ನಾಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಅಭಿವೃದ್ಧಿ, ಮಹಿಳಾ ಸಲೀಕರಣ, ಉದ್ಯೋಗ ಭರವಸೆ!

By Suvarna News  |  First Published Apr 30, 2023, 6:37 PM IST

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಇದರ ನಡುವೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲು ಸಜ್ಜಾಗಿದೆ. ನಾಳೆ ಜೆಪಿ ನಡ್ಡಾ ಬಿಜೆಪಿ ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಮಹಿಳಾ ಸಬಲೀಕರಣ, ಯುವಕರಿಗೆ ಉದ್ಯೋಗ, ಅಭಿವೃದ್ಧಿ, ಮೂಲಸೌಕರ್ಯ ಆಧುನೀಕರಣ ಸೇರಿದಂತೆ ಹಲವು ಭರವಸೆಗಳು ಇರಲಿದೆ. ಬಿಜೆಪಿ ಪ್ರಣಾಳಿಕೆ ವಿವರ ಇಲ್ಲಿದೆ.


ಬೆಂಗಳೂರ(ಏ.30): ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲಲು ಬಿಜೆಪಿ ರಣತ್ಸೋಹದಿಂದ ಕೆಲಸ ಮಾಡುತ್ತಿದೆ. ಕೇಂದ್ರದ ನಾಯಕರು ಸತತ ರೋಡ್ ಶೋ, ರ್ಯಾಲಿ, ಸಮಾವೇಶ ಮಾಡುತ್ತಿದ್ದಾರೆ. ಇದೀಗ ನಾಳೆ(ಮೇ.01)ಕ್ಕೆ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿದೆ. ಅಭಿವೃದ್ಧಿ ಮೂಲಮಂತ್ರವಾಗಿಟ್ಟುಕೊಂಡಿರುವ ಬಿಜೆಪಿ, ಈ ಬಾರಿಯ ಪ್ರಣಾಳಿಕೆಯಲ್ಲಿ ಮಹತ್ವದ ವಿಚಾರಗಳನ್ನು ಸೇರಲಿದೆ. ಈ ಬಾರಿಯ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆಧುನೀಕರಣ ಜೊತೆಗೆ ಮಹಿಳಾ ಸಬಲೀಕರಣ, ಯುವ ಸಮೂಹಕ್ಕೆ ಉದ್ಯೋಗ ಸೇರಿದಂತೆ ಭರವಸವೆಗಳ ಮಹಾಪೂರವೇ ಹರಿಯಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ.  ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿರುವ ಯುವ ಸಮೂಹಕ್ಕೆ ವಿಶೇಷ ಕೊಡುಗೆ ನೀಡಲು ಬಿಜೆಪಿ ಸಜ್ಜಾಗಿದೆ. ಪಿಯುಸಿ ಪಾಸ್ ಆದ ವಿದ್ಯಾರ್ಥಿನಿಯರಿಗೆ ವಿಶೇಷ ಕೊಡುಗೆ ಘೋಷಿಸುವ ಸಾಧ್ಯತೆ ಇದೆ.

Tap to resize

Latest Videos

ರಾಮಾಯಣದಲ್ಲಿ ಹನುಮಂತನಂತೆ, ಈಗ ಮೋದಿ ದೇಶಕ್ಕಾಗಿ ತ್ಯಾಗ ಮಾಡ್ತಿದ್ದಾರೆ: ಯೋಗಿ ಆದಿತ್ಯನಾಥ

ಚುನಾವಣಾ ಪ್ರಚಾರದ ಸಲುವಾಗಿ ರಾಜ್ಯ ಪ್ರವಾಸದಲ್ಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಈ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಜೆಡಿಎಸ್‌ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಬಿಜೆಪಿ ಇದೀಗ ಬಿಡುಗಡೆ ಮಾಡಲು ಮುಂದಾಗಿದೆ. ಇದಕ್ಕಾಗಿ ಸಾಕಷ್ಟುಅಳೆದೂ ತೂಗಿ ಭರವಸೆಗಳನ್ನು ರೂಪಿಸಲಾಗಿದೆ. ಆ ಎರಡೂ ಪಕ್ಷಗಳಿಗಿಂತ ಭಿನ್ನವಾಗಿ ಪ್ರಣಾಳಿಕೆ ರೂಪಿಸಲಾಗಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

