
ವಿಜಯನಗರ (ಏ.30): ಪ್ರಧಾನಿ ಮೋದಿ ವಿರುದ್ದ ಕೆಪಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ವೇಳೆ ಅತ್ಯಂತ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದು, ಮೋದಿಯವರ ಜೊತೆಗೆ ಈಗ ಬರೀ ಲಂಚಕ್ಕೊಬ್ಬ ಮಂಚಕ್ಕೊಬ್ಬ ಇರೋರು ಮಾತ್ರ ಎಂದು ಹೇಳಿಕೆ ನೀಡಿದ್ದಾರೆ. ಸವದಿ ಮೇಲೆ ಭ್ರಷ್ಟಾಚಾರ ಆರೋಪ ಇತ್ತಾ? ಶೆಟ್ಟರ್ ಮೇಲೆ ಆರೋಪ ಇತ್ತಾ? ಆರೋಪ ಇಲ್ಲದಿರೋರೆಲ್ಲ ನಮ್ಮ ಜೊತೆಗೆ ಇದ್ದಾರೆ. ಆರೋಪ ಇರುವವರು ಭ್ರಷ್ಟರು ಎಲ್ಲರೂ ಅವರ ಜೊತೆಗೆ ಇದ್ದಾರೆ. ಮೋದಿ ಇಲ್ಲಿ ಬಂದು ಆಡಳಿತ ಮಾಡೋದು ಬೇಕಾಗಿಲ್ಲ. ಅತ್ಯಂತ ನೀಚ ಭ್ರಷ್ಟ ಸರ್ಕಾರ ಇಲ್ಲಿದೆ. ಭ್ರಷ್ಟಾಚಾರ ಆರೋಪ ಇರುವವರನ್ನೆಲ್ಲ ಜೊತೆಗೆ ಇಟ್ಟುಕೊಂಡು ರ್ಯಾಲಿ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾವು ಶಿವನ ಹಾರ, ನನಗೆ ಜನರೇ ಶಿವ: ಕಾಂಗ್ರೆಸ್‌ನ ವಿಷಸರ್ಪ ಹೇಳಿಕೆ ಮೋದಿ ಟಾಂಗ್
ತಂದೆ ಮಗನ ಕ್ಷೇತ್ರದಲ್ಲಿ ಡಿಕೆಶಿ ಅಬ್ಬರದ ರೋಡ್ ಶೋ ನಡೆಸಿದ್ದು, ಎಂ ಕೃಷ್ಣಪ್ಪ ಅವರ ಪರವಾಗಿ ವಿಜಯನಗರ ಕ್ಷೇತ್ರದಲ್ಲಿ ಪ್ರಿಯಕೃಷ್ಣ ಪರ ಗೋವಿಂದರಾಜ ನಗರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಅಬ್ಬರದ ಪ್ರಚಾರ ನಡೆಸಿದ್ದಾರೆ. ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದಿಂದ ಪ್ರಿಯಕೃಷ್ಣ ಪರ ಡಿಕೆಶಿ ಚುನಾವಣಾ ರೋಡ್ ಶೋ ನಡೆಸಿದರು. ಈ ವೇಳೆ ಪುತ್ರನ ಕ್ಷೇತ್ರದಲ್ಲಿ ಪ್ರಚಾರಕ್ಕೆ ಡಿಕೆಶಿ ಜೊತೆಗೆ ವಿಜಯನಗರ ಅಭ್ಯರ್ಥಿ ಎಂ ಕೃಷ್ಣಪ್ಪ ಕೂಡ ಸಾಥ್ ನೀಡಿದರು. ಕಾವೇರಿನಗರ, ಉದ್ಭವ ಗಣಪತಿ ರಸ್ತೆ, ಮೂಡಲಪಾಳ್ಯ, ವಿಜಯನಗರ, ಚಂದ್ರಾಲೇಔಟ್ ಭಾಗದಲ್ಲಿ ಡಿಕೆಶಿ ಪ್ರಚಾರ ನಡೆಸಿದರು. ಪ್ರಚಾರದಲ್ಲಿ ಸ್ಟಾರ್ ಕ್ಯಾಂಪೇನರ್ ಸಾಧು ಕೋಕಿಲ ಕೂಡ ಭಾಗಿಯಾಗಿದ್ದರು.
ಜೆಡಿಎಸ್ ಕಾಂಗ್ರೆಸ್ ನ ಬಿ ಟೀಮ್, ದಳಪತಿಗಳ ಭದ್ರಕೋಟೆಯಲ್ಲಿ ಗುಡುಗಿದ ಮೋದಿ
ಇದಕ್ಕೂ ಮುನ್ನ ಬೆಂಗಳೂರು ನಗರದ ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ಎಸ್.ಬಾಲರಾಜ್‌ಗೌಡ ಅವರ ಪರವಾಗಿ ಮತಯಾಚನೆ ಮಾಡಿದರು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.