಬೆಂಗಳೂರು (ಮೇ.2): ಈಗಾಗಲೇ ‘ಐದು ಗ್ಯಾರಂಟಿ’ ಯೋಜನೆಗಳನ್ನು ಘೋಷಿಸಿರುವ ಕಾಂಗ್ರೆಸ್ ಪಕ್ಷವು, ಇನ್ನೂ ಹತ್ತು ಹಲವು ಭರವಸೆಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ವಜನಾಂಗದ ಶಾಂತಿಯ ತೋಟ ಘೋಷವಾಕ್ಯದಡಿ ಕಾಂಗ್ರೆಸ್ ನ ವಾಗ್ದಾನಗಳ ಪಟ್ಟಿ ಬಿಡುಗಡೆಗೊಂಡಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಪ್ರದೇಶ ಹಾಗೂ ಬೆಂಗಳೂರು ನಗರಗಳಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಯಾಗಿದೆ.
ಕಾಂಗ್ರೆಸ್ ನ ಭರವಸೆಗಳ ಪಟ್ಟಿ ಇಂತಿದೆ:
- ಹಸಿಮುಕ್ತ ಕರ್ನಾಟಕ ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ
- ಸರಕಾರಿ ನೌಕರರಿಗೆ OPS ಜಾರಿಗೆ ತರಲು ನಿರ್ಧಾರ
- ವರ್ಷಕ್ಕೆ 1 ತಿಂಗಳ ವೇತನ ಹೆಚ್ಚಳ
- ಮಹಿಳಾ ದೌರ್ಜನ್ಯ ತಡೆಗೆ ಕಾನೂನು ಕ್ರಮ
- ಸರಕಾರಿ ನೌಕರರಿಗೆ ಹಳೇ ಪಂಚಣಿ ಯೋಜನೆ
- ಹಸು ಎಮ್ಮೆ ಖರೀದಿಸಿದ್ರೆ 3 ಲಕ್ಷದ ವರೆಗೆ ಶೂನ್ಯ ಬಡ್ಡಿದರ ಸಾಲ
- ಬಿಜೆಪಿ ಜಾರಿಗೆ ತಂದ ಜನವಿರೋಧಿ ವರ್ಷದೊಳಗೆ ರದ್ದು
- ಖಾಲಿ ಇರುವ ಸರಕಾರಿ ಹುದ್ದೆ 1 ವರ್ಷದಲ್ಲಿ ಭರ್ತಿ
- 15-20 ವರ್ಷದಿಂದ ಗುತ್ತಿಗೆ ಆಧಾರದಲ್ಲಿರುವ ಕೆಲಸಗಾರರ ಹುದ್ದೆ ಖಾಯಂ
- ಭಜರಂಗದಳ ಮತ್ತು ದ್ವೇಶ ಬಿತ್ತುವ ಸಂಘಟನೆಗಳ ವಿರುದ್ಧ ಕಠಿಣ ಕಾನೂನು ಕ್ರಮ
- ಲೋಕಾಯುಕ್ತ ಬಲವರ್ಧನೆಗೆ ಕ್ರಮ
- ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ (11,500 ರಿಂದ 15 ಸಾವಿರದವರೆಗೆ)
- ತೃತೀಯ ಲಿಂಗಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ
- ಶೇ.33ರಷ್ಟು ಮಹಿಳಾ ಪೊಲೀಸ್ ಇರುವಂತೆ
- ಕನಕಪುರದಲ್ಲಿ ವಿಶ್ವಮಟ್ಟದ ವಿಧಿವಿಜ್ಞಾನ ವಿಶ್ವವಿದ್ಯಾಲಯ
- ಪೊಲೀಸ್ ಸಿಬ್ಬಂದಿಗೆ 5000 ರೂ ಮಾಸಿಕ ಭತ್ಯೆ
- ಭ್ರಷ್ಟಾಚಾರ ತಡೆಗೆ ಅಗತ್ಯ ಕಾನೂನು ಕ್ರಮ
- ಪ್ರತೀ ಲೀಟರ್ ಹಾಲಿಗೆ 5ರಿಂದ 7 ರೂ ಪ್ರೋತ್ಸಾಹ ಧನ
- ಎಲ್ಲಾ ಸಮುದಾಯದವರ ಮೀಸಲಾತಿ 50 ರಿಂದ 75ಕ್ಕೆ ಹೆಚ್ಚಳ
- ಸಾವಯುವ ಕೃಷಿಗೆ ಉತ್ತೇಜನಕ್ಕೆ 2500 ಕೋಟಿ ಹೂಡಿಕೆ
- ರೈತರ ಮೇಲಿನ ರಾಜಕೀಯ ಪ್ರೇರಿತ ಕೇಸ್ ವಾಪಸ್
- ಲಿಂಗಾಯತ, ಒಕ್ಕಲಿಗರ ಮೀಸಲಾತಿ ಹೆಚ್ಚಳ
- ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ
- ಮಾಹಿತಿದಾರರ ಸಂರಕ್ಷಣಾ ಖಾಯ್ದೆ ಜಾರಿ