2018ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಎಲ್ಲಾ ವರ್ಗವನ್ನು ತೃಪ್ತಿಪಡಿಸುವ ಘೋಷಣೆ ಮಾಡಿತ್ತು. ಇದರಲ್ಲಿ ಗೋ ಹತ್ಯೆ ನಿಷೇಧವೂ ಸೇರಿತ್ತು. ಈ ಬಾರಿಯ ಪ್ರಣಾಳಿಕೆಯಲ್ಲಿ ಮೂಲಭೂತ ಸೌಕರ್ಯ ಅಧುನೀಕರಣ ಸೇರಿದಂತೆ ಹಲವು ಮಹತ್ವದ ಭರವಸೆಗಳೂ ಇರಲಿದೆ. ಯುವಕರಿಗೆ ಉದ್ಯೋಗ ಭರವಸೆ, ಕನ್ನಡ ಭಾಷೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಬಿಜೆಪಿ ಬೆಳಕು ಚೆಲ್ಲುವ ಸಾಧ್ಯತೆ ಇದೆ.

ಚುನಾವಣಾ ಪ್ರಚಾರಕ್ಕಾಗಿ ರಾಜ್ಯದಲ್ಲಿರುವ ಜೆಪಿ ನಡ್ಡಾ ಅಬ್ಬರದ ಪ್ರಚಾರ ನಡಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 80 ಕೋಮು ಗಲಭೆಗಳಾಗಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗಂಭೀರವಾಗಿ ಆರೋಪಿಸಿದರು. ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಡಂಬಳದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕೋಮುಗಲಭೆಯಿಂದ ಹಲವರು ಮೃತರಾಗಿದ್ದರಲ್ಲದೆ ಹಲವೆಡೆ ದ್ವೇಷದ ವಾತಾವರಣ ಬಹು ದಿನದವರೆಗೆ ಇತ್ತು ಎಂದರು.

ಕಳೆದ 9 ವರ್ಷದಲ್ಲಿ ಒಂದು ದಿನವು ವಿರಮಿಸದೇ, ದೇಶಕ್ಕಾಗಿ ದುಡಿದ ನಾಯಕ ಮೋದಿ: ಸದಾನಂದ ಗೌಡ

ವಿಧ್ವಂಸಕ ಕೃತ್ಯ ಎಸಗಿ ದೇಶದ ಭದ್ರತೆ ಮತ್ತು ಐಕ್ಯತೆಗೆ ಧಕ್ಕೆ ತರುವ ಪಿಎಫ್‌ಐ ಸಂಘಟನೆಗೆ ಕಾಂಗ್ರೆಸ್‌ ಬೆಂಬಲವಿದೆ. ಈ ವಿಷಯ ಈ ಹಿಂದೆ ನಡೆದಿರುವ ಹಲವು ಘಟನೆಗಳಲ್ಲಿ ಸಾಬೀತಾಗಿದೆ. ಪಿಎಫ್‌ಐ ಕಾರ್ಯಕರ್ತರ ಮೇಲಿನ ಪ್ರಕರಣವನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆದು ಪಿಎಫ್‌ಐ ಸಂಘಟನೆಗೆ ಬೆಂಬಲ ನೀಡಿತ್ತು. ಇದರಿಂದಾಗಿ 2013ರಿಂದ 2018ರಲ್ಲಿ ಹಲವು ಹಿಂದುಗಳ ಹತ್ಯೆಯಾಯಿತು. ಸಮಾಜಘಾತುಕ ಸಂಘಟನೆಗೆ ಬೆಂಬಲ ನೀಡುವ ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದರು.

click me!