- ಗ್ರಾಮೀಣ ಅಭಿವೃದ್ಧಿ ನೈರ್ಮಲ್ಯಕ್ಕೆ 50 ಸಾವಿರ ಕೋಟಿ ಹೂಡಿಕೆ
- ಪ್ರತೀ ಗ್ರಾಮ ಪಂಚಾಯತ್ ನಲ್ಲಿ ಹೈಪೈ ಹಾಟ್‌ಸ್ಪಾಟ್ ಸ್ಥಾಪನೆ
- 1972ರ ಕರ್ನಾಟಕ ಅಪಾರ್ಟ್ಮೆಂಟ್ ಕಾಯಿದೆ ತಿದ್ದುಪಡಿ
- ರೈತರ ಹಕ್ಕಾಗಿರು ಕನಿಷ್ಠ ಬೆಂಬಲ ಬೆಲೆ ಅನುಷ್ಠಾನ
- ರೈತರ ಬಡ್ಡಿ ರಹಿತ ಸಾಲ 3 ರಿಂದ 10 ಲಕ್ಷಕ್ಕೆ ಏರಿಕೆ
- ದ್ರಾಕ್ಷಿ ಬೆಳೆಗಾರರ ಸಬ್ಸಿಡಿಗೆ 500 ಕೋಟಿ
- ಮತ್ಸ್ಯಕ್ರಾಂತಿಗೆ ಕ್ರಮ, 12 ಸಾವಿರ ಕೋಟಿಯ ಕಾರ್ಯಕ್ರಮ
- ನೀರಾವರಿಗೆ 1.50 ಲಕ್ಷ ಕೋಟಿ ವಿನಿಯೋಗ
- ಮಂಗಳೂರಿನಲ್ಲಿ ಪ್ರವಾಸೋಧ್ಯಮಕ್ಕೆ ಒತ್ತು
- ರಾಜ್ಯದ ಗಡಿ ಭಾಗಗಳಲ್ಲಿ ಗಡಿ ಕೈಗಾರಿಕೆ ಅಭಿವೃದ್ಧಿ ನಿಗಮ ಸ್ಥಾಪನೆ
- ಸ್ಮಾರ್ಟ್ ಆಪ್ - ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ 10 ಕೋಟಿ
- ಪತ್ರೀ 100 ಕಿಮೀ ಒಂದರಂತೆ ಟ್ರೂಮಾ ಕೇಂದ್ರ (ತುರ್ತು ಚಿಕಿತ್ಸೆ)
- 5 ವರ್ಷದಲ್ಲಿ ಎಲ್ಲಾ ಎಸ್‌ಸಿ-ಎಸ್‌ಟಿ ಕುಟುಂಬಗಳಿಗೆ ಸರಕಾರದಿಂದಲೇ ಮನೆ
- ವಿಧವಾ ಪಿಂಚಣಿ 2500 ರೂಗೆ ಹೆಚ್ಚಳ
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ, ಮೋದಿಯೇ ಗೇಮ್‌ಚೇಂಜರ್: ಜೀ-ಮ್ಯಾಟ್ರಿ
ಐದು ಗ್ಯಾರಂಟಿ ಯೋಜನೆ ಪ್ರಕಟ:
ಈಗಾಗಲೇ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’, ಪ್ರತಿ ಮನೆಯೊಡತಿಗೆ 2 ಸಾವಿರ ರು. ಮಾಸಿಕ ಸಹಾಯ ಧನ ನೀಡುವ ‘ಗೃಹ ಲಕ್ಷ್ಮೇ’, ಪದವೀಧರರಿಗೆ 3 ಸಾವಿರ ರು. ಹಾಗೂ ಡಿಪ್ಲೊಮಾ ಪದವೀಧರರಿಗೆ 1,500 ರು. ಮಾಸಿಕ ನಿರುದ್ಯೋಗ ಭತ್ಯೆ ನೀಡುವ ‘ಯುವ ನಿಧಿ’, ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ನೀಡುವ ‘ಅನ್ನಭಾಗ್ಯ’, ಮಹಿಳೆಯರಿಗೆ ಉಚಿತ ಪ್ರಯಾಣದ ‘ಸಖಿ’ ಭರವಸೆ ಸೇರಿದಂತೆ ಐದು ಗ್ಯಾರಂಟಿ ಯೋಜನೆ ಪ್ರಕಟಿಸಲಾಗಿದೆ. ಇವುಗಳ ಜತೆಯಲ್ಲಿ ಪೌರಕಾರ್ಮಿಕರ ಹುದ್ದೆ ಕಾಯಂ, ಹಳೆ ಪಿಂಚಣಿ ಮರು ಜಾರಿ ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಎರಡನೇ ಹಂತದ ಚುನಾವಣಾ ಪ್ರಚಾರ, ಇಂದಿನಿಂದ ಎರಡು ದಿನ ರಾಜ್ಯದಲ್ಲಿ 7 ಕಡೆ ಮೋದಿ ಅಬ್ಬರ
ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ , ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಜಿ.ಪರಮೇಶ್ವರ್ ಸೇರಿ ಗಣ್ಯರು ಭಾಗವಹಿಸಿದ್ದರು.